ಶೀರ್ಷಿಕೆ: ಮೈಸೂರು ಆರೋಗ್ಯ ಕೇಂದ್ರಗಳಲ್ಲಿ ಹುದ್ದೆಗಳು
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಶುಶೂಷಕರು, ವೈದ್ಯಾಧಿಕಾರಿಗಳು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯನ್ನು ಮಾಡುತ್ತಿದ್ದು. ಅರ್ಹರು ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹುದ್ದೆಯ ಅನುಸಾರ ವಿದ್ಯಾರ್ಹತೆಯನ್ನು ಕೇಳಲಾಗಿದೆ.
ಹುದ್ದೆಗಳು
ಶುಶೂಷಕ ಅಧಿಕಾರಿಗಳು-15
ಪ್ರಯೋಗಶಾಲಾ ತಂತ್ರಜ್ಞರು - 2 ಆಪ್ತ ಸಮಾಲೋಚಕರು -1 ಅರಿವಳಿಕೆ ತಜ್ಞರು -ಪ್ರಸೂತಿ ಸ್ತ್ರೀ ರೋಗ ತಜ್ಞರು -2 1
ಆರೋಗ್ಯ ನಿರೀಕ್ಷಣಾ ಅಧಿಕಾರಿ - 4
ಮಕ್ಕಳ ತಜ್ಞರು-2
ದಂತ ಚಿಕಿತ್ಸಕರು-6
ಫಿಜಿಷಿಯನ್-1
ವೈದ್ಯಾಧಿಕಾರಿಗಳು-10
ಹುದ್ದೆಯ ವಿವರ
ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಹುದ್ದೆಗಳನ್ನು
ವಿವಿಧ ಯೋಜನೆಗಳಿಗಾಗಿ ಗುತ್ತಿಗೆ ಆಧಾರದಲ್ಲಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ತಾಯಿ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಅರಿವಳಿಕೆ ತಜ್ಞರು, ಪ್ರಸೂತಿ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಓ.ಟಿ ಟೆಕ್ನಿಷಿಯನ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇವರು ಹುದ್ದೆಗೆ ಸಂಬಂಧಿಸಿದಂತೆ ವೈದ್ಯಕೀಯ ಪದವಿ, ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು. ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನೋಂದಾಯಿತರಾಗಿರಬೇಕು. ಆಶಾ ಕಾರ್ಯಕ್ರಮದಡಿಯಲ್ಲಿ ತಾಲೂಕು ಆಶಾ ಮೆಂಟರ್ ಹುದ್ದೆಗೆ ಬಿ.ಎಸ್‌ಸಿ, ಡಿಪ್ಲೊಮಾ, ಸಮಾಜ ಕಾರ್ಯ ವಿಭಾಗದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಪ್ರಯೋಗಶಾಲಾ ತಜ್ಞರ ಹುದ್ದೆಗೆ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ಅಥವಾ ಟ್ರಾನ್ಸ್ಪ್ಯೂಷನ್ ಮೆಡಿಸಿನ್ ಅಥವಾ ಬ್ಲಡ್ ಬ್ಯಾಂಕ್ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು ಒಂದು ವರ್ಷದ ಸೇವಾ ಅನುಭವ ಅವಶ್ಯ. ಶುಶೂಷಕ ಅಧಿಕಾರಿಗಳ ಹುದ್ದೆಗೆ ಬಿಎಸ್‌ಸಿ ನರ್ಸಿಂಗ್, ಜಿಎನ್‌ಎಂ ಪೂರ್ಣಗೊಳಿಸಿರಬೇಕು. ಕೆಎನ್‌ಸಿ ನೋಂದಾಯಿತರಾಗಿರಬೇಕು.
ವಯೋಮಿತಿ
ವೈದ್ಯಾಧಿಕಾರಿ ಹುದ್ದೆಗಳಿಗೆ ಗರಿಷ್ಠ 65 ಹಾಗೂ ಇತರ ಹುದ್ದೆಗಳಿಗೆ 40 ಹಾಗೂ 45 ವರ್ಷವನ್ನು ಗರಿಷ್ಠ ವಯೋಮಿತಿಯಾಗಿ ನಿಗದಿ ಮಾಡಲಾಗಿದೆ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 27-01-2026
ಫೈಲ್ ಗಾತ್ರ: ಲಿಂಕ್ನಲ್ಲಿ ಲಭ್ಯ
ಬಳಕೆ ಉದ್ದೇಶ :ವೈಯಕ್ತಿಕ ಬಳಕೆಗೆ ಮಾತ್ರ
ಹೆಚ್ಚಿನ ನೋಟ್ಸ್ಗಳನ್ನು ದಿನವೂ ಡೌನ್ಲೋಡ್ ಮಾಡಲು ಭೇಟಿ ನೀಡಿ:
KSPGK ವೆಬ್ಸೈಟ್: https://kspgk.blogspot.com/
KSPGK ಒಂದು ವಿಶಿಷ್ಟ ಆನ್ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಉಚಿತ PDF ನೋಟ್ಸ್ಗಳನ್ನು ಒದಗಿಸುತ್ತದೆ.
PDF ಫೈಲ್ ಡೌನ್ಲೋಡ್ ಕ್ವಿಕ್ ಲಿಂಕ್ಸ್:
💡 KSPGK ಧ್ಯೇಯ:
Education
should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!
📲 Stay Connected
🟢 ನಮ್ಮ ಟೆಲಿಗ್ರಾಂ ಚಾನೆಲ್‌ಗೆ ಸಂಪರ್ಕಿಸಿ
— ಪ್ರತಿದಿನ ಹೊಸ ನೋಟ್ಸ್ ಹಾಗೂ ಅಪ್ಡೇಟ್‌ಗಳನ್ನು ಪಡೆಯಿರಿ.
👉
Join
KSPGK Telegram Channel
Thank You for Visiting KSPGK!
Education should be FREE FOR ALL.
Stay connected with us on our Telegram
Channel for daily updates and new notes.
No comments:
Post a Comment