Title : ಗ್ರಾಮೀಣ ಅಭಿವೃದ್ಧಿ ಅಧ್ಯಾಯ-2 ಅರ್ಥಶಾಸ್ತ್ರ ಎಸೆಸೆಲ್ಸಿ ನೋಟ್ಸ್
1. ಭಾರತದಲ್ಲಿ ಗ್ರಾಮೀಣ ಆರ್ಥಿಕ ಪರಿಸ್ಥಿತಿ ಹೇಗಿದೆ ?
1. ಕೃಷಿಯೊಂದನ್ನೇ ಅವಲಂಬಿಸಿರುವ ಗ್ರಾಮೀಣ ಜನರಲ್ಲಿ ಬಡತನ ಹೆಚ್ಚಾಗಿದೆ ಇವರಲ್ಲಿ ಮೂರನೇಯ ಒಂದು ಭಾಗದಷ್ಟು ಜನರು ಕಡು ಬಡತನದಲ್ಲಿ ಬದುಕುತ್ತಿದ್ದಾರೆ.
2, ಗ್ರಾಮೀಣ ಗುಡಿ ಕೈಗಾರಿಕೆಗಳು ನಶಿಸಿ ಹೋಗಿವೆ.
3. ಪ್ರಾಥಮಿಕ ವಲಯದಲ್ಲಿ ಶೇ. 60 ರಷ್ಟು ಜನರು ದುಡಿಯುತ್ತಿದ್ದರೂ ರಾಷ್ಟ್ರೀಯ ವರಮಾನಕ್ಕೆ ಈ ವಲಯದ ಕೊಡುಗೆ ಅತ್ಯಂತ -
ಕಡಿಮೆಯಾಗಿದೆ.
4. ನಗರ ಮತ್ತು ಹಳ್ಳಿಗಳ ನಡುವಿನ ಅಂತರ ದಿನೇ ದಿನೇ ಹೆಚ್ಚಾಗುತ್ತಿದೆ.
5. ಗ್ರಾಮೀಣ ಪ್ರದೇಶದ ಜನರು ಬಡತನ, ನೀರುದ್ಯೋಗ, ಅನಕ್ಷರತೆ ಹಾಗೂ ಅನಾರೋಗ್ಯ ಮುಂತಾದ ಸವಾಲುಗಳನ್ನು ಎದುರಿಸುತ್ತಿದ್ದಾರೆ
File Language : Kannada/English
State : Karnataka
Daily quiz Group minimum 1000 questions @kpsc2019
2. `ಗ್ರಾಮೀಣಾಭಿವೃದ್ಧಿಯ ಮಹತ್ವವನ್ನು ತಿಳಿಸಿ?
1. ಗ್ರಾಮೀಣ ಪ್ರದೇಶದ ಜನರ ಬಡತನ, ನಿರುದ್ಯೋಗ ಅನಕ್ಷರತೆ ಹಾಗೂ ಅನಾರೋಗ್ಯಗಳನ್ನು ನಿರ್ಮೂಲನೆ ಮಾಡವುದು.
2 ಗ್ರಾಮೀಣ ಜನರಿಗೆ ಶಿಕ್ಷಣ, ತರಬೇತಿ, ಆರೋಗ್ಯ, ನೈರ್ಮಲ್ಯ ಮುಂತಾದ ಸೌಲಭ್ಯಗಳನ್ನು ಒದಗಿಸುವುದು ಮತ್ತು ಅವರ ಜ್ಞಾನ, - ಕೌಶಲ್ಯ, ಹಾಗೂ ದುಡಿಯುವ ಸಾಮರ್ಥ್ಯವನ್ನು ಹೆಚ್ಚಿಸುವುದು,
3. ಕೃಷಿಯ ಜೊತೆಗೆ ಪಶುಪಾಲನೆ, ಕೋಳಿ ಸಾಕಣೆ, ಮೀನುಗಾರಿಕೆ, ರತ್ನ ಕೃಷಿ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಕೈಗೊಂಡು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಅಭಿವೃದ್ಧಿ ಪಡಿಸುವುದು,
4. ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು ಸಾರಿಗೆ ಮತ್ತು ಸಂಪರ್ಕ ಮುಂತಾದ ಮೂಲ ಸೌಕರ್ಯಗಳನ್ನು ಗ್ರಾಮೀಣ ಜನರಿಗೆ –ಒದಗಿಸಿ ಕೊಡುವುದು
File Format : PDF
3. ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ವೀಕೆಂದ್ರಿಕರಣದ ಹಿನ್ನೆಲೆಯಲ್ಲಿ ತಿಳಿಸಿ?
1 ಪ್ರತಿಯೊಂದು ಗ್ರಾಮದ ಆಡಳಿತಾಧಿಕಾರ ಮತ್ತು ಅದರ ಅಭಿವೃದ್ಧಿಯ ಜವಾಬ್ದಾರಿಯನ್ನು ಗ್ರಾಮಸ್ಥರಿಗೆ ವಹಿಸಿ ಕೊಡುವುದು,
2, ವಿಕೇಂದ್ರಿಕರಣದ ಮೂಲಕ ಗ್ರಾಮಗಳನ್ನು ಸ್ವಾವಲಂಬಿ, ಸ್ವಯಂಪೂರ್ಣ ಹಾಗೂ ಸಮೃದ್ಧ ಗ್ರಾಮಗಳಾಗಿ ಅಭಿವೃದ್ಧಿ ಪಡಿಸಬಹುದೆಂದು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆ ತಿಳಿಸುತ್ತದೆ.
3 ಏಕೇಂದ್ರೀಕರಣದಿಂದ ಎಲ್ಲಾ ರೀತಿಯ ಶೋಷಣೆಗಳನ್ನು ತಡೆದು ಮಾನವನ ಸ್ವಾತಂತ್ರ್ಯ ಮತ್ತು ಘನತೆಯನ್ನು ಸಂರಕ್ಷಿಸುವುದು,
4. ಸಹಾನುಭೂತಿ ಮತ್ತು ಸಹಕಾರದಂತಹ ಮಾನವೀಯ ಮೌಲ್ಯಗಳನ್ನು ದೃಷ್ಟಿಸುವದು,
Number of Pages : link
Scanned Copy : Yes
4. ಗ್ರಾಮೀಣಾಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವೇನು?
1. ಪಂಚಾಯತ್ ರಾಜ್ ಸಂಸ್ಥೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು, ಬೀದಿ ದೀಪ, ಶೌಚಾಲಯ, ಶಾಲೆ ಹಾಗೂ ಆಸ್ಪತ್ರೆ ಮುಂತಾದ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಹೊಣೆ ಹೊತ್ತಿದೆ
2 ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣ, ವಯಸ್ಕರ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣದ ಜೊತೆಯಲ್ಲಿ ವೃತ್ತಿ ತರಬೇತಿಗೆ ಪ್ರೋತ್ಸಾಹ ನೀಡುವುದು ಹಾಗೂ ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯವನ್ನು ಒದಗಿಸುವುದು.
3. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ನಿರ್ಮಾಣ ಮತ್ತು ಬಡತನ ನಿರ್ಮೂಲನ ಯೋಜನೆಗಳನ್ನು ಹಾಗೂ ವಸತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವದರ ಮೂಲಕ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.
Password Protected : No
Image Available : Yes
5. ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರವೇನು? ಅಥವಾ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರವೇನು?
1 ಮಾನವನ ಬದುಕಿನಲ್ಲಿ ಮಹಿಳೆಯರು ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ,ಸೊಸೆಯಾಗಿ, ನಾನಾ ರೀತಿಯ ಕರ್ತವ್ಯಗಳನ್ನು - ನಿರ್ವಹಿಸುತ್ತಾಳೆ ಮಾನವನ ಬದುಕು ರೂಪಗೊಳ್ಳುವದೇ ಮಹಿಳೆಯರಿಂದ
2 ಮಹಿಳೆಯರು ಮನೆಯೊಳಗೆ ಮತ್ತು ಮನೆಹೊರಗೆ ಕೃಷಿಕಳಾಗಿ ಕಾರ್ಮಿಕಳಾಗಿ ನೌಕರಳಾಗಿ, ಅಧಿಕಾರಿಯಾಗಿ ಹಾಗೂ ಉದ್ಯಮಿಯಾ ಶುರುಷರಿಗೆ ಸರಿಸಮವಾಗಿ ದುಡಿಯುತ್ತಿದ್ದಾಳೆ
3. ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವದರಿಂದ ಇಂದು ಸಾಮಾನ್ಯ ಗ್ರಾಮೀಣ ಮಹಿಳೆಯರು ಕೂಡಾ ಗ್ರಾಮಗಳ ಅಭಿವೃದ್ಧಿಯಲ್ಲಿ ದುಡಿಯಲು ಅವಕಾಶ ಸಿಕ್ಕಿದೆ.
4. ಮಹಿಳೆಯರು ಇಂದು ಗ್ರಾಮ ಪಂಚಾಯತನಿಂದ ಹಿಡಿದು ರಾಷ್ಟ್ರಪತಿ ಭವನದವರೆಗೆ ರಾಜಕೀಯ ಮುಂದಾಳತ್ವವನ್ನು ವಹಿಸುತ್ತಿದ್ದಾರೆ.
5.ಕರ್ನಾಟಕದ ಪಂಚಾಯತ ಸಂಸ್ಥೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳಾ ಸದಸ್ಯರಿರುವದು ಮಹತ್ವದ ಅಂಶವಾಗಿದೆ.
6. ಒಟ್ಟಾರೆ ಗ್ರಾಮಾಂತರ ಮಹಿಳೆಯರು ಗ್ರಾಮಗಳಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವದರ ಮೂಲಕ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಬಹುದು.
File size Reduced : No
Password : No
Cost : Free of cost
For Personal Use Only
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment