10 ಸಾವಿರ ಹುದ್ದೆಗಳಿಗೆ 16 ಲಕ್ಷ ಅರ್ಜಿ!
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಹೊರಡಿಸಿರುವ ಸಿವಿಲ್ ಪೊಲೀಸ್, ವಸತಿ ಶಾಲೆ ಶಿಕ್ಷಕರು, ಕಂದಾಯ ಇಲಾಖೆಯ ಆಡಳಿತಾಧಿಕಾರಿ ಹಾಗೂ ಭೂಮಾಪಕ ಹುದ್ದೆಗಳಿಗೆ ನಿರೀಕ್ಷೆಗೂ ಮೀರಿದ ಅರ್ಜಿಗಳು ದಾಖಲಾಗಿದ್ದು, ಬರೋಬ್ಬರಿ 16 ಲಕ್ಷ ಆಕಾಂಕ್ಷಿಗಳು ಹುದ್ದೆ ಬಯಸಿದ್ದಾರೆ. ಸದ್ಯ ಒಟ್ಟು 10 ಸಾವಿರ ಹುದ್ದೆಗಳ ಭರ್ತಿಯಾಗುತ್ತಿದ್ದು, ಒಂದು ಹುದ್ದೆಗೆ 160 ಆಕಾಂಕ್ಷಿಗಳಿದ್ದಂತಾಗಿದೆ.
రేఇఎ ಕಳೆದ ಜೂನ್‌ನಲ್ಲಿ ವಿವಿಧ ಇಲಾಖೆಗಳ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಿದೆ. ಆ ಪರೀಕ್ಷೆಗಳು ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ
ಹುದ್ದೆಗಳಿಗೆ ನೇಮಕಾತಿ ನಡೆಯದ ಪರಿಣಾಮ ಹಾಗೂ ರಾಜ್ಯ ಸರ್ಕಾರವು ಒಂದೇ ಬಾರಿಗೆ 70 ಸಾವಿರಕ್ಕೂ ಅಧಿಕ ಹುದ್ದೆಗಳ ಭರ್ತಿ ಮಾಡುವುದಾಗಿ ಘೋಷಿಸಿರುವ ಕಾರಣ ಸರ್ಕಾರಿ ಹುದ್ದೆಗೆ ಲಕ್ಷೇಪಾದಿಯಾಗಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ.
ಸುದೀರ್ಘ ವಿಳಂಬ: ಕೊರೊನಾ ಬಳಿಕ ಸರ್ಕಾರಿ ನೇಮಕಾತಿ ನಡೆಯದ ಕಾರಣ ಕಳೆದ 5ರಿಂದ 6 ವರ್ಷದಲ್ಲಿ ದ್ವಿತೀಯ ಪಿಯುಸಿ ಮತ್ತು ಪದವಿ ಪೂರ್ಣಗೊಳಿಸಿ ವಯೋಮಿತಿ ಹಾಗೂ ಅರ್ಹತೆ ಇರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಇತ್ತೀಚಿನ ವರ್ಷದಲ್ಲಿ ಕೆಲವು ನಿಗಮ, ಮಂಡಳಿಗಳು ಹಾಗೂ ಇಲಾಖೆ ಹಂತದಲ್ಲಿ ಬೆರಳೆಣಿಕೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೊರತುಪಡಿಸಿದರೆ, ಸಾವಿರಾರು ಹುದ್ದೆಗಳಿಗೆ ಒಂದೇ ಬಾರಿಗೆ ಅರ್ಜಿ ಕರೆದಿರುವ ಉದಾಹರಣೆಗಳಿಲ್ಲ. ಹೀಗಾಗಿ, ಸಹಜವಾಗಿಯೇ ಆಕಾಂಕ್ಷಿಗಳ ಪಟ್ಟಿ ಹೆಚ್ಚಳವಾಗಿದೆ
State: Karnataka
ಯಾವ ಜಿಲ್ಲೆಗೆ ಎಷ್ಟು?
ಇತರ ಜಿಲ್ಲೆಗಳಲ್ಲಿ ಒಟ್ಟು 12.64 ಲಕ್ಷ ಅರ್ಜಿಗಳು ದಾಖಲಾಗಿದ್ದರೆ, ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳಿಗೆ 3.31 ಲಕ್ಷ ಅರ್ಜಿಗಳು ದಾಖಲಾಗಿವೆ. ಪಿಯುಸಿ ವಿದ್ಯಾರ್ಹತೆ ಆಧಾರದಲ್ಲಿ ಪೊಲೀಸ್ ಮತ್ತು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತಿರುವುದರಿಂದ ಬಹುತೇಕ “ಜೆನ್ 'ಜಿ'ಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ
Format: PDF
ಒಂದು ಹುದ್ದೆಗೆ 860 ಆಕಾಂಕ್ಷಿಗಳು!
ಕಂದಾಯ ಇಲಾಖೆಯ 572 ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಬರೋಬ್ಬರಿ 4.92 ಲಕ್ಷ ಅರ್ಜಿಗಳು ದಾಖಲಾಗಿವೆ. ಅಂದರೆ ಒಂದು ಹುದ್ದೆಗೆ ಸರಾಸರಿ 860 ಮಂದಿ ಆಕಾಂಕ್ಷಿಗಳಿದ್ದಾರೆ. ಇನ್ನು, ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್, ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳು ಸೇರಿ ಎಂಟು ಸಾವಿರ ಪೊಲೀಸ್ ಹುದ್ದೆಗಳಿಗೆ ಎಂಟೂವರೆ ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಸರಾಸರಿ ಒಂದು ಹುದ್ದೆಗೆ ನೂರು ಆಕಾಂಕ್ಷಿಗಳಿದ್ದಾರೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ವಸತಿ ಶಾಲೆಗಳಲ್ಲಿನ (ಕ್ರೈಸ್) 1,087 ವಿವಿಧ ವಿಷಯಗಳ ಶಿಕ್ಷಕ ಹುದ್ದೆಗಳಿಗೆ 1.77 ಲಕ್ಷ ಅರ್ಜಿಗಳು ದಾಖಲಾಗಿವೆ.
File Size: Available in Download Link
ನೇಮಕಾತಿ ವಿಚಾರದಲ್ಲಿ
ಕೆಇಎ ಬಹಳ ಸೂಕ್ಷ್ಮ ಮತ್ತು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ. ತಂತ್ರಜ್ಞಾನ ಅಳವಡಿಕೆ, ಜಿಲ್ಲಾ ಹಂತದಲ್ಲಿ ಮಾಸ್ಟರ್ ತರಬೇತುದಾರರು ಹಾಗೂ ಕೆಇಎ ಕಚೇರಿಯಲ್ಲಿಯೂ ಸಹಾಯವಾಣಿ ಸೇರಿ ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಯಶಸ್ವಿಯಾಗಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂಬುದು ನಮ್ಮ ಉದ್ದೇಶ.
|
Scanned Copy: Yes
Editable Text: No
Password Protected: No
Image Available: Yes
Download Link: Yes
File Size Reduced: No
Password: Not Required
Cost: Free of Cost
Click Here to Download

No comments:
Post a Comment