ಇತ್ತೀಚಿನ ಸರ್ಕಾರಿ ಉದ್ಯೋಗಗಳು

ಎಲ್ಲವನ್ನೂ ನೋಡಿ →

ಪೊಲೀಸ್ (KSP) ನೇಮಕಾತಿ

ಎಲ್ಲವನ್ನೂ ನೋಡಿ →

GK ನೋಟ್ಸ್ ಮತ್ತು ಅಧ್ಯಯನ ಸಾಮಗ್ರಿ

ಎಲ್ಲವನ್ನೂ ನೋಡಿ →

 KAS,PSI,FDA,SDA,PC ಭಾರತದ ಇತಿಹಾಸ ಪ್ರಶ್ನೋತ್ತರಗಳು 


ಕ್ರ.ಸಂ.

ವಿಷಯ

Page ಸಂಖ್ಯೆ

1

ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 

8-9

2

ಸ್ವಾತಂತ್ರ್ಯ ಹೋರಾಟ 

10-14

3

20ನೇ ಶತಮಾನದ ರಾಜಕೀಯ ಆಯಾಮಗಳು

14-20

4

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು

20-25

5

ಭಾರತದ ವಿದೇಶಾಂಗ ನೀತಿ

25-28

6

ಸಾಮಾಜಿಕ ಸ್ತರವಿನ್ಯಾಸ

28-29

7

ಭಾರತದ ಸಾರಿಗೆ

29-32

8

ಸಾರ್ವಜನಿಕ ಹಣಕಾಸು ಮತ್ತು ಅಯ-ವಯ್ಯ

32-33

9

ಬ್ಯಾಂಕು ವ್ಯವಹಾರಗಳು

34-38

10

ನಕ್ಷೆಗಳು

38-46


ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (ಮೂರು ಅಂಕದ ಪ್ರಶ್ನೆಗಳು)

ಪ್ರಶ್ನೆ 1: 1857 ದಂಗೆಗೆ ಕಾರಣವಾದ ರಾಜಕೀಯ ಅಂಶಗಳಾದವು? ಅಥವಾ 1857 ದಂಗೆಗೆ ರಾಜಕೀಯ ಕಾರಣಗಳಾದವು?

  • ಲಾರ್ಡ್ ಡಾಲ್ ಪೌಸಿಯು ಜಾರಿಗೆ ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದ ಹಲವು ರಾಜ್ಯಗಳನ್ನು ವಶಪಡಿಸಿಕೊಂಡಿದ್ದು.
  • ಡಾಲ್ ಪೌಸಿಯು ತಂಜಾವೂರು & ಕರ್ನಾಟಕ ನವಾಬರಿಗಿದ್ದ ರಾಜ ಪದವಿಗಳನ್ನು ರದ್ದು ಪಡಿಸಿದ್ದು.
  • ಮೊಘಲ್ ಚಕ್ರವರ್ತಿ, ಔದ್ ನವಾಬ ಮೊದಲಾದ ರಾಜರುಗಳನ್ನು ಅಧಿಕಾರದಿಂದ ಪದಚ್ಯುತೆಗೊಳಿಸಿದ್ದು.
  • ಮೊಘಲ್ & ಔದ್ ಸೈನ್ಯದಲ್ಲಿ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾಗಿದ್ದು.

ಪ್ರಶ್ನೆ 2: ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದಾದ ಪರಿಣಾಮಗಳು ಯಾವುವು? ವಿಶ್ಲೇಷಿಸಿ.

  • ನೀತಿಯನ್ನು ಇಂಗ್ಲೀಷರ ಕಾಲದಲ್ಲಿ ಲಾರ್ಡ್ ಡಾಲ್ ಪೌಸಿಯು ಜಾರಿಗೆ ತಂದಿದ್ದನು.
  • ಯಾವುದೇ ದೇಶೀಯ ಸಂಸ್ಥಾನದ ರಾಜನು ತನಗೆ ಮಕ್ಕಳಲ್ಲದಿದ್ದರೆ ರಾಜ್ಯವನ್ನು ದತ್ತು ಮಕ್ಕಳಿಗೆ ನೀಡುವಂತಿರಲಿಲ್ಲ.
  • ನೀತಿಯಿಂದಾಗಿ ಸತಾರ, ಚೈಮರ, ಝಾನ್ಸಿ, ಉದಯಮರ ಮೊದಲಾದ ಸಂಸ್ಥಾನಗಳು ಬ್ರಿಟಿಷರ ವಶವಾದವು.
  • ಮೊಘಲ್ ಚಕ್ರವರ್ತಿ ಔದ್ ನವಾಬ ಮೊದಲಾದ ರಾಜರುಗಳಿಗೆ ಮಕ್ಕಳಲ್ಲದ ಕಾರಣ ಬ್ರಿಟಿಷರು ಇವರನ್ನು ಅಧಿಕಾರದಿಂದ ಪದಚ್ಯುತೆಗೊಳಿಸಿದರು.
  • ಪರಿಣಾಮವಾಗಿ ಇವರನ್ನು ಅವಲಂಬಿಸಿದ್ದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು.

ಪ್ರಶ್ನೆ 3: 1857 ದಂಗೆಗೆ ಆರ್ಥಿಕ ಬದಲಾವಣೆಗಳು ಹೇಗೆ ಕಾರಣವಾದವು? ಅಥವಾ 1857 ದಂಗೆಯ ಆರ್ಥಿಕ ಕಾರಣಗಳಾದವು?

  • ಇಂಗ್ಲೆಂಡಿನಲ್ಲಿ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಕಠಿಕಾರಕರು & ದೇಶೀಯ ಕೈಗಾರಿಕೆಗಳು ಕ್ಷೀಣಿಸಿದವು.
  • ಭಾರತದಲ್ಲಿದ್ದಂತಹ ಕಠಿಕಾರಕರು ನಿರುದ್ಯೋಗಿಗಳಾದರು.
  • ಬಟ್ಟೆ & ಉಣ್ಣೆ ಕೈಗಾರಿಕೆಗಳು ಅವನೂ ಹೊಂದಿ ನೇಕಾರಿಕೆ ವೃತ್ತಿಯವರು ಉದ್ಯೋಗ ಕಳೆದುಕೊಂಡರು.
  • ಗೃಹ ಕೈಗಾರಿಕೆಗಳು ಶಿಥಿಲಗೊಂಡವು.
  • ಭಾರತದ ವಸ್ತುಗಳನ್ನು ಇಂಗ್ಲೆಂಡಿನಲ್ಲಿ ಮಾರಲು ಇಂಗ್ಲೀಷರು ದುಬಾರಿ ಸಾಂಕವನ್ನು ಹೇರಿದರು.
  • ಜಮೀನ್ದಾರರು ಕೃಷಿಕರನ್ನು ಶೋಷಿಸುತ್ತಿದ್ದರು.
  • ಇನಾಂ ಆಯೋಗ ನೇಮಿಸಿ ಇನಾಂ ಭೂಮಿಯನ್ನು ವಾಪಸ್ಸು ಪಡೆಯಲಾಯಿತು.

ಪ್ರಶ್ನೆ 4: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಆಡಳಿತಾತ್ಮಕ ಕಾರಣಗಳು ಹೇಗೆ ನಾಂದಿಯಾಯಿತು?

  • ಇಂಗ್ಲಿಷರು ಹೊಸ ನಾಗರಿಕ & ಅಪರಾಧ ಕಾಯ್ದೆಗಳನ್ನು ಜಾರಿಗೆ ತಂದರು.
  • ಕಾನೂನಿನಲ್ಲಿ ಪಕ್ಷಪಾತ & ಭಾರತೀಯರಿಗೆ ಪ್ರತ್ಯೇಕ ನಿಯಮಗಳು ಅನ್ವಯವಾಗುತ್ತಿದ್ದವು.
  • ಆಂಗ್ಲ ಭಾಷೆಯು ನ್ಯಾಯಾಲಯದ ಭಾಷೆಯಾಯಿತು.
  • ಇಂಗ್ಲೀಷ ನ್ಯಾಯಾಧಿಕರು ಬಹುತೇಕವಾಗಿ ಇಂಗ್ಲೀಷರ ಪರವಾಗಿ ನ್ಯಾಯ ನೀಡುತ್ತಿದ್ದರು.
  • ಹೊಸ ಕಾನೂನಿನ ಅಶಯಗಳು ಜನರಿಗೆ ಅರಿವಾಗಲಿಲ್ಲ.

ಪ್ರಶ್ನೆ 5: 1857 ದಂಗೆಗೆ ಸೈನಿಕ ಕಾರಣಗಳಾದವು?

  • ಬ್ರಿಟಿಷ್ ಸೈನ್ಯದಲ್ಲಿ ಭಾರತೀಯ ಸಿಪಾಯಗಳ ಸ್ಥಿತಿ ಗಂಭೀರವಾಗಿತ್ತು.
  • ಆಂಗ್ಲ ಸೈನಿಕರಿಗಿದ್ದ ಸ್ಥಾನಮಾನ, ವೇತನ, ಬಡ್ತಿ ಅವಕಾಶಗಳು ಭಾರತೀಯ ಸಿಪಾಯಿಗಳಿಗೆ ಇರಲಿಲ್ಲ.
  • ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸುತ್ತಿದ್ದುದು ಧಾರ್ಮಿಕವಾಗಿ ಸೈನಿಕರನ್ನು ಪ್ರಚೋದಿಸಿತು.
  • ಭಾರತೀಯ ಸೈನಿಕರಿಗೆ ಕೆಳಹುದ್ದೆ ನೀಡಿದರು.
  • ಇಂಗ್ಲೀಷ ಸೈನ್ಯದಲ್ಲಿ ಹೆಚ್ಚಿನ ಪ್ರಮಾಣದ ಭಾರತೀಯ ಸಿಪಾಯಗಳು ತಾವೆಲ್ಲರೂ ಒಂದಾಗಿ ಹೋರಾಡಿದರೆ ಬ್ರಿಟಿಷರನ್ನು ಭಾರತದಿಂದ ಓಡಿಸಬಹುದು ಎಂಬ ಆತ್ಮವಿಶ್ವಾಸ ಹೊಂದಿದ್ದರು.
  • ಸೈನಿಕರಿಗೆ ರಾಯಲ್ ಎನ್ಫೀಲ್ಡ್ ಎಂಬ ನವೀನ ಬಂದೂಕಗಳನ್ನು ನೀಡುತ್ತಿದ್ದರು. ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ತುಪಾಕಿಗಳಿಗೆ ಹಂದಿ & ಹಸುವಿನ ಕಬ್ಬನ್ನು ಸವರಿದ್ದಾರೆಂಬ ವದಂತಿ ಹಬ್ಬಿತ್ತು.
  • ಹಿಂದೂಗಳಿಗೆ ಹಸು ಪವಿತ್ರವಾದರೆ, ಮುಸ್ಲಿಮರಿಗೆ ಹಂದಿ ನಿಷೇಧವಾಗಿತ್ತು.
  • ಬ್ಯಾರಕ್ಪುರದಲ್ಲಿ ಸೈನಿಕರಿಗೆ ತುಪಾಕಿಯನ್ನು ಹಲ್ಲಿನಿಂದ ಕಟ್ಟಿ ತೆಗೆಯುವಂತೆ ಬ್ರಿಟಿಷರು ಆದೇಶಿಸಿದಾಗ ಇದನ್ನು ಸೈನಿಕರು ತಿರಸ್ಕರಿಸಿ ಬಂಡಾಯವಿದ್ದರು.
  • ಮಂಗಲಪಾಂಡೆ ಎಂಬ ಸೈನಿಕರು ಬ್ರಿಟಿಷ್ ಸೈನ್ಯಾಧಿಕಾರಿಯೊಬ್ಬನನ್ನು ಕೊಂದನು.
  • ಇದರ ಪರಿಣಾಮವಾಗಿ ಮಂಗಲಪಾಂಡೆಯನ್ನು ಬಂಧಿಸಿ ಗಲ್ಲಿಗೇರಿಸಲಾಯಿತು.

ಪ್ರಶ್ನೆ 6: 1857 ದಂಗೆಯ ವಿಫಲತೆಗೆ ಕಾರಣಗಳನ್ನು ಪಟ್ಟಿ ಮಾಡಿ

  • ಇದು ಇಡೀ ಭಾರತವನ್ನು ವ್ಯಾಪಿಸಿದ ದಂಗೆಯಾಗಿರಲಿಲ್ಲ.
  • ಇದು ದೇಶದ ಬಿಡುಗಡೆಗಾಗಿ ನಡೆದದ್ದಕ್ಕಿಂತ ಅವರ ಸ್ವಾರ್ಥಾಸಕ್ತಿ ಹಾಗೂ ಹಕ್ಕುಗಳಿಗಾಗಿ ನಡೆದಿತ್ತು.
  • ಇದು ಯೋಚಿತ ದಂಗೆಯಾಗಿರದೆ ಅನಿರೀಕ್ಷಿತ ಕಾರಣಗಳಿಂದ ಪ್ರೇರೇಪಿತವಾಗಿತ್ತು.
  • ಬ್ರಿಟಿಷ್ ಸೈನಿಕರಲ್ಲಿದ್ದ ಒಗ್ಗಟ್ಟಿದ್ದರೆ ಭಾರತೀಯ ಸೈನಿಕರಲ್ಲಿ ಭಿನ್ನತೆ ಇತ್ತು.
  • ದಂಗೆಗೆ ಸೂಕ್ತ ಮಾರ್ಗದರ್ಶನ & ವ್ಯವಸ್ಥಿತ ಸಂಘಟನೆಯ ಕೊರತೆ ಇತ್ತು.
  • ಯುದ್ಧ ತಂತ್ರ, ಸೈನಿಕ ಪರಿಣಿತಿ, ಸೂಕ್ತ ಸೇನಾ ನಾಯಕತ್ವ & ಶಿಸ್ತಿನ ಕೊರತೆ ಇತ್ತು.
  • ಹೋರಾಟಗಾರರಲ್ಲಿ ನಿಶ್ಚಿತ ಗುರಿ ಇರಲಿಲ್ಲ.
  • ಹಲವಾರು ದೇಶೀಯ ಸಂಸ್ಥಾನಗಳ ರಾಜರುಗಳು ಬ್ರಿಟಿಷರಿಗೆ ತೋರಿದ ನಿಷ್ಠೆಯಿಂದಾಗಿ ಸಿಪಾಯಿಗಳಿಗೆ ಬೆಂಬಲ ನೀಡಲಿಲ್ಲ.
  • ಸಿಪಾಯಿಗಳು ಮಾಡಿದಂತಹ ಲೂಟ, ದರೋಡೆ, ಮೊದಲಾದ ಗಂಭೀರವಾದ ತಪ್ಪುಗಳಿಂದಾಗಿ ಜನರ ವಿಶ್ವಾಸ ಕಳೆದುಕೊಂಡರು.

ಪ್ರಶ್ನೆ 7: 1858 ಬ್ರಿಟನ್ ರಾಣಿಯ ಘೋಷಣೆಯಲ್ಲಿದ್ದ ಅಂಶಗಳಾವುವು?

  • ಕಂಪನಿಯು ದೇಶೀ ರಾಜರೊಂದಿಗೆ ಒಪ್ಪಂದಗಳನ್ನು ಅಂಗೀಕರಿಸಲಾಯಿತು.
  • ಪ್ರಾದೇಶಿಕ ವಿಸ್ತರಣೆಯ ಅಪೇಕ್ಷೆಯನ್ನು ಕೈಬಿಡುವುದು.
  • ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವುದು.
  • ಕಾನೂನಿನ ಮುಂದೆ ಸಮಾನತೆ.
  • ಧಾರ್ಮಿಕ ಸಹಿಷ್ಣತೆಯೊಂದಿಗೆ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.

ಪ್ರಶ್ನೆ 8: 1858 ದಂಗೆಯ ಪರಿಣಾಮಗಳಾವುವು?

  • ಈಸ್ತ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡು ಬ್ರಿಟನ್ ಸಾಮ್ರಾಜ್ಯಕ್ಕೆ ಆಡಳಿತ ವರ್ಗಾವಣೆಗೊಂಡಿತು.
  • ಭಾರತದ ವ್ಯವಹಾರವನ್ನು ಬ್ರಿಟಿಷ್ ಪಾರ್ಲಿಮೆಂಟನ ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ಒಪ್ಪಿಸಲಾಯಿತು.
  • ಭಾರತೀಯರಿಗೆ ಹಲವಾರು ಸೌಲಭ್ಯಗಳಿರುವ ರಾಣಿಯ ಘೋಷಣೆಯನ್ನು 1858ರಲ್ಲಿ ಹೊರಡಿಸಿದರು.
  • ಭಾರತೀಯರ ಪ್ರೀತಿ, ಬೆಂಬಲ, ವಿಶ್ವಾಸವಿಲ್ಲದಂತೆ ನಾವು ಶಾಂತಿಯಿಂದ ಆಳ್ವಿಕೆ ಮಾಡಲು ಸಾಧ್ಯವಿಲ್ಲವೆಂಬುದನ್ನು ಬ್ರಿಟಿಷರು ಅರಿತರು.
  • ಇದು ಭಾರತೀಯರ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಸೂಚಿಯನ್ನು ನೀಡಿತು.
  • ಭಾರತೀಯರು ಇನ್ನು ಮುಂದೆ ಹೋರಾಟದ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳುವ ಅನಿವಾರ್ಯತೆ ಕಂಡುಕೊಂಡರು.

ಸ್ವಾತಂತ್ರ್ಯ ಹೋರಾಟ (ನಾಲ್ಕು ಅಂಕದ ಪ್ರಶ್ನೆಗಳು)

1. ಮಂದಗಾಮಿಗಳು ಯಾರು? ಅವರ ಬೇಡಿಕೆಗಳಾದವು?

  • ಭಾರತದ ರಾಜಕೀಯದಲ್ಲಿ ಸಂವಿಧಾನಾತ್ಮಕವಾಗಿ ಬದಲಾವಣೆ ತರಬೇಕೆಂದು ಪ್ರತಿಪಾದಿಸುತ್ತಿದ್ದ ಕಾಂಗ್ರೇಸ್ ನಾಯಕರನ್ನು ಮಂದಗಾಮಿಗಳೆಂದು ಕರೆಯುತ್ತಾರೆ.
  • ಭಾರತೀಯ ಕಾಂಗ್ರೇಸನ ಪ್ರಾರಂಭದ ಇಪ್ಪತ್ತು ವರ್ಷಗಳನ್ನು "ಮಂದಗಾಮಿಯಾಗಿ" ಎಂದು ಕರೆಯುತ್ತಾರೆ.
  • ಎಂ.ಜಿ.ರಾನಡೆ, ಸುರೇಂದ್ರನಾಥ ಬ್ಯಾನರ್ಜಿ, ದಾದಾಬಾಯಿ ನವರೋಜಿ, ಗೋಪಾಲ ಕೃಷ್ಣ ಗೋಖಲೆ, ಮತ್ತು ಬದರುದ್ದೀನ್ ತ್ಯಾಬ್ಜಿ ಇವರುಗಳನ್ನು ಮಂದಗಾಮಿ ನಾಯಕರನ್ನು ಎಂದು ಕರೆಯುವರು.
  • ಬೇಡಿಕೆಗಳು:
    • ಭಾರತದ ಉನ್ನತ ಹುದ್ದೆಗಳಲ್ಲಿ ಭಾರತೀಯರಿಗೆ ಪ್ರಾತಿನಿಧ್ಯ ದೊರಕಿಸಿಕೊಡುವುದು.
    • ಶಾಸನಸಭೆಯನ್ನು ವಿಸ್ತರಿಸುವುದು.
    • ಶಾಸನಸಭೆಗೆ ಸದಸ್ಯರನ್ನು ಚುನಾವಣೆಯಿಂದ ಆರಿಸುವುದು.
    • ಭಾರತ ಮತ್ತು ಇಂಗ್ಲೆಂಡ್ ದೇಶದಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಏಕಕಾಲದಲ್ಲಿ ನಡೆಸುವುದು.
    • ವಿದೇಶಿ ವಸ್ತುಗಳ ಮೇಲೆ ಆಮದು ತೆರಿಗೆಯನ್ನು ಹಾಕಿ ಭಾರತೀಯ ಕೃಷಿ ಮತ್ತು ಕೈಗಾರಿಕೆಗಳನ್ನು ಬಲಪಡಿಸುವುದು.

2. ಸ್ವಾತಂತ್ರ್ಯ ಹೋರಾಟದಲ್ಲಿ ತಿಲಕರ ಪಾತ್ರವನ್ನು ವಿವರಿಸಿ.

  • ತೀವ್ರಗಾಮಿಗಳಲ್ಲಿ ಬಾಲಗಂಗಾಧರ ತಿಲಕರು ಅತ್ಯಂತ ಪ್ರಮುಖರು.
  • ಇವರು "ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತಿರುವೇ" ಎಂದು ಘೋಷಿಸುವುದರ ಮೂಲಕ ಸ್ವರಾಜ್ಯದ ಕಲ್ಪನೆಯನ್ನು ಜನರಲ್ಲಿ ಮೂಡಿಸಿದರು.
  • ತಿಲಕರು ಸ್ವಾತಂತ್ರ್ಯ ಹೋರಾಟಕ್ಕೆ ಜನಸಾಮಾನ್ಯರನ್ನು ಸಂಘಟಿಸುವ ಪ್ರಯತ್ನ ಮಾಡಿದರು.
  • ತಿಲಕರು ಗಣೇಶ ಉತ್ಸವ ಮತ್ತು ಶಿವಾಜಿ ಜಯಂತಿ ಆಚರಣೆಯ ಮೂಲಕ ಜನರನ್ನು ರಾಷ್ಟ್ರೀಯತೆಗೆ ಪ್ರಚೋದಿಸಿದರು.
  • ತಿಲಕರು ಮರಾಠಿ ಭಾಷೆಯಲ್ಲಿ "ಕೇಸರಿ" ಮತ್ತು ಇಂಗ್ಲೀಷ ಭಾಷೆಯಲ್ಲಿ "ಮರಾಠಾ" ಪತ್ರಿಕೆಗಳನ್ನು ಪ್ರಚಾರ ಮಾಡಿ ಹೋರಾಟಕ್ಕೆ ಬಳಸಿಕೊಂಡರು.
  • ಪತ್ರಿಕೆಗಳ ಮೂಲಕ ಜನಸಾಮಾನ್ಯರನ್ನು ರಾಷ್ಟ್ರೀಯ ಹೋರಾಟಕ್ಕೆ ಪ್ರೇರೇಪಿಸಿದರು.
  • ಇವರ ಕ್ರಾಂತಿಕಾರಿ ಬರವಣಿಗೆಗಳು ಜನರ ಉದ್ರೇಕಕ್ಕೆ ಕಾರಣವಾಯಿತು.

3. ಭಾರತ ಸ್ವಾತಂತ್ರ್ಯ ಹೋರಾಟದಲ್ಲಿನ ಕ್ರಾಂತಿಕಾರಿಗಳನ್ನು ಹೆಸರಿಸಿ. ಮತ್ತು ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ರಾಂತಿಕಾರಿಗಳ ಪಾತ್ರ ವಿವರಿಸಿ.

  • .ಡಿ.ಸಾವರ್ಕರ, ಅರವಿಂದೋ ಘೋಷ, ಶ್ಯಾಮಾಜಿ ಕೃಷ್ಣ ವರ್ಮ, ರಾಸ್ ಬಿಹಾರಿ ಘೋಷ್, ಖದಿರಮ್ ಬೋಸ್, ರಾಮಪ್ರಸಾದ್ ಬಿಸ್ಮಿಲ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಇತ್ಯಾದಿ.
  • ಪಾತ್ರ:
    • ಕ್ರಾಂತಿಕಾರಿಗಳು ಪೂರ್ಣ ಸ್ವಾತಂತ್ರ್ಯದ ಕನಸ್ಸನ್ನು ಕಂಡಿದ್ದರು.
    • ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ಹಿಂಸಾತ್ಮಕ ಮಾರ್ಗದಿಂದ ಮಾತ್ರ ಓಡಿಸಬಹುದೆಂದು ಅವರು ಬಲವಾಗಿ ನಂಬಿದ್ದರು.
    • ರಹಸ್ಯ ಸಂಘಗಳ ಮೂಲಕ ಭಾರತದಲ್ಲಿ & ವಿದೇಶದಲ್ಲಿ ತಮ್ಮ ಶಾಖೆಗಳನ್ನು ಸ್ಥಾಪಿಸಿ ಹಣಕಾಸು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಕಾರ್ಯದೊಂದಿಗೆ ಕ್ರಾಂತಿಕಾರಿಗಳಿಗೆ ತರಬೇತಿ ನೀಡುವಲ್ಲಿ ನಿರತರಾಗಿದ್ದರು.
    • "ಅನುಶೀಲಿನ ಸಮಿತಿ" & ಅಭಿನವ ಭಾರತ ಇಂತಹ ರಹಸ್ಯ ಸಂಘಟನೆಗಳಲ್ಲಿ ಮುಖ್ಯವಾದವು.
    • ಇವರು ತಮ್ಮ ಗುರಿ ಸಾಧನೆಗಾಗಿ ಬಾಂಬು & ಬಂದುಕುಗಳ ಪ್ರಯೋಗ ಮಾಡಿದರು.
    • ಸರ್ಕಾರವು ಇವರನ್ನು ಹತ್ತಿಕ್ಕುವ ಸರ್ವ ಪ್ರಯತ್ನವನ್ನು ಮಾಡಿತು.
    • ಕ್ರಾಂತಿಕಾರಿಗಳನ್ನು ಕೊಲೆ ಸಂಚಿನ ಆರೋಪದ ಮೇಲೆ ಬಂಧಿಸಿ ಅವರನ್ನು ತಪ್ಪಿತಸ್ಥರನ್ನಾಗಿ ಗುರುತಿಸಿ ಜೀವಾವಧಿ ಶಿಕ್ಷೆ ವಿಧಿಸಿತು.

4. ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಕುರಿತು ವಿವರಿಸಿ.

  • ರೌಲತ್ ಕಾಯ್ದೆಯ ವಿರುದ್ಧ ಪಂಜಾಬಿನಲ್ಲಿ ಚಳುವಳಿ ವ್ಯಾಪಕವಾಗಿ ಹರಡಿತು.
  • ಅಲ್ಲಲ್ಲಿ ಇದು ಹಿಂಸಾತ್ಮಕವಾಗಿ ತಿರುಗಿದ ಹಿನ್ನಲೆಯಲ್ಲಿ ಸರ್ಕಾರವು ಅಮೃತಸರ ನಗರವನ್ನು ಜನರಲ್ ಡಯರ್ ಎಂಬ ಸೇನಾಧಿಕಾರಿಯ ಉಸ್ತುವಾರಿಗೆ ನೀಡಿತು.
  • ಜನರಲ್ ಡಯರ್ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ನಗರವನ್ನು ಸೇನಾಳ್ವಿಕೆಗೆ ಒಳಪಡಿಸಿ ಸಭೆಗಳನ್ನು ನಿಷೇಧಿಸಿದನು.
  • ಆದರೆ ಜಲಿಯನ್ ವಾಲಾಭಾಗ್ ನಲ್ಲಿ ಸಭೆ ಸೇರಲು ಹೋರಾಟಗಾರರು ಮೊದಲೇ ನಿರ್ಧರಿಸಿದ್ದರು ಅವರಿಗೆ ನಿಷೇಧದ ಬಗ್ಗೆ ಪೂರ್ಣ ತಿಳುವಳಿಕೆ ಇರಲಿಲ್ಲ.
  • ಸುಮಾರು 20 ಸಾವಿರ ಜನ ರೌಲತ್ ಕಾಯ್ದೆಯ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಸೇರಿದ್ದರು.
  • ಸುತ್ತಲೂ ಎತ್ತರವಾದ ಗೋಡೆಗಳಿಂದ ಕಿರಿದಾದ ಪ್ರವೇಶದಿಂದ ಕೂಡಿದ ಜಲಿಯನ್ ವಾಲಾಭಾಗ ನಲ್ಲಿ ಸಭೆಯು ಶಾಂತಿಯಿಂದ ನಡೆಯುತ್ತಿತ್ತು.
  • ತನ್ನ ಸೈನ್ಯದೊಂದಿಗೆ ಬಂದ ಜನರಲ್ ಡಯರ್ನು ಯಾವ ಮುನ್ಸೂಚನೆಯನ್ನು ನೀಡದೆ ಶಾಂತಿಯುತವಾಗಿ ಪ್ರತಿಭಟನಾ ಸಭೆ ಸೇರಿದ್ದ ಜನರ ಮೇಲೆ ಅಮಾನುಷವಾಗಿ ಗುಂಡಿನ ಮಳೆ ಗೆರೆದನು.
  • ಹತ್ಯಾಕಾಂಡದಲ್ಲಿ 379 ಪ್ರತಿಭಟನಾಕಾರರು ಪ್ರಾಣಕಳೆದುಕೊಂಡರು ಸಹಸ್ರಾರು ಜನರು ಗಾಯಗೊಂಡರು ಘಟನೆಯನ್ನು "ಜಲಿಯನ್ ವಾಲಾಭಾಗ ದುರಂತ" ಎನ್ನುವರು.
  • ದುರಂತದ ಹಿನ್ನಲೆಯಲ್ಲಿ ರವೀಂದ್ರನಾಥ ಟಾಗೋರ್ ವ್ಯೆಸರಾಯಗೆ ಪತ್ರ ಬರೆದು ತಮಗೆ ನೀಡಲಾಗಿದ್ದ ನೈಟ್ಹುಡ್ ಗೌರವವನ್ನು ತ್ಯಜಿಸಿದರು.
  • ಮುಗ್ಧ ಭಾರತೀಯ ಹೋರಾಟಗಾರರನ್ನು ಹತ್ಯೆಗೈದ ಜನರಲ್ ಡಯರ್ನನ್ನು ಭಾರತದ ಕ್ರಾಂತಿಕಾರಿ ಉದಮ್ ಸಿಂಗ್ನು ಹತ್ಯೆ ಮಾಡಿದನು.
  • ದುರಂತದ ವಿಚಾರಣೆಗಾಗಿ ಹಂಟರ್ ಆಯೋಗವು ನೇಮಕವಾಯಿತು ಆದರೆ ಇದು ಪ್ರಯೋಜನವಾಗಲಿಲ್ಲ.

5. ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷಚಂದ್ರ ಬೋಸರ ಸಾಧನೆಯನ್ನು ವಿವರಿಸಿ.

  • ಭಾರತೀಯರಿಂದ ನೇತಾಜಿಯೆಂದು ಪ್ರೀತಿಯಿಂದ ಕರೆಯಲ್ಪಡುವ ಸುಭಾಷ್ ಚಂದ್ರ ಬೋಸ್ರವರು ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು.
  • .ಸಿ.ಎಸ್. ಪರೀಕ್ಷೆಯಲ್ಲಿ 4ನೇ ರ್ಯಾಂಕ್ ಗಳಿಸಿದರೂ ಬ್ರಿಟಿಷ್ ಸರ್ಕಾರದ ಸೇವೆಗೆ ಸೇರದೇ ರಾಷ್ಟ್ರೀಯ ಕಾಂಗ್ರೆಸ್ ಸೇರಿ ಗಾಂಧೀಜಿಯವರೊಂದಿಗೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು.
  • ಗಾಂಧೀಜಿಯವರೊಂದಿಗೆ ತಾತ್ವಿಕ ಭಿನ್ನಾಭಿಪ್ರಾಯವನ್ನು ಹೊಂದಿದ ನೇತಾಜಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷವನ್ನು ಸ್ಥಾಪಿಸಿ ತಮ್ಮ ಹೋರಾಟವನ್ನು ಮುಂದುವರೆಸಿದರು.
  • ಎರಡನೇ ಮಹಾಯುದ್ಧದಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಸುಭಾಷರು ವಿರೋಧಿಸಿದರು. ಪರಿಣಾಮವಾಗಿ ಸುಭಾಷರನ್ನು ಗೃಹ ಬಂಧನದಲ್ಲಿ ಇಡಲಾಯಿತು.
  • ಅಲ್ಲಿಂದ ತಪ್ಪಿಸಿಕೊಂಡು ಜರ್ಮನಿಗೆ ತೆರಳಿ ಹಿಟ್ಲರನ ಸಹಾಯವನ್ನು ಪಡೆಯಲಿತ್ತಿದ್ದರು.
  • ರಾಸ್ ಬಿಹಾರಿ ಬೋಸ್ ಸ್ಥಾಪಿಸಿದ್ದ .ಎನ್.. ಸೈನ್ಯವನ್ನು ಸಂಘಟಿಸಿ ಜಪಾನ್ ಸಹಾಯದಿಂದ ಬ್ರಿಟಿಷರ ವಿರುದ್ಧ ಯುದ್ಧಕ್ಕಿಳಿದರು.
  • ದೆಹಲಿ ಚಲೋ ಎಂದು ನೇತಾಜಿ ಕರೆ ಕೊಟ್ಟರು. .ಎನ್.. ಸೈನ್ಯವು ಅಂಡಮಾನ್ ಮತ್ತು ನಿಕೋಬಾರ್ಗಳನ್ನು ಗೆದ್ದು ಈಶಾನ್ಯ ರಾಜ್ಯಗಳ ಕಡೆಗೆ ಮುನ್ನಡೆಯಿತು.
  • ಆದರೆ ಇದೇ ವೇಳೆ ಸುಭಾಷರು ಆಕಸ್ಮಿಕವಾಗಿ ವಿಮಾನ ಅಪಘಾತದಲ್ಲಿ ಮರಣ ಹೊಂದಿದರು. ಮುಂದೆ .ಎನ್.. ಸೈನ್ಯ ಬ್ರಿಟಿಷರಿಗೆ ಸೋತಿತು.
  • ಸುಭಾಷ್ ಚಂದ್ರ ಬೋಸರು ತಮ್ಮ ಹೋರಾಟ ಮತ್ತು ಸ್ಫೂರ್ತಿಯ ಮೂಲಕ ಕೋಟ್ಯಾಂತರ ಭಾರತೀಯರ ಮನಸ್ಸಿನಲ್ಲಿ ಅಜರಾಮರವಾಗಿದ್ದಾರೆ.

6. ಅಸ್ಪೃಶ್ಯತೆಯ ನಿವಾರಣೆಗೆ ಅಂಬೇಡ್ಕರ ನಡೆಸಿದ ಹೋರಾಟವನ್ನು ವಿವರಿಸಿ.

  • "ಭಾರತದ ಆಧುನಿಕ ಮನು" ಎಂದು ಕರೆಯಲ್ಪಡುವ ಡಾ. ಬಿ.ಆರ್.ಅಂಬೇಡ್ಕರವರು ಭಾರತದಲ್ಲಿನ ಅಸ್ಪೃಶ್ಯತೆಯ ನಿವಾರಣೆಗೆ ಮಾಡಿದ ಹೋರಾಟ ಸ್ಮರಣೀಯವಾದದು.
  • ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಯೇ ಮನುಷ್ಯನಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ದೊರೆಯದಿದ್ದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲವೆಂದು ಪ್ರತಿಪಾದಿಸಿದರು.
  • ಅಸ್ಪೃಶ್ಯರನ್ನು ಸಮಾಜದ ಮುಖ್ಯ ಭೂಮಿಕೆಗೆ ತರಲು ಶ್ರಮಿಸಿದರು.
  • ನಿಟ್ಟಿನಲ್ಲಿ ಮಹರ್ ಮತ್ತು ಕಾಲಾರಂ ಚಳುವಳಿಯನ್ನು ರೂಪಿಸಿದರು.
  • ಗಾಂಧೀಜಿಯವರೊಂದಿಗೆ ಪೂನಾ ಒಪ್ಪಂದವನ್ನು ಮಾಡಿಕೊಂಡು ಚುನಾವಣಾ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ಪಡೆದರು.
  • ಡಾ. ಬಿ.ಆರ್.ಅಂಬೇಡ್ಕರವರು "ಬಹಿಷ್ಕೃತ ಭಾರತ" ಎಂಬ ಸಂಘಟನೆ ಹಾಗೂ ಸ್ವತಂತ್ರ ಕಾರ್ಮಿಕ ಪಕ್ಷದ ಮೂಲಕ ಶೋಷಿತರು ಕೃಷಿ ಕಾರ್ಮಿಕರನ್ನು ಸಂಘಟಿಸಿದರು.
  • "ಪ್ರಬುದ್ಧ ಭಾರತ ಜನತಾ" ಮತ್ತು "ಮೂಕ ನಾಯಕ" ಎಂಬ ಪತ್ರಿಕೆಗಳ ಮೂಲಕ ತಮ್ಮ ವಿಚಾರಧಾರೆಗಳನ್ನು ಜನರಿಗೆ ತಲುಪಿಸಿದರು.
  • ಭಾರತದ ಮೊದಲ ಕಾನೂನು ಮಂತ್ರಿಯಾಗಿದ್ದ ಇವರು ಅಸ್ಪೃಶ್ಯತೆಯ ನಿವಾರಣೆಗೆ ಕಠಿಣ ಕಾನೂನು ಜಾರಿಗೆ ತಂದರು.
  • ಇವರ ಜೀವನಮಾನದ ಸಾಧನೆಗಾಗಿ ಭಾರತ ಸರಕಾರವು ಇವರಿಗೆ ಮರಣೋತ್ತರವಾಗಿ "ಭಾರತ ರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

7. ಸ್ವತಂತ್ರ ನಂತರ ಜವಹರಲಾಲ್ ನೆಹರು ನೀಡಿದ ಕೊಡುಗೆಗಳೇನು?

  • ಜವಹರ್ ಲಾಲ್ ನೆಹರುರವರು ಭಾರತದ ಪ್ರಥಮ ಪ್ರಧಾನ ಮಂತ್ರಿಯಾಗಿದ್ದು, ಉತ್ತಮ ಆಡಳಿತದ ಮೂಲಕ ನವ ಭಾರತದ ಶಿಲ್ಪಿ ಎಂದು ಕರೆಯಲ್ಪಟ್ಟಿದ್ದಾರೆ.
  • ನೆಹರುರವರು ಸರ್ದಾರ್ ವಲ್ಲಭಭಾಯ್ ಪಟೇಲ್ರವರ ಸಹಾಯದಿಂದ ಸಮಾರು 562 ದೇಶೀಯ ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸುವಲ್ಲಿ ಯಶಸ್ವಿಯಾದರು.
  • ಅಮಂಡ ಭಾರತವನ್ನು ಪ್ರಜಾಪ್ರಭುತ್ವದ ತಳಹದಿಯ ಮೇಲೆ ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಂಗಡಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಅಧಿಕಾರವನ್ನು ಹಂಚಿದರು.
  • ನೆಹರುರವರು ಭಾರತದಲ್ಲಿ ಸಮಾಜವಾದಿ ಹಾಗೂ ಬಂಡವಾಳ ಶಾಹಿ ತತ್ವಗಳನ್ನು ಒಳಗೊಂಡ ಮಿಶ್ರ ಆರ್ಥಿಕತೆಗೆ ಭದ್ರ ಬುನಾದಿಯನ್ನು ಹಾಕಿದರು.
  • ದೇಶದ ಸಮಗ್ರ ಅಭಿವೃದ್ಧಿಗಾಗಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದರು.
  • ಕೃಷಿ, ವಿದ್ಯುತ್ ಮೊದಲಾದ ಕ್ಷೇತ್ರಗಳ ಅಭಿವೃದ್ಧಿಗಾಗಿ ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳನ್ನು ಜಾರಿಗೆ ತಂದರು.
  • ಕೈಗಾರಿಕೆಗಳ ಅಭಿವೃದ್ಧಿಯಿಂದ ಪ್ರಗತಿ ಸಾಧ್ಯವೆಂದು ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಶ್ರಮಿಸಿದರು.
  • ಗ್ರಾಮೀಣಾಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು.
  • ಭಾರತದ ವಿದೇಶಾಂಗ ನೀತಿಯ ಶಿಲ್ಪಿಯಾದ ನೆಹರುರವರು ಪಂಚಶೀಲ ತತ್ವ ಮತ್ತು ಅಲಿಪ್ತ ನೀತಿಯನ್ನು ಬೆಂಬಲಿಸಿದರು.

8. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರೈತರ ಮತ್ತು ಕಾರ್ಮಿಕರ ಪ್ರತಿಭಟನೆಗಳ ಪಾತ್ರವನ್ನು ವಿವರಿಸಿ.

  • ಸ್ವಾತಂತ್ರ್ಯ ಸಂಗ್ರಾಮದಲ್ಲಿ ರೈತ ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗಳು ಕೂಡಾ ಪ್ರಮುಖವಾಗಿವೆ.
  • ರೈತ ಸಂಘಟನೆಯಲ್ಲಿ ಕೆಲವು ಕಾಂಗ್ರೆಸ್ನಿಂದ ಪ್ರಭಾವಿತವಾಗಿದ್ದರೆ, ಇನ್ನೂ ಕೆಲವು ಸಂಘಟನೆಗಳು ಮಾರ್ಕ್ಸ್ವಾದದಿಂದ ಪ್ರಭಾವಿತವಾಗಿದ್ದವು.
  • ಯೂರೋಪಿಯನ್ ಪ್ಲಾಂಟರ್ಗಳ ವಿರುದ್ಧ ರೈತರು ಹಲವಾರು ಕಡೆ ದಂಗೆ ನಡೆಸಿದರು. ಚಂಪಾರಣ್ಯ ಜಿಲ್ಲೆಯಲ್ಲಿ ನೀಲಿ ಬೆಳೆಯುವುದನ್ನು ವಿರೋಧಿಸಿದರು. ಭೂಕಂದಾಯದ ವಿರುದ್ಧ ಹರತಾಳಿ ನಡೆಸಿದರು. ಗಾಂಧೀಜಿಯವರು ಸತ್ಯಾಗ್ರಹದ ಮೂಲಕ ಬ್ರಿಟಿಷ್ ಅಧಿಕಾರಿಗಳ ಮನವೊಲಿಸಿ ತೆರಿಗೆ ರದ್ದುಗೊಳಿಸಿದರು.
  • ಚಂಪಾರಣ್ಯ, ಖೇಡ ಮೊದಲಾದ ಪ್ರದೇಶಗಳ ರೈತರ ಹೋರಾಟದಲ್ಲಿ ಗಾಂಧೀಜಿಯವರ ಪ್ರಭಾವವಿತ್ತು.
  • ಕಾಂಗ್ರೆಸ್ ಪ್ರಭಾವದಿಂದ ತೇಭಾಗ, ಮಲಬಾರ್ ಮೊದಲಾದ ಕಡೆ ಶೋಷಿತ ರೈತರು ಬ್ರಿಟಿಷರ ಮತ್ತು ಜಮೀನ್ದಾರರ ವಿರುದ್ಧ ದಂಗೆಯಿದ್ದರು.
  • ಅಸಹಕಾರ ಚಳುವಳಿ, ಕರ ನಿರಾಕರಣೆ, ಕ್ವಿಟ್ ಇಂಡಿಯಾ ಚಳುವಳಿಯೊಂದಿಗೆ ರೈತರ ಸಮಸ್ಯೆಗಳು ಬೆರೆತವು.

9. ಸ್ವಾತಂತ್ರ್ಯ ಚಳುವಳಿಯಲ್ಲಿ ಬುಡಕಟ್ಟು ಜನರ ಹೋರಾಟವನ್ನು ವಿವರಿಸಿ.

  • ಬ್ರಿಟಿಷರು ಜಾರಿಗೆ ತಂದ ಕಂದಾಯ ಮತ್ತು ಅರಣ್ಯ ನೀತಿಗಳು ಬುಡಕಟ್ಟು ದಂಗೆಗೆ ನೇರವಾಗಿ ಪ್ರೇರಣೆಯಾದವು. ಬುಡಕಟ್ಟು ಬಂಡಾಯಗಳಲ್ಲಿ ಸಂತಾಲರ ದಂಗೆ, ಮುಂಡ ದಂಗೆ ಮತ್ತು ಕಚ್ಚಾ ನಾಗಾ ದಂಗೆ ಪ್ರಮುಖವಾದವುಗಳು. ಕರ್ನಾಟಕದಲ್ಲಿ ಹಲಗಲಿಯ ಬೇಡರ ಬಂಡಾಯವು ನಿಟ್ಟಿನಲ್ಲಿ ಪ್ರಮುಖವಾದುದು.
  • ಸಂತಾಲರ ದಂಗೆ: ಬಂಗಾಳ ಮತ್ತು ಒರಿಸ್ಸಾದ ಗುಡ್ಡಗಾಡು ಪ್ರದೇಶದಲ್ಲಿ ಕಂಡು ಬರುವ ಬುಡಕಟ್ಟು ಜನರು ಜಮೀನ್ದಾರಿ ಪದ್ಧತಿಯಿಂದ ತಮ್ಮ ಭೂಮಿಯನ್ನು ಕಳೆದುಕೊಂಡು ಜಮೀನ್ದಾರರು, ಲೇವಾದೇವಿದಾರರು ಮತ್ತು ಬ್ರಿಟಿಷರ ವಿರುದ್ಧ ಬಂಡೆದ್ದರು. ಬಂಡಾಯವು ವಾಗತ್ಮರ ಮತ್ತು ರಾಚ್ಮಹಲ್ಗಳಲ್ಲಿ ತೀವ್ರವಾಗಿತ್ತು. ಬುಡಕಟ್ಟು ಜನರ ಹೋರಾಟ ತೀವ್ರಗೊಂಡಾಗ ಜಮೀನ್ದಾರರು ಮತ್ತು ಲೇವಾದೇವಿದಾರರು ಅಲ್ಲಿಂದ ಪಲಾಯನಗೈದರು. ಆದರೆ ಬ್ರಿಟಿಷರು ತಮ್ಮ ಸೈನ್ಯದಿಂದ ದಂಗೆಯನ್ನು ಹತ್ತಿಕ್ಕಿದರು.
  • ಮುಂಡ ದಂಗೆ: ಭೋಟಾ ನಾಗ್ಸಾರ ಪ್ರದೇಶದಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನರು ಜಮೀನ್ದಾರಿ ಪದ್ಧತಿಯಿಂದಾಗಿ ತಮ್ಮ ಜಮೀನಾಗಳನ್ನು ಕಳೆದುಕೊಂಡು ಶೋಷಣೆಗೆ ಒಳಗಾದರು. ಮುಂದೆ ಬಿರ್ಸಾ ಎಂಬುವನ ನಾಯಕತ್ವದಲ್ಲಿ ಒಂದಾದ ಮುಂಡ ಜನರು ಜಮೀನ್ದಾರರ ಮತ್ತು ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡಿದರು. ಬ್ರಿಟಿಷರು ದಂಗೆಯನ್ನು ಸಹ ತಮ್ಮ ಸೈನ್ಯದಿಂದ ಹತ್ತಿಕ್ಕಿದರು.
  • ಕಚ್ಚಾ ನಾಗಾ ಹೋರಾಟ: ನಾಗಾ ಜನರು ಮಣಿಪುರ, ಕಾಚಾರ್ ಮತ್ತು ನಾಗಾ ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ. ನಾಗಾಗಳು ಗೈಡಿನ್ಲಿಯು ಎಂಬಾಕೆಯ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದರು. ಬ್ರಿಟಿಷರು ಗೈಡಿನ್ಲಿಯುವನ್ನು ಬಂಧಿಸುವುದರ ಮೂಲಕ ದಂಗೆಯನ್ನು ಹತ್ತಿಕ್ಕಿದರು.
  • ಹೀಗೆ ಬುಡಕಟ್ಟು ದಂಗೆಗಳು ವಿಫಲವಾದರೂ ಸಹ ಅವರು ಮುಂದಿನ ಹೋರಾಟಕ್ಕೆ ಸ್ಫೂರ್ತಿಯಾದರು.

10. ಅಸಹಕಾರ ಚಳುವಳಿಯನ್ನು ವಿವರಿಸಿ.

  • ಗಾಂಧೀಜಿಯವರು 1920 ನಾಗ್ಪುರ ಕಾಂಗ್ರೆಸ್ ಅಧಿವೇಶನದ ನಿರ್ಣಯದಂತೆ ಬ್ರಿಟಿಷರ ವಿರುದ್ಧ ಅಸಹಕಾರ ಚಳುವಳಿಗೆ ಕರೆಯಿತ್ತರು.
  • ಗಾಂಧೀಜಿಯವರ ಕರೆಯನ್ನು ಬೆಂಬಲಿಸಿ ವಿದ್ಯಾರ್ಥಿಗಳು ಶಾಲಾಕಾಲೇಜುಗಳನ್ನು, ವಕೀಲರು ನ್ಯಾಯಾಲಯಗಳನ್ನು ಬಹಿಷ್ಕರಿಸಿದರು.
  • ಭಾರತೀಯ ಗಣ್ಯರು ಬ್ರಿಟಿಷರು ನೀಡಿದ್ದ ಖಿತಾಬುಗಳನ್ನು ಹಿಂದಿರುಗಿಸಿದರು.
  • ಚಳುವಳಿಯನ್ನು ಬೆಂಬಲಿಸಿ ಮೋತಿಲಾಲ್ ನೆಹರು, ಸಿ.ಆರ್. ದಾಸ್ ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿದರು.
  • ಅವಧಿಯಲ್ಲಿ ಬ್ರಿಟಿಷ್ ರಾಜಕುಮಾರನ ಭಾರತದ ಭೇಟಿಯನ್ನು ವಿರೋಧಿಸಿ ದೇಶಾದ್ಯಂತ ಹರತಾಳವನ್ನು ಆಚರಿಸಲಾಯಿತು.
  • ಅಸಹಕಾರ ಚಳುವಳಿಯ ಸ್ವರೂಪವನ್ನು ಮನಗಂಡ ಬ್ರಿಟಿಷ್ ಸರ್ಕಾರದಲ್ಲಿ ಆತಂಕದ ವಾತಾವರಣ ಉಂಟಾಯಿತು.
  • ಇಂತಹ ಸಂದರ್ಭದಲ್ಲಿ 1922ರಲ್ಲಿ ಉತ್ತರ ಪ್ರದೇಶದ ಚೌರಿಚೌರ ಎಂಬಲ್ಲಿ ಶಾಂತಿಯುತವಾಗಿ ಅಸಹಕಾರ ಚಳುವಳಿ ನಡೆಸುತ್ತಿದ್ದ ಚಳುವಳಿಗಾರರ ಮೇಲೆ ಪೋಲಿಸರು ಹಲ್ಲೆ ಮಾಡಿದರು.
  • ಪರಿಣಾಮವಾಗಿ ಚಳುವಳಿ ಹಿಂಸಾರೂಪ ಪಡೆದು ಪೋಲಿಸರು ಗೋಲಿದಾರ್ ನಡೆಸಿದರು.
  • ಇದರಿಂದ ರೊಟ್ಟಿಗೆದ್ದ ಜನರು ಪೋಲಿಸ್ ಠಾಣೆಗೆ ಬೆಂಕಿ ಹಚ್ಚಿ 22 ಜನ ಪೋಲಿಸರನ್ನು ಸಜೀವವಾಗಿ ದಹನ ಮಾಡಿದರು.
  • ಘಟನೆಯನ್ನು ಇತಿಹಾಸದಲ್ಲಿ ಚೌರಚೌರ ಘಟನೆ ಎನ್ನುತ್ತಾರೆ.
  • ಘಟನೆಯಿಂದ ಮನರೊಂದ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂಪಡೆದರು.
  • ಸರ್ಕಾರ ಹಿಂಸೆಗೆ ಗಾಂಧೀಜಿಯವರನ್ನು ಹೊಣೆಗಾರರನ್ನಾಗಿ ಮಾಡಿ ಅವರಿಗೆ 6 ವರ್ಷಗಳ ಕಾಲ ಸೆರಮನೆವಾಸದ ಶಿಕ್ಷೆ ವಿಧಿಸಿತು.

11. ಕ್ವಿಟ್ ಇಂಡಿಯಾ ಚಳುವಳಿಯನ್ನು ವಿವರಿಸಿ

  • ಬ್ರಿಟಿಷ್ ಸರ್ಕಾರವು ಭಾರತೀಯ ನಾಯಕರೊಂದಿಗೆ ಸಂಧಾನಕ್ಕಾಗಿ "ಸ್ಟಾಫರ್ಡ್ ಕ್ರಿಪ್ಸ್" ಆಯೋಗವು 1942 ರಲ್ಲಿ ಕೆಲವು ಸಲಹೆಗಳನ್ನು ಭಾರತೀಯರ ಮುಂದಿಟ್ಟಿತು.
  • ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡುವುದು. ಅದಕ್ಕಾಗಿ ಸಂವಿಧಾನ ರಚಿಸಲು ಸಭೆ ಕರೆಯುವುದು ಹೊಸ ಸಂವಿಧಾನದಲ್ಲಿ ಭಾರತ ಒಕ್ಕೂಟವನ್ನು ಸೇರುವ ಅಥವಾ ಬಿಡುವ ಸ್ವಾತಂತ್ರ್ಯವನ್ನು ಸಂಬಂಧಿಸಿದ ರಾಜ್ಯಗಳಿಗೆ ಬಿಡುವಂತಹ ಸಲಹೆಗಳನ್ನು ನೀಡಿದರು.
  • ಸಲಹೆಗಳನ್ನು ಕಾಂಗ್ರೆಸ್ ಒಪ್ಪದೆ ಕ್ವಿಟ್ ಇಂಡಿಯಾ ಚಳುವಳಿಗೆ ಕರೆ ನೀಡಿತು.
  • ಬ್ರಿಟಿಷರ್ನ ಭಾರತವನ್ನು ಬಿಟ್ಟು ತೊಲಗಿ ಎನ್ನುವುದು ಕ್ವಿಟ್ ಇಂಡಿಯಾ ಚಳುವಳಿಯ ಅಶಯವಾಗಿತ್ತು.
  • ಗಾಂಧೀಜಿಯವರು ದೇಶಬಾಂಧವರಿಗೆ "ಮಾಡು ಇಟ್ಟವೇ ಮಡಿ" ಎನ್ನುವ ಕರೆ ನೀಡಿದರು.
  • ಕರೆ ನೀಡಿದ ಹಿನ್ನೆಲೆಯಲ್ಲಿ ಗಾಂಧೀಜಿ, ನೆಹರು, ರಾಜೇಂದ್ರ ಪ್ರಸಾದ, ಅಬುಲ್ ಕಲಾಂ ಅಜಾದ, ಸರ್ದಾರ್ ವಲ್ಲಭಭಾಯ್ ಪಟೇಲ್ ನಾಯಕರು ಬಂಧನದಲ್ಲಿದ್ದ ಕಾರಣ ಭಾರತೀಯ ರಾಜಕೀಯ ಕಾಂಗ್ರೆಸೇತರ ಸಂಘಟನೆಗಳು ಮುಖ್ಯ ಭೂಮಿಕೆಯಲ್ಲಿದ್ದವು.
  • ಹೊಸ ನಾಯಕರುಗಳ ಉದಯಕ್ಕೆ ಹೋರಾಟವು ಎಡೆ ಮಾಡಿಕೊಟ್ಟಿತು. ಸಂದರ್ಭದಲ್ಲಿ ಚಳುವಳಿಯ ನೇತೃತ್ವವನ್ನು ಜಯಪ್ರಕಾಶ ನಾರಾಯಣರವರು ವಹಿಸಿಕೊಂಡರು.

20ನೇ ಶತಮಾನದ ರಾಜಕೀಯ ಆಯಾಮಗಳು (2 ಅಂಕದ ಪ್ರಶ್ನೆಗಳು)

ಪ್ರ1: ಕೆಳಗಿನ ಪ್ರಶ್ನೆಗಳಿಗೆ 2-3 ವಾಕ್ಯಗಳಲ್ಲಿ ಉತ್ತರಿಸಿರಿ.

  1. ಅಮೇರಿಕಾ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಲು ಕಾರಣಗಳೇನು?
    • ಜರ್ಮನಿಯ ಜಲಾಂತರ್ಗಾಮಿ ನೌಕೆಯು ಇಂಗ್ಲೆಂಡಿನ ಲುಸಿಟೇನಿಯಾ ಹಡಗನ್ನು ಮುಳುಗಿಸಿತು. ಇದರಲ್ಲಿದ್ದ ಅಮೇರಿಕಾದ ನಾಗರಿಕರು ಸಾವನ್ನಪ್ಪಿದರು. ಇದರಿಂದ ಸಿಟ್ಟಗೆದ್ದ ಅಮೇರಿಕಾ ದೇಶವು ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿತು.
  2. ರಷ್ಯಾ ಕ್ರಾಂತಿಯಲ್ಲಿ ಲೆನಿನನ ಪಾತ್ರವೇನು?
    • ರಷ್ಯಾ ಆಳುತ್ತಿದ್ದ ಝಾರ್ ಮೊರೆಗಳು ರೈತರನ್ನು, ಕಾರ್ಮಿಕರನ್ನು & ಬಡವರನ್ನು ತೀವ್ರವಾಗಿ ಶೋಷಿಸುತ್ತಿದ್ದರು.
    • ಲೆನಿನ್ ಜನರಿಗೆ ಶಾಂತಿ, ಅಹಾರ, ಭೂಮಿ, ಎಂಬ ಜನಪರ ಘೋಷಣೆಗಳನ್ನು ನೀಡಿದನು.
    • ಇವನ ಘೋಷಣೆಗೆ ಕಾರ್ಮಿಕರು & ಗ್ರಾಮೀಣ ಬಡವರು ವ್ಯಾಪಕವಾಗಿ ಸ್ಪಂದಿಸಿದರು.
  3. ರಷ್ಯಾ ಪ್ರಗತಿಯಲ್ಲಿ ಲೆನಿನನ ಪಾತ್ರವೇನು?
    • ಲೆನಿನ್ ಅಧ್ಯಕ್ಷರಾದ ಕೂಡಲೇ ಎಲ್ಲಾ ಭೂಮಿ ರೈತರಿಗೆ ಸೇರಿದ್ದು ಎಂದು ಘೋಷಿಸಿದರು.
    • ಎಲ್ಲಾ ರಷ್ಯನ್ನರಿಗೂ ಉಚಿತವಾದ ಶಿಕ್ಷಣ, ಕ್ರೀಡೆ, ಆರೋಗ್ಯ, ವಸತಿ ನೀಡುವಂತಹ ಆರ್ಥಿಕ & ರಾಜಕೀಯ ನೀತಿ ಜಾರಿ ಮಾಡಿದರು.
    • ಲೆನಿನ್ ಕಾಲ್‌ 3 ಮಾರ್ಕ್ಸ್ ವೈಜ್ಞಾನಿಕ ಸಮಾಜವಾದದ ಚಿಂತನೆಯನ್ನು ಪ್ರಾಯೋಗಿಕವಾಗಿ ಮೊದಲ ಬಾರಿ ಜಾರಿಗೆ ತಂದನು.
  4. ಪ್ರಥಮ ಮಹಾಯುದ್ಧಕ್ಕೆ ತತ್ಕ್ಷಣದ ಕಾರಣವನ್ನು ತಿಳಿಸಿ. ಅಥವಾ ಮೊದಲ ಮಹಾಯುದ್ಧಕ್ಕೆ ತಕ್ಷಣದ ಕಾರಣ ಹೇಗೆ ಕಾರಣವಾಯಿತು?
    • ಆಸ್ಟ್ರಿಯಾದ ರಾಜಕುಮಾರ ಅರ್ಕಡ್ಯೂಕ್ ಫ್ರಾನ್ಸಿಸ್ ಫರ್ಡಿನಾಂಡ್ ಬೋಸ್ನಿಯಾದ ರಾಜಧಾನಿ ಸರಜಾವೋಗೆ ಭೇಟಿ ಕೊಟ್ಟಾಗ ಕೊಲೆಯಾದ.
    • ಕೊಲೆ ಮಾಡಿದವನು ಒಬ್ಬ ಸರ್ಬಿಯಾದ ಪ್ರಜೆ.
    • ಇದರಿಂದ ಸಿಟ್ಟಗೆದ್ದ ಆಸ್ಟ್ರಿಯಾ ಸರ್ಬಿಯಾವನ್ನು ಶಿಕ್ಷಿಸಲು ಯುದ್ಧ ಸಾರಿತು ಹಾಗೂ ಜರ್ಮನಿಯ ನೆರವು ಯಾಚಿಸಿತು.
    • ರಷ್ಯಾ ಸರ್ಬಿಯಾವನ್ನು ಬೆಂಬಲಿಸಿತು ಮಹಾಯುದ್ಧ ಹೀಗೆ ಆರಂಭವಾಯಿತು.
  5. ರಷ್ಯಾದಲ್ಲಿ ಸ್ಟಾಲಿನ್ ಕೈಗೊಂಡ ಸುಧಾರಣಾ ಕ್ರಮಗಳು ಯಾವುವು?
    • ಸ್ಟಾಲಿನ್ ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕೈಗಾರಿಕೆಗಳನ್ನು ವಿಸ್ತರಿಸಿದನು.
    • ರಷ್ಯಾ ಬಾಹ್ಯಾಕಾಶ ವಿಜ್ಞಾನದಲ್ಲಿ ವಿಶ್ವದ ಮೊದಲ ಮಾನವ ರಹಿತ ಉಪಗ್ರಹವನ್ನು ಉಡಾವಣೆ ಮಾಡಿತು.
    • ಭೂಮಿಯ ಖಾಸಗಿ ಒಡೆತನವನ್ನು ಮುಕ್ತಾಯಗೊಳಿಸಿ ಸಾಮೂಹಿಕ ಸಾಗುವಳಿ ವ್ಯವಸ್ಥೆಯನ್ನು ಜಾರಿಗೊಳಿಸಿದರು.
  6. ಪ್ರಥಮ ಮಹಾಯುದ್ಧದಿಂದ ಆದ ಪರಿಣಾಮಗಳೇನು? ಅಥವಾ ಮೊದಲನೆ ಮಹಾಯುದ್ಧದ ಪರಿಣಾಮಗಳನ್ನು ತಿಳಿಸಿ.
    • ಸಾಮಾನ್ಯ ನಾಗರಿಕರೂ ಸೇರಿ 100,00,000 ಜನ ಪ್ರಾಣ ಕಳೆದುಕೊಂಡರು.
    • 2,00,00,000 ಜನ ಗಾಯಗೊಂಡರು & 35,00,000 ಜನ ಶಾಶ್ವತವಾಗಿ ಅಂಗವಿಕಲರಾದರು.
    • ನಗರಗಳು, ರಸ್ತೆ, ಸೇತುವೆಗಳು, ರೈಲು ಮಾರ್ಗಗಳು, ಕಾರ್ಖಾನೆಗಳು ನಾಶವಾದವು.
    • ಇವುಗಳ ಪುನರ್ ನಿರ್ಮಾಣ, ಜನರಿಗೆ ಉದ್ಯೋಗ, ಆಹಾರ ಪುನರ್ ವಸತಿ ಒದಗಿಸುವುದು ಅಸಾಧ್ಯ ಕೆಲಸವಾಯಿತು.
    • ಮೈತ್ರಿಕೂಟವು 1919 ರಲ್ಲಿ ಅತ್ಯಂತ ಅವಮಾನಕಾರಿಯಾದ ವರ್ಸೇಲ್ಸ್ ಒಪ್ಪಂದಕ್ಕೆ ಸಹಿಹಾಕಿತು.
    • ಆಸ್ಟ್ರೋ ಹಂಗೇರಿ & ಆಟೋಮನ್ ಸಾಮ್ರಾಜ್ಯಗಳು ತಮ್ಮ ಅಸ್ತಿತ್ವ ಕಳೆದುಕೊಂಡವು.
    • ಮುಂದಿನ ದಿನಗಳಲ್ಲಿ ಸಂಭವನೀಯ ಯುದ್ಧಗಳನ್ನು ತಡೆಯುವ ದೃಷ್ಟಿಯಿಂದ ರಾಷ್ಟ್ರ ಸಂಘ ರಚನೆಯಾಯಿತು.
    • ಸೋತ ರಾಷ್ಟಗಳೊಳಗೆ ಬೆಳೆದ ಅವಮಾನಕರ ಭಾವನೆಗಳು ಉಗ್ರ ರಾಷ್ಟ್ರೀಯತೆಗೆ ಕಾರಣವಾಯಿತು.
    • ಜರ್ಮನಿಯ ಮೇಲೆ ಹೇರಲಾದ ಯುದ್ಧ ನಷ್ಟ ಪರಿಹಾರ ಮತ್ತು ಇತರ ತೀರ್ಮಾನಗಳು ಅಲ್ಲಿನ ಜನರ ಮೇಲೆ ಪರಿಣಾಮ ಬೀರಿದವು.
    • ಎರಡನೇ ಪ್ರಪಂಚ ಯುದ್ಧಕ್ಕೆ ಕಾರಣನಾದ ಹಿಟ್ಲರ್ ನಂತರ ಸರ್ವಾಧಿಕಾರಿಯ ಬೆಳವಣಿಗೆಗೆ ಕಾರಣನಾದನು.
  7. ಶೀತಲ ಸಮರ ಎಂದರೇನು?
    • ಎರಡನೇ ಮಹಾಯುದ್ಧದ ನಂತರ ಜಾಗತಿಕವಾಗಿ ಎರಡು ಬಣಗಳ ನಡುವೆ ರಾಜಕೀಯ, ಆರ್ಥಿಕ, ಮಿಲಿಟರಿ, ಮುಂತಾದ ವಿಷಯಗಳಲ್ಲಿ ಉದ್ಭವಿಸಿದ ನಿರಂತರ ಭಯ, ದ್ವೇಷ, ಅಸೂಯೆ, & ಆತಂಕದ ಪರಿಸ್ಥಿತಿಯನ್ನು ಶೀತಲ ಸಮರ ಎಂದು ಕರೆಯುತ್ತಾರೆ.
  8. 'ನಾಜಿ ಸಿದ್ಧಾಂತವು ಜರ್ಮನಿಯನ್ನು ಹಾಳು ಮಾಡಿತು' ಹೇಗೆ?
    • ಹಿಟ್ಲರನು ಜರ್ಮನಿಯಲ್ಲಿ ನಾಜಿ ಸಿದ್ಧಾಂತವನ್ನು ಹರಡಿಸಿದನು.
    • ನಾಜಿವಾದವೆಂದರೆ ಜಗತ್ತಿನಲ್ಲಿ ಶ್ರೇಷ್ಠವಾದ ಜನಾಂಗವೆಂದರೆ ಆರ್ಯ ಜನಾಂಗ, ಜಗತ್ತನ್ನು ಆಳ್ವಿಕೆ ಮಾಡಲು ಜರ್ಮನ್ನರು ಮಾತ್ರ ಯೋಗ್ಯರು ಎಂಬ ಭಾವನೆ.
    • ಇದು ಬೇರೆ ಜನಾಂಗಗಳನ್ನು ಹೀನಾಯವಾಗಿ ಕಾಣುವಂತೆ ಮಾಡಿತು.
    • ಸುಮಾರು 6 ಮಿಲಿಯನ್ ಯೆಹೂದಿಗಳನ್ನು ಏಷಾನೀಲ ಗೃಹದಲ್ಲಿ ಕೂಡಿಹಾಕಿ ಕೊಲೆ ಮಾಡಿದನು.
    • ಹಿಟ್ಲರನ ನಾಜಿ ಸಿದ್ಧಾಂತವೇ ಎರಡನೇ ಮಹಾಯುದ್ಧಕ್ಕೆ ಕಾರಣವಾಯಿತು.
  9. ಅಮೇರಿಕಾ ಮಹಾಕುಸಿತದಿಂದ ಹೇಗೆ ಹೊರಬಂದಿತು, ವಿವರಿಸಿರಿ.
    • ಅಮೇರಿಕಾವನ್ನು ಮಹಾಕುಸಿತದಿಂದ ಪಾರುಮಾಡುವ ಸಲುವಾಗಿ 1933ರಲ್ಲಿ ಅಮೇರಿಕಾದ ಅಧ್ಯಕ್ಷನಾಗಿ ಆಯ್ಕೆಯಾದ ಎಫ್.ಡಿ. ರೂರವೆಲ್ತ್ ನು'ನೂತನ ಯೋಜನೆ' ಎಂಬ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದನು. ಇದರ ಪ್ರಕಾರ
    • ಕೈಗಾರಿಕಾ ಕೆಲಸಗಾರರಿಗೆ ಕಡಿಮೆ ಅವಧಿಯ ಕೆಲಸ & ಹೆಚ್ಚಿನ ವೇತನವನ್ನು ನೀಡಲಾಯಿತು.
    • ರೈತರಿಗೆ & ನಿರುದ್ಯೋಗಿಗಳಿಗೆ ಪರಿಹಾರ ಧನವನ್ನು ನೀಡಲಾಯಿತು.
  10. ಎರಡನೇ ಮಹಾಯುದ್ಧಕ್ಕೆ ಕಾರಣಗಳೇನು?
    • ಜರ್ಮನಿ ಹಾಗೂ ಇಟಲಿ ದೇಶಗಳ ವಿಸ್ತಾರವಾದ, ಸಾಮ್ರಾಜ್ಯವಾದಗಳು 2ನೇ ಮಹಾಯುದ್ಧಕ್ಕೆ ಮೊದಲ ಕಾರಣ.
    • ಶಾಂತಿಯನ್ನು ಕಾಪಾಡಲೇಂದು ಭಾವಿಸಲಾದ ರಾಷ್ಟ್ರಸಂಘ ವಿಸ್ತರಣಾವಾದಿಗಳ ಆಕ್ರಮಣ ಶೀಲತೆಯನ್ನು ತಡೆಯಲಾರದೇ ಹೋಯಿತು.
  11. ಚೀನಾ ಕ್ರಾಂತಿಯ ಪರಿಣಾಮಗಳಾವುವು?
    • ಚೀನಾ ಕ್ರಾಂತಿಯಿಂದಾಗಿ ದೇಶದಲ್ಲಿ ಮಾವೋತ್ಸೆತಂಗ ನಾಯಕತ್ವದಲ್ಲಿ ಕಮ್ಯುನಿಸ್ಟ್ ಆಡಳಿತ ಆರಂಭವಾಯಿತು.
    • ಚೀನಾದಲ್ಲಿ ಸಾಮೂಹಿಕ ಕೃಷಿ ಪದ್ಧತಿಯನ್ನು ಜಾರಿಗೊಳಿಸಲಾಯಿತು.
    • ಎಲ್ಲರಿಗೂ ಉಚಿತ ಶಿಕ್ಷಣ, ಆರೋಗ್ಯ ಮೊದಲಾದ ಸೌಲಭ್ಯಗಳನ್ನು ನೀಡಲಾಯಿತು.
    • ಕೈಗಾರಿಕಾ ಬೆಳವಣಿಗೆ ಸಾಧಿಸಲು ವಿಜ್ಞಾನ & ತಂತ್ರಜ್ಞಾನಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಯಿತು.
    • ಮುನ್ನಡೆಯ ಮಹಾಜೆಗತ ನೀತಿಯಿಂದ ಖಾಸಗಿ ಆಸ್ತಿಯನ್ನು ಸಮಾಜದ ಆಸ್ತಿಯಾಗಿ ಪರಿವರ್ತಿಸಲಾಯಿತು.
  12. ಪ್ರಥಮ ಮಹಾಯುದ್ಧಕ್ಕೆ ಕಾರಣಗಳೇನು?
    • ಅತ್ಯುಕ್ತ ರಾಷ್ಟ್ರೀಯತೆ.
    • ಪ್ರತಿ ಸ್ಪರ್ಧೆಯ ಮೈತ್ರಿಕೂಟಗಳ ಪೈಪೋಟಿ.
    • ಶಸ್ತ್ರಾಸ್ತ್ರಗಳ ಪೈಪೋಟಿ.
    • ತಕ್ಷಣದ ಕಾರಣಆಸ್ಟ್ರಿಯಾದ ರಾಜಕುಮಾರ ಕೊಲೆ.
  13. ಅಮೇರಿಕ ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಭಾಗವಹಿಸಲು ಕಾರಣವೇನು?
    • ಜಪಾನ ದೇಶವು ಅಮೇರಿಕಾದ ನೌಕಾನೆಲೆ ಪರ್ಲ್ ಹಾರ್ಬರ್ ಮೇಲೆ ಬಾಂಬ್ ದಾಳಿ ಮಾಡಿದ್ದರಿಂದ ಅಮೇರಿಕಾ ಜಾಗತಿಕ ಯುದ್ಧದಲ್ಲಿ ಪಾಲ್ಗೊಂಡಿತು.
  14. ಜರ್ಮನಿಯ ಅಧೋಗತಿಗೆ ಹಿಟ್ಲರ್ ನೀಡಿದ ಕಾರಣಗಳೇನು?
    • ಕಮ್ಯುನಿಸ್ಟರು ವರ್ಸೇಲ್ಸ್ ಒಪ್ಪಂದ & ಯೆಹೂದಿಗಳು ಜರ್ಮನಿಯ ಅಧೋಗತಿಗೆ ಕಾರಣವೆಂದು ಹಿಟ್ಲರ್ ಘೋಷಿಸಿದರು.
  15. ಚೀನಾ ಕಮ್ಯುನಿಸ್ಟ್ ರಾಷ್ಟ್ರವಾಗಿ ಉದಯವಾದ ನಂತರ ಜಾರಿಗೆ ತಂದ ಸುಧಾರಣೆಗಳಾವುವು? ಅಥವಾ ಚೀನಾ ಕ್ರಾಂತಿಯ ನಂತರ ಚೀನಾ ಹೇಗೆ ಅಭಿವೃದ್ಧಿ ಹೊಂದಿತು?
    • ಚೀನಾದಲ್ಲಿ ಸಾಮೂಹಿಕ ಕೃಷಿ ಪದ್ಧತಿಯನ್ನು ಜಾರಿಗೊಳಿಸಿದರು.
    • ಎಲ್ಲರಿಗೂ ಉಚಿತ ಶಿಕ್ಷಣ, ಆರೋಗ್ಯ ಮೊದಲಾದ ಸೌಲಭ್ಯಗಳನ್ನು ನೀಡಿದರು.
    • ಕೈಗಾರಿಕಾ ಬೆಳವಣಿಗೆ ಸಾಧಿಸಲು ವಿಜ್ಞಾನ & ತಂತ್ರಜ್ಞಾನಕ್ಕೆ ತುಂಬಾ ಮಹತ್ವ ನೀಡಿದರು.
    • ಮುನ್ನಡೆಯ ಮಹಾಜೆಗತ ಯೋಜನೆಯನ್ನು ಜಾರಿಗೊಳಿಸಲಾಯಿತು.
    • ಖಾಸಗಿ ಆಸ್ತಿಯನ್ನು ಸಮಾಜದ ಆಸ್ತಿಯಾಗಿ ಪರಿವರ್ತಿಸಿದರು.
  16. ರಷ್ಯಾದಲ್ಲಿ ಝಾರ್ ಶಾಹಿಯ ಆಳ್ವಿಕೆಯನ್ನು ರಾಷ್ಟ್ರೀಯತೆಯ ಜೈಲು ಎಂದು ಏಕೆ ಕರೆಯಲಾಗುತ್ತಿತ್ತು?
    • 19ನೇ ಶತಮಾನದಲ್ಲಿ ಝಾರ್ ದೊರೆಗಳು ತಮ್ಮ ಕುಲೀನರು, ಜರ್ಮನ್ನರು, ರೈತರನ್ನು & ಬಡವರನ್ನು ತೀವ್ರವಾಗಿ ಶೋಷಿಸಿದರು.
    • ಝಾರ್ ಚಕ್ರವರ್ತಿಗಳ ಆಳ್ವಿಕೆಯಿಂದ ಜನರು ತುಂಬಾ ಬೇಸತ್ತಿದ್ದರು.
    • ರಷ್ಯಾದಲ್ಲಿ ಝಾರ್ ಶಾಹಿಯನ್ನು ರಾಷ್ಟ್ರೀಯತೆಯ ಜೈಲು ಎಂದು ಕರೆಯಲಾಗುತ್ತಿತ್ತು.
  17. ರಷ್ಯಾದಲ್ಲಿ ಸಮಾಜವಾದಿ ವ್ಯವಸ್ಥೆ ಕುಸಿಯಲು ಕಾರಣವೇನು?
    • ಸೋವಿಯತ್ ಒಕ್ಕೂಟದ ಅಧ್ಯಕ್ಷರಾದ ಗೋರ್ಟಬಾಚೆವ್ 1985ರಲ್ಲಿ ಗ್ರಾಸ್ನೋಸ್ತ್ & 1987ರಲ್ಲಿ ಪೆರೆಸ್ಟ್ರೋಯಿಕಾ ಎಂಬ ಸುಧಾರಣೆಗಳನ್ನು ಜಾರಿಮಾಡಿದ ನಂತರ ರಷ್ಯಾದಲ್ಲಿ ಸಮಾಜವಾದಿ ವ್ಯವಸ್ಥೆ ಕುಸಿದು ಸೋವಿಯತ್ ಒಕ್ಕೂಟ ವಿಘಟನೆಯಾಯಿತು.
  18. ಹೊಲೊಕಾಸ್ಟ್ ಎಂದರೇನು?
    • ಜರ್ಮನಿಯಲ್ಲಿ ಹಿಟ್ಲರ್ ಜನಾಂಗೀಯ ದ್ವೇಷವನ್ನು ಒತ್ತುವ ಮೂಲಕ ಸುಮಾರು 6 ಮಿಲಿಯನ್ ಯೆಹೂದಿಗಳನ್ನು ಕೋಟಿಗೂ ಹೆಚ್ಚು ಇತರೆ ಜನರನ್ನು ಕೊಲ್ಲಿಸಿದರು. ಇವನ ಸಾಮೂಹಿಕ ಕಗ್ಗೋಲೆಯನ್ನು ಹೊಲೊಕಾಸ್ಟ್ ಎಂದು ಕರೆಯಲಾಗಿದೆ.
  19. ಆರ್ಥಿಕ ಮಹಾಕುಸಿತದ ಪರಿಣಾಮಗಳೇನು?
    • ಯೂರೋಪ್ & ಅಮೇರಿಕಾದಲ್ಲಿ ಸಂಕಷ್ಟದ ಪರಿಸ್ಥಿತಿಗಳು ನಿರ್ಮಾಣಗೊಂಡವು.
    • ಜನರ ಜೀವನ ಮಟ್ಟ ತೀವ್ರವಾಗಿ ಕುಸಿಯಿತು.
    • ಕೈಗಾರಿಕೆ & ಕೃಷಿ ಬೆಳವಣಿಗೆ ಸ್ಥಗಿತಗೊಂಡಿತು.
    • ನಿರುದ್ಯೋಗ ಹೆಚ್ಚಾಯಿತು.
  20. ಪ್ಯಾಸಿಸ್ಟೆಬಾದದ ಪ್ರಮುಖ ಲಕ್ಷಣಗಳೇನು?
    • ಉಗ್ರ ರಾಷ್ಟ್ರೀಯವಾದ,
    • ಪರಕೀಯ ಶಕ್ತಿಗಳ ನಾಶ,
    • ಹಿಂಸೆಯ ವೈಭವೀಕರಣ,
    • ಜನಾಂಗೀಯ ಶ್ರೇಷ್ಠತೆ,
    • ಸಮಾಜವಾದದ ವಿಸ್ತರಣೆ,
    • ನರಮೇಧಗಳಿಗೆ ಬೆಂಬಲ.
  21. ಹಿಟ್ಲರ್ ಜನಾಂಗೀಯ ದ್ವೇಷವೇ ಅವನ ಅಂತ್ಯಕ್ಕೆ ಕಾರಣ ಹೇಳಿಕೆಯನ್ನು ಉದಾಹರಣೆಗಳೊಂದಿಗೆ ವಿಶ್ಲೇಷಿಸಿ.
    • ಜನಾಂಗೀಯ ದ್ವೇಷವನ್ನು ಪ್ರಸಾರ ಮಾಡಲು ಗೋಬೆಲ್ಲ್ಸ್ ಎಂಬ ಹೊಸ ಮಂತ್ರಿಯನ್ನು ನೇಮಿಸಿದನು.
    • ಊಟ ನೀರು ಯಾವುದನ್ನು ನೀಡದೇ ಗುಲಾಮರ ರೀತಿಯಲ್ಲಿ ದುಡಿಸಿಕೊಳ್ಳುವ ಕಾನ್ಫೆಂಬ್ರೇಷನ್ ಕ್ಯಾಂಪ್ಸ್ ಗಾಳಿ ಬೆಳಕಿಲ್ಲದ ಗ್ಯಾಸ್ ಛೇಂಬರ್ ಗಳಲ್ಲಿ ನೂಕಿ ವಿಷ ಗಾಳಿ ಬಿಟ್ಟು ಕೊಲ್ಲಿಸುತ್ತಿದ್ದನು.
    • ಸಾವಿರಾರು ಜನರನ್ನು ಗುಂಡಿಕ್ಕಿ ಕೊದನು.
    • ಮಕ್ಕಳನ್ನೆದೇ, ಮಹಿಳೆಯರೆನ್ನದೆ, ಮುದುಕರೆನ್ನೆದೆ ಎಲ್ಲರನ್ನೂ ಸಾಮೂಹಿಕವಾಗಿ ಕೊಲ್ಲಲು ವಿಶೇಷ ಪಡೆಗಳನ್ನು ರೂಪಿಸಿದನು.
    • ಯುದ್ಧದಲ್ಲಿ ಜನಾಂಗೀಯ ದ್ವೇಷದ ಅಧ್ಯಾಯವು ಅವನ ಸಾವಿನೊಂದಿಗೆ ಅಂತ್ಯವಾಯಿತು.
  22. ಮೊದಲ ಮಹಾಯುದ್ಧದ ಸಂದರ್ಭದಲ್ಲಿದ್ದ ಪ್ರತಿಸ್ಪರ್ಧೆಯ ಮೈತ್ರಿಕೂಟಗಳಾವುವು? ಅಥವಾ ಕದನ ಬಾಂಧವ್ಯತ್ರಯ & ಕದನ ಸೌಹಾರ್ದತ್ರಯ ಮೈತ್ರಿಕೂಟದ ರಾಷ್ಟ್ರಗಳನ್ನು ಹೆಸರಿಸಿರಿ.
    • ಮೊದಲ ಮಹಾಯುದ್ಧವು ದೇಶಗಳನ್ನು 2 ಬಣಗಳಾಗಿ ವಿಭಜಿಸಿತು.
    • ಕದನ ಬಾಂಧವ್ಯತ್ರಯ ಕೂಟದ ರಾಷ್ಟ್ರಗಳು: ಬ್ರಿಟನ್, ಫ್ರಾನ್ಸ್, ರಷ್ಯಾ.
    • ಕದನ ಸೌಹಾರ್ದತ್ರಯ ಕೂಟದ ರಾಷ್ಟ್ರಗಳು: ಜರ್ಮನಿ, ಆಸ್ಟ್ರಿಯಾ, ಹಂಗೇರಿ, & ಇಟಲಿ.
    • ಯೂರೋಪ್ 2 ವಿರೋಧಿ ಶಕ್ತಿ ಬಣಗಳ ನಡುವೆ ವಿಭಜನೆ ಹೊಂದಿತು.
  23. ಮೊದಲನೇ ಮಹಾಯುದ್ಧ & ಎರಡನೇ ಮಹಾಯುದ್ಧ ನಡೆದ ವರ್ಷ ತಿಳಿಸಿ.
    • ಮೊದಲನೇ ಮಹಾಯುದ್ಧ ನಡೆದ ವರ್ಷ: 1914–1918.
    • ಎರಡನೇ ಮಹಾಯುದ್ಧ ನಡೆದ ವರ್ಷ: 1939–1945.
  24. ಚೀನಾದಲ್ಲಿ ಕಮ್ಯುನಿಸ್ಟ್ ರಾಷ್ಟ್ರ ಉದಯವಾದದ್ದು ಯಾವಾಗ & ಅದರ ನೇತಾರ ಯಾರು?
    • ಚೀನಾದಲ್ಲಿ ಕಮ್ಯುನಿಸ್ಟ್ ರಾಷ್ಟ್ರ ಉದಯವಾದದ್ದು ಕ್ರಿ. . 1949ರಲ್ಲಿ ಅದರ ನೇತಾರ ಮಾವೋತ್ಸೆತುಂಗ್.
  25. ಯೂರೋಪಿನ ದೇಶಗಳಲ್ಲಿ ತೀವ್ರವಾದ ಪೈಪೋಟಿಯನ್ನು ಸೃಷ್ಟಿಸಿದ ಎರಡು ಅಂಶಗಳಾವುವು?
    • ಯೂರೋಪಿಯನ್ ದೇಶಗಳಲ್ಲಿ ತೀವ್ರವಾದ ಪೈಪೋಟಿಯನ್ನು ಸೃಷ್ಟಿಸಿದ ಎರಡು ಅಂಶಗಳೆಂದರೆ 1) ಕೈಗಾರಿಕಾ ಕ್ರಾಂತಿ ಮತ್ತು 2) ನೂತನ ಅವಿಷ್ಕಾರಗಳು.
  26. ಜರ್ಮನಿಯ ನಾಜಿ ಪಕ್ಷದ ನಾಯಕ ಯಾರು? ಅವನು ರಚಿಸಿದ ಕ್ರೂರ ಸೈನ್ಯ ಪಡೆ ಯಾವುದು?
    • ಜರ್ಮನಿಯ ನಾಜಿ ಪಕ್ಷದ ನಾಯಕ ಅಡಾಲ್ಫ್ ಹಿಟ್ಲರ್, ಅವನು ರಚಿಸಿದ ಕ್ರೂರ ಸೈನ್ಯ ಪಡೆಯೆಂದರೆ ಬೂದು ಅಂಗಿ ದಳ.
  27. ಗ್ಲಾಸ್ನೋಸ್ತ್ & ಪೆರೆಸ್ಟ್ರೋಯಿಕಾ ಎಂದರೇನು?
    • ಗ್ಲಾಸ್ನೋಸ್ತ್ ಎಂದರೆ "ಮುಕ್ತತೆ" ಎಂದರ್ಥ.
    • ಪೆರೆಸ್ಟ್ರೋಯಿಕಾ ಎಂದರೆ "ಮನರ್ ರಚನೆ" ಎಂದರ್ಥ.
  28. ಅತ್ಯುನ್ನತ ರಾಷ್ಟ್ರೀಯತೆ ಎಂದರೇನು?
    • ಯೂರೋಪಿನಲ್ಲಿ ಶಕ್ತಿಯುತ ರಾಷ್ಟ್ರೀಯತೆ ಜನರಲ್ಲಿ ತಾವು ಅತ್ಯಂತ ಉತ್ಕೃಷ್ಟರು ಎಂಬ ಭಾವನೆ ಬೆಳೆಸಿತು. ತಮ್ಮ ದೇಶ ಸರಿ ಇರಲಿ ಅಥವಾ ತಪ್ಪಿರಲಿ ಅದಕ್ಕಾಗಿ ಹೋರಾಡುವುದು ಒಂದು ಪವಿತ್ರವಾದ ಕರ್ತವ್ಯ ಎಂದು ಭಾವಿಸಿದರು ಇದನ್ನೇ ಅತ್ಯುಕ್ತರಾಷ್ಟ್ರೀಯತೆ ಎನ್ನುವರು.
  29. ರಾಷ್ಟ್ರ ಸಂಘದ ಸಾಧನೆ ತಿಳಿಸಿ
    • ರಾಷ್ಟ್ರ ಸಂಘವು ವಿಶ್ವದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ 44 ರಾಷ್ಟ್ರಗಳ ಸದಸ್ಯತ್ವವನ್ನು ಹೊಂದಿ 1919 ರಲ್ಲಿ ಸ್ಥಾಪಿತವಾಯಿತು.
    • ರಾಷ್ಟ್ರಗಳ ನಡುವೆ ಯುದ್ಧಗಳಾಗುವ ಎಷ್ಟೋ ಪ್ರಸಂಗಗಳನ್ನು ರಾಷ್ಟ್ರ ಸಂಘ ತಡೆಯಿತು.
    • ಇಟಲಿಯಾ ಕೋರ್ಫು ದ್ವೀಪವನ್ನು ಗ್ರೀಸ್ ನಿಂದ ವಶಪಡಿಸಿಕೊಂಡಿದ್ದಾಗ ದ್ವೀಪವನ್ನು ಮೆರಳಿಸುವಂತೆ ಸಂಘ ಒತ್ತಡವೇರಿ ಯಶಸ್ವಿಯಾಯಿತು.
    • ವರ್ಸೇಲ್ಸ್ ಒಪ್ಪಂದಗಳ ಕರಾರುಗಳ ಕಾರ್ಯಾಚರಣೆಯಲ್ಲಿ ಅದು ಯಶಸ್ಸು ಕಂಡಿತು.
    • ಅಪ್ಪರ್ ಸೈಲಿಸಿಯಾ ಬಗ್ಗೆ ಪೋಲೆಂಡ್ ಹಾಗೂ ಜರ್ಮನಿಗಳ ನಡುವೆ ಬೆಳೆದ ವಾದವನ್ನು ನಿವಾರಿಸಿತು.
    • ರಾಷ್ಟ್ರ ಸಂಘದ ಮುಖ್ಯ ಸಾಧನೆ ಎಂದರೆ ಕ್ರಿ. 1919–1939 ವರೆಗೆ ಯುದ್ಧವನ್ನು ಯಶಸ್ವಿಯಾಗಿ ತಡೆಗಟ್ಟಿತು.
  30. ರಾಷ್ಟ್ರ ಸಂಘದ ವಿಘಲತೆ ತಿಳಿಸಿ.
    • ರಾಷ್ಟ್ರ ಸಂಘದ ಆರಂಭದಿಂದಲೂ ಅಮೇರಿಕಾ ಸಂಯುಕ್ತ ಸಂಸ್ಥಾನ ಸಂಘವನ್ನು ಸೇರಲಿಲ್ಲ. ಇದರಿಂದ ರಾಷ್ಟ್ರ ಸಂಘ ದುರ್ಬಲವಾಯಿತು.
    • ವಿಶ್ವದ ಎಲ್ಲ ರಾಷ್ಟ್ರಗಳು ಲೀಗ್ ಸದಸ್ಯರಾಗಲಿಲ್ಲ.
    • ದಾಳಿಗಳನ್ನು ತಡೆಗಟ್ಟಲು ತನ್ನದೇ ಆದ ಸೈನ್ಯ ಇರಲಿಲ್ಲ.
    • ಇದು ತೃಪ್ತಿಕರವಾದ ನಿಶ್ಯಸ್ತ್ರೀಕರಣವನ್ನು ತರಲು ವಿಫಲಗೊಂಡಿತು.
    • ಹಲವಾರು ದೇಶಗಳು ಲೀಗನಿಂದ ಹೊರಗುಳಿದುದರಿಂದ ತನ್ನ ನಿರ್ಧಾರವನ್ನು ಎಲ್ಲಾ ರಾಷ್ಟ್ರಗಳ ಮೇಲೆ ಹೇರುವುದು ಅಸಾಧ್ಯವಾಯಿತು.
  31. ರಷ್ಯಾ ಕ್ರಾಂತಿ ಉಂಟಾಗಲು ಕಾರಣವೇನು?
    • ರಷ್ಯಾ ಜಗತ್ತಿನ ಉಳಿದ ಎಲ್ಲಾ ದೇಶಗಳಿಗಿಂತಲೂ ವಿಸ್ತೀರ್ಣದಲ್ಲಿ ದೊಡ್ಡದು ರಷ್ಯಾವನ್ನುಝಾರದೊರೆಗಳು ಆಳುತ್ತಿದ್ದರು.
    • ಅವರು ತಮ್ಮ ಕೆಳಗಿನ ಕುಲೀನರು ಜಮೀನ್ದಾರರು ರೈತರನ್ನು ಮತ್ತು ಬಡವರನ್ನು ತೀವ್ರವಾಗಿ ಶೋಷಿಸುತ್ತಿದ್ದರು.
    • ಸಣ್ಣದಾಗಿ ಬೆಳೆಯುತ್ತಿದ್ದ ಬಂಡವಾಳದಾರರು ಕಾರ್ಮಿಕರನ್ನು & ಇತರರನ್ನು ಶೋಷಿಸುತ್ತಿದ್ದರು.
    • ಝಾರ್ ಚಕ್ರವರ್ತಿಗಳ ಆಳ್ವಿಕೆಯಿಂದ ಜನರು ತುಂಬಾ ಬೇಸತ್ತಿದ್ದರು.
    • ಝಾರ್ ಶಾಹಿಯನ್ನು ರಾಷ್ಟ್ರೀಯತೆಗಳ ಚೈಲು ಎಂದು ಕರೆಯಲಾಗುತ್ತಿತ್ತು.
    • 1905 ರಲ್ಲಿ ಜಪಾನನಂತಹ ಪಟ್ಟ ದೇಶ ರಷ್ಯಾವನ್ನು ಸೋಲಿಸಿದ್ದು ದೇಶದೊಳಗೆ ಝಾರ್ ದೊರೆಗಳ ವಿರುದ್ಧ ವ್ಯಾಪಕವಾದ ಪ್ರತಿರೋಧವನ್ನೇದ್ಧಿಸಿತು.
  32. ರಷ್ಯಾ ಕ್ರಾಂತಿಯಲ್ಲಿ ಲೆನಿನ್ ಪಾತ್ರ ವಿವರಿಸಿ.
    • ಕಾರ್ಖಾನೆಗಳ ಕಾರ್ಮಿಕರು & ಹಳ್ಳಿಗಳ ರೈತರು ಶಸ್ತ್ರಗಳನ್ನು ಹಿಡಿದು ಝಾರ ಮನೆತನದ ವಿರುದ್ಧ ಹೋರಾಡಿದರು.
    • ಇಂತಹ ಪರಿಸ್ಥಿತಿಯಲ್ಲಿ ಲೆನಿನ್ ಎಂಬುವವನು ತರುಣ ಪೀಳಿಗೆಯ ಕಮ್ಯೂನಿಸ್ತ ಕ್ರಾಂತಿಗಳ ಗುಂಪೊಂದನ್ನು ರಚಿಸಿದರು.
    • ಗುಂಪಿನ ಸದಸ್ಯರು ಕಾರ್ಲಮಾರ್ಕ್ಸ್ ಸಿದ್ಧಾಂತಗಳಿಂದ ಪ್ರಭಾವಿಸಲ್ಪಟ್ಟಿದ್ದರು & ಇವನ ನೇತೃತ್ವದಲ್ಲಿ 1917 ಫೆಬ್ರುವರಿ ಕ್ರಾಂತಿ ನಡೆಯಿತು.
    • ಲೆನಿನ್ ದುಡಿಯುವ ಜನ ಹೋರಾಟಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತೆ ಮಾಡಿದರು.
    • ಲೆನಿನ್ ಜನರಿಗೆ ಸರಳವಾದಶಾಂತಿ, ಆಹಾರ, ಭೂಮಿಎಂಬ ಜನಪರ ಘೋಷಣೆಗಳನ್ನು ನೀಡಿದರು.
    • ಲೆನಿನ್ ಸ್ಥಾಪಿಸಿದ ಕಮ್ಯುನಿಷ್ಟ ಗುಂಪಿನವರು ಕ್ರಾಂತಿಕಾರಿ ಸಮಿತಿಗಳನ್ನು ದೇಶದಾದ್ಯಂತ ಸ್ಥಾಪಿಸಿದರು.
    • ಲೆನಿನ್ ನೇತೃತ್ವದಲ್ಲಿ ರಷ್ಯಾ ಸಮಾಜವಾದಿ ರಾಷ್ಟ್ರ ಎಂದು ಘೋಷಿಸ ತೊಡಗಿತು.
    • ಲೆನಿನ್ ಎಲ್ಲಾ ರಷ್ಯನ್ನರಿಗೂ ಉಚಿತವಾದ ಶಿಕ್ಷಣ ಕ್ರೀಡೆ ಆರೋಗ್ಯ, ವಸತಿ ನೀಡುವಂತಹ ಆರ್ಥಿಕ & ರಾಜಕೀಯ ನೀತಿಗಳನ್ನು ಜಾರಿ ಮಾಡಿದರು.
    • ಕಾರ್ಲ ಮಾರ್ಕ್ಸ್ ವೈಜ್ಞಾನಿಕ ಸಮಾಜವಾದದ ಚಿಂತನೆಯನ್ನು ಪ್ರಾಯೋಗಿಕವಾಗಿ ಮೊದಲ ಬಾರಿಗೆ ಜಾರಿ ಮಾಡಿದ್ದು ಲೆನಿನ್.
    • 1924 ರಲ್ಲಿ ಲೆನಿನ್ ಇದನ್ನು ಬೆಳೆಸುವ ಹಂತದಲ್ಲಿ ನಿಧನರಾದರು.
  33. "ನಾಜಿ ಸಿದ್ಧಾಂತವು ಜರ್ಮನಿಯನ್ನು ಹಾಳು ಮಾಡಿತು" ಹೇಗೆ ವಿವರಿಸಿ.
    • ಪ್ರಥಮ ಮಹಾಯುದ್ಧದ ನಂತರ ಹಿಟ್ಲರ್ ಜರ್ಮನಿಯ ಚಾನ್ಸಲರ್ ಆಗಿ ನಂತರ ಅಧ್ಯಕ್ಷ ಹಿಂಡನ್ ಬರ್ಗ್ ನಿಧನದ ನಂತರ ಸರ್ವಾಧಿಕಾರಿಯಾದನು.
    • ಹಿಟ್ಲರ್ ಜರ್ಮನ್ ಉದ್ಯಮಿಗಳ ಸಂಪೂರ್ಣ ಸಹಾಯ ಪಡೆದು ಕಮ್ಯೂನಿಸ್ಟ್ & ಸೋಷಿಯಲಿಸ್ಟ್ ರನ್ನು ಸೋಲಿಸಿದನು, ನಾರಿಥ ಪಕ್ಷ ಏಕೈಕ ರಾಜಕೀಯ ಪಕ್ಷವೆಂದು ಘೋಷಿಸಿದನು.
    • ಹಿಟ್ಲರ್ ಜಗತ್ತಿನಲ್ಲಿ ಜರ್ಮನ್ ಆರ್ಯ ಜನಾಂಗವೇ ಶ್ರೇಷ್ಠವೆಂಬ ಜನಾಂಗಗಳು ವಾದವನ್ನು ಮುಂದಿಟ್ಟು ಪ್ರಬಲವಾಗಿ ಬೆಳೆದನು ಇವೆಲ್ಲವನ್ನು ಮಾಡಲು ಹಿಟ್ಲರ್ ಅನುಸರಿಸಿದ್ದು "ನಾಜಿವಾದ".
    • ಇದರ ಸಾರಾಂಶವೆಂದರೆ- ಜಗತ್ತಿನಲ್ಲಿ ಶ್ರೇಷ್ಠವಾದ ಜನಾಂಗವೆಂದರೆ ಆರ್ಯ ಜರ್ಮನ್ ಜನಾಂಗ.
    • ಜಗತ್ತನ್ನು ಆಳ್ವಿಕೆ ಮಾಡಲು ಜರ್ಮನ್ನರು ಮಾತ್ರ ಯೋಗ್ಯರು.
    • ಜರ್ಮನ್ನರ ಎಲ್ಲಾ ಸಮಸ್ಯೆಗಳಿಗೆ ಯಹೂದಿಗಳೇ ಕಾರಣ ಇದರ ಜೊತೆಗೆ ಕಮ್ಯೂನಿಸ್ಟರು, ಕ್ಯಾಥೋಲಿಕರು, ಸೋಷಿಯಲಿಸ್ಟರೂ ಸಹ ಕಾರಣ.
    • ಇವರೆಲ್ಲರೂ ಬದುಕಲು ಯೋಗ್ಯರಲ್ಲ- ರೀತಿಯಾಗಿ ರೂಪಗೊಂಡ ಉಗ್ರರಾಷ್ಟ್ರೀಯತೆಯು ಅತ್ಯಂತ ಅಮಾನುಷವಾಗಿ ಜಾರಿಗೆ ಬಂದಿತು.
    • ಹಿಟ್ಲರ್ ಗಲಭೆಗಳನ್ನು ಮಾಡಿ ಜನರಲ್ಲಿ ಭೀತಿಯನ್ನುಂಟು ಮಾಡಲು ಬೂದು ಅಂಗಿಗಳ ಎಂಬ ಕಾರ್ಯಪಡೆಯೊಂದನ್ನು ರಚಿಸಿದ್ದನು.
    • ಒಂದು ಅಂದಾಜಿನ ಪ್ರಕಾರ ಹಿಟ್ಲರ್ 6 ಮಿಲಿಯನ್ ಯಹೂದಿಗಳನ್ನು ಕೋಟಿಗೂ ಹೆಚ್ಚು ಇತರೆ ಜನರನ್ನು ಕೊಲ್ಲಿಸಿದನು. ಇವನ ಸಾಮೂಹಿಕ ಕಗ್ಗೋಲೆಗಳನ್ನು ಹೊಲೊಕಾಸ್ಟ್ ಎಂದು ಕರೆಯಲಾಗಿದೆ.
    • ಊಟ, ನೀರು ಯಾವುದನ್ನೂ ನೀಡದೆ ಗುಲಾಂರ ರೀತಿಯಲ್ಲಿ ದುಡಿಸಿಕೊಳ್ಳುವ ಕಾನ್ಫೆಂಟ್ರಿಷನ್ ಕ್ಯಾಂಪ್ ಗಳು ಗಾಳಿ ಬೆಳಕಿಲ್ಲದ, ಗ್ಯಾಸ್ ಛೇಂಬರ್ ಗಳಲ್ಲಿ ಜನರನ್ನು ನೂಕಿ ವಿಷಗಾಳಿ ಬಿಟ್ಟು ಕೊಲ್ಲುತ್ತಿದ್ದನು.
    • ಹಿಟ್ಲರನ್ನು ಮಕ್ಕಳನ್ನದೆ, ಮಹಿಳೆಯರೆನ್ನದೆ, ಮುದುಕರೆನ್ನದೆ ಎಲ್ಲರನ್ನೂ ಸಾಮೂಹಿಕವಾಗಿ ಕೊಲ್ಲಲು ವಿಶೇಷ ಪಡೆಗಳನ್ನು ರಚಿಸಿದನು.
    • ಇಡೀ ಪ್ರಭುತ್ವ ಯಂತ್ರವನ್ನು ನರಮೇಧವನ್ನು ನಡೆಸಲು ಬಳಸಿದನು.
    • ಜಗತ್ತನ್ನೇ ಗೆಲ್ಲಬೇಕೆಂಬ ನಾಜಿವಾದದಂತೆ ಜರ್ಮನ್ನರ ಆರ್ಯಜನಾಂಗೀಯ ಶ್ರೇಷ್ಠತೆಗಳನ್ನು ಜಾರಿಗೊಳಿಸಬೇಕೆಂಬ ಮಹಾತ್ಮಾಕಾಂಕ್ಷೆಯೇ ಎರಡನೇಯ ಮಹಾಯುದ್ಧಕ್ಕೆ ಮುಖ್ಯ ಕಾರಣಗಳಲ್ಲೊಂದಾಯಿತು.
    • ಹಿಟ್ಲರನ ನಾಜಿವಾದ & ಜನಾಂಗೀಯ ದ್ವೇಷದ ಅಧ್ಯಾಯವು ಯುದ್ಧದಲ್ಲಿ ಅವನ ಸಾವಿನೊಂದಿಗೆ ಅಂತ್ಯವಾಯಿತು.
  34. ಮುಸೋಲಿನಿಯು ಜಾರಿಗೆ ತಂದಿದ್ದ ಫ್ಯಾಸಿಸ್ಟರಾದದ ಪರಿಣಾಮಗಳನ್ನು ತಿಳಿಸಿ.
    • 1922-1943 ವರೆಗೆ ಇಟಲಿಯ ಪ್ರಧಾನಿಯಾಗಿದ್ದ ಮುಸೋಲಿನಿ "ರಾಷ್ಟ್ರೀಯ ಫ್ಯಾಸಿಸ್ಟ್ ಪಕ್ಷ" ಸ್ಥಾಪಕ.
    • ತನ್ನ ಗುಪ್ತ ಪೋಲಿಸರ ಮುಖಾಮತರ ಎಲ್ಲಾ ರಾಜಕೀಯ ವಿರೋಧಿಗಳನ್ನು ನಾಶಮಾಡಿದನು.
    • ಕಾರ್ಮಿಕರ ಮುಷ್ಠರಗಳನ್ನು ನಿಷೇಧಿಸಿದನು.
    • ಫ್ಯಾಸಿಸ್ಟ್ ವಾದವನ್ನು ಜಾರಿಗೆ ತರಲು & ಏಕಪಕ್ಷದ ಸರ್ವಾಧಿಕಾರವನ್ನು ಸ್ಥಾಪಿಸುವಲ್ಲಿ ಹಿಟ್ಲರನ ಜೊತೆಗೂಡಿ 2 ನೇ ಮಹಾಯುದ್ಧದಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣನಾದನು.
    • 1945 ರಲ್ಲಿ ಇವನನ್ನು ಹತ್ಯ ಮಾಡಲಾಯಿತು.
  35. ಎರಡನೇಯ ಮಹಾಯುದ್ಧಕ್ಕೆ ಕಾರಣಗಳಾವುವು?
    • ಜರ್ಮನಿ ಹಾಗೂ ಇಟಲಿ ದೇಶಗಳ ವಿಸ್ತರಣಾವಾದ, ಸಾಮ್ರಾಜ್ಯವಾದಗಳು ಯುದ್ಧದ ಮೊದಲ ಕಾರಣ.
    • ಡಾಂತಿಯನ್ನು ಕಾಪಾಡುವುದೆಂದು ಭಾವಿಸಲಾದ ರಾಷ್ಟ್ರಸಂಘ ವಿಸ್ತರಣಾವಾದಿಗಳ ಆಕ್ರಮಣ ಶೀಲತೆಯನ್ನು ತಡೆಯಲಾರದೆ ಹೋಯಿತು.
    • ಹಿಟ್ಲರ್ ಹಾಗೂ ಮುಸೋಲಿನಿಯ ಆಕ್ರಮಣ ವಿರುದ್ಧ ಯಾರು ಸಶಸ್ತ್ರಕ್ರಮ ಕೈಗೊಳ್ಳಲು ಮುಂದಾಗಲಿಲ್ಲ.
    • ಕೊನೆಯದಾಗಿ ಜರ್ಮನಿ & ರಷ್ಯಗಳು ಪರಸ್ಪರ ಒಪ್ಪಂದ ಮಾಡಿ ಪೋಲೆಂಡ್ ದೇಶವನ್ನು ವಿಭಜಿಸಿ ತಮ್ಮಲ್ಲಿ ಹಂಚಿಕೊಂಡವು.
    • ಆಗ ಮಾತ್ರ ಇಂಗ್ಲೆಂಡ್ & ಫ್ರಾನ್ಸ್ ಗಳು ಜರ್ಮನಿಯ ಮೇಲೆ ಯುದ್ಧ ಸಾರಿದವು.
    • ಇದೇ ಸಮಯಕ್ಕೆ ಮಂಚೂರಿಯಾವನ್ನು ಚೀನದಿಂದ ಗೆದ್ದಿದ್ದ ಜಪಾನ್ ದೇಶ ಕ್ರಿ. 1938 ರಲ್ಲಿ ಜರ್ಮನಿ ಇಟಲಿಗಳ ಜೊತೆ ರಕ್ಷಣಾ ಒಪ್ಪಂದ ಮಾಡಿಕೊಂಡಿತು.
  36. 2ನೇ ಮಹಾಯುದ್ಧದ ಪರಿಣಾಮಗಳಾವುವು?
    • ದ್ವಿತೀಯ ಮಹಾಯುದ್ಧದಲ್ಲಿ ಸುಮಾರು 5 ಕೋಟಿ ಜನ ಸತ್ವರು.
    • ಸುಮಾರು 50 ಲಕ್ಷ ಜರ್ಮನಿ ಯಹೂದಿಗಳನ್ನು ಹಿಟ್ಲರ್ ತನ್ನ ದೇಶದಲ್ಲಿ ವಿಷಾನಿಲ ಗೃಹದಲ್ಲಿ ಕೊಲ್ಲಿಸಿದ್ದ.
    • ಜರ್ಮನಿಯ ಆಕ್ರಮಣದಿಂದ ಇಡೀ ಯೂರೋಪ್ ಧ್ವಂಸವಾಗಿ ನಗರಗಳು, ಪಟ್ಟಣಗಳು, ಕೈಗಾರಿಕೆಗಳು, ರಸ್ತೆಗಳು ಹಾಳಾದವು ರೈಲು ಮಾರ್ಗಗಳು ನಾಶವಾದವು.
    • ಅಮೆರಿಕ ಅಧ್ಯಕ್ಷ ಟ್ರೂಮನ್ ಯುದ್ಧದ ತೊಂದರೆಗೆ ಒಳಗಾದ ದೇಶಗಳ ಮನರಾತ್ಮಾನಕ್ಕಾಗಿ "ಮಾರ್ಷಲ್ ಯೋಜನೆ" ಎಂಬ ಕಾರ್ಯಕ್ರಮ ರೂಪಿಸಿ ಅಪಾರ ಆರ್ಥಿಕ ಸಹಾಯ ನೀಡಿತು.
    • ಜರ್ಮನಿಯನ್ನು ಪೂರ್ತಿ ನಿಶ್ಯಸ್ತ್ರೀಕರಣಗೊಳಿಸಲಾಯಿತು. ನಾಝ ಯುದ್ಧ ಕೈದಿಗಳ ಅಚಾರಣೆ ನಡೆಸಿದರು.
    • ಜಪಾನನ್ನು ನಿಶ್ಯಸ್ತ್ರೀಕರಣಗೊಳಿಸಿ ಅಲ್ಲಿ ಅಮೇರಿಕ ಸೇನೆ ಇಟ್ಟರು.
    • ಜರ್ಮನಿಯನ್ನು 4 ಭಾಗಗಳಾಗಿ ವಿಭಾಗಿಸಿ ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ & ರಷ್ಯಗಳ ಉಸ್ತುವಾರಿಗೆ ಒಳಪಡಿಸಿದರು.
    • ಇಂಗ್ಲೆಂಡ್, ಫ್ರಾನ್ಸ್, ನಂಗಿ ಯೂರೋಪ್ ಸಾಮ್ರಾಜ್ಯ ಶಾಹಿ ದೇಶಗಳು ಮಹಾಯುದ್ಧದ ನಂತರ ಶಕ್ತಿಗುಂದಿದವು.
    • ಇದರಿಂದ ಏಷ್ಯ & ಆಫ್ರಿಕಾದ ಅನೇಕ ದೇಶಗಳು ಚಿರವಾಗಿ ಶಾಂತಿ ಕಾಪಾಡಲು ಶಾಂತಿ ಸಂಘ ಸ್ಥಾಪಿಸಿದವು.
  37. ಚೀನಾ ಕ್ರಾಂತಿಯಾಗಲು ಕಾರಣಗಳಾವುವು?
    • ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಭಾರತದ ರೀತಿಯಲ್ಲಿ ಚೀನಾ ಪೂರ್ತಿಯಾಗಿ ವಸಾಹತು ದೇಶವಾಗಿರಲಿಲ್ಲ. ಅರೆವಸಹಾತು ದೇಶವಾಗಿತ್ತು.
    • ಸ್ವಲ್ಪ ಭಾಗ ಮಾತ್ರ ಸ್ವತಂತ್ರವಾಗಿತ್ತು.
    • ಫ್ರೆಂಚರು, ಜಪಾನಿಯರು ಮುಂತಾದ ಸಾಮ್ರಾಜ್ಯ ಶಾಹಿಗಳ ಪ್ರಭಾವಕ್ಕೂ ಒಳಗಾಗಿತು.
    • ಚೀನಾ ಪಾಳೇಗಾರಿಕೆ ದೇಶವೂ ಆಗಿತ್ತು.
    • ದೇಶದೊಳಗೆ ಜಮೀನ್ದಾರರು & ಯುದ್ಧಕೋರರ ನಿಯಂತ್ರಣವಿತ್ತು. ಭಾರತದಷ್ಟು ಕೈಗಾರಿಕೆಗಳು ಬೆಳೆದಿರಲಿಲ್ಲ.
    • ಹಿನ್ನಲೆಯಲ್ಲಿ ರಾಷ್ಟ್ರೀಯ ಐಕ್ಯತೆ, ಪ್ರಜಾಪ್ರಭುತ್ವ ಜೀವನದ ಪ್ರಶ್ನೆಗಳು ಚೀನಾದ ಕ್ರಾಂತಿದಾರಿಯಾದವು.
  38. ಚೀನಾ ಕ್ರಾಂತಿ ಪರಿಣಾಮ ತಿಳಿಸಿ
    • ಚೀನಾ ಕ್ರಾಂತಿಯ ನಂತರ ಚೀನಾದಲ್ಲಿ ಸಾಮೂಹಿಕ ಕೃಷಿ ಪದ್ಧತಿಯನ್ನು ಜಾರಿಗೊಳಿಸಿದರು.
    • ಎಲ್ಲರಿಗೂ ಉಚಿತ ಶಿಕ್ಷಣ, ಆರೋಗ್ಯ ಮೊದಲಾದ ಸೌಲಭ್ಯಗಳನ್ನು ನೀಡಿದರು. ಕೈಗಾರಿಕಾ ಬೆಳವಣಿಗೆ ಸಾಧಿಸಲು ವಿಜ್ಞಾನ & ತಂತ್ರಜ್ಞಾನಕ್ಕೆ ತುಂಬಾ ಮಹತ್ವ ನೀಡಿದರು.
    • ಮುನ್ನಡೆಯ ಮಹಾಜಿಗಿತ ಯೋಜನೆಯನ್ನು ಜಾರಿಗೊಳಿಸಲಾಯಿತು.
    • ಖಾಸಗಿ ಆಸ್ತಿಯನ್ನು ಸಮಾಜದ ಆಸ್ತಿಯಾಗಿ ಪರಿವರ್ತಿಸಿದರು.
    • ರೀತಿ ಮಾಡುವಾಗ 1966 ರಲ್ಲಿ ಜಾರಿಗೆ ತಂದ ಸಾಂಸ್ಕೃತಿಕ ಕ್ರಾಂತಿ ಹಲವಾರು ತಪ್ಪುಗಳನ್ನು ಮಾಡಿತು.
    • ಇದನ್ನು ಸರಿಪಡಿಸಲು 1979 ರಲ್ಲಿ ಅಧಿಕಾರಕ್ಕೆ ಬಂದ ಡೆಂಗ್ ಷಿಯೋಪಿಂಗ್ ಹಲವಾರು ಸುಧಾರಣೆಗಳಿಗೆ ಕಾರಣವಾದನು.
    • ಹಿನ್ನಲೆಯಲ್ಲಿ ಬಂಡವಾಳವಾದವನ್ನು ಅರಗಿಸಿಕೊಂಡು ಚೀನಾ ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ ಜಾಗತಿಕ ಶಕ್ತಿಯಾಗಿ ಮುನ್ನುಗ್ಗುತ್ತಿದೆ.
  39. ಅಮೆರಿಕಾ ಆರ್ಥಿಕ ಮಹಾ ಕುಸಿತದಿಂದ ಎದುರಿಸಿದ ಸಮಸ್ಯೆಗಳಾವುವು?
    • ಅಮೆರಿಕಾದಲ್ಲಿನ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ತಂದಿತ್ತು.
    • ಕೈಗಾರಿಕೆ & ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಕುಸಿಯಿತು.
    • ಗಣಿಗಾರಿಕೆ, ಹಡಗು ಕಟ್ಟುವಿಕೆ ಗ್ರಾಹಕರ ವಸ್ತುಗಳಾದ ಆಟೋಮೋಬೈಲ್ & ಗೃಹಬಳಕೆ ವಸ್ತುಗಳ ಉತ್ಪಾದನೆಗೆ ಹಿನ್ನಡೆ ಉಂಟಾಯಿತು.

ರಾಜ್ಯಶಾಸ್ತ್ರ

ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು (2 ಅಂಕದ ಪ್ರಶ್ನೆಗಳು)

ಬಹುಆಯ್ಕೆಯ ಪ್ರಶ್ನೆಗಳು

  1. 2001 ರಿಂದ ಇಡಿ ದೇಶಾದ್ಯಂತ 6ರಿಂದ 14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆಗಾಗಿ ಜಾರಿಗೆ ತಂದ ಕಾರ್ಯಕ್ರಮ
    • (1) ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ
    • (2) ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ
    • (3) ಸಾಕ್ಷರ ಭಾರತ ಕಾರ್ಯಕ್ರಮ
  2. ಕರ್ನಾಟಕ ಸರ್ಕಾರದ 46 ಶಕ್ತಿ ಎಂಬ ಕಾರ್ಯಕ್ರಮ ಜಾರಿಗೆ ತಂದ ಉದ್ದೇಶ
    • (1) ಗ್ರಾಮಾಂತರ ಮಹಿಳೆಯರ ವಿಕಾಸಕ್ಕಾಗಿ
    • (2) ಗ್ರಾಮಾಂತರ ಮಹಿಳೆಯರ ವಿಕಾಸಕ್ಕಾಗಿ
    • (3) ಸಾಕ್ಷರ ಭಾರತ ಕಾರ್ಯಕ್ರಮ
  3. ಭಾರತದ ಸರ್ಕಾರವು 1988 ರಲ್ಲಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆಯ ಉದ್ದೇಶ
    • (1) ಮಹಿಳೆಯರನ್ನು ಸಾಕ್ಷರರನ್ನಾಗಿ ಮಾಡಲು
    • (2) ಮಹಿಳೆಯರನ್ನು ಸಾಕ್ಷರರನ್ನಾಗಿ ಮಾಡಲು
    • (3) ಮರುಷರನ್ನು ಸಾಕ್ಷರರನ್ನಾಗಿ ಮಾಡಲು
  4. 2011 ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆ
    • (1) 84 ಕೋಟಿ
    • (2) 1027 ಕೋಟಿ
    • (3) 121 ಕೋಟಿ
    • (4) 50 ಕೋಟಿ
  5. ಪ್ರಾದೇಶಿಕವಾದ ಕೆಳಗಿನ ಯಾವುದಕ್ಕೆ ಧಕ್ಕೆ ಉಂಟು ಮಾಡುತ್ತದೆ.
    • (1) ಜಾತ್ಯಾತೀತತೆ
    • (2) ರಾಷ್ಟ್ರೀಯ ಏಕತೆಗೆ
    • (3) ಆರ್ಥಿಕತೆಗೆ
    • (4) ಧಾರ್ಮಿಕತೆಗೆ
  6. 2011 ಜನಗಣತಿಯ ಪ್ರಕಾರ ಭಾರತದ ಸಾಕ್ಷರತೆಯ ಪ್ರಮಾಣ
    • (1) ಶೇ 84
    • (2) ಶೇ 74
    • (3) ಶೇ 66
    • (4) ಶೇ 80
  7. ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳು ರಚನೆಯಾದ ವರ್ಷ
    • (1) 1965
    • (2) 1956
    • (3) 1953
    • (4) 1950
  8. ಮಹಿಳಾ ಆಯೋಗಗಳ ರಚನೆಯ ಉದ್ದೇಶ
    • (1) ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಲು
    • (2) ಮಹಿಳೆಯರಿಗೆ ಅಕ್ಷರ ಜ್ಞಾನ ನೀಡಲು
    • (3) ಮಹಿಳೆಯರ ದೂರು-ದುಮಾನಗಳನ್ನು ಪರಿಶೀಲಿಸಿ ನ್ಯಾಯ ನೀಡಲು
    • (4) ಮಹಿಳೆಯರ ಮದುವೆಗೆ ಸಹಾಯ ನೀಡುವುದು.
  9. ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಸ್ಥಾಪಿಸಿದ ಸಂಸ್ಥೆ
    • (1) ಲೋಕಪಾಲ
    • (2) ಲೋಕಾಯುಕ್ತ
    • (3) ಗ್ರಾಹಕ ರಕ್ಷಣಾ ಕಾನೂನು
    • (4) ಕಾಫಿಫೋಸಾ
  10. ಗ್ರಾಹಕರಿಂದ/ಬಳಕೆದಾರರಿಂದ ಹೆಚ್ಚಿನ ಲಾಭ ಗಳಿಸುವ ದೋರಣೆ ಎಂದರೆ
    • (1) ಕಳ್ಳಸಾಗಾಣಿಕೆ
    • (2) ವರದಕ್ಷಿಣಿ
    • (3) ಭ್ರಷ್ಟಾಚಾರ
    • (4) ಲಾಭ ಬಡಕುತನ
  11. ಸಂವಿಧಾನದ ಯಾವ ವಿಧಿಯು ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಪರಿಗಣಿಸಿದೆ
    • (1) 21ನೇ
    • (2) 86ನೇ
    • (3) 93ನೇ
    • (4) 51ನೇ
  12. ಕೋಮುವಾದವು ಕೆಳಗಿನ ತತ್ವಕ್ಕೆ ವಿರುದ್ಧವಾಗಿದೆ.
    • (1) ಜಾತ್ಯಾತೀತತೆ
    • (2) ಆರ್ಥಿಕತೆ
    • (3) ಸಮಾಜವಾದ
    • (4) ಗಣರಾಜ್ಯ

ಒಂದು ಅಂಕದ ಪ್ರಶ್ನೆಗಳು

  1. ಭಾರತದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದ ವರ್ಷ ಯಾವುದು?
    • 2009 ರಲ್ಲಿ
  2. ಸರ್ವ ಶಿಕ್ಷಣ ಅಭಿಯಾನ ಜಾರಿಗೆ ಬಂದ ವರ್ಷ ಯಾವುದು?
    • 2001
  3. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಪ್ರಾರಂಭಿಸಿರುವ ಉದ್ದೇಶ?
    • ಮಹಿಳೆಯರ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ
  4. ಕೋಮುವಾದ ಎಂದರೇನು?
    • ಧರ್ಮದ ಆಧಾರದಲ್ಲಿ ಸಮಗ್ರ ಸಮಾಜದ ವಿಭಜನೆ ಮತ್ತು ನೆಲೆಯಲ್ಲಿ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳುವುದಕ್ಕೆ ಕೋಮುವಾದ ಎನ್ನುವರು.
  5. ಮಹಿಳಾ ಸಬಲೀಕರಣ ಎಂದರೇನು?
    • ಮಹಿಳೆ ಮರುಷರಿಗೆ ಸರಿಸಮಾನವಾಗಿ ದೇಶದ ಪ್ರತಿ ರಂಗದಲ್ಲಿ ಧಿಟ್ಟತನದಿಂದ ದುಡಿದು ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬಿಯಾಗುವುದನ್ನು ಮಹಿಳಾ ಸಬಲೀಕರಣ ಎಂದು ಕರೆಯುವರು.
  6. ಪ್ರಾದೇಶಿಕವಾದ ಎಂದರೇನು?
    • ಒಂದು ನಿರ್ದಿಷ್ಟ ಜನಸಮುದಾಯ ತಾವು ವಾಸಿಸುವ ಪ್ರದೇಶವನ್ನು ಅತ್ಯಂತ ಗಾಢವಾಗಿ ಪ್ರೀತಿಸಿ ಕೇವಲ ಭಾಗದ ಬಗ್ಗೆಯೇ ಸಂಕುಚಿತವಾದ ಅತೀಯಾದ ಅಭಿಮಾನವನ್ನು ಬಳಸಿಕೊಂಡರೆ ಅದನ್ನು ಪ್ರಾದೇಶಿಕವಾದ ಎನ್ನುತ್ತಾರೆ.
  7. ಲಾಭಕೋರತನ ಅಥವಾ ಲಾಭ ಬಡಕುತನ ಎಂದರೇನು? ಉದಾಹರಣೆ ಕೊಡಿ.
    • ಅತಿ ಹೆಚ್ಚಿನ ಲಾಭ ಪಡೆಯಲು ಅನೈತಿಕ ಮಾರ್ಗ ಅನುಸರಿಸುವುದಕ್ಕೆ ಲಾಭಕೋರತನ ಎನ್ನುವರು, ಉದಾ; ತೂಕ ಮತ್ತು ಅಳತೆಗಳಲ್ಲಿ ಮೋಸ, ಕಲಬರಿಕೆ ವಸ್ತುಗಳ ಮಾರಾಟ.
  8. ಬಡತನ ಎಂದರೇನು?
    • ಜನರು ಸರಿಯಾದ ಆಹಾರ, ಬಟ್ಟೆ, ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಹೊಂದದೆ ಪಡುವ ಕಷ್ಟವನ್ನು ಬಡತನ ಎಂದು ಕರೆಯುತ್ತಾರೆ.

ಎರಡು ಅಂಕದ ಪ್ರಶ್ನೆಗಳು

  1. ಸ್ವಾತಂತ್ರ್ಯಾನಂತರ ಭಾರತ ದೇಶ ಎದುರಿಸುತ್ತಿರುವ ಸಮಸ್ಯೆಗಳಾವುವು?
    • ಕೋಮುವಾದ, ಪ್ರಾದೇಶಿಕವಾದ, ಲಾಭಕೋರತನ, ಕಳ್ಳಸಾಗಾಣಿಕೆ, ಭ್ರಷ್ಟಾಚಾರ, ಆರ್ಥಿಕ ಅಸಮಾನತೆ, ಜನಸಂಖ್ಯೆ ಹೆಚ್ಚಳ, ಬಡತನ, ಅನಕ್ಷರತೆ ಮುಂತಾದವುಗಳು.
  2. ಕೋಮುವಾದವನ್ನು ಹೇಗೆ ತಡೆಗಟ್ಟಬಹುದು?
    • ಎಲ್ಲಾ ಮತ ಸಂಪ್ರದಾಯಗಳು ಜನರಲ್ಲಿ ಸಾಮಾನ್ಯ ಹಾಗೂ ಆರೋಗ್ಯಕರ ರಾಷ್ಟ್ರೀಯ ಚಿಂತನೆಗಳನ್ನು ಬೆಳೆಸಲು ಪ್ರಯತ್ನಿಸಬೇಕು.
    • ಶಿಕ್ಷಣದಲ್ಲಿ ಜಾತ್ಯಾತೀತ ತತ್ವವನ್ನು ಅಳವಡಿಸಿ ಅರಿವು ಮೂಡಿಸಬೇಕು.
    • ಮತೀಯ ಮೂಲಭೂತವಾದ ರಾಷ್ಟ್ರೀಯ ಹಿತಾಸಕ್ತಿಗೆ ಮತ್ತು ರಾಷ್ಟ್ರಾಭಿಮಾನಕ್ಕೆ ಧಕ್ಕೆ ಆಗದಂತೆ ತಡೆಗಟ್ಟಬೇಕು.
    • ರಾಜಕೀಯ ಅಚಲ ನಿರ್ಧಾರ, ಆಡಳಿತಾತ್ಮಕ ಸಮತೋಲನ, ಕ್ರಮಬದ್ಧ ಕಾನೂನು ವ್ಯವಸ್ಥೆ, ಸದೃಢ ರಾಷ್ಟ್ರೀಯ ಮನೋಭಾವ, ಆರೋಗ್ಯಕರ ಸುದ್ದಿ ಮಾಧ್ಯಮ ಇವೆಲ್ಲದರ ಸಮ್ಮಿಳಿತದೊಂದಿಗೆ ಕೋಮುವಾದವನ್ನು ತಡೆಗಟ್ಟಬಹುದು.
  3. ಅನಕ್ಷರತೆಗೆ ಮುಖ್ಯ ಕಾರಣಗಳೇನು?
    • ಬಡತನ, ವಲಸೆ ಹೋಗುವಿಕೆ, ಮಕ್ಕಳ ದುಡಿಮೆ, ಬಾಲ್ಯವಿವಾಹ, ಚಿಕ್ಕ ಮಕ್ಕಳ ಲಾಲನೆ ಪಾಲನೆಗೆ ಹಿರಿಯ ಮಕ್ಕಳನ್ನು ಬಳಸಿಕೊಳ್ಳುವುದು, ಶಿಕ್ಷಣ ಕೊಡಿಸಬೇಕೆಂಬ ಆಸಕ್ತಿಯ ಕೊರತೆ ಮೊದಲಾದವು ಅನಕ್ಷರತೆಗೆ ಕಾರಣಗಳನ್ನು ಗುರುತಿಸಬಹುದಾಗಿದೆ.
  4. ಕೋಮುವಾದ ಸಮಾಜದ ವಕ್ಯತೆಗೆ ಮಾರಕ. ಹೇಗೆ?
    • ಕೋಮುವಾದವೆಂದರೆ ಅನ್ಯಧರ್ಮಿಯರ ಬಗ್ಗೆ ಸಹಿಷ್ಣುತೆಯಿಲ್ಲದಿರುವುದಾಗಿದೆ.
    • ಕೋಮುವಾದ ಸಮಾಜದಲ್ಲಿ ದ್ವೇಷ ಅಸಹಿಷ್ಣುತೆಯನ್ನು ಹುಟ್ಟುಹಾಕುತ್ತದೆ.
    • ಸಾಮಾಜಿಕವಾಗಿ ಭಿನ್ನತೆ, ಪರಸ್ಪರ ಅಪನಂಬಿಕೆ ಹಾಗೂ ಭಯದ ವಾತಾವರಣವನ್ನು ಸೃಷ್ಟಿಸುತ್ತದೆ.
    • ಸಮಾಜದ ನೆಮ್ಮದಿಯನ್ನು ಕೆಡಿಸುವುದಲ್ಲದೆ, ವ್ಯಕ್ತಿಗಳ ಜೀವ ಹಾಗೂ ಸೊತ್ತುಗಳ ನಾಶಕ್ಕೆ ಕಾರಣವಾಗುತ್ತದೆ.
    • ದೇಶದ ಜನತೆಯನ್ನು ಮತೀಯ ಆಧಾರದ ಮೇಲೆ ವಿಭಜಿಸಿ ದುರ್ಲಭಗೊಳಿಸುತ್ತದೆ.
    • ಕೋಮುವಾದ ನಮ್ಮ ಜಾತ್ಯಾತೀತ ತತ್ವಗಳಿಗೆ ವಿರುದ್ಧವಾಗಿದೆ.
    • ಭಾರತದ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುತ್ತದೆ.
  5. ಪ್ರಾದೇಶಿಕವಾದವು ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ಚರ್ಚಿಸಿ.
    • ಪ್ರಾದೇಶಿಕ ಮನೋಭಾವ ತೀರಾ ಹೆಚ್ಚು ಎನಿಸಿದರೆ ಅದು ರಾಷ್ಟ್ರದ ವಿಕತೆಗೆ ಹಾಗೂ ಹಿತಾಸಕ್ತಿಗೆ ಧಕ್ಕೆ ಒದಗಿಸುತ್ತದೆ.
    • ಅತೀಯಾದ ಭಾಷಾಭಿಮಾನವು ರಾಷ್ಟ್ರೀಯಾವಾದದ ವಿರುದ್ಧ ಸಂಕುಚಿತ ಮನೋಭಾವವನ್ನು ಬೆಳೆಸುತ್ತದೆ.
    • ಇದು ದೇಶದ ಅಭಿವೃದ್ಧಿಯನ್ನು ಕುಂಟತಗೊಳಿಸುತ್ತದೆ.
    • ಪ್ರಾದೇಶಿಕವಾದಕ್ಕೆ ಹುಟ್ಟು ದೊರೆತರೆ ಆಗ ಅಂತರರಾಜ್ಯ ಗಡಿ ಸಮಸ್ಯೆ, ಅಂತರರಾಜ್ಯ ನದಿ ನೀರಿನ ಸಮಸ್ಯೆ ಮುಂತಾದವುಗಳನ್ನು ತಲೆದೋರಬಹುದು.
  6. ಪ್ರಾದೇಶಿಕವಾದವನ್ನು ತಪ್ಪಿಸಲು ಸರ್ಕಾರ ಕೈಗೊಂಡ ಕ್ರಮಗಳಾವುವು?
    • ವಿಕಪೌರತ್ವವನ್ನು ನೆಲೆಗೊಳಿಸುವ ಮೂಲಕ ನಮ್ಮ ಸಂವಿಧಾನ ರಾಷ್ಟ್ರದ ಸಮಗ್ರತೆ ಹಾಗೂ ವಿಕತೆಯನ್ನು ಎತ್ತಿ ಹಿಡಿದಿದೆ.
    • ಸಂವಿಧಾನದಲ್ಲಿ ಸಂಯುಕ್ತ ರಾಜ್ಯ ಪದ್ಧತಿ ಅಂಶಗಳನ್ನು ಅಳವಡಿಸಿ ಪ್ರಾದೇಶಿಕ ಬೆಳವಣಿಗೆಗೂ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ.
    • ಪ್ರಾದೇಶಿಕ ಅಸಮಾಶೋಲನ ನಿವಾರಣೆಗಾಗಿ ಹಲವಾರು ಸಮಿತಿಗಳನ್ನು ರಚಿಸಲಾಗಿದೆ.
  7. ಸಾಕ್ಷರತೆಯನ್ನು ವೃದ್ಧಿಸಲು ಕೈಗೊಂಡಿರುವ ಕ್ರಮಗಳಾವುವು?
    • 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆಗಾಗಿ ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.
    • ಅನಕ್ಷರತೆಯನ್ನು ಹೋಗಲಾಡಿಸಲು ಭಾರತ ಸರ್ಕಾರವು 1988 ರಲ್ಲಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪಿಸಿದೆ.
    • 2009ರಲ್ಲಿ ದೇಶದಾದ್ಯಂತ ಶಿಕ್ಷಣ ಹಕ್ಕು ಕಾಯಿದೆಯನ್ನು ಜಾರಿಗೊಳಿಸಿದೆ.
    • ಸಂವಿಧಾನದ 21ನೇ ವಿಧಿ ಅನ್ವಯ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕಾಗಿ ಪರಿಗಣಿಸಿದೆ.
    • ಅಕ್ಷರ ದಾಸೋಹ ಯೋಜನೆ ಮತ್ತು ಕ್ಷೀರ ಯೋಜನೆಗಳನ್ನು ಜಾರಿಗೆ ತಂದಿದೆ.
    • ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೂ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತದೆ.
  8. ಭ್ರಷ್ಟಾಚಾರವನ್ನು ಹೇಗೆ ತಡೆಗಟ್ಟಬಹುದು?
    • ಭ್ರಷ್ಟಾಚಾರ ನಿಗ್ರಹಕ್ಕೆ ಪ್ರಬಲ ರಾಜಕೀಯ ಇಚ್ಛಾಶಕ್ತಿ ಹಾಗೂ ಸಾರ್ವಜನಿಕ ಸಹಕಾರ ತೀರಾ ಅತ್ಯಗತ್ಯ.
    • ಒಳ್ಳೆಯ ರಾಜಕೀಯ ನಾಯಕತ್ವ ಉತ್ತಮ ಅಧಿಕಾರಿ ವರ್ಗ ಹಾಗೂ ರಾಜಕೀಯ ಪರಿಷ್ಕಾರ ಹಾಗೂ ಪೌರತ್ವದ ಅರಿವು ಹೊಂದಿದ ಜನತೆ ಜಂಟಿಯಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬಹುದಾಗಿದೆ.
    • ಲೋಕಪಾಲ ಮತ್ತು ಲೋಕಾಯುಕ್ತದಂತಹ ಸಂಸ್ಥೆಗಳು ಭ್ರಷ್ಟಾಚಾರದ ನಿಯಂತ್ರಣದಲ್ಲಿ ಪೂರಕ ಶಕ್ತಿ ಒದಗಿಸಬಲ್ಲದು.
  9. ಮಹಿಳೆಯರ ಸ್ಥಾನಮಾನ ಉತ್ತಮಪಡಿಸಲು ಸರ್ಕಾರ ಕೈಗೊಂಡ ಕ್ರಮಗಳಾವುವು?
    • ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಶಿಕ್ಷಣ, ಬಾಲ್ಯವಿವಾಹ ನಿಷೇಧ ಕಾಯ್ದೆ, ವರದಕ್ಷಿಣ ನಿಷೇಧ ಕಾಯ್ದೆ ಜಾರಿಗೆ.
    • ಕರ್ನಾಟಕ ಸರ್ಕಾರವು ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಸ್ತ್ರೀ ಶಕ್ತಿ ಎಂಬ ಕಾರ್ಯಕ್ರಮ ರೂಪಿಸಿದ.
    • ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ನಿಗದಿತ ಪ್ರಮಾಣದ ಮೀಸಲಾತಿಯನ್ನು ನೀಡಲಾಗುತ್ತದೆ.
    • ಮಹಿಳೆಯರ ಸ್ವ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಮತ್ತು ಸದೃಢಿ ನೀಡುವಂತಹ ಕಾರ್ಯಕ್ರಮವನ್ನು ರೂಪಿಸಿದ.
    • ಕರ್ನಾಟಕ ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಶೇ. 33 ಪ್ರಮಾಣದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ.
    • ಆಸ್ತಿಯಲ್ಲಿ ಸ್ತ್ರೀಯರಿಗೆ ಭಾಗ ನೀಡಬೇಕೆಂಬ ಕಾನೂನನ್ನು ಜಾರಿಗೊಳಿಸಲಾಗಿದೆ.
  10. ದೇಶದ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವೆಂದು ಪರಿಗಣಿಸಬಹುದಾಗಿದೆ. ಇದನ್ನು ಸಮರ್ಥಿಸಿ.
    • ಭಾರತ ಅಪಾರ ಜನಸಂಖ್ಯೆಯನ್ನು ರಾಷ್ಟ್ರೀಯ ಪ್ರಗತಿಗೆ ಅವಶ್ಯಕವಾದ ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಎಲ್ಲಾ ಸಾಧ್ಯತೆಗಳನ್ನೂ ಹೊಂದಿದೆ.
    • ವೃತ್ತಿ ಕೌಶಲ್ಯ, ಉತ್ತಮ ಶಿಕ್ಷಣ ಮಾರ್ಗದರ್ಶನ, ಪರಿಣತಿ ಮುಂತಾದವುಗಳಿಂದ ದೇಶದ ಜನಸಂಖ್ಯೆಯು ಮಾನವ ಸಂಪನ್ಮೂಲವಾಗಿ ಪರಿವರ್ತನೆಯಾಗುತ್ತದೆ.
    • ಹೀಗೆ ಉತ್ತಮ ಶಿಕ್ಷಣ, ಆರೋಗ್ಯ, ವೃತ್ತಿ ತರಬೇತಿ ಕೌಶಲ್ಯ ಹೊಂದಿದ ಜನಸಂಖ್ಯೆ ಮಾನವ ಸಂಪನ್ಮೂಲವಾಗುತ್ತದೆ.
  11. ಕರ್ನಾಟಕ ರಾಜ್ಯದಲ್ಲಿ ಬಡತನ ನಿವಾರಣೆಗಾಗಿ ರೂಪಿಸಿರುವ ಯೋಜನೆಗಳನ್ನು ವಿವರಿಸಿರಿ.
    • ಬಡ ಕುಟುಂಬಗಳಿಗೆ ಬಿಎಎಲ್ ಕಾರ್ಡಗಳನ್ನು ವಿತರಿಸಲಾಗಿದೆ.
    • ಅನ್ಯಭಾಗ್ಯ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೂ 30 ಕೆ.ಜಿ. ಅಕ್ಕಿ ನೀಡಲಾಗಿದೆ.
    • ಬಡವರಿಗಾಗಿ ಉಚಿತ ವಸತಿ ಯೋಜನೆ, ವಿದ್ಯುತ್ ಯೋಜನೆಗಳನ್ನು ಜಾರಿಗೆ ತಂದಿದೆ.
    • ಜವಾಹರ್ ರೋಜಿಗಾರ್ ಯೋಜನೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪ್ರಧಾನಮಂತ್ರಿ ಗ್ರಾಮೋದಯ ಯೋಜನೆ ಮುಂತಾದವುಗಳು ಬಡತನ ನಿರ್ಮೂಲನೆ ಮಾಡಲು ಜಾರಿಗೆ ತಂದ ಯೋಜನೆಗಳಾಗಿವೆ.
  12. ಲಾಭಕೋರತವು ಉತ್ಪಾದಕ ಮತ್ತು ಗ್ರಾಹಕರೀರ್ವರಿಗೂ ನಷ್ಟ ಉಂಟು ಮಾಡುತ್ತದೆ ತಿಳಿಸಿ.
    • ಲಾಭಕೋರತದಲ್ಲಿ ಅನುಸರಿಸುವ ಅನೈತಿಕ ಮಾರ್ಗಗಳಿಂದ ವಸ್ತುಗಳ ಗುಣಮಟ್ಟವು ಕಡಿಮೆಯಾಗುತ್ತದೆ.
    • ಇದರಿಂದ ಉತ್ಪಾದಿತ ವಸ್ತುಗಳನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿ ಉತ್ಪಾದಕನಿಗೆ ನಷ್ಟ ಉಂಟು ಮಾಡುತ್ತದೆ ಮತ್ತು ಗ್ರಾಹಕನಿಗೂ ಸಹ ಮೌಲ್ಯಕ್ಕನುಗುಣವಾಗಿ ವಸ್ತುಗಳನ್ನು ಸರಿಯಾಗಿ ಸಿಗದೇ ಮೊಂಸಕ್ಕೆ ಒಳಗಾಗಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.
  13. ಕಳ್ಳಸಾಗಾಣಿಕೆ ಎಂದರೇನು? ಇದನ್ನು ತಡೆಗಟ್ಟಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ.?
    • ಯಾವುದೇ ಆಮದು ಸುಂಕವನ್ನು ನೀಡದೇ ಗುಪ್ತವಾಗಿ ವಿದೇಶಗಳಿಂದ ವಸ್ತುಗಳನ್ನು ತರೆಸಿಕೊಳ್ಳುವುದನ್ನು ಕಳ್ಳಸಾಗಾಣಿಕೆ ಎಂದು ಕರೆಯುವರು.
    • ಕಳ್ಳಸಾಗಾಣಿಕೆ ತಡೆಗಟ್ಟಲು ಸಮುದ್ರ ತೀರದ ಉದ್ದಕ್ಕೂ ಕರಾವಳಿ ರಕ್ಷಕ ಪಡೆಯನ್ನು ಕಾವಲು ಹಾಕಲಾಗಿದೆ.
    • ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳನ್ನು ನೇಮಿಸಲಾಗಿದೆ.
    • ವಿದೇಶಿ ವಿನಿಮಯ ಉಳಿಕೆ ಮತ್ತು ಕಳ್ಳಸಾಗಾಣಿಕೆ ತಡೆಗಟ್ಟುವ ಶಾಸನ ಜಾರಿಗೆ ತರಲಾಗಿದೆ.
    • ಸರ್ಕಾರ ಕಳ್ಳಸಾಗಾಣಿಕೆ ಕಠಿಣ ಶಿಕ್ಷೆ ಮತ್ತು ಸುಂಕ ವಂಚಿತ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
  14. ಲಾಭಕೋರತನ ತಡೆಗಟ್ಟಲು ಕೈಗೊಂಡ ಕ್ರಮಗಳಾವುವು?
    • ಪ್ರತಿ ಉತ್ಪಾದಿತ ವಸ್ತುವಿನ ತೂಕ ಅದರ ಗರಿಷ್ಠ ಬೆಲೆ, ಉತ್ಪಾದನಾ ತಾರೀಮು ಮತ್ತು ಅದರ ಬಳಕೆಯ ದಿನಮಿತಿಗಳನ್ನು ಅದರ ಮೇಲೆ ಮುದ್ರಿಸಬೇಕೆಂದು ಕೈಗಾರಿಕೆಗಳ ಮೇಲೆ ಕಾನೂನಿನ ನಿಭಂಧನೆ ಇದೆ.
    • ಪದಾರ್ಥಗಳ ಗುಣಮಟ್ಟ ಕಾಪಾಡಲೆಂದೇ ಇಂಡಿಯನ್ ಸ್ಟ್ಯಾಂಡರ್ಡ್ ಸಂಸ್ಥೆ ಸ್ಥಾಪಿಸಿದೆ.
    • ವ್ಯವಸ್ಥೆಯ ಉತ್ಪನ್ನಕ್ಕೆ ಸಂಬಂಧಪಟ್ಟ ಪ್ರತಿಯೊಂದು ವಸ್ತುವಿನ ಮೇಲೆ ಅಗ್ಮಾರ್ಕ್ನ್ನು ಕಡ್ಡಾಯಗೊಳಿಸಿದೆ.
    • ಗ್ರಾಹಕರನ್ನು ಶೋಷಣೆಯಿಂದ ರಕ್ಷಿಸಲೆಂದೇ 1986ರಲ್ಲಿ ಗ್ರಾಹಕ ರಕ್ಷಣಾ ಕಾನೂನು ರಚಿಸಿದೆ.
    • ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆಗೆ ಪಡಿತರ ಅಂಗಡಿಗಳನ್ನು ತೆರೆಯಲಾಗಿದೆ.
  15. ಭ್ರಷ್ಟಾಚಾರ ಎಂದರೇನು? ಇದನ್ನು ತಡೆಗಟ್ಟಲು ಸರ್ಕಾರ ಕೈಗೊಂಡ ಕ್ರಮಗಳಾವುವು?
    • ಲಂಚ ಅಥವಾ ಇನ್ಯಾವುದೇ ಕ್ರಮದಿಂದ ಕಾನೂನು ಬಾಹಿರ ಕ್ರಮಕ್ಕೆ ಪ್ರಚೋದನೆ ನೀಡುವುದಕ್ಕೆ ಭ್ರಷ್ಟಾಚಾರ ಎನ್ನುವರು.
    • ಭ್ರಷ್ಟಾಚಾರ ತಡೆಗಟ್ಟಲು ಲೋಕಪಾಲ್, ಲೋಕಾಯುಕ್ತದಂತಹ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.
  16. ಭ್ರಷ್ಟಾಚಾರವನ್ನು ಹೇಗೆ ತಡೆಗಟ್ಟಬಹುದು?
    • ಭ್ರಷ್ಟಾಚಾರ ನಿಗ್ರಹಕ್ಕೆ ಪ್ರಬಲ ರಾಜಕೀಯ ಇಚ್ಛಾಶಕ್ತಿ, ಸಾರ್ವಜನಿಕ ಸಹಕಾರ ತೀರಾ ಅಗತ್ಯ.
    • ಒಳ್ಳೆಯ ರಾಜಕೀಯ ನಾಯಕತ್ವ ಮತ್ತು ಉತ್ತಮ ಅಧಿಕಾರಿ ವರ್ಗ.
    • ರಾಜಕೀಯ ಪರಿಜ್ಞಾನ ಮತ್ತು ಪೌರತ್ವದ ಅರಿವು ಹೊಂದಿದ ಜನತೆ ಜಂಟಿಯಾಗಿ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಬಹುದಾಗಿದೆ.
    • ಲೋಕಪಾಲ್, ಲೋಕಾಯುಕ್ತ ಸಂಸ್ಥೆಗಳು ಭ್ರಷ್ಟಾಚಾರ ತಡೆಗಟ್ಟುವಲ್ಲಿ ಪೂರಕ ಶಕ್ತಿ ಒದಗಿಸಬಲ್ಲವು.
  17. ಜನಸಂಖ್ಯೆ ಹೆಚ್ಚಳಕ್ಕೆ ಕಾರಣಗಳಾವುವು?
    • ಜನನ ಪ್ರಮಾಣದಲ್ಲಿ ಮಿತಿ ಮೀರಿದ ಹೆಚ್ಚಳ.
    • ಮರಣದ ಪ್ರಮಾಣ ಇಳಿಕೆ.
    • ಜೀವಿತಕಾಲಮಾನದಲ್ಲಿ ಗಣನೀಯ ಪ್ರಮಾಣದ ಏರಿಕೆ.
    • ಶಿಶು ಮರಣದ ನಿಷ್ಪತ್ತಿಯಲ್ಲಿ ಕಡಿತ.

ಭಾರತದ ವಿದೇಶಾಂಗ ನೀತಿ (03 ಅಂಕಗಳು)

ಒಂದು ವಾಕ್ಯದ ಪ್ರಶ್ನೆಗಳು

  1. ಭಾರತದ ವಿದೇಶಾಂಗ ನೀತಿಯನ್ನು ವಿಶೇಷವಾಗಿ ರೂಪಿಸಿದವರು ಯಾರು?
    • ಜವಹರಲಾಲ್ ನೆಹರು
  2. ಅಲಿಪ್ತ ನೀತಿ ಎಂದರೇನು?
    • ಯಾವುದೇ ಶಕ್ತಿ ಬೀದ ಗುಂಪಿಗೆ ಸೇರದೇ ತಟಸ್ಥ ನೀತಿಯನ್ನು ಅನುಸರಿಸುವುದಕ್ಕೆ ಅಲಿಪ್ತ ನೀತಿ ಎನ್ನುವರು.
  3. ನೆಹರು ಅವರು ಯಾವ ದಿನದಂದು ರೇಡಿಯೋ ಭಾಷಣದಲ್ಲಿ ವಿದೇಶಾಂಗ ನೀತಿಯ ರೂಪರೇಷಗಳ ಬಗ್ಗೆ ಅರಿವು ಮೂಡಿಸಿದರು?
    • 1946 ಸೆಪ್ಟೆಂಬರ್ 7ರಂದು
  4. ಭಾರತವು ಸ್ವಾತಂತ್ರ್ಯ ಪೂರ್ವದಲ್ಲಿ ಯಾರ ವಸಹಾತು ಶಾಹಿ ಅಳ್ಳಿಕೆಗೆ ಒಳಪಟ್ಟಿತ್ತು?
    • ಬ್ರಿಟಿಷರ
  5. ವಿದೇಶಾಂಗ ನೀತಿ ಎಂದರೇನು?
    • ಒಂದು ರಾಷ್ಟ್ರ ಆನ್ಯ ರಾಷ್ಟ್ರದೊಡನೆ ವ್ಯವಹರಿಸುವಾಗ ಅನುಸರಿಸುವ ನೀತಿಗೆ ವಿದೇಶಾಂಗ ನೀತಿ ಎನ್ನುವರು.
  6. ನಿಷ್ಪತ್ತೀಕರಣ ಎಂದರೇನು?
    • ಕೆಲವು ನಿರ್ಧಿಷ್ಟ ಬಗೆಯ ಅಥವಾ ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಇಲ್ಲವಾಗಿಸುವುದಕ್ಕೆ ನಿಷ್ಪತ್ತೀಕರಣ ಎನ್ನುವರು.
  7. ವರ್ಣಭೇದ ನೀತಿ ಎಂದರೇನು?
    • ಒಂದು ಜನಾಂಗದ ಅಥವಾ ವರ್ಣದ ಜನಸಮುದಾಯ ಇನ್ನೊಂದು ಜನಾಂಗದ ಅಥವಾ ವರ್ಣದ ಜನಸಮುದಾಯವನ್ನು ತಮಗಿಂತ ಕೀಳು ಎಂದು ಭಾವಿಸಿ ಅವರನ್ನು ಕಡೆಗಣಿಸುವ ಅಥವಾ ವಿರೋಧಿಸುವ ನೀತಿಗೆ ವರ್ಣಭೇದ ನೀತಿ ಎನ್ನುವರು.
  8. ಆಫ್ರಿಕಾದ ಗಾಂಧಿ ಎಂದು ಹೆಸರುವಾಸಿ ಯಾದರವರು ಯಾರು?
    • ನೇಲ್ಸನ್ ಮಂಡೇಲಾ
  9. ಸಾರ್ವಭೌಮ ರಾಷ್ಟ್ರ ಎಂದರೇನು?
    • ಯಾವುದೇ ರಾಷ್ಟ್ರ ಆಂತರಿಕವಾಗಲೀ, ಬಾಹ್ಯವಾಗಲೀ ಇತರ ರಾಷ್ಟ್ರಗಳ ಅಧೀನವಾಗಿರದೆ ಸ್ವತಂತ್ರವಾಗಿರುವುದಕ್ಕೆ ಪರಮಾಧಿಕಾರಯುಳ್ಳ ಅಥವಾ ಸಾರ್ವಭೌಮ ರಾಷ್ಟ್ರ ಎನ್ನುವರು.
  10. ಸಂವಿಧಾನದ ಯಾವ ವಿಧಿಯ ಮೂಲಕ ಅಂತರರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರರಾಷ್ಟ್ರೀಯ ಕಾನೂನುಗಳಿಗೆ ಗೌರವ ತಂದು ಕೊಡುವಂತಹ ವಿದೇಶಾಂಗ ನೀತಿಯನ್ನು ಸೂಚಿಸುತ್ತದೆ.
    • 51ನೇ ವಿಧಿ

ಮೂರು ಅಂಕದ ಪ್ರಶ್ನೆಗಳು

  1. ಭಾರತದ ವಿದೇಶಾಂಗ ನೀತಿಯ ಉದ್ದೇಶ ಅಥವಾ ಗುರಿಗಳಾದವು?
    • ರಾಷ್ಟ್ರದ ಭದ್ರತೆ.
    • ರಾಷ್ಟ್ರದ ಆರ್ಥಿಕ ಸಂದರ್ಭನೆ.
    • ನಮ್ಮ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಬೇರೆ ದೇಶಗಳಲ್ಲಿ ವಿತ್ತರಿಸುವುದು.
    • ಮಿತ್ರ ರಾಷ್ಟ್ರಗಳನ್ನು ಹಂಚಿಕೊಂಡು ವಿರೋಧಿ ರಾಷ್ಟ್ರಗಳನ್ನು ಹತ್ತಿಕ್ಕುವುದು.
    • ವಿಶ್ವಶಾಂತಿ ಹಾಗೂ ಸಹಬಾಳ್ವೆ ಸಾಧಿಸುವುದು.
  2. ಭಾರತದ ವಿದೇಶಾಂಗ ನೀತಿಯ ಲಕ್ಷಣಗಳಾವುವು? ಅಥವಾ ಭಾರತದ ವಿದೇಶಾಂಗ ನೀತಿಯ ಮೂಲಭೂತ ಅಂಶಗಳಾವುವು?
    • ಪಂಚಶೀಲತತ್ವಗಳು.
    • ಅಲಿಪ್ತನೀತಿ.
    • ವಸಹಾತುಶಾಹಿತೃತ್ಯ ವಿರೋಧ.
    • ವರ್ಣಬೇಧ ನೀತಿಗೆ ವಿರೋಧ.
    • ನಿಶ್ಯಸ್ತ್ರಿಕರಣ.
  3. ಭಾರತವು ವಸಾಹತುಶಾಹಿತ್ವವನ್ನು ವಿರೋಧಿಸಲು ಕಾರಣಗಳೇನು?
    • ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ದೇಶದ ಸಾರ್ವಭೌಮತ್ವವನ್ನು ಹತ್ತಿಕ್ಕಿ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತದೆ.
    • ವಸಹಾತು ಶಾಹಿತ್ವವು ದೇಶವನ್ನು ರಾಜಕೀಯವಾಗಿ & ಆರ್ಥಿಕವಾಗಿ ಶೋಷಣೆಗೆ ಒಳಪಡಿಸುತ್ತದೆ.
    • ಒಂದು ದೇಶದ ಧಾರ್ಮಿಕ & ಸಾಮಾಜಿಕ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ.
    • ಭಾರತವು ಯೂರೋಪಿಯನ್ ವಸಹಾತು ಶಾಹಿ ನೀತಿಗೆ ಒಳಗಾಗಿ ಅದರ ದುಷ್ಪರಿಣಾಮ ಸ್ವತಹ ಅನಾಭವಿಸಿದರಿಂದ ವಸಹಾತುಶಾಹಿತ್ವವನ್ನು ವಿರೋಧಿಸಿ ಸ್ವತಂತ್ರ ಗಳಿಸಿಕೊಂಡಿದೆ.
    • ಭಾರತವು ಸ್ವಾಧಾವಿಕವಾಗಿಯೇ ಪ್ರಪಂಚದ ಯಾವುದೇ ಮೂಲೆಯಲ್ಲಿ ಇರಕೂಡದು, ಎಂಬ ತನ್ನ ನಿಲುವನ್ನು ಪ್ರತಿಪಾದಿಸಿದೆ.
  4. ಪಂಚಶೀಲ ತತ್ವಗಳಾವುವು?
    • 1954 ಜೂನ್ ತಿಂಗಳಲ್ಲಿ ವಿಶ್ವಶಾಂತಿಯ ದೃಷ್ಟಿಯಿಂದ ಚೀನಾದ ಪ್ರಧಾನಿ ಚೌ ಎನ್ ಲಾಯ್ ಮತ್ತು ಪಂಡಿತ ನೆಹರುರವರು ಪರಸ್ಪರ ಅಂತರರಾಷ್ಟ್ರೀಯ ಸಂಬಂಧ ವೃದ್ಧಿಗಾಗಿ ಮಾಡಿಕೊಂಡ ಒಪ್ಪಂದವು ಪಂಚಶೀಲ ತತ್ವಗಳನ್ನು ಒಳಗೊಂಡಿದೆ.
    • ಪರಸ್ಪರ ಪರಮಾಧಿಕಾರ ಮತ್ತು ಪ್ರಾದೇಶಿಕ ಜಕ್ಕತೆಗಳನ್ನು ಗೌರವಿಸುವುದು.
    • ಪರಸ್ಪರರ ಮೇಲೆ ಆಕ್ರಮಣ ಮಾಡದೇ ಇರುವುದು.
    • ದೇಶದ ಒಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡದೇ ಇರುವುದು.
    • ಸಮಾನತೆ ಮತ್ತು ಪರಸ್ಪರ ಹಿತಸಾಧನೆಗೆ ಶ್ರಮಿಸುವುದು.
    • ಶಾಂತಿಯುತ ಸಹಜೀವನ.
  5. ಪ್ರಚಲಿತ ಜಗತ್ತಿಗೆ ನಿಶ್ಯಸ್ತ್ರಿಕರಣ ಅತಿ ಅಗತ್ಯ ಎಂದು ಭಾರತ ಏಕೆ ಪ್ರತಿಪಾದಿಸುತ್ತದೆ ವಿವರಿಸಿರಿ.
    • ನಿಶ್ಯಸ್ತ್ರಿಕರಣವೆಂದರೆ ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದೇ ಆಗಿದೆ.
    • ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ, ಮಾರಾಟ, ಸಂಗ್ರಹಣೆಯಲ್ಲಿ ಬಾರಿ ಪೈಪೋಟ ನಡೆದಿದೆ.
    • ಶಸ್ತ್ರಾಸ್ತ್ರಗಳ ಪೈಪೋಟಿಯಿಂದ ಮೂರನೇ ಮಹಾಯುದ್ಧ ನಡೆಯಬಹುದೆಂಬ ಆತಂಕ ಹಲವು ರಾಷ್ಟ್ರಗಳಲ್ಲಿ ಉಂಟಾಗಿದೆ.
    • ಶಸ್ತ್ರಾಸ್ತ್ರ ಪೈಪೋಟಿಗೆ ಒಳಗಾದ ರಾಷ್ಟ್ರಗಳು ಅಚಾತುರ್ಯದಿಂದಲೋ, ತಪ್ಪು ಗ್ರಹಿಕಯಿಂದಲೋ ಬೇಕಂತಲೇ ಒಂದರ ಮೇಲೊಂದು ಯುದ್ಧ ಶಸ್ತ್ರಾಸ್ತ್ರಗಳನ್ನು ಅದರಲ್ಲೂ ಅಗ್ನಿಸ್ಟ್ರಗಳನ್ನು ತಯಾರಿಸಿ ಉಪಯೋಗಿಸುವ ಸಂಭವವಿರುತ್ತದೆ.
    • ಭಾರತ ಶಾಂತಿರ್ಘಿಯ ರಾಷ್ಟ್ರವಾಗಿದ್ದು, ಶಾಂತಿ ಸೌಹಾರ್ಧತೆಗೆ ಒತ್ತು ನೀಡಿ ಪ್ರಚಲಿತ ಜಗತ್ತಿಗೆ ಅತಿ ಅಗತ್ಯ ಎಂದು ಸಾರಿದೆ.
  6. ಭಾರತದ ವಿದೇಶಾಂಗ ನೀತಿಯನ್ನು ವಿವರಿಸಿ ಅಥವಾ ವಿದೇಶಾಂಗ ನೀತಿಯು ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿ ಹೇಗೆ?
    • ದಿವಂಗತ ಜವಾಹರಲಾಲ್ ನೆಹರುರವರು ಭಾರತದ ವಿದೇಶಾಂಗ ನೀತಿಯ ಶಿಲ್ಪಿಯಾಗಿದ್ದರು.
    • ಭಾರತದ ವಿದೇಶಾಂಗ ನೀತಿಯಲ್ಲಿ ಅಹಿಂಸಾತತ್ವ, ಅದರ್ರವಾದ, ಮಾನವೀಯ ಅನುಕಂಪ, ವ್ಯಾವಹಾರಿಕ ಕಾರೀಣತೆಯನ್ನು ಕಾಣಬಹುದು.
    • ಭಾರತದ ವಿದೇಶಾಂಗ ನೀತಿಯು ಶಾಂತಿ ಹಾಗೂ ಸಹಬಾಳ್ವೆ ತತ್ವದ ಮೇಲೆ ಆಧಾರಿತವಾಗಿದೆ.
    • ವಿಶ್ವಶಾಂತಿ ಕಾಪಾಡಲೆಂದೇ ಇಲ್ಲಾ ರಾಷ್ಟ್ರಗಳೊಂದಿಗೆ ಸ್ನೇಹ ಹಾಗೂ ಸಹಬಾಳ್ವೆಯೊಂದಿಗೆ ಸಂಬಂಧವನ್ನು ಮುಂದುವರಿಸಿ ಕೊಂಡು ಹೋಗಲು ನಿರ್ಧರಿಸಿತು.
    • ಅಲಿಪ್ತ ನೀತಿಯು ಪಂಚಶೀಲ ತತ್ವಗಳನ್ನು ಒಳಗೊಂಡಿದೆ.
  7. ನಿಷ್ಪ್ರೋಕರಣ ಎಂದರೇನು?
    • ಕೆಲವು ನಿರ್ದಿಷ್ಟ ಬಗೆಯ ಅಥವಾ ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದಕ್ಕೆ ನಿಷ್ಪ್ರೋಕರಣ ಎನ್ನುವರು.
  8. ಅಲಿಪ್ತ ನೀತಿ ಎಂದರೇನು? ಭಾರತವು ಅಲಿಪ್ತನೀತಿಯನ್ನು ಪ್ರತಿಪಾದಿಸುತ್ತದೆ ಏಕೆ? ಚರ್ಚಿಸಿ.
    • ಯಾವುದೇ ಶಕ್ತಿ ಬೀದ ಗುಂಪಿಗೆ ಸೇರದೇ ತಟಸ್ಥ ನೀತಿಯನ್ನು ಅನುಸರಿಸುವುದಕ್ಕೆ ಅಲಿಪ್ತ ನೀತಿ ಎನ್ನುವರು.
    • ದ್ವಿತೀಯ ಜಾಗತಿಕ ಮಹಾಯುದ್ಧದ ನಂತರ ಜಗತ್ತು ಅಮೆರಿಕಾ ಮತ್ತು ರಷ್ಯಾ ಒಕ್ಕೂಟದ ನೇತೃತ್ವದಲ್ಲಿ ಎರಡು ಶಕ್ತಿ ಬೀಗಳಾಗಿ ವಿಭಾಗವಾಯಿತು.
    • ಜಗತ್ತಿನ ಎರಡು ಶಕ್ತಿ ಬೀಗಳ ನಡುವೆ ಉಂಟಾದ ಶೀತಲ ಸಮರ, ವೈರತ್ವ, ಸಂಘರ್ಷ, ಭಯದ ವಾತಾವರಣವನ್ನು ನಿಯಂತ್ರಿಸಲು.
    • 3ನೇ ಮಹಾಯುದ್ಧದ ಕಡೆಗೆ ಸಾಗುತ್ತಿರುವ ಜಗತ್ತನ್ನು ತಡೆಗಟ್ಟಲು ಯುದ್ಧದ ವಾತಾವರಣವನ್ನು ತಪ್ಪಿಸಲು.
    • ವಿಶ್ವದ ಪ್ರತಿಯೊಂದು ವಿದ್ಯಮಾನವನ್ನು ಅದರ ಗುಣದೋಷಗಳ ಆಧಾರದ ಮೇಲೆ ಸ್ವಾಗತಿಸುವ ಅಥವಾ ವಿರೋಧಿಸುವ ನ್ಯಾಯ, ಅನ್ಯಾಯವನ್ನು ನಿಷ್ಪ್ರಪಾತವಾಗಿ ತೂಗಿ ನೋಡಿ ತೀರ್ಮಾನಿಸಲು.
    • ಮೇಲಿನ ಎಲ್ಲಾ ಕಾರಣಗಳಿಂದ ಭಾರತ ಅಲಿಪ್ತ ಗೌತಿಯನ್ನು ಪ್ರತಿಪಾದಿಸುತ್ತಿದೆ.
  9. ವರ್ಣಭೇಧ ನೀತಿಯ ಬಗ್ಗೆ ಭಾರತದ ನಿಲುವೇನು? ತಿಳಿಸಿ.
    • ವರ್ಣಭೇದ ನೀತಿಯು ಅಮಾನವೀಯವಾದದು.
    • ಮಾನವ ಹಕ್ಕುಗಳನ್ನು ಉಲ್ಲಂಘನೆಯಾಗುತ್ತದೆ.
    • ವಿಶ್ವಶಾಂತಿ ಮತ್ತು ಸಹಬಾಳ್ವೆಗೆ ಮಾರಕವಾಗುತ್ತದೆ.
    • ಇಂತಹ ವರ್ಣಭೇದ ನೀತಿ ಜಗತ್ತಿನಲ್ಲಿ ಎಲ್ಲಿಯೂ ಯಾವ ರಾಷ್ಟ್ರವು ಅನುಸರಿಸಬಾರದು ಎಂಬುದು ಭಾರತದ ನಿಲುವು ಆಗಿದ್ದು ಅದಕ್ಕಾಗಿಯೇ ವರ್ಣದೇಧ ನೀತಿಯನ್ನು ವಿದೇಶಾಂಗ ನೀತಿಯಲ್ಲಿ ಅಳವಡಿಸಿಕೊಂಡಿದೆ.
  10. ವರ್ಣಭೇಧ ನೀತಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ, ಹೇಳಿಕೆಯನ್ನು ವಿಮರ್ಶಿಸಿ.
    • ವರ್ಣಗಳ ಆಧಾರದ ಮೇಲೆ ಒಂದು ಸಮುದಾಯ ಇನ್ನೊಂದು ಸಮುದಾಯವನ್ನು ತಮಗಿಂತ ಕೀಳು ಎಂದು ಭಾವಿಸಿ ಅವರನ್ನು ಅತ್ಯಂತ ಕ್ರೂರ ನಡೆಸಿಕೊಳ್ಳುವುದನ್ನು ವರ್ಣಭೇದ ನೀತಿ ಎಂದು ಕರೆಯುವರು.
    • ವರ್ಣಭೇದ ನೀತಿಯು ಅಮಾನವೀಯ ಮತ್ತು ಮಾನವ ಹಕ್ಕುಗಳ ಉಲ್ಲಂಘಿಸಿ ವಿಶ್ವಶಾಂತಿ ಮತ್ತು ಸಹಬಾಳ್ವೆಗೆ ಮಾರಕವಾಗುತ್ತದೆ.
  11. ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸಿದ ವರ್ಣಭೇದ ನೀತಿಯ ಬಗ್ಗೆ ವಿವರಿಸಿರಿ.
    • ಬಿಳಿಯರು ಕರಿಯರನ್ನು ಅತ್ಯಂತ ಕ್ರೂರ ಮತ್ತು ದೌಜನ್ಯದಿಂದ ನಡೆಸಿಕೊಳ್ಳುತ್ತಿದ್ದುದನ್ನು ವರ್ಣಭೇದ ನೀತಿ ಎನ್ನುವರು.
    • ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ಕ್ರೂರ ಹಾಗೂ ದಮನಕಾರಿ ವರ್ಣಭೇದ ನೀತಿಯನ್ನು ಅನುಸರಿಸಲಾಗುತ್ತಿತ್ತು.
    • ಕರಿಯರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗಿತ್ತು.
    • ಕಪ್ಪು ಜನರನ್ನು ಗುಲಾಮರಂತೆ ಮಾರಾಟ ಮಾಡಲಾಗುತ್ತಿತ್ತು.
    • ನೇಲ್ಸನ್ ಮಂಡೇಲಾರ ನೇತೃತ್ವದಲ್ಲಿ ಕರಿಜನರು ದೀರ್ಘ ಹೋರಾಟ ನಡೆಸಿ ವರ್ಣಭೇಧ ನೀತಿಯನ್ನು ಕೊನೆಗಾಣಿಸಿದರು. ಹೀಗಾಗಿ ಇವರನ್ನು ಆಫ್ರಿಕಾದ ಗಾಂಧೀ ಎಂದು ಕರೆಯುತ್ತಾರೆ.
  12. ವಿದೇಶಾಂಗ ನೀತಿಯಲ್ಲಿ ಆಡಕವಾಗಿರುವ ಅಂಶಗಳಾವುವು?
    • ರಾಷ್ಟ್ರೀಯ ಹಿತಾಸಕ್ತಿಗಳು, ಭೌಗೋಳಿಕ ಅಂಶಗಳು, ರಾಜಕೀಯ ಪರಿಸ್ಥಿತಿ, ಆರ್ಥಿಕ ವ್ಯವಸ್ಥೆ, ರಕ್ಷಣಾ ಸಾಮರ್ಥ್ಯ, ಜನಾಭಿಪ್ರಾಯ, ಅಂತರರಾಷ್ಟ್ರೀಯ ಪರಿಸರ ಮುಂತಾದ ಹಲವಾರು ಅಂಶಗಳು ನಮ್ಮ ರಾಷ್ಟ್ರದ ವಿದೇಶಾಂಗ ನೀತಿಯ ನಿರೂಪಣೆಯಲ್ಲಿ ಆಡಕವಾದ ಸಂಗತಿಗಳಾಗಿವೆ.
  13. ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸಿದ ವರ್ಣಭೇಧ ನೀತಿಯ ಬಗ್ಗೆ ವಿವರಿಸಿರಿ.
    • ಬೆಳೆಯದು ಕರಿಯರನ್ನು ಅತ್ಯಂತ ಕ್ರೂರ ಮತ್ತು ದೌಜನ್ಯದಿಂದ ನಡೆಸಿಕೊಳ್ಳುತ್ತಿದ್ದುದನ್ನು ವರ್ಣಭೇಧ ನೀತಿ ಎನ್ನುವರು.
    • ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ಕ್ರೂರ ಹಾಗೂ ದಮನಕಾರಿ ವರ್ಣಭೇಧ ನೀತಿಯನ್ನು ಅನುಸರಿಸಲಾಗುತ್ತಿತ್ತು.
    • ಕರಿಯರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗಿತ್ತು.
    • ಕಪ್ಪು ಜನರನ್ನು ಗುಲಾಮರಂತೆ ಮಾರಾಟ ಮಾಡಲಾಗುತ್ತಿತ್ತು.
    • ನೇಲ್ಸನ್ ಮಂಡೇಲಾರ ನೇತೃತ್ವದಲ್ಲಿ ಕರಿಜನರು ದೀರ್ಘ ಹೋರಾಟ ನಡೆಸಿ ವರ್ಣಭೇಧ ನೀತಿಯನ್ನು ಕೊನೆಗಾಣಿಸಿದರು. ಹೀಗಾಗಿ ಇವರನ್ನು ಆಫ್ರಿಕಾದ ಗಾಂಧೀ ಎಂದು ಕರೆಯುತ್ತಾರೆ.

ಸಮಾಜಶಾಸ್ತ್ರ

ಸಮಾಜಕ ಸ್ತರವಿನ್ಯಾಸ

ಪ್ರ 1. ಬಹು ಆಯ್ಕೆಯ ಪ್ರಶ್ನೆಗಳು – (ಒಂದು ಅಂಕ)

  1. ಮಾನವಕುಲ ತಾನೊಂದೇ ವಲಂ ಎಂದು ಹೇಳಿದವರು ಯಾರು?
    • ) ಆದಿಕವಿ ಪಂಪ
    • ) ರನ್ನ
    • ) ಜನ್ಮ
    • ) ಹೊನ್ನ
  2. ಸಂವಿಧಾನದ ಯಾವ ವಿಧಿಯು "ಅಸ್ಪೃಶ್ಯತಾ ಆಚರಣೆ ಶಿಕ್ಷಾರ್ಹ ಅಪರಾಧ" ಎಂದು ಘೋಷಿಸಿದ?
    • ) 15ನೇ
    • ) 17ನೇ
    • ) 25ನೇ
    • ) 29ನೇ
  3. ಅಸ್ಪೃಶ್ಯತೆ "ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ" ಎಂದು ಹೇಳಿದವರು ಯಾರು?
    • ) ಡಾ.ಬಿ.ಆರ್.ಅಂಬೇಡ್ಕರ
    • ) ಗಾಂಧೀಜಿ
    • ) ದಯಾನಂದ ಸರಸ್ವತಿ
    • ) ಚ್ಯೋತಿ ಬಾ ಫಾಲಿ
  4. "ಪೂರ್ವಗ್ರಹ ಎಂದರೆ"
    • ) ಮೂಢ ನಂಬಿಕೆ
    • ) ಕಲ್ಪನೆ
    • ) ವಿಚಾರ
    • ) ಪೂರ್ವನಿಧಾರಿತ ಮನೋಭಾವನೆ

ಪ್ರ 2. ಒಂದು ವಾಕ್ಯದಲ್ಲಿ ಉತ್ತರಿಸುವ ಪ್ರಶ್ನೆಗಳು (ಒಂದು ಅಂಕ)

  1. ಸಮಾಜಕ ಸ್ತರ ವಿನ್ಯಾಸ ಎಂದರೇನು?
    • ಜನರನ್ನು ಆದಾಯ, ಶಿಕ್ಷಣ, ಜಾತಿ, ಬಣ್ಣ, ಲಿಂಗ, ಉದ್ಯೋಗ, ಬುದ್ಧಿಶಕ್ತಿ ಆಧಾರದ ಮೇಲೆ ಮೇಲುಕೀಳು ಎಂದು ವಿಂಗಡಿಸುವುದಾಗಿದೆ.
  2. ಅಸ್ಪೃಶ್ಯತೆ ಎಂದರೇನು?
    • ಸಮಾಜದ ಕೆಲವು ಜಾತಿಯ ಜನರನ್ನು ಮುಟ್ಟಲಿಕ್ಕು ಅನರ್ಹರು ಎಂದು ಪರಿಗಣಿಸುವದಾಗಿದೆ.
  3. ಪೂರ್ವಗ್ರಹ ಎಂದರೇನು?
    • ಒಬ್ಬ ವ್ಯಕ್ತಿ/ಇಲ್ಲವೆ ಒಂದು ಸಮೂಹದ ಬಗ್ಗೆ ಹೊದಿರಬಹುದಾದ "ಪೂರ್ವನಿರ್ಧಾರಿತ ಮನೋಭಾವನೆಯೇ ಪೂರ್ವಗ್ರಹ".

ಪ್ರಮಶ್ನೆ: ಎನ್.ಎಸ್.ಎಲ್.ಸಿ

ಪ್ರತಿ ವಿವರಣಾತ್ಮಕ ಪ್ರಶ್ನೆಗಳು (ಮೂರು ಅಂಕಗಳು)

  1. ಅಸ್ಪೃಶ್ಯತೆ ನಿವಾರಣೆಯ ಸಂವಿಧಾನಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳಾವುವು?
    • ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದೆ.
    • ಭಾರತ ಸರಕಾರ "ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯನ್ನು 1955ರಲ್ಲಿ ಜಾರಿಗೊಳಿಸಿದೆ.
    • "ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ" ಎಂದು 1976ರಲ್ಲಿ ಮಾರ್ಪಡಿಸಿದೆ.
    • ಅಸ್ಪೃಶ್ಯತೆಯ ಆಚರಣೆಯು ಶಿಕ್ಷಾರ್ಹ ಅಪರಾಧವಾಗಿದೆ.
    • ಸಂವಿಧಾನಾತ್ಮಕವಾಗಿ ಸಾರ್ವತ್ರಿಕ ಮತದಾನ ಹಾಗೂ ಸಮಾನತೆಯ ಹಕ್ಕನ್ನು ದೇಶದ ಎಲ್ಲಾ ನಾಗರಿಕರಿಗೂ ನೀಡಿದೆ.
    • ಪರಿಶಿಷ್ಟಪಾತ, ಹಿಂದುಳಿದ ಜಾತಿಯವರಿಗೆ ಶೈಕ್ಷಣಿಕ, ರಾಜಕೀಯ, ಆರ್ಥಿಕ, ಉದ್ಯೋಗಾವಕಾಶದಲ್ಲಿಯೇ ಸಲಾತಿ ನೀಡಿದೆ.
    • 1989 ಶಾಸನವು "ಅಸ್ಪೃಶ್ಯತೆಯ ನಿರ್ಮೂಲನೆ ಕುರಿತು ರಾಜ್ಯ ಸರಕಾರಗಳಿಗೆ" ವಿಶೇಷ ಜವಾಬ್ದಾರಿಗಳನ್ನು ನೀಡಿದೆ. ಹೀಗೆ ಸ್ವತಂತ್ರ ಭಾರತವು ಅಸ್ಪೃಶ್ಯತೆ ನಿವಾರಣೆಗೆ ವಿಶೇಷ ಆಸಕ್ತಿ ವಹಿಸಿದೆ.
  2. ಅಸ್ಪೃಶ್ಯತಾ ನಿವಾರಣೆಯಲ್ಲಿ ಸಮಾಜ ಸುಧಾರಕರ ಪಾತ್ರವೇನು?
    • ಬುದ್ಧ, ಬಸವೇಶ್ವರ ಕಾಲದಿಂದಲೂ ಅಸ್ಪೃಶ್ಯತಾ ನಿವಾರಣೆಗೆ ಪ್ರಯತ್ನಿಸಿದ್ದಾರೆ.
    • ಭಕ್ತಿ ಪಂತದ ನೇತಾರರು, ಭಜನೆ ಕೀರ್ತನೆಗಳ ಮೂಲಕ ನಿವಾರಿಸಲು ಪ್ರಯತ್ನಿಸಿದ್ದಾರೆ.
    • ಗಾಂಧಜಿ "ಅಸ್ಪೃಶ್ಯತಾ ಆಚರಣೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ" ಎಂದು ಹೇಳಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಅನುಕೂಲ ದೊರಕಿಸಲು ಹೋರಾಡಿದರು.
    • ಸಂವಿಧಾನಾತ್ಮಕವಾಗಿ ಡಾ.ಬಿ.ಆರ್.ಅಂಬೇಡ್ಕರರವರು ವಿಶೇಷ ಸೌಲಭ್ಯ ನೀಡಲು ಹೋರಾಡಿದರು.
    • ಸ್ವಾತಂತ್ರ್ಯ ನಂತರದಲ್ಲಿ ಭಾರತ ಸರಕಾರವು ಶಾಸನಾತ್ಮಕ ಕ್ರಮಗಳ ಜೊತೆಗೆ ನಿವಾರಣೆ ಕೈಗೊಂಡಿದೆ.
    • ಅಸ್ಪೃಶ್ಯತಾ ನಿವಾರಣೆಗಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಹೀಗೆ ವಿವಿಧ ಸಮಾಜದ ಸುಧಾರಕರು ಪ್ರಯತ್ನಿಸಿದ್ದಾರೆ.
  3. ಅಸ್ಪೃಶ್ಯತಾ ಆಚರಣೆಯಂತಹ ಸಾಮಾಜಿಕ ಹಿಡುಗನ್ನು ನಿವಾರಿಸಲು ನಿಮ್ಮ ಸಲಹೆಗಳೇನು?
    • ಭಾರತದಲ್ಲಿ ಸಾವಿರಾರು ವರ್ಷಗಳಿಂದ ಜಾತಿ ಪದ್ಧತಿಯು ಅಸ್ತಿತ್ವದಲ್ಲಿದೆ. ಮೇಲುಕೀಳು, ವರ್ಣವ್ಯವಸ್ಥೆ, ಜಾರಿಯಲ್ಲಿದ್ದು ಸಮಾನತೆಯ ಆಧಾರದ ಮೇಲೆ ನಿವಾರಿಸಬೇಕು.
    • ಅನ್ಯಾಯವನ್ನು ಸರಿಪಡಿಸಲು ಸರ್ಕಾರ ಸಂವಿಧಾನಾತ್ಮಕವಾಗಿ ಪ್ರಯತ್ನಿಸಿದೆ.
    • ಅಸ್ಪೃಶ್ಯತೆ ನಮ್ಮ ಸಮಾಜದ ಅಮಾನುಷವಾದ ಆಚರಣೆಯಾಗಿದೆ. "ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ" ಎಂದು ಗಾಂಧಿಜೀ ಹೇಳಿ "ಪರಿಜನ" ಎಂದು ಕರೆಯಲು ಸೂಚಿಸಿದರು. ಅಂದರೆ ದೇವರ ಮಕ್ಕಳು ಎಂದು ಕರೆಯುವವರೊಂದಿಗೆ ಸಮಾನತೆ ತೋರಿಸಿದರು.
    • ಪ್ರತಿಯೊಬ್ಬರು ಇತರರನ್ನು ಕೀಳಾಗಿ ನೋಡುವ ದೃಷ್ಟಿಕೋನ ಬದಲಾಯಿಸಬೇಕು.
    • ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಅವಕಾಶಗಳು ನೀಡುವುದರಿಂದ ಹಿಡುಗನ್ನು ನಿವಾರಿಸಬಹುದು.
    • ಸಮಾಜದಲ್ಲಿ ಜನರು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು.
    • ಡಾ. ಬಿ.ಆರ್.ಅಂಬೇಡ್ಕರರವರು ಸಮಾನತೆಗಾಗಿ ನ್ಯಾಯಕ್ಕಾಗಿ, ಮಾನವೀಯತೆಗಾಗಿ, ಅವಿರತ ಶ್ರಮದಿಂದ ಸ್ವತ: ಅವರ ಜೀವನ ಆದರ್ಶಪ್ರಾಯವಾಗಿದೆ.
    • ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಮಂತ್ರಗಳಿಂದ ಸಾಮಾಜಿಕ ಹಿಡುಗನ್ನು ಹೋಗಲಾಡಿಸಬಹುದೆಂದು ತೋರಿಸಿ ಕೊಟ್ಟರು.

ಭೂಗೋಳ ಭಾರತದ ಸಾರಿಗೆ (3 ಅಂಕ)

ಒಂದು ಅಂಕದ ಪ್ರಶ್ನೆಗಳು

  1. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರೇನು?
    • ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
  2. ಭಾರತದ ಚಾಹದ ಬಂದರು ಯಾವುದು?
    • ಕೊಲ್ಕತ್ತಾ ಬಂದರು
  3. ಕೊಲ್ಕತ್ತಾ ಬಂದರಿನ ಒತ್ತಡ ಕಡಿಮೆ ಮಾಡಲು ಸ್ಥಾಪಿಸಿರುವ ಕೃತಕ ಬಂದರು ಯಾವುದು?
    • ಹಾಲ್ಡಿಯಾ ಬಂದರು
  4. ದಿ ಏರ್ ಪೋರ್ಟ್ ಅಭಾರಟ್ ಆಫ್ ಇಂಡಿಯಾ ಸ್ಥಾಪನೆಯಾದ ವರ್ಷ?
    • 1955 ರಲ್ಲಿ
  5. ಭಾರತದಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿರ್ಲಕ್ಷಣಗಳ ಸಂಖ್ಯೆ ಎಷ್ಟು?
    • 11
  6. ಭಾರತದ ಹಳೆಯದಾದ ಕೃತಕ ಬಂದರು ಯಾವುದು?
    • ಚೆನ್ನೈ ಬಂದರು
  7. ಭಾರತದ ಹೆದ್ದಾರಿಯೆಂದು ಯಾವ ನಗರಕ್ಕೆ ಕರೆಯುತ್ತಾರೆ?
    • ಮುಂಬೈ
  8. ಕಚ್ ಖಾರಿಯ ತೀರದಲ್ಲಿರುವ ಬಂದರು ಯಾವುದು?
    • ಕಾಂಡ್ಲಾ
  9. ಸುವರ್ಣ ಚತುಷ್ಮೋನ & ಕಾರಿಡಾರ್ ಹೆದ್ದಾರಿ ಯೋಜನೆ ಪ್ರಾರಂಭವಾದ ವರ್ಷ ಯಾವುದು?
    • 1999 ರಲ್ಲಿ
  10. ಜಗತ್ತಿನ ಅತಿ ಎತ್ತರವಾದ ರಸ್ತೆ ಮಾರ್ಗ ಯಾವುದು?
    • ಕುಲು ಮನಾಲಿ~ಲ್ವೇ ಗಳನ್ನು ಸಂಪರ್ಕಿಸುವ ರಸ್ತೆ
  11. ಭಾರತದ ಉದ್ದವಾದ ರಾಷ್ಟ್ರೀಯ ಯಾವುದು?
    • ವಾರಣಾಸಿಕನ್ಯಾಕುಮಾರಿ ಸೇರಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ7 (NH-7)
  12. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ~7 ಉದ್ದವೇಷ್ಯು?
    • 2343 ಕಿ.ಮೀ
  13. ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಗಿದೆ?
    • 1989 ರಲ್ಲಿ
  14. ಸಾರಿಗೆ ಎಂದರೇನು?
    • ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಸ್ತುಗಳನ್ನು & ಸೇವೆಗಳನ್ನು ಸಾಗಿಸುವುದಕ್ಕೆ ಸಾರಿಗೆ ಎನ್ನುವರು.
  15. ಮರ್ಮಗೋವಾ ಬಂದರು ಯಾವ ಕೊಲ್ಲಿಯಲ್ಲಿ ಕಂಡುಬರುತ್ತದೆ?
    • ಝುವಾರಿ ಕೊಲ್ಲಿ

ಮೂರು ಅಂಕದ ಪ್ರಶ್ನೆಗಳು

  1. ರಾಷ್ಟ್ರದ ಅಭಿವೃದ್ಧಿಯಲ್ಲಿ ಸಾರಿಗೆಯ ಪಾತ್ರವೇನು? ಅಥವಾ ಸಾರಿಗೆಯಿಂದಾಗುವ ಪ್ರಯೋಜನಗಳೇನು?
    • ವ್ಯವಸಾಯದ ಅಭಿವೃದ್ಧಿಗೆ ಸಹಾಯಕ.
    • ಕೈಗಾರಿಕೆಗಳ ಅಭಿವೃದ್ಧಿಗೆ ಸಹಾಯಕ.
    • ಗಣಿಗಾರಿಕೆಗೆ ನೆರವಾಗುತ್ತದೆ.
    • ಅರಣ್ಯಗಾರಿಕೆ, ಮೀನುಗಾರಿಕೆ, ಹೈನುಗಾರಿಕೆಗಳಿಗೆ ಮಾರುಕಟ್ಟೆಗಳೊಡನೆ ಸಂಪರ್ಕ ಒದಗಿಸುತ್ತದೆ.
    • ಸೇವಾವಲಯದ ಚಾಲನೆಗೆ ಸಹಾಯಕವಾಗಿದೆ.
    • ಕಾರ್ಮಿಕರು ಕೈಗಾರಿಕೆಗಳಿಗೆ ತಲುಪಲು ಸಹಾಯಕ.
  2. ಭಾರತದ ರಸ್ತೆ ಸಾರಿಗೆಯ ಪ್ರಾಮುಖ್ಯತೆಯನ್ನು ತಿಳಿಸಿ?
    • ರೈತರು ತಾವು ಬೆಳೆದೆ ಉತ್ಪಾದ್ಯಗಳನ್ನು ಮಾರುಕಟ್ಟೆಗೆ ಒಯ್ಯಲು.
    • ಹಳ್ಳಿಗಳಿಗೆ ಬೇಕಾದ ಅವಶ್ಯಕ ವಸ್ತುಗಳನ್ನು ಪೂರೈಸಿಕೊಳ್ಳಲು ರಸ್ತೆ ಸಾರಿಗೆ ಬೇಕು.
    • ಕಟ್ಟಾ ವಸ್ತುಗಳನ್ನು ಕೈಗಾರಿಕೆಗಳಿಗೆ ಸಾಗಿಸಲು.
    • ಕೈಗಾರಿಕೆಗಳಿಂದ ಸಿದ್ಧಪಡಿಸಿದ ವಸ್ತುಗಳನ್ನು ಮಾರುಕಟ್ಟೆಗೆ ಸಾಗಿಸಲು.
    • ರಸ್ತೆ ಸಾರಿಗೆಗಳು ರೈಲು ಸಾರಿಗೆಗೆ ಪೂರಕವಾಗಿವೆ.
    • ಬಾಗಿಲಿನಿಂದ ಬಾಗಿಲಿಗೆ ಸರಕುಗಳ ಸಾಗಾಣಿಕೆ ರಸ್ತೆ ಮಾರ್ಗಗಳಿಂದ ಸಾಧ್ಯವಾಗಿದೆ. ರಸ್ತೆ ಸಾರಿಗೆ ಅವಶ್ಯಕ.
  3. ಕಾರಿಡಾರ್ ರಸ್ತೆಗಳು ಎಂದರೇನು? ಅವುಗಳ ಪ್ರಾಮುಖ್ಯತೆಯನ್ನು ತಿಳಿಸಿ.
    • ದೇಶವನ್ನು ಉತ್ತರ ಹಾಗೂ ದಕ್ಷಿಣ ಮತ್ತು ಪೂರ್ವ ಹಾಗೂ ಪಶ್ಚಿಮವಾಗಿ ಸಂಪರ್ಕಿಸುವ ಹೆದ್ದಾರಿಗಳಿಗೆ ಕಾರಿಡಾರ್ ರಸ್ತೆ ಎನ್ನವನು.
    • ಪ್ರಾಮುಖ್ಯತೆಗಳು:
      • ಕಾರಿಡಾರ್ ರಸ್ತೆಗಳು ಆರ್ಥಿಕವಾಗಿ ಮಾತ್ರವಲ್ಲದೆ ರಾಜಕೀಯವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದವೆ.
      • ಸರಕು ಸಾಮಾಗ್ರಿಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ದೇಶದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅತಿ ಕಡಿಮೆ ವೆಚ್ಚದಲ್ಲಿ ಸಾಗಸಲು ಉಪಯುಕ್ತವಾಗಿದೆ.
      • ಯೋಜನೆಯು ಕೈಗಾರಿಕೆಗಳಿಗೆ ವರದಾನವಾಗಿದೆ.
  4. ರಸ್ತೆ ಸಾರಿಗೆಯ ತೊಡಕುಗಳನ್ನು ತಿಳಿಸಿ.
    • ಅನೇಕ ಗ್ರಾಮೀಣ ರಸ್ತೆಗಳು ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಅನುಪಯುಕ್ತವಾಗಿವೆ.
    • ರಸ್ತೆ ಸಾರಿಗೆಯು ಪರಿಸರ ಮಾಲಿನ್ಯ, ವಾಹನ ದಟ್ಟಣೆ ಹಾಗೂ ಅಪಘಾತಗಳಿಗೂ ಕಾರಣವಾಗಿದೆ.
    • ರಸ್ತೆಗಳು ಪ್ರತಿ ವರ್ಷ ಮಳೆ, ಪ್ರವಾಹ, ಚಂಡಮಾರುತದಿಂದ ಹಾಳಾಗುತ್ತವೆ.
    • ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೇಯು ಅಸಮರ್ಪಕವಾಗಿದೆ.
    • ರಸ್ತೆಗಳ ಬದಿಯಲ್ಲಿ ಬೇಕಾದ ಅಗತ್ಯಗಳ ಕೊರತೆಯನ್ನು ದೇಶದದ್ಯಂತ ಕಾಣಬಹುದು.
  5. ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಮುಖ್ಯ ಬಂದರುಗಳನ್ನು ಹೆಸರಿಸಿ.
    • ಭಾರತದ ಪೂರ್ವ ಕರಾವಳಿಯ ಬಂದರುಗಳು: ಕಾಂಡ್ಲಾ, ಮುಂಬಯಿ, ನವಶೇವಾ, ಮರ್ಮಗೋವಾ, ನವಮಂಗಳೂರು, ಕೊಚ್ಚೆರ್.
    • ಭಾರತದ ಪಶ್ಚಿಮ ಕರಾವಳಿಯ ಬಂದರುಗಳು: ತುಹುಕುಡಿ ಮತ್ತು ಚೆನ್ನೈ, ವಿಶಾಖಪಟ್ಟಣ, ಪಾರದೀಪ್, ಹಾಲ್ಡಿಯಾ, ಕೊಲ್ಕತ್ತಾ.
  6. ಭಾರತದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೆಸರಿಸಿ.

1.               ಮುಂಬಯಿಯ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

2.               ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

3.               ಕೊಲ್ಕತ್ತಾದ ಸುಭಾಷಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

4.               ಚೆನ್ನೈಯ ಅಣ್ಣಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

5.               ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

6.               ಹೈದ್ರಾಬಾದ್

7.               ಅಹಮದಾಬಾದ್

8.               ಪಣಜಿ

9.               ಅಮೃತಸರ್

10.            ಗುವಾಹಟಿ

11.            ತಿರುವನಂತಪುರ

  1. ರಾಷ್ಟ್ರೀಯ ಹೆದ್ದಾರಿಗಳ ಕಾರ್ಯಗಳೇನು?
    • ಇವು ದೇಶದ ಅತಿ ಮುಖ್ಯ ರಸ್ತೆಗಳು, ದೇಶದ ಉದ್ದಗಲಕ್ಕೂ ನಿರ್ಮಿತವಾಗಿವೆ. ರಾಜ್ಯದ ರಾಜಧಾನಿಗಳು, ಪ್ರಧಾನ ಬಂದರುಗಳ ಮತ್ತು ಕೈಗಾರಿಕಾ ನಗರಗಳನ್ನು ಸಂಪರ್ಕಿಸುತ್ತವೆ.
  2. ಭಾರತದಲ್ಲಿರುವ ನಾಲ್ಕು ಪ್ರಕಾರದ ಸಾರಿಗೆಗಳು ಯಾವುವು?
    • ರಸ್ತೆ ಸಾರಿಗೆ
    • ರೈಲು ಸಾರಿಗೆ
    • ವಾಯು ಸಾರಿಗೆ
    • ಜಲ ಸಾರಿಗೆ

ಅರ್ಥಶಾಸ್ತ್ರ

ಸಾರ್ವಜನಿಕ ಹಣಕಾಸು ಮತ್ತು ಅಯ್ಯವ್ಯಯ

  1. ಖಾಸಗಿ ಹಣ ಮತ್ತು ಸಾರ್ವಜನಿಕ ಹಣದ ವ್ಯತ್ಯಾಸವೇನು? ಅಥವಾ ಸಾರ್ವಜನಿಕ ಹಣಕಾಸು & ವೈಯಕ್ತಿಕ ಹಣಕಾಸು ನಡುವಿನ ವ್ಯತ್ಯಾಸಗಳೇನು?

ವೈಯಕ್ತಿಕ ಹಣಕಾಸು

ಸಾರ್ವಜನಿಕ ಹಣಕಾಸು

ಒಬ್ಬ ವ್ಯಕ್ತಿ ಅಥವಾ ಕುಟುಂಬದ ಆದಾಯ ವೆಚ್ಚಗಳಿಗೆ ಸಂಬಂಧಿಸಿರುತ್ತದೆ.

ಇದು ಸರಕಾರದ ಆದಾಯ ವೆಚ್ಚಗಳಿಗೆ ಸಂಬಂಧಿಸಿರುತ್ತದೆ.

ಮೊದಲು ಆದಾಯವನ್ನು ಅಂದಾಜು ಮಾಡಿ ಅದಕ್ಕೆ ತಕ್ಕಂತೆ ವೆಚ್ಚ ಮಾಡುತ್ತದೆ.

ಮೊದಲು ವೆಚ್ಚವವನ್ನು ಅಂದಾಜು ಮಾಡಿ ಅದಕ್ಕೆ ತಕ್ಕಂತೆ ಆದಾಯ ಹೊಂದಿಸುತ್ತಾರೆ.

ಹಣಕಾಸಿನ ವ್ಯವಹಾರಗಳನ್ನು ಗೌಪ್ಯವಾಗಿಡಲಾಗುತ್ತದೆ.

ಶಾಸನಸಭೆಗಳಲ್ಲಿ ಮಾಧ್ಯಮಗಳಲ್ಲಿ ಬಹಿರಂಗಗೊಳಿಸಲಾಗುತ್ತದೆ.

ಉಳಿತಾಯವು ಪ್ರಗತಿಗೆ ಪೂರಕವಾಗಿರುತ್ತದೆ.

ಉಳಿತಾಯವು ದೇಶದ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ.

  1. ಸಾರ್ವಜನಿಕ ಹಣಕಾಸಿನ ಮಹತ್ವವೇನು?
    • ದೇಶದ ನೈಸರ್ಗಿಕ ಸಂಪತ್ತು, ಶ್ರಮ, & ಭೌತಿಕ ಬಂಡವಾಳ ಉತ್ಪಾದಕರ ನಡುವೆ ಸಮರ್ಪಕ ಹಂಚಿಕೆ.
    • ಆದಾಯದ ಸಮಾನ ಹಂಚಿಕೆ.
    • ಎಲ್ಲ ವರ್ಗದ ಜನರು ಶಾಂತಿ ನೆಮ್ಮದಿಯಿಂದ ಬದುಕಲು ಪ್ರಯತ್ನಿಸುತ್ತಿದೆ.
    • ಕೃಷಿ, ಕೈಗಾರಿಕೆ, ಮೂಲಸೌಕರ್ಯ ಮೊದಲಾದ ಆದ್ಯತಾ ವಲಯಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಳ.
    • ಬಡತನ & ನಿರುದ್ಯೋಗ ನಿವಾರಣೆ.
    • ಆರ್ಥಿಕ ಸ್ಥಿರತೆ ಸಾಧಿಸುವುದು.
  2. ಕೇಂದ್ರ ಸರಕಾರದ ತೆರಿಗೆಯೇತರ ಆದಾಯದ ಮೂಲಗಳು ತಿಳಿಸಿರಿ.
    • ಭಾರತೀಯ ರಿಸರ್ವ್ ಬ್ಯಾಂಕು ಗಳಿಸುವ ನಿವ್ವಳ ಲಾಭ.
    • ಭಾರತೀಯ ರೈಲ್ವೆಗಳಿಸುವ ನಿವ್ವಳ ಲಾಭ.
    • ಅಂಚೆ & ದೂರವಾಣಿ ಸೇವೆಗಳಿಂದ ಬರುವ ಆದಾಯ.
    • ಸಾರ್ವಜನಿಕ ಉದ್ಯಮಗಳು ಗಳಿಸುವ ಆದಾಯ.
    • ನಾಣ್ಯ & ಟಂಕ ಸಾಲಿಯಿಂದ ಬರುವ ಆದಾಯ.
    • ವಿವಿಧ ರೀತಿಯ ಶುಲ್ಕಗಳು ದಂಡಗಳು.
  3. ಕಂದಾಯ ಆದಾಯ ಎಂದರೇನು? ಅದರ ವಿಧಗಳಾವುವು?
    • ಸರಕಾರವು ವಿವಿಧ ತೆರಿಗೆಗಳು & ತೆರಿಗೆಯೇತರ ಮೂಲಗಳಿಂದ ಸಂಗ್ರಹಿಸುವ ಆದಾಯವನ್ನು ಕಂದಾಯ ಆದಾಯ ಎನ್ನುವರು.
    • ಅದರ ವಿಧಗಳೆಂದರೆ, ತೆರಿಗೆ ಆದಾಯ, ತೆರಿಗೆಯೇತರ ಆದಾಯ.
  4. ಪ್ರತ್ಯಕ್ಷ ತೆರಿಗೆ ಎಂದರೇನು? ಅದರ ಮೂಲಗಳಾವುವು?
    • ಸರಕಾರವು ಯಾರ ಮೇಲೆ ತೆರಿಗೆಯನ್ನು ವಿಧಿಸುತ್ತದೆಯೋ ಅವರೇ ಹೊರೆಯನ್ನು ಹೊಂದಿರುತ್ತಿದ್ದರೆ ಅದನ್ನು ಪ್ರತ್ಯಕ್ಷ ತೆರಿಗೆ ಎನ್ನುತ್ತಾರೆ.
    • ಅದರ ಮೂಲಗಳೆಂದರೆ, ಆದಾಯ ತೆರಿಗೆ, ಕಂಪನಿ ತೆರಿಗೆ, ಸಂಪತ್ತು ತೆರಿಗೆ, ಇತರೆ ತೆರಿಗೆಗಳು.
  5. ತೆರಿಗೆ ಆದಾಯ ಎಂದರೇನು? ಅದರ ವಿಧಗಳಾವುವು?
    • ಪ್ರಜೆಗಳು ಯಾವುದೇ ಪ್ರತಿಪದ್ರಕ್ಷೆಯಿಲ್ಲದೆ ಸರ್ಕಾರಕ್ಕೆ ಕೊಡಬೇಕಾದ ಕಡ್ಡಾಯ ವಂತಿಗೆಯನ್ನು ತೆರಿಗೆ ಆದಾಯ ಎನ್ನುವರು.
    • ಅದರ ವಿಧಗಳೆಂದರೆ, ಪ್ರತ್ಯಕ್ಷ ತೆರಿಗೆ, ಪರೋಕ್ಷ ತೆರಿಗೆ.
  6. ಕಂದಾಯ ವೆಚ್ಚ ಎಂದರೇನು? ಅದರ ವಿಧಗಳಾವುವು?
    • ಕೇಂದ್ರ ಸರ್ಕಾರವು ತನ್ನ ಕಂದಾಯ ಆದಾಯದಿಂದ ಮಾಡುವ ವೆಚ್ಚವನ್ನು ಕಂದಾಯ ವೆಚ್ಚ ಎನ್ನುವರು.
    • ಅದರ ವಿಧಗಳೆಂದರೆ, ಯೋಜನಾ ವೆಚ್ಚ, ಯೋಜನೇತರ ವೆಚ್ಚ.
  7. ಯೋಜನೇತರ ವೆಚ್ಚ ಎಂದರೇನು? ಅದರ ಮೂಲಗಳಾವುವು?
    • ಅಭಿವೃದ್ಧಿ ಕಾರ್ಯಗಳನ್ನು ಹೊರತುಪಡಿಸಿ ಆಡಳಿತ ನಿರ್ವಹಣೆ, ರಾಷ್ಟ್ರಶೈಲಿ, ಬಡ್ಡಿಪಾವತಿ, ಮುಂತಾದವುಗಳ ಮೇಲೆ ಮಾಡುವ ವೆಚ್ಚಗಳನ್ನು ಯೋಜನೇತರವೆಚ್ಚ ಎನ್ನುವರು.
    • ಅದರ ಮೂಲಗಳೆಂದರೆ, ನಾಗರಿಕ ಆಡಳಿತ ವೆಚ್ಚ, ರಕ್ಷಣಾ ವೆಚ್ಚ, ಬಡ್ಡಿ ಪಾವತಿ, ಸಮಯ ಧನಗಳು, ರಾಜ್ಯಗಳಿಗೆ ಯೋಜನೇತರ ನೆರವು.
  8. ಕೇಂದ್ರ ಸರ್ಕಾರದ ಯೋಜನಾ ವೆಚ್ಚದ ವಿಧಗಳಾವುವು?
    • ಆರ್ಥಿಕ ವೆಚ್ಚಕೃಷಿ, ಕೈಗಾರಿಕೆ, ಸಂಪರ್ಕ, ಇಂಧನ.
    • ಸಾಮಾಜಿಕ ವೆಚ್ಚಶಿಕ್ಷಣ, ಆರೋಗ್ಯ, ಗೃಹನಿರ್ಮಾಣ, ಸಾಮಾಜಿಕ ಕಲ್ಯಾಣ.
    • ಸಾಮಾನ್ಯ ವೆಚ್ಚದೇಶದಲ್ಲಿ ಶಾಂತಿಸುವ್ಯವಸ್ಥೆ ಕಾಪಾಡುವ ಸೇವೆಗಳು.
  9. ಕೊರತೆ ಹಣಕಾಸು ಎಂದರೇನು? ಅದರ 4 ವಿಧಗಳನ್ನು ತಿಳಿಸಿ.
    • ಸರಕಾರವು ತನ್ನ ಆದಾಯಕ್ಕಿಂತಲೂ ವೆಚ್ಚವನ್ನು ಹೆಚ್ಚು ಮಾಡುವುದಕ್ಕೆ ಕೊರತೆ ಹಣಕಾಸು ಎನ್ನುವರು.
    • ಅದರ 4 ವಿಧಗಳೆಂದರೆ, ವಿತ್ತೀಯ ಕೊರತೆ, ಆಯವ್ಯಯ ಕೊರತೆ, ಕಂದಾಯ ಕೊರತೆ, ಪ್ರಾಥಮಿಕ ಕೊರತೆ.
  10. ಪರೋಕ್ಷ ತೆರಿಗೆ ಎಂದರೇನು? ಅದರ ಮೂಲಗಳಾವುವು?
    • ಸರಕಾರವು ವಿಧಿಸುವ ತೆರಿಗೆಯ ಹೊರೆಯನ್ನು ಇತರರ ಮೇಲೆ ವರ್ಗಾಯಿಸಲು ಸಾಧ್ಯವಿದ್ದರೆ ಅಂತಹ ತೆರಿಗೆಯನ್ನು ಪರೋಕ್ಷ ತೆರಿಗೆ ಎನ್ನುವರು.
    • ಅದರ ಮೂಲಗಳೆಂದರೆ, ಕೇಂದ್ರ ಅಬಕಾರಿ ತೆರಿಗೆ, ಆಮದುರಫ್ತು ತೆರಿಗೆ, ಸೇವಾ ತೆರಿಗೆ, ಇತರೆ ತೆರಿಗೆಗಳು.
  11. ಬಂಡವಾಳ ಆದಾಯ ಎಂದರೇನು? ಅದರ ಮೂಲಗಳಾವುವು?
    • ಸರಕಾರವು ಅರ್ಥವ್ಯವಸ್ಥೆಯ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಹೊಸ ಆಸ್ತಿಗಳನ್ನು ನಿರ್ಮಾಣ ಮಾಡುವ ದೃಷ್ಟಿಯಿಂದ ಹೊಸದಾಗಿ ಬಂಡವಾಳ ಹೂಡುವ ಸಲುವಾಗಿ ಸಂಗ್ರಹಿಸುವ ಆದಾಯವನ್ನು ಬಂಡವಾಳ ಆದಾಯ ಎನ್ನುತ್ತಾರೆ.
    • ಅದರ ಮೂಲಗಳೆಂದರೆ, ಆಂತರಿಕ ಸಾಲ, ವಿದೇಶಿ ಸಾಲ, ಸಾಲೇತರ ಬಂಡವಾಳ ಆದಾಯ.
  12. ಆಯವ್ಯಯ (ಮುಂಗಡ ಪತ್ರ) ಎಂದರೇನು? ಅದರ ವಿಧಗಳಾವುವು?
    • ಸರಕಾರದ ಒಂದು ವರ್ಷದ ಆದಾಯ & ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಆಯವ್ಯಯ ಪತ್ರ ಅಥವಾ ಮುಂಗಡ ಪತ್ರ ಎಂದು ಕರೆಯುತ್ತಾರೆ.
    • ಅದರ ವಿಧಗಳೆಂದರೆ, ಉಳಿತಾಯ ಆಯವ್ಯಯ, ಕೊರತೆಯ ಆಯವ್ಯಯ, ಸಮತೋಲನ ಆಯವ್ಯಯ.

ವ್ಯವಹಾರ ಅಧ್ಯಾಯನ

ಬ್ಯಾಂಕ್ ವ್ಯವಹಾರ (03 ಅಂಕದ ಪ್ರಶ್ನೆಗಳು)

ಬಹು ಆಯ್ಕೆಯ ಪ್ರಶ್ನೆಗಳು

  1. ಒಬ್ಬ ವ್ಯಾಪಾರಿಯು ಬ್ಯಾಂಕಿನಲ್ಲಿ ಒಂದು ಖಾತೆಯನ್ನು ತೆರೆಯಲು ಯೋಚಿಸಿದ್ದಾನೆ ನೀವು ಅವನಿಗೆ ಯಾವ ಖಾತೆಯನ್ನು ತೆರೆಯಲು ಸಲಹೆ ನೀಡುತ್ತೀರಿ.
    • ಚಾಲ್ತಿ ಖಾತೆ
  2. ರಾಜರೇಖರ ಎಂಬುವರು ತಮ್ಮ ಮಗಳ ಮದುವೆಗೆ ಹಣ ಸಂಗ್ರಹ ಮಾಡಲು ನಿಶ್ಚಿಟ್ಟಾರೆ ಅವರಿಗೆ ಯಾವ ಪ್ರಕಾರದ ಖಾತೆ ಸೂಕ್ತ?
    • ನಿಶ್ಚಿತ ಠೇವಣಿ ಖಾತೆ
  3. ಬ್ಯಾಂಕಿಂಗ್ ಉದ್ಯಮದ ಇತ್ತೀಚಿನ ಬೆಳವಣಿಗೆ ಎಂದರೆ
    • ಬ್ಯಾಂಕುಗಳ ರಾಷ್ಟ್ರೀಕರಣ
  4. ಖಾತೆಗೆ ಬ್ಯಾಂಕುಗಳು ಸಾಮಾನ್ಯವಾಗಿ ಯಾವುದೇ ಬಡ್ಡಿಯನ್ನು ಕೊಡುವುದಿಲ್ಲ. ಬದಲಾಗಿ ಖಾತೆದಾರನಿಂದಲೇ ಸೇವಾ ಶುಲ್ಕವನ್ನು ವಸೂಲು ಮಾಡುತ್ತವೆ.
    • ಚಾಲ್ತಿ ಖಾತೆ
  5. ಬ್ಯಾಂಕಿನಲ್ಲಿ ದಿನಕ್ಕೆ ಎಷ್ಟುಬಾರಿಯಾದರೂ ವ್ಯವಹರಿಸಬಹುದಾದ ಖಾತೆ
    • ಚಾಲ್ತಿ ಖಾತೆ
  6. ಸಾಮಾನ್ಯವಾಗಿ ವೇತನ ಪಡೆಯುವವರು ಅಥವಾ ಒಂದು ನಿಯಮಿತ ಆದಾಯ ಹೊಂದಿರುವ ಜನರು ಆರಂಭಿಸುವ ಖಾತೆ
    • ಉಳಿತಾಯ ಖಾತೆ
  7. ನಮ್ಮ ದೇಶದ ಕೇಂದ್ರ ಬ್ಯಾಂಕ ಇದಾಗಿದೆ.
    • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
  8. ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಖಾತೆ
    • ಉಳಿತಾಯ ಖಾತೆ
  9. ಬ್ಯಾಂಕುಗಳ ಬ್ಯಾಂಕು
    • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ಒಂದು ಅಂಕದ ಪ್ರಶ್ನೆಗಳು

  1. ಬ್ಯಾಂಕ ಎಂಬ ಪದ ಮೂಲನ ಪದ ಯಾವುದು?
    • ಇಟಲಿ ಭಾಷೆಯ ಬ್ಯಾಂಕೋ
  2. ಬ್ಯಾಂಕ ವ್ಯವಹಾರ ಎಂದರೇನು?
    • ಬ್ಯಾಂಕಿನಲ್ಲಿರುವ ಸೇವೆಗಳನ್ನು ಜನರು ಉಪಯೋಗಿಸಿಕೊಳ್ಳುವ ವ್ಯವಹಾರವನ್ನು ಬ್ಯಾಂಕ ವ್ಯವಹಾರ ಎನ್ನುವರು.
  3. ಚಾಲ್ತಿ ಖಾತೆಯನ್ನು ಸಾಮಾನ್ಯವಾಗಿ ಯಾರು ತೆರೆಯುತ್ತಾರೆ?
    • ವ್ಯಾಪಾರಿಸ್ತರು, ವಾಣಿಜ್ಯ ಮತ್ತು ಔದ್ಯೋಗಿಕ ಸಂಸ್ಥೆಯವರು ತೆರೆಯುತ್ತಾರೆ.
  4. ಬ್ಯಾಂಕುಗಳು ಯಾವ ಖಾತೆಗೆ ಸೇವಾಕುಲ್ಲ ವಸೂಲು ಮಾಡುತ್ತವೆ?
    • ಚಾಲ್ತಿ ಖಾತೆಗೆ
  5. ಬ್ಯಾಂಕುಗಳು ಬಡ್ಡಿಯನ್ನು ನೀಡದಿರುವ ಖಾತೆ ಯಾವುದು?
    • ಚಾಲ್ತಿ ಖಾತೆ
  6. ಭವಿಷ್ಯದ ಅವಶ್ಯಕತೆಗಳಿಗೆ ತಿಂಗಳು ತಿಂಗಳು ವ್ಯವಸ್ಥಿತವಾಗಿ ರೇವಣಿಗಳನ್ನು ಒಂದು ಅವಧಿಗೆ ಜಮಾ ಮಾಡುವ ಖಾತೆ ಯಾವುದು?
    • ಆವರ್ತ ರೇವಣಿ ಖಾತೆ
  7. ಪ್ರತಿಯೊಬ್ಬರು ಬ್ಯಾಂಕ್ ಖಾತೆ ಹೊಂದಲು ಇತ್ತೀಚೆಗೆ ಕೇಂದ್ರ ಸರಕಾರ ಜಾರಿಗೆ ತಂದ ಯೋಜನೆ ಯಾವುದು?
    • ಜನಧನ ಯೋಜನೆ
  8. ಬ್ಯಾಂಕ್ ಪದದ ಅರ್ಥ?
    • ಬೆಂಚು ಅಥವಾ ಹಣವನ್ನು ವಿನಿಮಯ ಮಾಡುವ ಜೇಬಲ್
  9. ಹಣವನ್ನು ಪಾವತಿ ಮಾಡುವ ನಮೂನೆಗೆ ಏನೆಂದು ಕರೆಯುತ್ತಾರೆ?
    • ಚಲನಿ ಎನ್ನುತ್ತಾರೆ
  10. ಜನರಿಗೆ ಹಣವನ್ನು ಉಳಿತಾಯ ಮಾಡಲು ಯಾವ ರೀತಿಯ ಖಾತೆ ಸಹಾಯಕವಾಗಿದೆ?
    • ಉಳಿತಾಯ ಖಾತೆ
  11. ATM ಇದರ ಎಸ್ಪ್ರೆಶ್ಟ ರೂಪವೇನು?
    • ATM - Autometic Teller Machine
  12. ರಾಷ್ಟ್ರೀಯ ಉಳಿತಾ ಪತ್ರಗಳನ್ನು ಯಾವ ಇಲಾಖೆ ನೀಡುತ್ತದೆ?
    • ಅಂಚೆ ಇಲಾಖೆ
  13. ಠೇವಣಿಯನ್ನು ನಿಗದಿತ ಅವಧಿಗೆ ಯಾವ ಖಾತೆಯಲ್ಲಿ ಇಡಬಹುದು?
    • ನಿಶ್ಚಿತ ಠೇವಣಿ ಖಾತೆ

ಮೂರು ಅಂಕದ ಪ್ರಶ್ನೆಗಳು

  1. ಬ್ಯಾಂಕು ಎಂದರೇನು? ಬ್ಯಾಂಕಿನಲ್ಲಿ ತೆರೆಯಬಹುದಾದ ವಿವಿಧ ಖಾತೆಗಳು ಯಾವುವು? ಅಥವಾ ಬ್ಯಾಂಕಿನಲ್ಲಿ ತೆರೆಯಬಹುದಾದ ವಿವಿಧ ಖಾತೆಗಳಾವುವು?
    • ಬ್ಯಾಂಕ್ ಎಂಬ ಪದವು ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ್ದು, ಇದು ಠೇವಣಿಗಳನ್ನು ಸ್ವೀಕರಿಸಿ ಠೇವಣಿಗಳನ್ನು ಸಾಲಗಳ ರೂಪದಲ್ಲಿ ಬೇರೆ ಬೇರೆ ಸೇವೆಗಳಿಗೆ ಕೊಡುತ್ತದೆ. ರೀತಿ ಹಣದ ವ್ಯವಹಾರವನ್ನು ನಿರ್ವಹಿಸುವ ಸಂಸ್ಥೆಗೆ ಬ್ಯಾಂಕ ಎನ್ನುವರು.
    • ಬ್ಯಾಂಕುಗಳಲ್ಲಿ ತೆರೆಯಬಹುದಾದ ವಿವಿಧ ಖಾತೆಗಳು:
      • ಉಳಿತಾಯ ಖಾತೆ
      • ಚಾಲ್ತಿ ಖಾತೆ
      • ಆವರ್ತ ಠೇವಣಿ ಖಾತೆ
      • ನಿಶ್ಚಿತ ಠೇವಣಿ ಖಾತೆ
  2. ಬ್ಯಾಂಕ್ ಮತ್ತು ಗ್ರಾಹಕನಿಗೂ ಇರುವ ಸಂಬಂಧವನ್ನು ವಿವರಿಸಿರಿ.
    • ಬ್ಯಾಂಕ್ ಮತ್ತು ಗ್ರಾಹಕನಿಗೂ ಇರುವ ಸಂಬಂಧವನ್ನು ಎರಡು ರೀತಿಯಲ್ಲಿ ಎಂಗಡಿಸಬಹುದು.
      • ಸಾಮಾನ್ಯ ಸಂಬಂಧ:
        • ಪ್ರಾಥಮಿಕ ಸಂಬಂಧ- ಸಾಲಿಗ ಮತ್ತು ಸಾಲಗಾರನ ಸಂಬಂಧ
        • ಸಹಾಯಕ ಅಥವಾ ಉಪಕಾರ ಸಂಬಂಧ
        • ಕಾರುಬಾರಿ ಅಥವಾ ನಿಯೋಗಿ ಮತ್ತು ಮಯಪ್ರಿಸ್ಥನ ಸಂಬಂಧ
      • ಎಠೇಷ ಸಂಬಂಧ:
        • ಚಿಕ್ಕುಗಳನ್ನು ಮನ್ನಣೆ ಮಾಡುವುದು,
        • ಗ್ರಾಹಕರ ಲೆಕ್ಕಗಳ ಗೋಪ್ಯತೆ ಕಾಪಾಡುವುದು.
  3. ಬ್ಯಾಂಕಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಗಮನಿಸಬಹುದಾದ ಗುಣಲಕ್ಷಣಗಳನ್ನು ಪಟ್ಟಿಮಾಡಿ.
    • ಬ್ಯಾಂಕುಗಳು ಸಾರ್ವಜನಿಕರ ಹಣದ ವಹಿವಾಟನ್ನು ಮಾಡುತ್ತದೆ.
    • ಬ್ಯಾಂಕ್ ಒಬ್ಬ ವ್ಯಕ್ತಿ, ಒಂದು ಸಂಸ್ಥೆ ಅಥವಾ ಒಂದು ಕಂಪನಿಯಾಗಿರಬಹುದು.
    • ಇದು ಹಣಕಾಸಿನ ವ್ಯವಹಾರ ಮಾಡುವ ಸಂಸ್ಥೆಯಾಗಿದೆ.
    • ಬ್ಯಾಂಕುಗಳು ಸಾರ್ವಜನಿಕರಿಂದ ಠೇವಣಿಗಳನ್ನು ಅಂಗೀಕರಿಸುತ್ತವೆ.
    • ಗ್ರಾಹಕರಿಗೆ ವಿವಿಧ ಉದ್ದೇಶಗಳಿಗಾಗಿ ಹಣವನ್ನು ಸಾಲರೂಪದಲ್ಲಿ ಕೊಡುತ್ತದೆ.
    • ಬ್ಯಾಂಕ್ ಸೇವೆಯ ಮನೋಭಾವ ಹೊಂದಿದ್ದು ಲಾಭ ಪಡೆಯುವ ಒಂದು ಸಂಸ್ಥೆಯಾಗಿದೆ.
    • ಬ್ಯಾಂಕುಗಳು ನಿರ್ಧಿಷ್ಟವಾದ ಹೆಸರಿನಿಂದ ವ್ಯವಹರಿಸುತ್ತವೆ. ಉದಾ: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು.
  4. ಬ್ಯಾಂಕ್ ನಿರ್ವಹಿಸುವ ಕಾರ್ಯಗಳಾವುವು?
    • ಸಾರ್ವಜನಿಕರಿಂದ ಅಥವಾ ಇತರರಿಂದ ಠೇವಣಿಗಳನ್ನು ಅಂಗೀಕರಿಸುವುದು.
    • ಸಾರ್ವಜನಿಕರಿಂದ ಮತ್ತು ಸಂಘ ಸಂಸ್ಥೆಗಳಿಗೆ ಸಾಲಗಳನ್ನು ಕೊಡುವುದು.
    • ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸುವುದು.
    • ಚಿಕ್ಕ ಮತ್ತು ಮಂಡಿಗಳ ಮೇಲೆ ಹಣ ವಸೂಲು ಮಾಡುವುದು.
    • ಸಾಲಪತ್ರಗಳನ್ನು ಮತ್ತು ಜವಬ್ದಾರಿ ಪತ್ರಗಳನ್ನು ಕೊಡುವುದು.
    • ಭದ್ರತಾ ಕಪಾಟುಗಳನ್ನು ಬಾಡಿಗೆಗೆ ಕೊಡುವುದು.
    • ವಿದೇಶಿ ವಿನಿಮಯ ವ್ಯವಹಾರಗಳನ್ನು ನಿರ್ವಹಿಸುವುದು.
    • ಬೆಲೆ ಬಾಳುವ ವಸ್ತುಗಳನ್ನು ತಮ್ಮ ಸುಪರ್ಧಿಗಳಲ್ಲಿ ಭದ್ರವಾಗಿ ಇಟ್ಟುಕೊಳ್ಳುವುದು.
    • ಸಾಲಪತ್ರಗಳನ್ನು ಮತ್ತು ಜವಾಬ್ದಾರಿ ಪತ್ರಗಳನ್ನು ಕೊಡುವುದು.
  5. ಬ್ಯಾಂಕ್ ಖಾತೆಗಳಲ್ಲಿ ಉಳಿತಾಯ ಖಾತೆ ತೆರೆಯುವವರ ಸಂಖ್ಯೆ ಹೇರಳವಾಗಿರುತ್ತದೆ. ಕಾರಣ ಕೊಡಿ.
    • ಉಳಿತಾಯ ಖಾತೆಯು ಜನರು ಹಣ ಉಳಿತಾಯ ಮಾಡಲು ಸಹಾಯ ಮಾಡುತ್ತದೆ.
    • ಸಾಮಾನ್ಯವಾಗಿ ವೇತನ ಪಡೆಯುವವರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಎಂಚಣಿದಾರರು ಕೂಡ ಖಾತೆ ತೆರೆಯಲು ಅವಕಾಶವಿದೆ.
    • ಇತ್ತೀಚಿನ ದಿನಗಳಲ್ಲಿ ಸರ್ಕಾರ ನೀಡುವ ಎಲ್ಲಾ ರೀತಿಯ ರಿಯಾಯತ, ಧನಸಹಾಯ ಮತ್ತು ವಿದ್ಯಾರ್ಥಿ ವೇತನ ಮುಂತಾದವು ನೇರವಾಗಿ ಸಿಗುವಂತೆ ಮಾಡಿರುವುದು.
    • ಕಾರಣಗಳಿಂದ ಬ್ಯಾಂಕ್ ಖಾತೆಗಳಲ್ಲಿ ಉಳಿತಾಯ ಖಾತೆ ತೆರೆಯುವವರ ಸಂಖ್ಯೆ ಹೇರಳವಾಗಿರುತ್ತದೆ.
  6. ಬ್ಯಾಂಕ್ ಖಾತೆ ತೆರೆಯುವದರಿಂದಾಗುವ ಅನುಕೂಲಗಳಾವುವು? ಅಥವಾ ಬ್ಯಾಂಕ್ ಖಾತೆ ಅನುಕೂಲಕರವಾದದ್ದು ಹೇಗೆ?
    • ಬ್ಯಾಂಕ್ ಖಾತೆಯು ಹಣದ ಭದ್ರತೆ ಕಾಪಾಡುತ್ತದೆ.
    • ಬ್ಯಾಂಕ್ ಖಾತೆಯು ಹಣದ ಪಾವತಿಗಳನ್ನು ಮಾಡಲು ಸಹಾಯ ಮಾಡುತ್ತದೆ.
    • ಬ್ಯಾಂಕ್ ಖಾತೆಯನ್ನು ಹೊಂದಿರುವವರು ಸಾಲ ಪಡೆಯಲು ಸಾಧ್ಯವಾಗುತ್ತದೆ.
    • ಬ್ಯಾಂಕ್ ಖಾತೆಯು ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಸಾಧ್ಯ ಮಾಡಿಕೊಡುತ್ತದೆ.
    • ಬ್ಯಾಂಕ್ ಖಾತೆದಾರರು ಭದ್ರತಾ ಕಪಾಟುಗಳನ್ನು ಪಡೆಯಬಹುದು.
    • ಬ್ಯಾಂಕ್ ಖಾತೆಯು ಹಣವನ್ನು ವಸೂಲು ಮಾಡಲು ಸಹಾಯ ಮಾಡುತ್ತದೆ.
  7. ಭಾರತೀಯ ಅಂಚೆ ಕಛೇರಿಯು ಯಾವ ರೀತಿ ಬ್ಯಾಂಕಿಂಗ್ ವ್ಯವಹಾರ ಮಾಡುತ್ತದೆ? ಅಥವಾ ಅಂಚೆ ಇಲಾಖೆಯು ಕೈಗೊಂಡಿರುವ ಹಣಕಾಸಿನ ವ್ಯವಹಾರಗಳು ಯಾವುವು?
    • ರಾಷ್ಟ್ರೀಯ ಉಳಿತಾಯ ಪತ್ರಗಳು, ಅಂಚೆ ಉಳಿತಾಯ ಖಾತೆಗಳು, ಕಿಸಾನ್ ವಿಕಾಸ ಪತ್ರಗಳು, ಮಾಸಿಕಾನ ತೀರು ಠೇವಣಿಗಳು, ಅಂಚೆ ವಿಮೆ, ನಿವೃತ್ತಿ ವೇತನ ಮತ್ತು ಹಣವನ್ನು ವರ್ಗಾಯಿಸುವುದು ಮುಂತಾದ ಅನೇಕ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತದೆ.
  8. ಬ್ಯಾಂಕುಗಳ ಪ್ರಮುಖ ವಿಧಗಳಾವುವು?
    • ಕೇಂದ್ರ ಬ್ಯಾಂಕ್ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್, ವಾಣಿಜ್ಯ ಬ್ಯಾಂಕ್, ಕೈಗಾರಿಕಾ ಅಭಿವೃದ್ಧಿ ಬ್ಯಾಂಕುಗಳು, ಸ್ಥಳೀಯ ಬ್ಯಾಂಕುಗಳು, ಭೂ- ಅಭಿವೃದ್ಧಿ ಅಥವಾ ವ್ಯವಸಾಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು.
  9. ಭಾರತೀಯ ರಿಸರ್ವ್ ಬ್ಯಾಂಕನ್ನು ಬ್ಯಾಂಕುಗಳ ಬ್ಯಾಂಕು ಎಂದು ಕರೆಯಲು ಕಾರಣಗಳೇನು?
    • ಭಾರತೀಯ ರಿಸರ್ವ್ ಬ್ಯಾಂಕನ್ನು ಬ್ಯಾಂಕುಗಳ ಬ್ಯಾಂಕು ಅಥವಾ ಬ್ಯಾಂಕುಗಳ ತಾಯಿ ಎಂದು ಕರೆಯುತ್ತಾರೆ.
    • ಭಾರತದಲ್ಲಿ ಬ್ಯಾಂಕುಗಳ ಎಲ್ಲಾ ಚಟುವಟಿಕೆಗಳು ರಿಸರ್ವ್ ಬ್ಯಾಂಕಿನ ಹತೋಟಿಯಲ್ಲಿರುತ್ತದೆ.
    • ರಿಸರ್ವ್ ಬ್ಯಾಂಕ್ ದೇಶದ ಕೇಂದ್ರ ಬ್ಯಾಂಕ್ ಆಗಿದೆ.
    • ಇದು ಹಣಕಾಸಿನ ಕಾರ್ಯ ನೀತಿಯನ್ನು ರೂಪಿಸುತ್ತದೆ.
    • ಕಾರ್ಯ ನೀತಿಯನ್ನು ಎಲ್ಲಾ ಬ್ಯಾಂಕುಗಳು ಪಾಲಿಸಬೇಕಾಗುತ್ತದೆ.
  10. ಬ್ಯಾಂಕಿನಲ್ಲಿ ಖಾತೆಗಳನ್ನು ಹೇಗೆ ಅಂತ್ಯೆ ಮಾಡಬಹುದು?
    • ಕಾರಣ ಸಹಿಸತ ವಿನಂತಿ ಮಾಡಬೇಕಾಗುತ್ತದೆ.
    • ಖಾತೆ ಅಂತ್ಯಗೊಳಿಸಲು ಪಾಸ್ ಪುಸ್ತಕ, ಉಳಿದಿರುವ ಚಿಕ್ಕು ಹಾಳೆಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮುಂತಾದವುಗಳನ್ನು ಹಿಂದಿರುಗಿಸಬೇಕಾಗುತ್ತದೆ.
  11. ಚಾಲ್ತಿ ಖಾತೆಯ ಗುಣಲಕ್ಷಣಗಳನ್ನು ತಿಳಿಸಿ.
    • ಚಾಲ್ತಿ ಖಾತೆಯನ್ನು ಸಾಮಾನ್ಯವಾಗಿ ಹೆಚ್ಚು ಬ್ಯಾಂಕ್ ವಹಿವಾಟು ನಡೆಸುವ ವ್ಯಾಪಾರಸ್ಥರು, ವಾಣಿಜ್ಯ ಮತ್ತು ಔದ್ಯೋಗಿಕ ಸಂಸ್ಥೆಯವರು ತೆರೆಯುತ್ತಾರೆ.
    • ಖಾತೆಯಲ್ಲಿ ಹಣವನ್ನು ದಿನಕ್ಕೆ ಎಷ್ಟು ಬಾರಿಯಾದರೂ ತುಂಬಬಹುದು ಮತ್ತು ಎಷ್ಟು ಬಾರಿಯಾದರೂ ಹಿಂಪಡೆಯಬಹುದು.
    • ಖಾತೆಯ ಸೇವನೆಗಳಿಗೆ ಬ್ಯಾಂಕುಗಳು ಬಡ್ಡಿಯನ್ನು ಕೊಡುವುದಿಲ್ಲ.
    • ಬ್ಯಾಂಕುಗಳು ತಾವು ಕೊಡುವ ಸೇವಗೆ ಸೇವಾ ಶುಲ್ಕ ವಸೂಲು ಮಾಡುತ್ತದೆ.
  12. ಬ್ಯಾಂಕಿನಲ್ಲಿ ಖಾತೆ ತೆರೆಯಲು ಅನುಸರಿಸಬಹುದಾದ ಕ್ರಮಗಳನ್ನು ತಿಳಿಸಿ.
    • ಯಾವ ವಿಧವಾದ ಬ್ಯಾಂಕ್ ಖಾತೆಯನ್ನು ತೆಗೆಯಬೇಕೆಂಬುದನ್ನು ನಿರ್ಧರಿಸುವುದು,
    • ನಿಮಗೆ ಅನುಕೂಲವಾದ ಬ್ಯಾಂಕಿನ ಅಧಿಕಾರಿಯನ್ನು ಸಂಪರ್ಕಿಸುವುದು,
    • ಪ್ರಸ್ತಾವನೆ ಅರ್ಜಿ ಖಾತೆ ತೆರೆಯುವ ಲೆಕ್ಕದ ನಮೂನೆಯನ್ನು ತುಂಬುವುದು,
    • ಪರಿಚಿತರ ಉಲ್ಲೇಖನವನ್ನು ಕೊಡುವುದು,
    • ಬ್ಯಾಂಕ್ ಖಾತೆಯನ್ನು ತೆಗೆಯುವ ನಮೂನೆಯನ್ನು ಬ್ಯಾಂಕಿಗೆ ಒಪ್ಪಿಸುವುದು,
    • ಬ್ಯಾಂಕ್ ಅಧಿಕಾರಿಯ ಒಪ್ಪಿಗೆ ಪಡೆಯುವುದು,
    • ಬ್ಯಾಂಕ್ ಅಧಿಕಾರಿಯ ಒಪ್ಪಿಗೆಯ ನಂತರ ಪ್ರಾರಂಭಿಕ ಠೇವಣಿಯನ್ನು ತುಂಬುವುದು.
  13. ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ ಮಧ್ಯವಿರುವ ವ್ಯತ್ಯಾಸಗಳನ್ನು ತಿಳಿಸಿ.

ಉಳಿತಾಯ ಖಾತೆ

ಚಾಲ್ತಿ ಖಾತೆ

ಸಾಮಾನ್ಯವಾಗಿ ವೇತನ ಪಡೆಯುವವರು/ನಿಯಮಿತ ಹೊಂದಿರುವ ಜನರು ಖಾತೆಯನ್ನು ತೆರೆಯುತ್ತಾರೆ.

ವ್ಯಾಪಾರಸ್ಥರು, ವಾಣಿಜ್ಯ ಮತ್ತು ಔದ್ಯೋಗಿಕ ಸಂಸ್ಥೆಗಳು ಖಾತೆಯನ್ನು ತೆರೆಯುತ್ತಾರೆ.

ಖಾತೆಯು ಜನರು ಉಳಿತಾಯ ಮಾಡಲು ಸಹಾಯ ಮಾಡುತ್ತದೆ.

ಮರು ಪಾವತಿ, ಬೇಡಿಕೆ ಠೇವಣಿಗಳು ಮತ್ತು ಉಪಸರ್ಗ ವ್ಯವಹಾರಗಳ ಮೂಲಕ ಹಣವನ್ನು ಹಿಂಪಡಿಯಲು ಸಾಧ್ಯವಿದೆ.

ಚಿಕ್ಕ ಪುಸ್ತಕ/ಹಣ ಹಿಂದಕ್ಕೆ ಪಡೆಯುವ ಚೀಟಿಯ ಮೂಲಕ ಹಣವನ್ನು ಹಿಂಪಡೆಯಲು ಸಾಧ್ಯವಿದೆ.

ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದು.

ಖಾತೆಯ ಠೇವಣಿಗಳಿಗೆ ಬಡ್ಡಿಯನ್ನು ನೀಡಲಾಗುತ್ತದೆ.

ಖಾತೆಯ ಠೇವಣಿಗಳಿಗೆ ಬಡ್ಡಿಯನ್ನು ನೀಡುವುದಿಲ್ಲ.

ಖಾತೆಗೆ ಯಾವುದೇ ಸೇವಾ ಶುಲ್ಕವನ್ನು ವಸೂಲು ಮಾಡುವುದಿಲ್ಲ.

ಖಾತೆಗೆ ಬ್ಯಾಂಕುಗಳು ಸೇವಾ ಶುಲ್ಕವನ್ನು ವಸೂಲು ಮಾಡುತ್ತವೆ.


ನಕ್ಷೆಯ ಪ್ರಶ್ನೆಗಳು (3+1=4)

ಮುಖ್ಯವಾದ ಸ್ಥಳಗಳು

A. ಅಕ್ಷಾಂಶ & ರೇಖಾಂಶ

  1. 82.5° ಪೂರ್ವ ರೇಖಾಂಶ / ಅಲಹಾಬಾದ್ ರೇಖೆ
  2. ಕರ್ನಾಟಕ ಸಂಕ್ರಾಂತಿ ವೃತ್ತ / 23.5° ಉತ್ತರ ಅಕ್ಷಾಂಶ

B. ನದಿಗಳು / ಸರೋವರ

  1. ಗಂಗಾ ನದಿ
  2. ನರ್ಮದಾ ನದಿ
  3. ಮಹಾನದಿ
  4. ಕಾವೇರಿ ನದಿ
  5. ಕೃಷ್ಣಾ ನದಿ
  6. ತುಂಗಭದ್ರಾ ನದಿ
  7. ಗೋದಾವರಿ ನದಿ
  8. ಚಿಲ್ಕಾ ಸರೋವರ
  9. ಕೋಸಿ ನದಿ / ಬಿಹಾರಿನ ಕಣ್ಣೀರಿನ ನದಿ
  10. ಪಾಕ್ ಜಲಸಂಧಿ
  11. ಕೊಂಕಣ ತೀರ
  12. ಮನ್ನಾರ್ ಕೊಲ್ಲಿ
  13. ಯಮುನಾ ನದಿ

C. ಯೋಜನೆಗಳು

  1. ಹಿರಾಕುಡ್ ಯೋಜನೆ
  2. ನಾಗಾರ್ಜುನ ಸಾಗರ / ನಾಗಾರ್ಜುನ ಸಾಗರ ಅಣೆಕಟ್ಟು / ನಾಗಾರ್ಜುನ ಸಾಗರ ಯೋಜನೆ
  3. ನರ್ಮದಾ ನದಿ ಕಣಿವೆ ಯೋಜನೆ
  4. ತುಂಗಭದ್ರಾ ನದಿ / ಪಂಪಾ ಸಾಗರ
  5. ಭಾಕ್ರಾ ನಂಗಲ್
  6. ದಾಮೋದರ್ ನದಿ ಕಣಿವೆ ಯೋಜನೆ

D. ಬಂದರುಗಳು/ ವಿಮಾನ ನಿಲ್ದಾಣಗಳು

  1. ಚೆನ್ನೈ
  2. ಮುಂಬೈ / ಸಹಾರಾ ವಿಮಾನ ನಿಲ್ದಾಣ (ಮುಂಬೈ)
  3. ಮಂಗಳೂರು / ಮಂಗಳೂರು ಬಂದರು
  4. ವಿಶಾಖಪಟ್ಟಣ
  5. ಸೂರತ್
  6. ದೆಹಲಿ / ಇಂದಿರಾ ಗಾಂಧಿ ವಿಮಾನ ನಿಲ್ದಾಣ (ದೆಹಲಿ)
  7. ತಿರುವನಂತಪುರ
  8. ಪಾರಾದೀಪ್
  9. ಅಮೃತಸರ್
  10. ಬೆಂಗಳೂರು
  11. ಕೊಲ್ಕತ್ತಾ / ಭಾರತದ ಚಾಹದ ಬಂದರು (ಕೊಲ್ಕತ್ತಾ)
  12. ಕಾಂಡ್ಲಾ
  13. ಗೋವಾ

E. ಬೆಟ್ಟಗಳು/ಪರ್ವತಗಳು/ ಮರಭೂಮಿ

  1. ಅರಾವಳಿ ಬೆಟ್ಟಗಳು
  2. ಸಹ್ಯಾದ್ರಿ ಶ್ರೇಣಿ
  3. ಪಶ್ಚಿಮ ಘಟ್ಟಗಳು
  4. ಥಾರ್ ಮರಭೂಮಿ
  5. ಎಂದ್ಯಾಕ್ಷೇಣಿ
  6. ಪಾಟಕೈ ಭೂಮಿ
  7. ನೀಲಗಿರಿ ಬೆಟ್ಟಗಳು
  8. ಚೋಟಾ ನಾಗಪುರ ಪ್ರಶ್ನೆ

F. ಇತರ

  1. ವಾಂದಿ ಹೈ
  2. ಉತ್ತರ ಭಾರತದ ಕಬ್ಬಿಣದ ನಿಕ್ಷೇಪಗಳು
  3. ದಿಗ್ಬೋಯಿ
  4. ಪ್ರಾಲ್
  5. ಡಾರ್ಜಿಲಿಂಗ್
  6. ನೇಪಾನಗರ್
  7. ಭದ್ರಾವತಿ
  8. ಅಗರ್ತಲಾ
  9. ಹಟ್ಟಿ ಚಿನ್ನದ ಗಣಿ

 🔗 ಡೌನ್ಲೋಡ್ ಮಾಡಲು:

👉 ಇಲ್ಲಿ ಕ್ಲಿಕ್ ಮಾಡಿ


(ದಯವಿಟ್ಟು Telegram ಚಾನೆಲ್ ಮೂಲಕ ಸಂಪರ್ಕದಲ್ಲಿರಿ).

(ದಯವಿಟ್ಟು WhatsApp ಚಾನೆಲ್ ಮೂಲಕ ಸಂಪರ್ಕದಲ್ಲಿರಿ).


 ಹೆಚ್ಚಿನ ನೋಟ್ಸ್ಗಳನ್ನು ದಿನವೂ ಡೌನ್ಲೋಡ್ ಮಾಡಲು ಭೇಟಿ ನೀಡಿ:
#KAS, PSI, FDA, SDA, PC ಇತ್ಯಾದಿ ಇತಿಹಾಸ ಪ್ರಶ್ನೋತ್ತರಗಳು (History Q&A)
#ಇತಿಹಾಸದ ಪ್ರಶ್ನೋತ್ತರ (History Questions)
#KAS history class in Kannada
#PSI history questions in Kannada
#ಇತಿಹಾಸ ಪ್ರಶ್ನೋತ್ತರಗಳು (History Q&A)

logoblog

No comments:

Post a Comment

kas

Contact Us

Name

Email *

Message *

Educational

gk