ಶನಿವಾರ, ಅಕ್ಟೋಬರ್ 17, 2026

ಕರ್ನಾಟಕ ಇತಿಹಾಸ GK ಪ್ರಶ್ನೆಗಳು - 100 Model Questions with Answers in Kannada | KPSC KAS FDA SDA

  KSPGK       ಶನಿವಾರ, ಅಕ್ಟೋಬರ್ 17, 2026
ಕರ್ನಾಟಕ ಇತಿಹಾಸ GK ಪ್ರಚಲಿತ ವಿದ್ಯಮಾನ 100 ಮಾದರಿ ಪ್ರಶ್ನೆಗಳು ಟೆಸ್ಟ್ 7

KPSC / KAS / FDA / SDA / KEA ಪರೀಕ್ಷೆಗಳಿಗೆ ಉಪಯುಕ್ತ. ಮೊದಲು ನೀವೇ ಉತ್ತರಿಸಿ ನೋಡಿ, ನಂತರ ಕೆಳಗೆ ಮರೆಮಾಡಿರುವ ಉತ್ತರ ವಿಭಾಗ ತೆರೆದು ಪರಿಶೀಲಿಸಿ. ಪೂರ್ಣ ಪ್ರಶ್ನೆ-ಉತ್ತರಗಳ PDF ಅನ್ನು ಪೋಸ್ಟ್ ಕೊನೆಯಲ್ಲಿ ವೀಕ್ಷಿಸಿ/ಡೌನ್‌ಲೋಡ್ ಮಾಡಬಹುದು.

ಮೊದಲು ನೀವೇ ಉತ್ತರಿಸಿ ನೋಡಿ, ನಂತರ ಕೆಳಗೆ ಮರೆಮಾಡಿರುವ ಉತ್ತರ ವಿಭಾಗ ತೆರೆದು ಪರಿಶೀಲಿಸಿ.

1. ಪ್ರಾಕೃತ ಭಾಷೆಯಲ್ಲಿ "ಗಾಥಾ ಸಪ್ತಶತಿ" (700 ಶ್ಲೋಕಗಳ ಸಂಗ್ರಹ) ರಚಿಸಿದ ಶಾತವಾಹನ ಅರಸ ಯಾರು?

(1) ಸಿಂಮುಕ (2) ಹಾಲ (3) ಗೌತಮಿಪುತ್ರ ಶಾತಕರ್ಣಿ (4) ಯಜ್ಞಶ್ರೀ ಶಾತಕರ್ಣಿ

2. "ಶಕ-ಯವನ-ಪಹ್ಲವ ನಿಸೂದನ" ಮತ್ತು "ತ್ರಿಸಮುದ್ರತೋಯ ಪೀತವಾಹನ" ಬಿರುದುಗಳನ್ನು ಪಡೆದ ಶಾತವಾಹನ ಅರಸ ಯಾರು?

(1) ಸಿಂಮುಕ (2) ಹಾಲ (3) ಗೌತಮಿಪುತ್ರ ಶಾತಕರ್ಣಿ (4) ವಸಿಷ್ಠೀಪುತ್ರ ಪುಲುಮಾಯಿ

3. ಗೌತಮಿಪುತ್ರ ಶಾತಕರ್ಣಿಯು ಸೋಲಿಸಿದ ನಹಪಾನನು ಯಾವ ವಂಶಕ್ಕೆ ಸೇರಿದವನು?

(1) ಕ್ಷಹರಾತ (ಶಕ) (2) ಕುಶಾಣ (3) ಪಲ್ಲವ (4) ಗುಪ್ತ

4. ಶಾತವಾಹನರ ಆಡಳಿತ ವ್ಯವಸ್ಥೆಯಲ್ಲಿ "ಮಹಾಸೇನಾಪತಿ" ಎಂಬ ಅಧಿಕಾರಿ ಯಾವ ಕೆಲಸ ಮಾಡುತ್ತಿದ್ದನು?

(1) ಕೋಶಾಗಾರ ನಿರ್ವಹಣೆ (2) ಸೈನ್ಯದ ಮೇಲ್ವಿಚಾರಣೆ/ದಂಡನಾಯಕತ್ವ (3) ನ್ಯಾಯ ವಿಚಾರಣೆ (4) ರಾಜನ ಆಜ್ಞೆಗಳ ಲಿಪಿಯೀಕರಣ

5. ಶಾತವಾಹನರ ಕಾಲಕ್ಕೆ ಸೇರಿದ ಪ್ರಸಿದ್ಧ ಸ್ತೂಪ/ಚೈತ್ಯ ಕೇಂದ್ರಗಳ ಸರಿಯಾದ ಗುಂಪು ಯಾವುದು?

(1) ಅಮರಾವತಿ, ನಾಗಾರ್ಜುನಕೊಂಡ, ಕಾರ್ಲೆ, ಸನ್ನತಿ (2) ಸಾರನಾಥ್, ಸಾಂಚಿ, ನಳಂದ (3) ತಕ್ಷಶಿಲಾ, ಮಥುರಾ (4) ಏಲೋರಾ, ಏಫಂಟಾ ಮಾತ್ರ

6. ಕಾರ್ಲೆಯ ಪ್ರಸಿದ್ಧ ಚೈತ್ಯಾಲಯವನ್ನು ನಿರ್ಮಿಸಿದ ಬನವಾಸಿಯ ಶ್ರೀಮಂತ ವರ್ತಕ ಯಾರು?

(1) ಭೂತಪಾಲ (2) ಅಶ್ವಘೋಷ (3) ನಾಗಸೇನ (4) ವಸುಬಂಧು

7. ಕದಂಬ ವಂಶದ ಸ್ಥಾಪಕ ಮತ್ತು ಅದರ ರಾಜಧಾನಿಯ ಸರಿಯಾದ ಜೊಡಿ ಯಾವುದು?

(1) ಕಾಕುತ್ಸ್ಥವರ್ಮ - ತಲಕಾಡು (2) ಮಯೂರವರ್ಮ - ಬನವಾಸಿ (3) ಮೃಗೇಶವರ್ಮ - ಬಾದಾಮಿ (4) ಶಾಂತಿವರ್ಮ - ವೈಜಯಂತಿ

8. ಕದಂಬರ ಲಾಂಛನ ಮತ್ತು ಧ್ವಜ ಯಾವುದು?

(1) ಆನೆ ಲಾಂಛನ, ಗರುಡ ಧ್ವಜ (2) ಸಿಂಹ ಲಾಂಛನ, ವಾನರ ಧ್ವಜ (3) ವರಾಹ ಲಾಂಛನ, ಸಿಂಹ ಧ್ವಜ (4) ಗರುಡ ಲಾಂಛನ, ಆನೆ ಧ್ವಜ

9. ಬನವಾಸಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು ಯಾವುವು?

ಎ. ಬನವಾಸಿಯ ಮೊದಲ ಹೆಸರು ವೈಜಯಂತಿಪುರ ಬಿ. ಗ್ರೀಕ್ ಭೂಗೋಳಶಾಸ್ತ್ರಜ್ಞ ಟಾಲೆಮಿ ಬನವಾಸಿಯನ್ನು ಉಲ್ಲೇಖಿಸಿದ್ದಾನೆ ಸಿ. ಬನವಾಸಿ ಕಾಳಿ ನದಿಯ ದಂಡೆಯಲ್ಲಿದೆ ಡಿ. ಬನವಾಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ

(1) ಎ ಮತ್ತು ಬಿ ಮಾತ್ರ ಸರಿ (2) ಎ ಮತ್ತು ಸಿ ಮಾತ್ರ ಸರಿ (3) ಬಿ ಮತ್ತು ಡಿ ಮಾತ್ರ ಸರಿ (4) ಎಲ್ಲವೂ ಸರಿ

10. ಚಿತ್ರದುರ್ಗದ ಬಳಿ ದೊರೆತ ಚಂದ್ರವಳ್ಳಿ ಶಾಸನವು ಯಾವ ರಾಜವಂಶದ ಅರಸನಿಗೆ ಸಂಬಂಧಿಸಿದೆ?

(1) ಗಂಗರ ದುರ್ವಿನೀತ (2) ಕದಂಬರ ಮಯೂರವರ್ಮ (3) ಶಾತವಾಹನರ ಹಾಲ (4) ಗುಪ್ತರ ಸಮುದ್ರಗುಪ್ತ

11. ಕನ್ನಡದಲ್ಲಿ ದೊರೆತ ಅತ್ಯಂತ ಹಳೆಯ ಸಂಪೂರ್ಣ ಶಾಸನವಾಗಿ ಪರಿಗಣಿತ ಹಲ್ಮಿಡಿ ಶಾಸನ ಯಾವ ಜಿಲ್ಲೆಯಲ್ಲಿದೆ?

(1) ಬೇಲೂರು ತಾಲೂಕು, ಹಾಸನ (2) ಶಿಕಾರಿಪುರ ತಾಲೂಕು, ಶಿವಮೊಗ್ಗ (3) ಸೊರಬ ತಾಲೂಕು, ಶಿವಮೊಗ್ಗ (4) ಬಾದಾಮಿ ತಾಲೂಕು, ಬಾಗಲಕೋಟೆ

12. ಹಲ್ಮಿಡಿ ಶಾಸನವು ಯಾವ ರಾಜವಂಶಕ್ಕೆ ಸೇರಿದೆ?

(1) ಗಂಗ (2) ಕದಂಬ (3) ಚಾಲುಕ್ಯ (4) ರಾಷ್ಟ್ರಕೂಟ

13. ತಾಳಗುಂದ ಸ್ತಂಭ ಶಾಸನದಲ್ಲಿ "ಕದಂಬಕುಲ ಭೂಷಣ" ಎಂದು ಕೊಂಡಾಡಲ್ಪಟ್ಟ ಅರಸ ಯಾರು?

(1) ಮಯೂರಶರ್ಮ (2) ಕಾಕುತ್ಸ್ಥವರ್ಮ (3) ಶಾಂತಿವರ್ಮ (4) ಮೃಗೇಶವರ್ಮ

14. ಪಶ್ಚಿಮ ಗಂಗರ ಮೊದಲ ರಾಜಧಾನಿ ಯಾವುದು?

(1) ತಲಕಾಡು (2) ಕೋಲಾರ (ಕುವಲಾಲ) (3) ಮನ್ನೆ (ಮಾನ್ಯಪುರ) (4) ಶ್ರವಣಬೆಳಗೊಳ

15. ಶ್ರವಣಬೆಳಗೊಳದ ಗೊಮ್ಮಟೇಶ್ವರ ಪ್ರತಿಮೆಯನ್ನು ಸ್ಥಾಪಿಸಿದ ಗಂಗ ಮಂತ್ರಿ ಯಾರು?

(1) ಚಾಮುಂಡರಾಯ (2) ಪೂಜ್ಯಪಾದ (3) ಜಿನಸೇನ (4) ನೇಮಿಚಂದ್ರ

16. ಚಾಮುಂಡರಾಯನು ಕನ್ನಡದಲ್ಲಿ ಬರೆದ ಗ್ರಂಥ ಯಾವುದು?

(1) ಆದಿಪುರಾಣ (2) ಚಾವುಂಡರಾಯ ಪುರಾಣ (3) ಶಾಂತಿಪುರಾಣ (4) ವರ್ಧಮಾನ ಪುರಾಣ

17. ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕಕ್ಕೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು ಯಾವುವು?

ಎ. ಪ್ರತಿ 12 ವರ್ಷಕ್ಕೊಮ್ಮೆ ನಡೆಯುತ್ತದೆ ಬಿ. 2018ರಲ್ಲಿ 88ನೇ ಮಹಾಮಸ್ತಕಾಭಿಷೇಕ ನಡೆಯಿತು ಸಿ. ಮುಂದಿನ 89ನೇ ಅಭಿಷೇಕ 2030ರಲ್ಲಿ ನಡೆಯಲಿದೆ

(1) ಎ ಮತ್ತು ಬಿ ಮಾತ್ರ (2) ಬಿ ಮತ್ತು ಸಿ ಮಾತ್ರ (3) ಎ ಮತ್ತು ಸಿ ಮಾತ್ರ (4) ಎಲ್ಲವೂ ಸರಿ

18. ನರ್ಮದಾ ನದಿ ದಂಡೆಯಲ್ಲಿ ಹರ್ಷವರ್ಧನನನ್ನು ಸೋಲಿಸಿ "ಪರಮೇಶ್ವರ" ಬಿರುದು ಪಡೆದ ಚಾಲುಕ್ಯ ಅರಸ ಯಾರು?

(1) ಪುಲಕೇಶಿ 1 (2) ಇಮ್ಮಡಿ ಪುಲಕೇಶಿ (3) ವಿಕ್ರಮಾದಿತ್ಯ 1 (4) ಮಂಗಳೇಶ

19. ಸಾ.ಶ. 634ರ ಐಹೊಳೆ ಪ್ರಶಸ್ತಿಯನ್ನು ರಚಿಸಿದವರು ಯಾರು?

(1) ರವಿಕೀರ್ತಿ (2) ಬಾಣಭಟ್ಟ (3) ಕಾಳಿದಾಸ (4) ದಂಡಿ

20. ರಾಷ್ಟ್ರಕೂಟರ ಸಾಮ್ರಾಜ್ಯದ ರಾಜಧಾನಿ (ಮಾನ್ಯಖೇತ) ಈಗಿನ ಯಾವ ಹೆಸರಿನಿಂದ ಪ್ರಸಿದ್ಧವಾಗಿದೆ?

(1) ಮಾನ್ಯಖೇಟ/ಮಾಳಖೇಡ (2) ಬಾದಾಮಿ (3) ಎಲ್ಲೋರ (4) ಪೈಠಣ

21. "ಅಶೋಕನ ಆಜ್ಞೆಯಂತೆ" ವರ್ಣಿತನಾದ ರಾಷ್ಟ್ರಕೂಟ ಸಾಮ್ರಾಜ್ಯದ ಮೊದಲ ಪ್ರಸಿದ್ಧ ಅರಸ ಯಾರು?

(1) ದಂತಿದುರ್ಗ (2) ಕೃಷ್ಣ 1 (3) ಗೋವಿಂದ 2 (4) ಇಂದ್ರ 1

22. ರಾಷ್ಟ್ರಕೂಟರ ಅರಸ ಒಂದನೇ ಅಮೋಘವರ್ಷನಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು ಯಾವುವು?

ಎ. ಜೈನ ಧರ್ಮಕ್ಕೆ ಪೋಷಕರಾಗಿ 'ಶಾಂತಿನಾಥ'ನ ಉಪಾಸಕ ಬಿ. "ಕವಿರಾಜಮಾರ್ಗ" ಕನ್ನಡದ ಮೊದಲ ಕಾವ್ಯಮೀಮಾಂಸಾ ಗ್ರಂಥಕ್ಕೆ ಸಂಬಂಧಿಸಿದ ಅರಸ ಸಿ. ಇವನು ಎಲ್ಲೋರದ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದ ಡಿ. "ಅತಿಶಯಧವಳ", "ನೃಪತುಂಗ", "ವೀರನಾರಾಯಣ" ಬಿರುದುಗಳು

(1) ಎ ಮತ್ತು ಬಿ ಮಾತ್ರ (2) ಬಿ ಮತ್ತು ಡಿ ಮಾತ್ರ (3) ಎ, ಬಿ ಮತ್ತು ಡಿ (4) ಎಲ್ಲವೂ ಸರಿ

23. "ಕವಿರಾಜಮಾರ್ಗ" ಎಂಬ ಕನ್ನಡದ ಮೊದಲ ಕಾವ್ಯಮೀಮಾಂಸಾ ಗ್ರಂಥ ಯಾವ ರಾಜನ ಕಾಲಕ್ಕೆ ಸೇರಿದೆ?

(1) ಒಂದನೇ ಅಮೋಘವರ್ಷ (2) ಕೃಷ್ಣ 3 (3) ಇಂದ್ರ 3 (4) ಗೋವಿಂದ 4

24. ಎಲ್ಲೋರದ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದ ರಾಷ್ಟ್ರಕೂಟ ಅರಸ ಯಾರು?

(1) ದಂತಿದುರ್ಗ (2) ಕೃಷ್ಣ 1 (3) ಅಮೋಘವರ್ಷ (4) ಗೋವಿಂದ 3

25. "ಅಭಿನವ ಪಂಪ ಮತ್ತು ಕವಿತಾ ಮನೋಹರ" ಎಂಬ ಬಿರುದುಗಳನ್ನು ಹೊಂದಿದ ಕವಿ ಯಾರು?

(1) ರನ್ನ (2) ಪೊನ್ನ (3) ಜನ್ನ (4) ನಾಗಚಂದ್ರ

26. ಹೊಯ್ಸಳ ಅರಸ ವಿಷ್ಣುವರ್ಧನನಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು ಯಾವುವು?

ಎ. ಮೂಲ ಹೆಸರು ಬಿಟ್ಟಿದೇವ/ಬಿಟ್ಟಿಗ ಬಿ. ರಾಮಾನುಜಾಚಾರ್ಯರ ಪ್ರಭಾವದಿಂದ ಶ್ರೀವೈಷ್ಣವರಾದ ಸಿ. ಚೆನ್ನಕೇಶವ (ಬೇಲೂರು) ಮತ್ತು ಕೀರ್ತಿನಾರಾಯಣ (ತಲಕಾಡು) ದೇವಾಲಯ ನಿರ್ಮಿಸಿದ ಡಿ. 1117ರ ತಲಕಾಡು ಯುದ್ಧದಲ್ಲಿ ಚೋಳರನ್ನು ಸೋಲಿಸಿದ

(1) ಎ ಮತ್ತು ಬಿ ಮಾತ್ರ (2) ಬಿ ಮತ್ತು ಸಿ ಮಾತ್ರ (3) ಎ, ಬಿ ಮತ್ತು ಸಿ (4) ಎಲ್ಲವೂ ಸರಿ

27. "ಕವಿರಾಜಮಲ್ಲ" ಎಂಬ ಬಿರುದು ಯಾರಿಗಿತ್ತು?

(1) ನೇಮಿಚಂದ್ರ (2) ರುದ್ರಭಟ್ಟ (3) ರಾಜಾದಿತ್ಯ (4) ಜನ್ನ

28. ಕೆಳಗಿನವರಲ್ಲಿ ಹೊಯ್ಸಳ ಕಾಲದ ಕನ್ನಡ ಕವಿಗಳ ಸರಿಯಾದ ಗುಂಪು ಯಾವುದು?

(1) ರುದ್ರಭಟ್ಟ, ಜನ್ನ, ಹರಿಹರ (2) ಪಂಪ, ಪೊನ್ನ, ರನ್ನ (3) ಕುಮಾರವ್ಯಾಸ, ಲಕ್ಷ್ಮೀಶ (4) ರತ್ನಾಕರವರ್ಣಿ, ಮುದ್ದಣ, ಬಸವಪ್ಪ ಶಾಸ್ತ್ರಿ

29. ಹೊಯ್ಸಳರ ಪವಿತ್ರ ದೇವಾಲಯಗಳು (Sacred Ensembles of the Hoysalas) ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಯಾದ ವರ್ಷ ಯಾವುದು?

(1) 2021 (2) 2022 (3) 2023 (4) 2024

30. ಹೊಯ್ಸಳ ದೇವಾಲಯಗಳ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣ ಯಾವುದು?

(1) ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಿತ ದೇವಾಲಯಗಳು (2) ಚೂಪಾದ ದೊಡ್ಡ ಗೋಪುರಗಳು (3) ಒಂಥಿ ಕಲ್ಲಿನ ಸಿಖರಗಳು (4) ಕೇವಲ ಡ್ರಾವಿಡ ಶಿಖರಗಳು

31. ಹೊಯ್ಸಳ ಕಾಲದ ಹೆಸರಾಂತ ಶಿಲ್ಪಿ ಯಾರು?

(1) ಜಕ್ಕಣಾಚಾರಿ (ಡಂಕನಾಚಾರಿ) (2) ವಿಶ್ವಕರ್ಮ (3) ಮಯ (4) ದನ್ವಂತರಿ

32. ಶ್ರೀಕೃಷ್ಣದೇವರಾಯನ ಸಮಕಾಲೀನ ಮೊಘಲ್ ದೊರೆ ಯಾರು?

(1) ಬಾಬರ್ (2) ಹುಮಾಯೂನ್ (3) ಅಕ್ಬರ್ (4) ಜಹಾಂಗೀರ್

33. ಪೋರ್ಚುಗೀಸರ ವ್ಯಾಪಾರಿ ಅಲ್ಬುಕರ್ಕ್? ವಿಜಯನಗರಕ್ಕೆ ಬಂದು ಭೇಟಿಯಾದ ಸಮಯದಲ್ಲಿ ಆಳುತ್ತಿದ್ದ ರಾಜ ಯಾರು?

(1) ವೀರ ನರಸಿಂಹ (2) ಕೃಷ್ಣದೇವರಾಯ (3) ಅಚ್ಯುತರಾಯ (4) ಸದಾಶಿವರಾಯ

34. ಅಷ್ಟದಿಗ್ಗಜರಲ್ಲಿ ಸೇರಿದ್ದ ಆಂಧ್ರ ಕವಿತಾ ಶಿಖಾಮಣಿ, ಕವೀಂದ್ರ ಎಂಬ ಬಿರುದುಗಳನ್ನು ಹೊಂದಿದವರು ಯಾರು?

(1) ಅಲ್ಲಸಾನಿ ಪೆದ್ದನ (2) ನಂದಿ ತಿಮ್ಮಣ (3) ಪಿಂಗಲಿ ಸೂರಣ್ಣ (4) ರಾಮರಾಜಭೂಷಣ

35. "ಹಾಸ್ಯ ಚತುರ್ವೇದಿ" ಎಂಬ ಬಿರುದನ್ನು ಹೊಂದಿದವರು ಯಾರು?

(1) ಅಲ್ಲಸಾನಿ ಪೆದ್ದನ (2) ನಂದಿ ತಿಮ್ಮಣ (3) ಪಿಂಗಲಿ ಸೂರಣ್ಣ (4) ತೆನಾಲಿ ರಾಮಕೃಷ್ಣ

36. ವಿಜಯನಗರ ಸಾಮ್ರಾಜ್ಯದ ಕಾಲದ ಪ್ರಸಿದ್ಧ ವಾದ್ಯ ಯಾವುದು?

(1) ಸಿತಾರ್ (2) ಗಿಟಾರ್ (3) ತಬಲಾ (4) ವೀಣೆ

37. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಇಂದಿನ ಯಾವ ಜಿಲ್ಲೆಯಲ್ಲಿದೆ?

(1) ವಿಜಯನಗರ ಜಿಲ್ಲೆಯ ಹಂಪಿ (2) ತಮಿಳುನಾಡಿನ ತಿರುಪತಿ (3) ಆಂಧ್ರಪ್ರದೇಶದ ತిరುಪತಿ (4) ಚಂದ್ರಗಿರಿ

38. "ಬಂಧಂ ಲಕ್ಷ್ಮೀ ನಾರಾಯಣ" ಎಂಬ ಪ್ರಸಿದ್ಧ ಸ್ತುತ್ಯ ಗುರು ಯಾರ ಆಶ್ರಯದಲ್ಲಿದ್ದನು?

(1) ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದನು (2) ಪ್ರೌಢದೇವರಾಯನ ಆಸ್ಥಾನದಲ್ಲಿದ್ದನು (3) ಅಚ್ಯುತರಾಯನ ಆಸ್ಥಾನದಲ್ಲಿದ್ದನು (4) ಸದಾಶಿವರಾಯನ ಆಸ್ಥಾನದಲ್ಲಿದ್ದನು

39. ಈ ಕೆಳಗಿನವುಗಳಲ್ಲಿ ಯಾರು ವಿಜಯನಗರ ಸಾಮ್ರಾಜ್ಯಕ್ಕೆ ಪ್ರಯಾಣಿಸಲಿಲ್ಲ?

(1) ಫರ್ನಾವ್ ನ್ಯೂನಿಝ್ (2) ಅಬ್ದುಲ್ ರಝಾಕ್ (3) ನಿಕೊಲೊ ಕೊಂಟಿ (4) ವಿಲಿಯಮ್ ಹಾಕಿನ್ಸ್

40. ಫರ್ನಾವ್ ನ್ಯೂನಿಝ್ ಎಂಬ ಪೋರ್ಚುಗೀಸ್ ಪ್ರವಾಸಿ ಈತನ ಆಳ್ವಿಕೆಯಲ್ಲಿ ವಿಜಯನಗರಕ್ಕೆ ಭೇಟಿ ನೀಡಿದನು?

(1) 1ನೇ ಬುಕ್ಕರಾಯ (2) ಅಚ್ಯುತರಾಯ (3) ಕೃಷ್ಣದೇವರಾಯ (4) 1ನೇ ಹರಿಹರ

41. "ಭರತೇಶ ವೈಭವ"ದ ಕರ್ತೃ ಯಾರು?

(1) ರತ್ನಾಕರ ವರ್ಣಿ (2) ಪಂಪ (3) ರನ್ನ (4) ರಾಘವಾಂಕ

42. ವಿಜಯ ನಗರದ ಸಾಮ್ರಾಜ್ಯಕ್ಕೆ ರೇಷ್ಮೆ ಎಲ್ಲಿಂದ ಆಮದಾಗುತ್ತಿತ್ತು?

(1) ಚೀನಾ (2) ಟರ್ಕಿ (3) ಅರೇಬಿಯಾ (4) ಜಪಾನ್

43. "ಸರ್ವದರ್ಶನ ಸಂಗ್ರಹ" ಕೃತಿಯ ಕರ್ತೃ ಯಾರು?

(1) ಸಾಯಣಾಚಾರ್ಯರು (2) ಕುಮಾರವ್ಯಾಸರು (3) ರತ್ನಾಕರ ವರ್ಣಿ (4) ವಿದ್ಯಾರಣ್ಯರು

44. ಕೃಷ್ಣದೇವರಾಯ ವಿಜಯನಗರದ ಯಾವ ರಾಜವಂಶಕ್ಕೆ ಸೇರಿದವರು?

(1) ಸಂಗಮ (2) ಸಾಳುವ (3) ತುಳುವ (4) ಅರವೀಡು

45. ಮಹಮದ್ ಗವಾನ್ರವರಿಗೆ ಸಂಬಂಧಿಸಿದ ಯಾವ ಹೇಳಿಕೆ/ಗಳು ಸರಿಯಾಗಿವೆ?

ಎ. ಮಹಮುದ್ ಗವಾನ್ ಮೊದಲ ಮಹಮುದ್ ಷಾ ಮುಹಮ್ಮದಿಯಾಗಿ ಸೇಮು? ಬಿ. ಮಹಮುದ್ ಗವಾನ್ ಒಬ್ಬ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಮತ್ತು ಸರ್ವಾಧಿಕಾರಿಯಾಗಿದ್ದನು ಸಿ. ಮಹಮುದ್ ಗವಾನ್‌ನನ್ನು ರಿಯಾಝ್-ಉಲ್-ಇನ್-ಷಾ ಮತ್ತು ಮಂಜರ್-ಉಲ್-ಇನ್-ಷಾ ಎಂಬ ಕೃತಿಗಳನ್ನು ರಚಿಸಿದನು ಡಿ. ಮಹಮುದ್ ಗವಾನ್‌ನನ್ನು ಕಲಬುರಗಿಯಲ್ಲಿ ಮದರಸ ಕಾಲೇಜನ್ನು ನಿರ್ಮಿಸಿದನು

(1) ಹೇಳಿಕೆ 'ಎ' ಮತ್ತು 'ಸಿ' ಸರಿಯಾಗಿವೆ (2) ಹೇಳಿಕೆ 'ಎ' ಮತ್ತು 'ಬಿ' ಸರಿಯಾಗಿವೆ (3) ಹೇಳಿಕೆ 'ಬಿ' ಮತ್ತು 'ಸಿ' ಸರಿಯಾಗಿವೆ (4) ಹೇಳಿಕೆ 'ಸಿ' ಮತ್ತು 'ಡಿ' ಸರಿಯಾಗಿವೆ

46. ಬಹಮನಿ ಸುಲ್ತಾನರ ಕಾಲದ ವಾಸ್ತುಶಿಲ್ಪದ ಪ್ರಮುಖ ಲಕ್ಷಣಗಳು ಯಾವುವು?

(1) ಎತ್ತರವಾದ ಮಿನಾರಗಳು (2) ಬಲಿಷ್ಠ ಕಮಾನುಗಳು (3) ಬೃಹದಾಕಾರದ ಗುಮ್ಮಟಗಳು (4) ಮೇಲಿನ ಎಲ್ಲವೂ

47. "ಫೆರಿಸ್ತಾ" ಎಂಬ ಪ್ರಸಿದ್ಧ ಇತಿಹಾಸಕಾರನು ಯಾರ ಆಸ್ಥಾನದಲ್ಲಿದ್ದನು?

(1) ಯೋಸುಫ್ ಆದಿಲ್ ಷಾ (2) ಇಸ್ಮಾಯಿಲ್ ಆದಿಲ್ ಷಾ (3) ಒಂದನೇ ಇಬ್ರಾಹಿಂ ಆದಿಲ್ ಷಾ (4) ಎರಡನೇ ಇಬ್ರಾಹಿಂ ಆದಿಲ್ ಷಾ

48. ವಿಶ್ವಪ್ರಸಿದ್ಧ "ಗೋಲ್ ಗುಮ್ಬಟ್" ಯಾರ ಸಮಾಧಿ?

(1) ಯೋಸುಫ್ ಆದಿಲ್ ಷಾ (2) ಇಸ್ಮಾಯಿಲ್ ಆದಿಲ್ ಷಾ (3) ಮಹಮದ್ ಆದಿಲ್ ಷಾ (4) ಇಬ್ರಾಹಿಂ ಆದಿಲ್ ಷಾ 2

49. "ಇಬ್ರಾಹಿಂ ರೌಜಾ" ಎಂಬ ಸಮಾಧಿ ಸ್ಮಾರಕ ಎಲ್ಲಿದೆ?

(1) ಗುಲ್ಬರ್ಗ (2) ಬೀದರ್ (3) ವಿಜಯಪುರ (4) ಹಂಪಿ

50. ಪ್ರಸಿದ್ಧ "ನವರಸಪುರ ಉತ್ಸವ" ಯಾವ ಜಿಲ್ಲೆಯಲ್ಲಿ ನಡೆಯುತ್ತದೆ?

(1) ಬೀದರ್ (2) ವಿಜಯಪುರ (3) ಬೆಂಗಳೂರು (4) ಮೈಸೂರು

51. ಬೆಂಗಳೂರು ನಗರದ ಸ್ಥಾಪಕ ಕೆಂಪೇಗೌಡರು ಯಾವ ಪ್ರದೇಶದ ಪಾಳೇಗಾರರಾಗಿದ್ದರು?

(1) ಯಲಹಂಕ (2) ಮಧುಗಿರಿ (3) ರಾಮನಗರ (4) ಚಿಕ್ಕನಾಯಕನಹಳ್ಳಿ

52. ಮೊಘಲರನ್ನು ಸೋಲಿಸಿ ಛತ್ರಪತಿ ರಾಜಾರಾಮನಿಗೆ ಆಶ್ರಯ ಕೊಟ್ಟ ಕೆಳದಿ ಸಂಸ್ಥಾನದ ಪ್ರಸಿದ್ಧ ರಾಣಿ ಯಾರು?

(1) ಕೆಳದಿ ಚೆನ್ನಮ್ಮ (2) ಅಬ್ಬಕ್ಕ (3) ವೀರಮ್ಮಾಜಿ (4) ಝಾನ್ಸಿ ಲಕ್ಷ್ಮೀಬಾಯಿ

53. ಕರಾವಳಿಯ ಪೋರ್ಚುಗೀಸರ ಕೋಟೆಗಳನ್ನು ಮುತ್ತಿ ಹಿಡಿದು "ಪಡುಗಡಲ ಓಡೆಯ" ಎಂದು ಪ್ರಸಿದ್ಧನಾದ ಕೆಳದಿ ಅರಸ ಯಾರು?

(1) ವೆಂಕಟಪ್ಪ ನಾಯಕ (2) ಶಿವಪ್ಪ ನಾಯಕ (3) ಹಿರಿಯ ವೆಂಕಟಪ್ಪ (4) ಭದ್ರಪ್ಪ ನಾಯಕ

54. ಕೆಳದಿಯ ಶಿವಪ್ಪ ನಾಯಕನಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು ಯಾವುವು?

ಎ. ಬೇಕಲ್, ಚಂದ್ರಗಿರಿ ಮತ್ತು ಮಂಗಳೂರಿನ ಕೋಟೆಗಳನ್ನು ಕಟ್ಟಿಸಿದನು ಬಿ. "ಸಿಸ್ತು" ಎಂಬ ಪ್ರಸಿದ್ಧ ಭೂ ಕಂದಾಯ ನೀತಿ ಜಾರಿಗೆ ತಂದನು ಸಿ. ಕರಾವಳಿಯ ಪೋರ್ಚುಗೀಸರನ್ನು ಸೋಲಿಸಿದನು

(1) ಎ ಮತ್ತು ಬಿ ಮಾತ್ರ (2) ಬಿ ಮತ್ತು ಸಿ ಮಾತ್ರ (3) ಎ ಮತ್ತು ಸಿ ಮಾತ್ರ (4) ಎಲ್ಲವೂ ಸರಿ

55. ಶಿವಪ್ಪ ನಾಯಕನ ಸಿಸ್ತು ನೀತಿಯ ಪ್ರಕಾರ ಭೂಮಿಯ ವಿಭಾಗಗಳ ಸರಿಯಾದ ಜೊಡೆಗಳು ಯಾವುವು?

ಎ. ಉತ್ತಮ - ಫಲವತ್ತಾದ ಕದಲೆ ಮಟ್ಟಿನ ಭೂಮಿ ಬಿ. ಮಧ್ಯಮ - ಕೆಂಪು ಮಿಶ್ರಿತ ಭೂಮಿ ಸಿ. ಕನಿಷ್ಠ - ಮರಳು ಮಿಶ್ರಿತ ಭೂಮಿ ಡಿ. ಅಧಮ - ಬಂಜರು ಭೂಮಿ

(1) ಕೇವಲ ಒಂದು (2) ಕೇವಲ ಎರಡು (3) ಕೇವಲ ಮೂರು (4) ಮೇಲಿನ ಎಲ್ಲವೂ

56. ಚಿತ್ರದುರ್ಗದ ಐದನೇ ಮಡಕರಿ ನಾಯಕನಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು ಯಾವುವು?

ಎ. ಚಿತ್ರದುರ್ಗದ ಅತ್ಯಂತ ಪ್ರಸಿದ್ಧ ನಾಯಕ ದೊರೆ ಬಿ. ಕೋಟೆಯ ಕಳ್ಳಿ ಕಂಡಿಯ ಮೂಲಕ ನುಗ್ಗಿದ ಹೈದರಾಲಿಯ ಸೈನಿಕರನ್ನು ಕಾವಲುಗಾರನ ಹೆಂಡತಿ ಒಬವ್ವ ಬಸಕೆಯಿಂದ ಹೊಡೆದು ಕೊಂದಳು; ಆ ಸ್ಥಳವನ್ನು ಇಂದಿಗೂ "ಒಬವ್ವನ ಕೆಂಡಿ" ಎಂದು ಕರೆಯುತ್ತಾರೆ

(1) ಎ ಮಾತ್ರ ಸರಿ (2) ಬಿ ಮಾತ್ರ ಸರಿ (3) ಎ ಮತ್ತು ಬಿ ಎರಡೂ ಸರಿ (4) ಎರಡೂ ತಪ್ಪು

57. ಮೈಸೂರು ಒಡೆಯರಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು ಯಾವುವು?

ಎ. ಸಾ.ಶ. 1399ರಲ್ಲಿ ಯದುರಾಯ ಮತ್ತು ಕೃಷ್ಣರಾಯರು ಒಡೆಯರ ವಂಶ ಸ್ಥಾಪಿಸಿದರು ಬಿ. ಇವರ ಆರಾಧ್ಯ ದೇವತೆ ಚಾಮುಂಡೇಶ್ವರಿ ಸಿ. ಇವರ ಪ್ರಮುಖ ರಾಜಧಾನಿಗಳು ಶ್ರೀರಂಗಪಟ್ಟಣ ಮತ್ತು ಮೈಸೂರು

(1) ಎ ಮತ್ತು ಬಿ ಮಾತ್ರ (2) ಬಿ ಮತ್ತು ಸಿ ಮಾತ್ರ (3) ಎ ಮತ್ತು ಸಿ ಮಾತ್ರ (4) ಎಲ್ಲವೂ ಸರಿ

58. ಸಾ.ಶ. 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಮೈಸೂರು ದಸರಾ ಉತ್ಸವವನ್ನು ಆರಂಭಿಸಿದವರು ಯಾರು?

(1) ರಾಜ ಒಡೆಯರು (2) ಕಂಠೀರವ ನರಸರಾಜ ಒಡೆಯರು (3) ಚಿಕ್ಕ ದೇವರಾಜ ಒಡೆಯರು (4) ನಾಲ್ವಡಿ ಕೃಷ್ಣರಾಜ ಒಡೆಯರು

59. "ನವಕೋಟಿ ನಾರಾಯಣ" ಎಂಬ ಬಿರುದು ಪಡೆದ ಮೈಸೂರು ಅರಸ ಯಾರು?

(1) ರಾಜ ಒಡೆಯರು (2) ದೊಡ್ಡ ದೇವರಾಜ ಒಡೆಯರು (3) ಚಿಕ್ಕ ದೇವರಾಜ ಒಡೆಯರು (4) ಕೃಷ್ಣರಾಜ ಒಡೆಯರು 2

60. ಚಿಕ್ಕ ದೇವರಾಜ ಒಡೆಯರಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು ಯಾವುವು?

ಎ. 1687ರಲ್ಲಿ ಮೊಘಲರಿಂದ ಬೆಂಗಳೂರನ್ನು ಮೂರು ಲಕ್ಷ ವರಹಗಳಿಗೆ ಕೊಂಡುಕೊಂಡರು ಬಿ. ಆಡಳಿತ ಸುಗಮಕ್ಕಾಗಿ "ಅಟ್ಟರ ಕಛೇರಿ" ಸ್ಥಾಪಿಸಿದರು ಸಿ. ದೊಡ್ಡ ದೇವರಾಜ ನಾಲೆ ಮತ್ತು ಚಿಕ್ಕದೇವರಾಜ ನಾಲೆ ನಿರ್ಮಿಸಿದರು ಡಿ. ತಿರುಮಲಾರ್ಯ, ಸಂಚಿ ಹೊನ್ನಮ್ಮ, ಶೃಂಗಾರಮ್ಮ ಮುಂತಾದ ಪ್ರಸಿದ್ಧ ಕವಿಗಳು ಇವರ ಆಸ್ಥಾನದಲ್ಲಿದ್ದರು

(1) ಎ ಮತ್ತು ಬಿ ಮಾತ್ರ (2) ಎ, ಬಿ ಮತ್ತು ಸಿ (3) ಬಿ, ಸಿ ಮತ್ತು ಡಿ (4) ಎಲ್ಲವೂ ಸರಿ

61. "ಹದಿಬದೆಯ ಧರ್ಮ" ಎಂಬ ಕೃತಿಯನ್ನು ರಚಿಸಿದವರು ಯಾರು?

(1) ಚಿಕ್ಕದೇವರಾಜ ಒಡೆಯರು (2) ಸಂಚಿ ಹೊನ್ನಮ್ಮ (3) ತಿರುಮಲಾರ್ಯ (4) ಶೃಂಗಾರಮ್ಮ

62. ಕನ್ನಡದ ಮೊದಲ ನಾಟಕ "ಮಿಥ್ರಾವಿಂದ ಗೋವಿಂದ" ಬರೆದವರು ಯಾರು?

(1) ಸಂಚಿಯಹೊನ್ನಮ್ಮ (2) ಸಿಂಗರಾರ್ಯ (3) ತಿರುಮಲಾರ್ಯ (4) ಶೃಂಗಾರಮ್ಮ

63. ಮೂರನೇ ಅಂಗ್ಲೋ-ಮೈಸೂರು ಯುದ್ಧಕ್ಕೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು ಯಾವುವು?

ಎ. ಬ್ರಿಟಿಷರು, ಮರಾಠರು ಮತ್ತು ನಿಜಾಮರು ಟಿಪ್ಪು ವಿರುದ್ಧ ಮೈತ್ರಿ ಮಾಡಿಕೊಂಡಿದ್ದರು ಬಿ. 1792ರ ಶ್ರೀರಂಗಪಟ್ಟಣ ಒಪ್ಪಂದದೊಂದಿಗೆ ಕೊನೆಗೊಂಡಿತು ಸಿ. ಒಪ್ಪಂದದ ಪ್ರಕಾರ ಟಿಪ್ಪು 330 ಲಕ್ಷ ರೂಪಾಯಿ ಯುದ್ಧ ನಷ್ಟಪರಿಹಾರ ಕೊಡಬೇಕಾಯಿತು

(1) ಎ ಮತ್ತು ಬಿ ಮಾತ್ರ (2) ಬಿ ಮತ್ತು ಸಿ ಮಾತ್ರ (3) ಎ ಮತ್ತು ಸಿ ಮಾತ್ರ (4) ಎಲ್ಲವೂ ಸರಿ

64. ಕಬ್ಬನ್ ಪಾರ್ಕ್‌ಗೆ ಹೆಸರು ನೀಡಲಾಗಿರುವ, ಮೈಸೂರಿನ ದೀರ್ಘಕಾಲ ಕಮಿಷನರ್ ಆಗಿದ್ದವರು ಯಾರು?

(1) ಕರ್ನಲ್ ಬಿಗ್ಸ್ (2) ಮಾರ್ಕ್ ಕಬ್ಬನ್ (3) ಲೆವಿಸ್ ಬೆಂಥಾಮ್ ಬೌರಿಂಗ್ (4) ಜೆ.ಡಿ. ಗೋರ್ಡನ್

65. "ಅಭಿನವ ಕಾಳಿದಾಸ" ಎಂದು ಪ್ರಸಿದ್ಧರಾದವರು ಯಾರು?

(1) ಬಸವಪ್ಪ ಶಾಸ್ತ್ರಿ (2) ಸರ್.ಎಂ. ವಿಶ್ವೇಶ್ವರಯ್ಯ (3) ಮುದ್ದಣ (4) ನಾಗಚಂದ್ರ

66. "ಮುದ್ದಣಮಂಜುಷ" ಎಂಬ ಕೃತಿಯ ಕರ್ತೃ ಯಾರು?

(1) ಕೆಂಪು ನಾರಾಯಣ (2) ಬಸವ ಶಾಸ್ತ್ರಿ (3) ಕೃಷ್ಣರಾಜ ಒಡೆಯರು (4) ನಾಗಚಂದ್ರ

67. ವೀಣೆ ಶೇಷಣ್ಣ, ಮೈಸೂರು ವಾಸುದೇವಾಚಾರ್ ಮುಂತಾದ ಸಂಗೀತಗಾರರು ಯಾರ ಆಸ್ಥಾನದಲ್ಲಿ ಪ್ರಸಿದ್ಧರಾದರು?

(1) ಮುದ್ದು ಕೃಷ್ಣರಾಜ ಒಡೆಯರು (2) ನಾಲ್ವಡಿ ಕೃಷ್ಣರಾಜ ಒಡೆಯರು (3) ಜಯಚಾಮರಾಜ ಒಡೆಯರು (4) ಚಿಕ್ಕ ದೇವರಾಜ ಒಡೆಯರು

68. ಹಸ್ತಾಂತರ (ರೆಂಡಿಷನ್) ಮೂಲಕ ಹತ್ತನೇ ಚಾಮರಾಜ ಒಡೆಯರಿಗೆ ಮೈಸೂರು ಆಡಳಿತ ಹಿಂತಿರುಗಿದ ದಿನಾಂಕ ಯಾವುದು?

(1) 1881 ಜನವರಿ 24 (2) 1881 ಮಾರ್ಚ್ 25 (3) 1881 ಏಪ್ರಿಲ್ 28 (4) 1881 ಮಾರ್ಚ್ 26

69. ದಿವಾನ್ ಕೆ. ಶೇಷಾದ್ರಿ ಅಯ್ಯರ್ ಅವರಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು ಯಾವುವು?

ಎ. ವೇದವತಿ ನದಿಯ ಮೇಲೆ ವಾಣಿ ವಿಲಾಸ ಸಾಗರ (ಮಾರಿ ಕಣಿವೆ) ಜಲಾಶಯ ಕಟ್ಟಿಸಿದರು ಬಿ. ಸ್ವಾಮಿ ವಿವೇಕಾನಂದರ 1893ರ ಚಿಕಾಗೋ ಧರ್ಮ ಸಮ್ಮೇಳನ ಪ್ರಯಾಣಕ್ಕೆ ಮೈಸೂರು ಸಂಸ್ಥಾನದ ನೆರವು ಇವರ ಕಾಲದಲ್ಲೇ ದೊರೆಯಿತು

(1) ಎ ಮಾತ್ರ ಸರಿ (2) ಬಿ ಮಾತ್ರ ಸರಿ (3) ಎರಡೂ ಸರಿ (4) ಎರಡೂ ತಪ್ಪು

70. ಮಹಾತ್ಮ ಗಾಂಧೀಜಿ "ರಾಜರ್ಷಿ" ಎಂದು ವರ್ಣಿಸಿದ ಮೈಸೂರು ಅರಸರು ಯಾರು?

(1) ಚಕ್ರವರ್ತಿ ಚಾಮರಾಜ ಒಡೆಯರು (2) ನಾಲ್ವಡಿ ಕೃಷ್ಣರಾಜ ಒಡೆಯರು (3) ಜಯಚಾಮರಾಜ ಒಡೆಯರು (4) ಕಂಠೀರವ ನರಸರಾಜ ಒಡೆಯರು

71. ಗಾಂಧಿಜಿ ಅಧ್ಯಕ್ಷತೆ ವಹಿಸಿದ ಏಕೈಕ ಕಾಂಗ್ರೆಸ್ ಅಧಿವೇಶನ ಯಾವುದು?

(1) 1924 ಬೆಳಗಾವಿ (2) 1916 ಲಖನೋ (3) 1927 ಮದ್ರಾಸ್ (4) 1919 ಅಮೃತಸರ್

72. ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು ಯಾವುವು?

ಎ. ಭಾರತೀಯ ವಿಜ್ಞಾನ ಸಂಸ್ಥೆಗೆ (IISc) ಬೆಂಗಳೂರಿನಲ್ಲಿ 371 ಎಕರೆ ಭೂಮಿ ಮತ್ತು ಧನ ಸಹಾಯ ನೀಡಿದರು ಬಿ. ಕೊಲಾರದ ಚಿನ್ನದ ಗಣಿಗಳಿಗೆ ನೀರು ಮತ್ತು ವಿದ್ಯುಚ್ಛಕ್ತಿ ಪೂರೈಕೆಯಾಗಿದೆ

(1) ಎ ಮಾತ್ರ (2) ಬಿ ಮಾತ್ರ (3) ಎರಡೂ ಸರಿ (4) ಎರಡೂ ತಪ್ಪು

73. ಮೈಸೂರು ಬ್ಯಾಂಕ್ (ಈಗಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು) ಸ್ಥಾಪನೆಗೆ (1913) ಪ್ರೋತ್ಸಾಹ ನೀಡಿದ ದಿವಾನರು ಯಾರು?

(1) ಸರ್.ಎಂ. ವಿಶ್ವೇಶ್ವರಯ್ಯ (2) ಕಾಂತರಾಜೇ ಅರಸ್ (3) ಆಲ್ಬಿಯನ್ ಬ್ಯಾನರ್ಜಿ (4) ಟಿ. ಆನಂದ ರಾವ್

74. ಮಿಲ್ಲರ್ ವರದಿ (1918) ಯಾವುದಕ್ಕೆ ಸಂಬಂಧಿಸಿದೆ?

(1) ಮಹಿಳಾ ಮೀಸಲಾತಿ (2) ಹಿಂದುಳಿದ ವರ್ಗಗಳ ಮೀಸಲಾತಿ (3) ಅಲ್ಪಸಂಖ್ಯಾತರ ಮೀಸಲಾತಿ (4) ಪರಿಶಿಷ್ಟ ವರ್ಗಗಳ ಮೀಸಲಾತಿ

75. ಕ್ರಿ.ಶ. 1858ರಲ್ಲಿ ಸೂರಪುರದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರು ಯಾರು?

(1) ರಾಜಾ ವೇಂಕಟಪ್ಪ ನಾಯಕ (2) ಕಲ್ಯಾಣಿ ಸ್ವಾಮಿ (3) ಗೋಂದರಾವ್ (4) ಭೀಮರಾವ್

76. 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ವಿಶೇಷತೆ ಯಾವುದು?

(1) ಗಾಂಧಿಜಿ ಅಧ್ಯಕ್ಷರಾಗಿ ಆಯ್ಕೆಯಾದ ಏಕೈಕ ಅಧಿವೇಶನ (2) ಮೊದಲ ಬಾರಿಗೆ ಸ್ವರಾಜ್ಯ ನಿರ್ಣಯ (3) ಉಪ್ಪಿನ ಸತ್ಯಾಗ್ರಹ ನಿರ್ಣಯ (4) ಕರ್ನಾಟಕದ ಮೊದಲ ಅಧಿವೇಶನ

77. 1947ರ "ಮೈಸೂರು ಚಲೋ" ಚಳವಳಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು ಯಾವುವು?

ಎ. ಆರಮನೆ ಸತ್ಯಾಗ್ರಹವೆಂದು ಜನಪ್ರಿಯವಾಗಿದೆ ಬಿ. ಜವಾಬ್ದಾರಿಯುತ ಸರ್ಕಾರಕ್ಕಾಗಿ ನಡೆದ ಚಳವಳಿ ಸಿ. ಸಂಯುಕ್ತ ಮೈಸೂರು ರಾಜ್ಯ ಸ್ಥಾಪನೆಯತ್ತ ಸಾಗಿದ ಹೆಜ್ಜೆ

(1) ಎ ಮತ್ತು ಬಿ ಮಾತ್ರ (2) ಬಿ ಮತ್ತು ಸಿ ಮಾತ್ರ (3) ಎ ಮತ್ತು ಸಿ ಮಾತ್ರ (4) ಎಲ್ಲವೂ ಸರಿ

78. ಮೈಸೂರು ರಾಜ್ಯದ ಮೊದಲ ರಾಜ್ಯಪಾಲರು (ರಾಜಪ್ರಮುಖರು) ಯಾರು?

(1) ಜಯಚಾಮರಾಜ ಒಡೆಯರು (2) ಎಸ್.ಎಂ. ಶ್ರೀ ನಾಗೇಶ್ (3) ವಿ.ವಿ.ಗಿರಿ (4) ಜಿ.ಎಸ್.ಪಾಠಕ್

79. ಜೆ.ವಿ.ಪಿ ಸಮಿತಿಯ ಸದಸ್ಯರು ಯಾರು?

(1) ನೆಹರು, ಪಟೇಲ್, ಪಟ್ಟಾಭಿ ಸೀತಾರಾಮಯ್ಯ (2) ನೆಹರು, ಅಂಬೇಡ್ಕರ್, ರಾಜಾಜಿ (3) ಗಾಂಧಿ, ನೆಹರು, ಪಟೇಲ್ (4) ಪಟೇಲ್, ಮೆನನ್, ಪ್ರಸಾದ್

80. 1973ರಲ್ಲಿ ಮೈಸೂರು ರಾಜ್ಯಕ್ಕೆ "ಕರ್ನಾಟಕ" ಎಂದು ನಾಮಕರಣವಾದಾಗ ಮುಖ್ಯಮಂತ್ರಿಯಾಗಿದ್ದವರು ಯಾರು?

(1) ಆರ್.ಗುಂಡೂರಾವ್ (2) ಎಸ್.ನಿಜಲಿಂಗಪ್ಪ (3) ಡಿ.ದೇವರಾಜ ಅರಸ್ (4) ರಾಮಕೃಷ್ಣ ಹೆಗಡೆ

81. ಶಾಂಘೈ ಸಹಕಾರ ಸಂಘಟನೆಯ (SCO) 10ನೇ ಸದಸ್ಯ ರಾಷ್ಟ್ರ ಯಾವುದು?

(1) ಭಾರತ (2) ಪಾಕಿಸ್ತಾನ (3) ಇರಾನ್ (4) ಬೆಲಾರಸ್

82. 2026ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾದ ಭಾರತದ ಈ ಕೆಳಗಿನ ತಾಣಗಳು ಯಾವುವು?

ಎ. ಸಾರನಾಥ್ ಬಿ. ರಾಣಿ-ಕಿ-ವಾವ್ ಸಿ. ಹೊಯ್ಸಳ ಪವಿತ್ರ ದೇವಾಲಯಗಳು ಡಿ. ಮಹಾಬೋಧಿ ದೇವಾಲಯ ಸಂಕೀರ್ಣ

(1) ಕೇವಲ ಒಂದು (2) ಕೇವಲ ಎರಡು (3) ಕೇವಲ ಮೂರು (4) ಎಲ್ಲಾ ನಾಲ್ಕು

83. 2026ರ 73ನೇ ಆವೃತ್ತಿಯ ಮಿಸ್ ವರ್ಲ್ಡ್ (ವಿಶ್ವ ಸುಂದರಿ) ಪ್ರಶಸ್ತಿ ಗೆದ್ದವರು ಯಾರು?

(1) ಜೊಹೀರ್ರಿ ಮೊಲಾ (ಡೊಮಿನಿಕನ್ ರಿಪಬ್ಲಿಕ್) (2) ಎಲಿಸಬೆತ್ ರೆನೆ (3) ತಮಸಿಯಾ ಚಿಟ್ಟಿ (4) ಸುಚಾತಾ ಚಾಂಗ್ಶ್ರೀ

84. 72 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ (72ನೇ ಆವೃತ್ತಿ) ದೆಹಲಿ ಬದಲು ಎಲ್ಲಿ ನಡೆಯಿತು?

(1) ಕರ್ನಾಟಕದ ಬೆಂಗಳೂರು (2) ಪಶ್ಚಿಮಬಂಗಾಳದ ಕೊಲ್ಕತ್ತಾ (3) ಗುಜರಾತಿನ ಕೇವಡಿಯಾ (ಏಕ್ತಾ ನಗರ) (4) ಒಡಿಶಾದ ಭುವನೇಶ್ವರ

85. ಐಫೆಲ್ ಟವರ್ ಎಲ್ಲಿದೆ?

(1) ನವದೆಹಲಿ (2) ಪ್ಯಾರಿಸ್ (3) ನ್ಯೂಯಾರ್ಕ್ (4) ಮ್ಯಾಡ್ರಿಡ್

86. 2026ರ ಹಿರಿಯರ FIH ಹಾಕಿ ವಿಶ್ವಕಪ್‌ಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು ಯಾವುವು?

ಎ. ಆಗಸ್ಟ್ 15-30ರ ನಡುವೆ ನೆದರ್ಲ್ಯಾಂಡ್ ಮತ್ತು ಬೆಲ್ಜಿಯಂ ದೇಶಗಳಲ್ಲಿ ನಡೆಯಿತು ಬಿ. ಫೈನಲ್‌ನಲ್ಲಿ ಜರ್ಮನಿ ಸ್ಪೇನ್ ಅನ್ನು 1-0 ರಿಂದ ಸೋಲಿಸಿ ಚಾಂಪಿಯನ್ ಆಯಿತು ಸಿ. ಜರ್ಮನಿ ಸತತ ಎರಡನೇ ಬಾರಿ ವಿಶ್ವಕಪ್ ಗೆದ್ದು ಒಟ್ಟು 4 ಪ್ರಶಸ್ತಿಗಳ ದಾಖಲೆಗೆ ಪಾಕಿಸ್ತಾನವನ್ನು ಸರಿಗಟ್ಟಿತು

(1) ಎ ಮತ್ತು ಬಿ ಮಾತ್ರ (2) ಬಿ ಮತ್ತು ಸಿ ಮಾತ್ರ (3) ಎ ಮತ್ತು ಸಿ ಮಾತ್ರ (4) ಎಲ್ಲವೂ ಸರಿ

87. 2026 ಸೆಪ್ಟೆಂಬರ್ 12-13ರಂದು 18ನೇ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆ ನಡೆದ ದೇಶ ಯಾವುದು?

(1) ಬ್ರೆಜಿಲ್ (2) ರಷ್ಯಾ (3) ಭಾರತ (4) ಚೀನಾ

88. ಭಾರತದ 101ನೇ ರಾಮ್ಸರ್ ತಾಣವಾದ ಗ್ಲಾವ್ ಸರೋವರ (Glaw Lake) ಯಾವ ರಾಜ್ಯದಲ್ಲಿದೆ?

(1) ನಾಗಾಲ್ಯಾಂಡ್ (2) ತ್ರಿಪುರಾ (3) ಅರುಣಾಚಲ ಪ್ರದೇಶ (4) ಸಿಕ್ಕಿಂ

89. 2026ರ 23ನೇ ಕಾಮನ್‌ವೆಲ್ತ್ ಕ್ರೀಡಾಕೂಟದ (ಗ್ಲಾಸ್‌ಗೋ) ಪದಕಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಎಷ್ಟು?

(1) ಮೊದಲನೆಯದು (2) ಎರಡನೆಯದು (3) ಮೂರನೆಯದು (4) ನಾಲ್ಕನೆಯದು

90. ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಸರಿಯಾದ ಹೇಳಿಕೆಗಳು ಯಾವುವು?

ಎ. 2026ರ ಆವೃತ್ತಿ ಸ್ಕಾಟ್ಲೆಂಡ್‌ನ ಗ್ಲಾಸ್‌ಗೋದಲ್ಲಿ ಜುಲೈ 23ರಿಂದ ಆಗಸ್ಟ್ 2ರವರೆಗೆ ನಡೆಯಿತು ಬಿ. ಪ್ರತಿ 4 ವರ್ಷಕ್ಕೊಮ್ಮೆ ನಡೆಯುತ್ತದೆ ಸಿ. 2030ರ 24ನೇ ಆವೃತ್ತಿ ಗುಜರಾತಿನ ಅಹಮದಾಬಾದ್‌ನಲ್ಲಿ ನಡೆಯಲಿದೆ

(1) ಎ ಮತ್ತು ಬಿ ಮಾತ್ರ (2) ಬಿ ಮತ್ತು ಸಿ ಮಾತ್ರ (3) ಎ ಮತ್ತು ಸಿ ಮಾತ್ರ (4) ಎಲ್ಲವೂ ಸರಿ

91. 2026ರ ಫಿಫಾ ವಿಶ್ವಕಪ್ ಫುಟ್‌ಬಾಲ್ ಎಲ್ಲಿ ಆಯೋಜಿಸಲಾಯಿತು?

(1) ಸ್ಪೇನ್ ಮತ್ತು ಆರ್ಜೆಂಟೀನಾ (2) ಆರ್ಜೆಂಟೀನಾ ಮತ್ತು ಇಂಗ್ಲೆಂಡ್ (3) ಕೆನಡಾ, ಮೆಕ್ಸಿಕೊ ಮತ್ತು ಅಮೇರಿಕ (4) ಫ್ರಾನ್ಸ್ ಮತ್ತು ಸ್ವೀಡನ್

92. 2026ರ ಫಿಫಾ ವಿಶ್ವಕಪ್ ಫುಟ್‌ಬಾಲ್ ಗೆದ್ದ ದೇಶ ಯಾವುದು?

(1) ಸ್ಪೇನ್ (2) ಆರ್ಜೆಂಟೀನಾ (3) ಇಂಗ್ಲೆಂಡ್ (4) ಫ್ರಾನ್ಸ್

93. 2026ರ ಜೂನ್ 23ರಂದು ಅಮೇರಿಕ ಕಾನ್ಸುಲೇಟ್ ಬಳಿಯ ರಸ್ತೆಗೆ "ಡೊನಾಲ್ಡ್ ಟ್ರಂಪ್ ಅವೆನ್ಯೂ" ಎಂದು ನಾಮಕರಣ ಮಾಡಿದ ನಗರ ಯಾವುದು?

(1) ಬೆಂಗಳೂರು (2) ಮುಂಬೈ (3) ಹೈದರಾಬಾದ್ (4) ದೆಹಲಿ

94. ಅಮೇರಿಕದ ಸ್ವಾತಂತ್ರ್ಯ ದಿನ ಯಾವ ದಿನಾಂಕದಂದು ಆಚರಿಸಲಾಗುತ್ತದೆ?

(1) ಜುಲೈ 4 (2) ಜುಲೈ 6 (3) ಜುಲೈ 8 (4) ಜುಲೈ 10

95. 2026ರ ವಿಟ್ಲಿ ಪ್ರಶಸ್ತಿ (ಗ್ರೀನ್ ಆಸ್ಕರ್) ಗೆದ್ದ ಭಾರತದ ಡಾ. ಬರ್ಕಾ ಸುಬ್ಬಾ ಅವರಿಗೆ ಈ ಪ್ರಶಸ್ತಿ ಯಾವ ಜೀವಿಯ ಸಂರಕ್ಷಣಾ ಕೆಲಸಕ್ಕಾಗಿ ದೊರೆಯಿತು?

(1) ಇಂಡಿಯನ್ ಸ್ಕಿಮ್ಮರ್ (2) ಹಿಮಾಲಯನ್ ಸಲಾಮಂಡರ್ (3) ಬೆಂಗಾಲ್ ಹುಲಿ (4) ಇಂಡಿಯನ್ ಗಿಡುಗ

96. 2026 ಜುಲೈ 5ರಂದು ಲಾರ್ಡ್ಸ್‌ನಲ್ಲಿ ನಡೆದ ಮಹಿಳೆಯರ T20 ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಚಾಂಪಿಯನ್ ಆದವರು ಯಾರು?

(1) ಇಂಗ್ಲೆಂಡ್ (2) ಆಸ್ಟ್ರೇಲಿಯಾ (3) ಭಾರತ (4) ದಕ್ಷಿಣ ಆಫ್ರಿಕಾ

97. ಬೆಂಗಳೂರು ಗಾಲ್ಫ್ ಕ್ಲಬ್ ಸ್ಥಾಪನೆಯಾದ ವರ್ಷ ಯಾವುದು?

(1) 1875 (2) 1876 (3) 1885 (4) 1895

98. ಭಾರತದಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದ ಭಾಷೆಗಳ ಒಟ್ಟು ಸಂಖ್ಯೆ ಎಷ್ಟು?

(1) 4 (2) 6 (3) 8 (4) 11

99. ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಭಾರತದ ಸುಪ್ರೀಂಕೋರ್ಟಿನ ಎಷ್ಟನೇ ಮುಖ್ಯ ನ್ಯಾಯಾಧೀಶರು?

(1) 51ನೇ (2) 52ನೇ (3) 53ನೇ (4) 54ನೇ

100. ಕರ್ನಾಟಕದ ಹೊಸ ಅಬಕಾರಿ ನೀತಿ (AIB - Alcohol in Beverage) ಜಾರಿಗೆ ಬಂದ ದಿನಾಂಕ ಯಾವುದು?

(1) 2026 ಜನವರಿ 1 (2) 2026 ಮಾರ್ಚ್ 6 (3) 2026 ಮೇ 11 (4) 2026 ಜೂನ್ 1

👉 ಉತ್ತರಗಳು ಮತ್ತು ವಿವರಣೆ - ತೆರೆಯಲು ಇಲ್ಲಿ ಒತ್ತಿರಿ (ಮೊದಲು ನೀವೇ ಉತ್ತರಿಸಿ!)

1. ಉತ್ತರ 2 - ಹಾಲ; ಗಾಥಾ ಸಪ್ತಶತಿ ಪ್ರಾಕೃತದಲ್ಲಿ 700 ಶ್ಲೋಕಗಳ ಪ್ರೇಮ ಗೀತೆಗಳ ಸಂಗ್ರಹ.

2. ಉತ್ತರ 3 - ಗೌತಮಿಪುತ್ರ ಶಾತಕರ್ಣಿ.

3. ಉತ್ತರ 1 - ಕ್ಷಹರಾತ (ಪಶ್ಚಿಮ ಕ್ಷತ್ರಪ) ವಂಶದ ನಹಪಾನ; ಅವನ ನಾಣ್ಯಗಳ ಮೇಲೆ ಮರುಮುದ್ರಣ ಮಾಡಿಸಿದ.

4. ಉತ್ತರ 2 - ಮಹಾಸೇನಾಪತಿ = ಸೈನ್ಯಾಧಿಪತಿ.

5. ಉತ್ತರ 1 - ಅಮರಾವತಿ, ನಾಗಾರ್ಜುನಕೊಂಡ, ಕಾರ್ಲೆ, ಸನ್ನತಿ.

6. ಉತ್ತರ 1 - ಭೂತಪಾಲ.

7. ಉತ್ತರ 2 - ಮಯೂರವರ್ಮ - ಬನವಾಸಿ (ವೈಜಯಂತಿಪುರ).

8. ಉತ್ತರ 2 - ಸಿಂಹ ಲಾಂಛನ, ವಾನರ ಧ್ವಜ.

9. ಉತ್ತರ 1 - ಬನವಾಸಿ ವರದಾ ನದಿ ದಂಡೆಯ, ಉತ್ತರ ಕನ್ನಡ ಜಿಲ್ಲೆಯಲ್ಲಿದೆ; ಆದ್ದರಿಂದ ಸಿ, ಡಿ ತಪ್ಪು.

10. ಉತ್ತರ 2 - ಚಂದ್ರವಳ್ಳಿ ಶಾಸನ - ಕದಂಬರ ಮಯೂರವರ್ಮ.

11. ಉತ್ತರ 1 - ಹಲ್ಮಿಡಿ - ಬೇಲೂರು ತಾಲೂಕು, ಹಾಸನ ಜಿಲ್ಲೆ.

12. ಉತ್ತರ 2 - ಕದಂಬ ವಂಶಕ್ಕೆ ಸೇರಿದೆ.

13. ಉತ್ತರ 2 - ಕಾಕುತ್ಸ್ಥವರ್ಮ.

14. ಉತ್ತರ 2 - ಕೋಲಾರ (ಕುವಲಾಲ); ನಂತರ ತಲಕಾಡು, ಮನ್ನೆ.

15. ಉತ್ತರ 1 - ಚಾಮುಂಡರಾಯ (ಗಂಗ ಮಂತ್ರಿ).

16. ಉತ್ತರ 2 - ಚಾವುಂಡರಾಯ ಪುರಾಣ (ಸಂಸ್ಕೃತದಲ್ಲಿ ಚರಿತ್ರಸಾರ).

17. ಉತ್ತರ 4 - ಮೂರೂ ಸರಿ - 2018ರಲ್ಲಿ 88ನೇ, ಮುಂದಿನದು 2030ರಲ್ಲಿ.

18. ಉತ್ತರ 2 - ಇಮ್ಮಡಿ ಪುಲಕೇಶಿ.

19. ಉತ್ತರ 1 - ರವಿಕೀರ್ತಿ.

20. ಉತ್ತರ 1 - ಮಾನ್ಯಖೇಟ (ಮಾಳಖೇಡ, ಕಲಬುರಗಿ ಜಿಲ್ಲೆ).

21. ಉತ್ತರ 1 - ದಂತಿದುರ್ಗ.

22. ಉತ್ತರ 3 - ಎ, ಬಿ, ಡಿ ಸರಿ (ಕೈಲಾಸನಾಥ ದೇವಾಲಯ ನಿರ್ಮಿಸಿದ್ದು ಕೃಷ್ಣ 1 - ಆದ್ದರಿಂದ ಸಿ ತಪ್ಪು).

23. ಉತ್ತರ 1 - ಒಂದನೇ ಅಮೋಘವರ್ಷ (ನೃಪತುಂಗ).

24. ಉತ್ತರ 2 - ಕೃಷ್ಣ 1.

25. ಉತ್ತರ 2 - ಪೊನ್ನ ('ಅಭಿನವ ಪಂಪ' ಮತ್ತು 'ಕವಿತಾ ಮನೋಹರ' ಎರಡೂ ಪೊನ್ನನ ಬಿರುದುಗಳು).

26. ಉತ್ತರ 4 - ನಾಲ್ಕೂ ಸರಿ.

27. ಉತ್ತರ 1 - ನೇಮಿಚಂದ್ರ - ನೇಮಿನಾಥ ಪುರಾಣದ ಕರ್ತೃ; ಇವರಿಗೆ "ಕವಿರಾಜಮಲ್ಲ" ಬಿರುದು.

28. ಉತ್ತರ 1 - ರುದ್ರಭಟ್ಟ, ಜನ್ನ, ಹರಿಹರ (ಹೊಯ್ಸಳ ಕಾಲದ ಕನ್ನಡ ಕವಿಗಳು).

29. ಉತ್ತರ 3 - 2023.

30. ಉತ್ತರ 1 - ನಕ್ಷತ್ರಾಕಾರದ (ಸ್ಟಾರ್ ಆಕಾರದ) ಜಗತಿಯ ಮೇಲಿನ ದೇವಾಲಯಗಳು - ಹೊಯ್ಸಳ ಶೈಲಿಯ ವಿಶೇಷ.

31. ಉತ್ತರ 1 - ಜಕ್ಕಣಾಚಾರಿ (ಡಂಕನಾಚಾರಿ ಎಂದೂ ಪ್ರಸಿದ್ಧ).

32. ಉತ್ತರ 1 - ಬಾಬರ್.

33. ಉತ್ತರ 2 - ಕೃಷ್ಣದೇವರಾಯ.

34. ಉತ್ತರ 1 - ಅಲ್ಲಸಾನಿ ಪೆದ್ದನ.

35. ಉತ್ತರ 4 - ತೆನಾಲಿ ರಾಮಕೃಷ್ಣ.

36. ಉತ್ತರ 4 - ವೀಣೆ.

37. ಉತ್ತರ 1 - ವಿಜಯನಗರ ಜಿಲ್ಲೆ.

38. ಉತ್ತರ 1 - ಶ್ರೀ ಕೃಷ್ಣದೇವರಾಯನ ಆಸ್ಥಾನ.

39. ಉತ್ತರ 4 - ವಿಲಿಯಮ್ ಹಾಕಿನ್ಸ್ (ಜಹಾಂಗೀರನ ಕಾಲದ ಇಂಗ್ಲಿಷ್ ದೂತ).

40. ಉತ್ತರ 3 - ಕೃಷ್ಣದೇವರಾಯನ ಆಳ್ವಿಕೆಯಲ್ಲಿ.

41. ಉತ್ತರ 1 - ರತ್ನಾಕರ ವರ್ಣಿ.

42. ಉತ್ತರ 1 - ಚೀನಾ.

43. ಉತ್ತರ 1 - ಸಾಯಣಾಚಾರ್ಯರು.

44. ಉತ್ತರ 3 - ತುಳುವ.

45. ಉತ್ತರ 4 - ಸಿ ಮತ್ತು ಡಿ - ಮದರಸ ಕಟ್ಟಿಸಿದ್ದು ಬೀದರಿನಲ್ಲಿ (ಗುಲ್ಬರ್ಗ ಅಲ್ಲ - ಮೂಲ ಪ್ರಶ್ನೆಯ ತಪ್ಪು ಸರಿಪಡಿಸಲಾಗಿದೆ).

46. ಉತ್ತರ 4 - ಮೇಲಿನ ಎಲ್ಲವೂ.

47. ಉತ್ತರ 4 - ಎರಡನೇ ಇಬ್ರಾಹಿಂ ಆದಿಲ್ ಷಾ.

48. ಉತ್ತರ 3 - ಮಹಮದ್ ಆದಿಲ್ ಷಾ (ವಿಶ್ವದ ಎರಡನೇ ದೊಡ್ಡ ಗುಮ್ಮಟ).

49. ಉತ್ತರ 3 - ವಿಜಯಪುರ.

50. ಉತ್ತರ 2 - ವಿಜಯಪುರ.

51. ಉತ್ತರ 1 - ಯಲಹಂಕ.

52. ಉತ್ತರ 1 - ಕೆಳದಿ ಚೆನ್ನಮ್ಮ (ಚೆನ್ನಮ್ಮಾಜಿ).

53. ಉತ್ತರ 2 - ಶಿವಪ್ಪ ನಾಯಕ.

54. ಉತ್ತರ 4 - ಮೂರೂ ಸರಿ.

55. ಉತ್ತರ 4 - ನಾಲ್ಕೂ ಜೊಡೆಗಳು ಸರಿ.

56. ಉತ್ತರ 3 - ಎರಡೂ ಸರಿ (ಮಡಕರಿ ನಾಯಕ 1779ರಲ್ಲಿ ಹೈದರಾಲಿ ವಿರುದ್ಧ ಹೋರಾಡಿ ನಿಧನರಾದರು).

57. ಉತ್ತರ 4 - ಮೂರೂ ಸರಿ.

58. ಉತ್ತರ 1 - ರಾಜ ಒಡೆಯರು.

59. ಉತ್ತರ 3 - ಚಿಕ್ಕ ದೇವರಾಜ ಒಡೆಯರು.

60. ಉತ್ತರ 4 - ನಾಲ್ಕೂ ಸರಿ.

61. ಉತ್ತರ 2 - ಸಂಚಿ ಹೊನ್ನಮ್ಮ.

62. ಉತ್ತರ 2 - ಸಿಂಗರಾರ್ಯ.

63. ಉತ್ತರ 4 - ಮೂರೂ ಸರಿ.

64. ಉತ್ತರ 2 - ಮಾರ್ಕ್ ಕಬ್ಬನ್ (1834-61).

65. ಉತ್ತರ 1 - ಬಸವಪ್ಪ ಶಾಸ್ತ್ರಿ.

66. ಉತ್ತರ 1 - ಕೆಂಪು ನಾರಾಯಣ - 'ಮುದ್ದಣ' ಎಂಬ ಉಪನಾಮದವರು.

67. ಉತ್ತರ 2 - ನಾಲ್ವಡಿ ಕೃಷ್ಣರಾಜ ಒಡೆಯರು.

68. ಉತ್ತರ 2 - 1881 ಮಾರ್ಚ್ 25.

69. ಉತ್ತರ 3 - ಎರಡೂ ಸರಿ.

70. ಉತ್ತರ 2 - ನಾಲ್ವಡಿ ಕೃಷ್ಣರಾಜ ಒಡೆಯರು.

71. ಉತ್ತರ 1 - 1924 ಬೆಳಗಾವಿ.

72. ಉತ್ತರ 3 - ಎರಡೂ ಸರಿ.

73. ಉತ್ತರ 1 - ಸರ್.ಎಂ. ವಿಶ್ವೇಶ್ವರಯ್ಯ.

74. ಉತ್ತರ 2 - ಹಿಂದುಳಿದ ವರ್ಗಗಳ ಮೀಸಲಾತಿ.

75. ಉತ್ತರ 1 - ರಾಜಾ ವೇಂಕಟಪ್ಪ ನಾಯಕ.

76. ಉತ್ತರ 1 - ಗಾಂಧಿಜಿ ಅಧ್ಯಕ್ಷರಾದ ಏಕೈಕ ಅಧಿವೇಶನ.

77. ಉತ್ತರ 4 - ಮೂರೂ ಸರಿ.

78. ಉತ್ತರ 1 - ಜಯಚಾಮರಾಜ ಒಡೆಯರು.

79. ಉತ್ತರ 1 - ನೆಹರು, ಪಟೇಲ್, ಪಟ್ಟಾಭಿ ಸೀತಾರಾಮಯ್ಯ.

80. ಉತ್ತರ 3 - ಡಿ. ದೇವರಾಜ ಅರಸ್ (1973ರ ನಾಮಕರಣ).

81. ಉತ್ತರ 4 - ಬೆಲಾರಸ್.

82. ಉತ್ತರ 1 - ಕೇವಲ ಸಾರನಾಥ್ (ರಾಣಿ-ಕಿ-ವಾವ್ 2014, ಹೊಯ್ಸಳ 2023, ಮಹಾಬೋಧಿ 2002ರಲ್ಲಿ ಸೇರ್ಪಡೆ).

83. ಉತ್ತರ 1 - ಜೊಹೀರ್ರಿ ಮೊಲಾ (ಡೊಮಿನಿಕನ್ ರಿಪಬ್ಲಿಕ್; ವಿಯೆತ್ನಾಂದ ಝಾ ತ್ರಾಂಗ್‌ನಲ್ಲಿ ಸಮಾರಂಭ).

84. ಉತ್ತರ 3 - ಗುಜರಾತಿನ ಕೇವಡಿಯಾ (ಏಕ್ತಾ ನಗರ) - 2026 ಸೆಪ್ಟೆಂಬರ್ 22.

85. ಉತ್ತರ 2 - ಪ್ಯಾರಿಸ್.

86. ಉತ್ತರ 4 - ಮೂರೂ ಸರಿ - ಫೈನಲ್‌ನಲ್ಲಿ ಜರ್ಮನಿ ಸ್ಪೇನ್ ಅನ್ನು 1-0 ರಿಂದ ಸೋಲಿಸಿತು.

87. ಉತ್ತರ 3 - ಭಾರತ (ನವದೆಹಲಿ).

88. ಉತ್ತರ 3 - ಅರುಣಾಚಲ ಪ್ರದೇಶ.

89. ಉತ್ತರ 4 - ನಾಲ್ಕನೇ ಸ್ಥಾನ - 39 ಪದಕಗಳು (13 ಚಿನ್ನ, 17 ಬೆಳ್ಳಿ, 9 ಕಂಚು).

90. ಉತ್ತರ 4 - ಮೂರೂ ಸರಿ.

91. ಉತ್ತರ 3 - ಕೆನಡಾ, ಮೆಕ್ಸಿಕೊ, ಅಮೇರಿಕ.

92. ಉತ್ತರ 1 - ಸ್ಪೇನ್ (ಆರ್ಜೆಂಟೀನಾವನ್ನು 1-0 ರಿಂದ ಸೋಲಿಸಿತು).

93. ಉತ್ತರ 3 - ಹೈದರಾಬಾದ್.

94. ಉತ್ತರ 1 - ಜುಲೈ 4.

95. ಉತ್ತರ 2 - ಹಿಮಾಲಯನ್ ಸಲಾಮಂಡರ್.

96. ಉತ್ತರ 2 - ಆಸ್ಟ್ರೇಲಿಯಾ (ಇಂಗ್ಲೆಂಡ್ ಅನ್ನು ಸೋಲಿಸಿತು).

97. ಉತ್ತರ 2 - 1876.

98. ಉತ್ತರ 4 - 11.

99. ಉತ್ತರ 3 - 53ನೇ.

100. ಉತ್ತರ 3 - 2026 ಮೇ 11.

📄 ಪೂರ್ಣ PDF - 100 ಪ್ರಶ್ನೆಗಳು ಮತ್ತು ಉತ್ತರಗಳು (ಉಚಿತ ಡೌನ್‌ಲೋಡ್)

👁️ PDF ವೀಕ್ಷಿಸಿ ⬇️ PDF ಡೌನ್‌ಲೋಡ್

🔗 ನಮ್ಮ ಲಿಂಕ್‌ಗಳು:

🌐 ವೆಬ್‌ಸೈಟ್: kspgk.blogspot.com

📢 WhatsApp ಚಾನೆಲ್: whatsapp.com/channel/0029Va5L88s1NCrX1ds6gQ3N

✈️ Telegram: t.me/spardhawin | t.me/kpsc2019

logoblog
ಕರ್ನಾಟಕ ಇತಿಹಾಸ GK ಪ್ರಶ್ನೆಗಳು - 100 Model Questions with Answers in Kannada | KPSC KAS FDA SDA

Thanks for reading ಕರ್ನಾಟಕ ಇತಿಹಾಸ GK ಪ್ರಶ್ನೆಗಳು - 100 Model Questions with Answers in Kannada | KPSC KAS FDA SDA

Previous
« Prev Post

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

kas

ಇತ್ತೀಚಿನ ಸರ್ಕಾರಿ ಉದ್ಯೋಗಗಳು

ಎಲ್ಲವನ್ನೂ ನೋಡಿ →

ಪೊಲೀಸ್ (KSP) ನೇಮಕಾತಿ

ಎಲ್ಲವನ್ನೂ ನೋಡಿ →

GK ನೋಟ್ಸ್ ಮತ್ತು ಅಧ್ಯಯನ ಸಾಮಗ್ರಿ

ಎಲ್ಲವನ್ನೂ ನೋಡಿ →

Contact Us

ಹೆಸರು

ಇಮೇಲ್ *

ಸಂದೇಶ *

Categories