📚 ಮ್ಯಾಗಜೀನ್ಗಳು (Spardha Win Magazines)
- ಸ್ಪರ್ಧಾ ವಿನ್ ಮ್ಯಾಗಜೀನ್ ವಿಭಾಗ (ಎಲ್ಲಾ ಮ್ಯಾಗಜೀನ್ಗಳು)
- ಮಿಷನ್ DSERT ಟೆಸ್ಟ್ 1-20 ಮ್ಯಾಗಜೀನ್ಗಳು (Mission DSERT Tests 1-20)
- ಸರ್ಕಾರಿ ಯೋಜನೆಗಳು ಮ್ಯಾಗಜೀನ್ – ಅಕ್ಟೋಬರ್ 2026
- ಯೋಜನಾ ಮಾಸಿಕ ಮ್ಯಾಗಜೀನ್ – ಮೇ 2026
- ಅರ್ಥಶಾಸ್ತ್ರ ಮ್ಯಾಗಜೀನ್ – ಜನವರಿ 2026
- ಅರ್ಥಶಾಸ್ತ್ರ ಮ್ಯಾಗಜೀನ್ – ಫೆಬ್ರವರಿ 2026
- ಅರ್ಥಶಾಸ್ತ್ರ ಮ್ಯಾಗಜೀನ್ – ಮಾರ್ಚ್ 2026
- ಅರ್ಥಶಾಸ್ತ್ರ ಮ್ಯಾಗಜೀನ್ – ಏಪ್ರಿಲ್ 2026
- ಅರ್ಥಶಾಸ್ತ್ರ ಮ್ಯಾಗಜೀನ್ – ಮೇ 2026
- ಅರ್ಥಶಾಸ್ತ್ರ ಮ್ಯಾಗಜೀನ್ – ಜೂನ್ 2026
- ಅರ್ಥಶಾಸ್ತ್ರ ಮ್ಯಾಗಜೀನ್ – ಜುಲೈ 2026
- ಅರ್ಥಶಾಸ್ತ್ರ ಮ್ಯಾಗಜೀನ್ – ಆಗಸ್ಟ್ 2026
- ಅರ್ಥಶಾಸ್ತ್ರ ಮ್ಯಾಗಜೀನ್ – ಸೆಪ್ಟೆಂಬರ್ 2026
ಇಂದಿನ ಮಾದರಿ ಪ್ರಶ್ನೋತ್ತರಗಳು (81-88)
81. ಕಲಿಕೆಯ 5E ಮಾದರಿಯ ಸರಿಯಾದ ಕ್ರಮವನ್ನು ಗುರುತಿಸಿ:
ಎ) Engage, Explain, Explore, Evaluate, Elaborate
ಬಿ) Engage, Explore, Explain, Elaborate, Evaluate
ಸಿ) Explain, Engage, Explore, Elaborate, Evaluate
ಡಿ) Engage, Evaluate, Explain, Explore, Elaborate
ಉತ್ತರ ನೋಡಿ (Tap to reveal)
ಉತ್ತರ: ಬಿ) Engage, Explore, Explain, Elaborate, Evaluate
ವಿವರಣೆ: 5E ಕಲಿಕಾ ಮಾದರಿಯ ಕ್ರಮ: ತೊಡಗಿಸಿಕೊಳ್ಳುವಿಕೆ (Engage) → ಅನ್ವೇಷಣೆ (Explore) → ವಿವರಣೆ (Explain) → ವಿಶದೀಕರಣ (Elaborate) → ಮೌಲ್ಯಮಾಪನ (Evaluate). ರಚನಾವಾದ ಆಧಾರಿತ ಈ ಮಾದರಿಯನ್ನು BSCS ಅಭಿವೃದ್ಧಿಪಡಿಸಿದೆ; ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ ಪಾಠಯೋಜನೆಗಳಲ್ಲಿ ವ್ಯಾಪಕ ಬಳಕೆ.
82. ರಾಷ್ಟ್ರೀಯ ಶಿಕ್ಷಣ ನೀತಿ - 1986 (NPE 1986) ಅನ್ನು ಯಾರ ಪ್ರಧಾನಿ ಅವಧಿಯಲ್ಲಿ ಜಾರಿಗೆ ತರಲಾಯಿತು?
ಎ) ಇಂದಿರಾ ಗಾಂಧಿ ಬಿ) ರಾಜೀವ್ ಗಾಂಧಿ ಸಿ) ಪಿ.ವಿ. ನರಸಿಂಹರಾವ್ ಡಿ) ಅಟಲ್ ಬಿಹಾರಿ ವಾಜಪೇಯಿ
ಉತ್ತರ ನೋಡಿ (Tap to reveal)
ಉತ್ತರ: ಬಿ) ರಾಜೀವ್ ಗಾಂಧಿ
ವಿವರಣೆ: ರಾಷ್ಟ್ರೀಯ ಶಿಕ್ಷಣ ನೀತಿ 1986 ಅನ್ನು ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಜಾರಿಗೆ ತರಿತು. ಅದೇ ನೀತಿಯ ಪರಿಷ್ಕೃತ ಆವೃತ್ತಿಯನ್ನು 1992ರಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರ ಅನುಮೋದಿಸಿತು - ಈ ವ್ಯತ್ಯಾಸ ಪರೀಕ್ಷೆಗಳಲ್ಲಿ ಆಗಾಗ ಕೇಳಲಾಗುತ್ತದೆ.
83. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು - 2005 (NCF 2005) ಯಾವುದಕ್ಕೆ ಹೆಚ್ಚು ಒತ್ತು ನೀಡಿದೆ?
ಎ) ಶಿಕ್ಷಕ ಕೇಂದ್ರಿತ ಶಿಕ್ಷಣ ಬಿ) ಮಕ್ಕಳ ಕೇಂದ್ರಿತ ಕಲಿಕೆ ಸಿ) ಕಂಠಪಾಠ ಡಿ) ಕೇವಲ ಪಠ್ಯಪುಸ್ತಕ ಆಧಾರಿತ ಕಲಿಕೆ
ಉತ್ತರ ನೋಡಿ (Tap to reveal)
ಉತ್ತರ: ಬಿ) ಮಕ್ಕಳ ಕೇಂದ್ರಿತ ಕಲಿಕೆ
ವಿವರಣೆ: NCF 2005 ಮಗುವಿನ ಸಕ್ರಿಯ ಭಾಗವಹಿಸುವಿಕೆ, ಅನುಭವ ಆಧಾರಿತ ರಚನಾವಾದ ಕಲಿಕೆ ಮತ್ತು ಪಠ್ಯಕ್ರಮ-ದೈನಂದಿನ ಜೀವನದ ಸಂಪರ್ಕವನ್ನು ಒತ್ತುತ್ತದೆ. ಕಂಠಪಾಠ ಮತ್ತು ಕೇವಲ ಪಠ್ಯಪುಸ್ತಕ ಆಧಾರಿತ ಬೋಧನೆಯನ್ನು ಇದು ತಳ್ಳಿಹಾಕುತ್ತದೆ.
84. ಬಿಜಾಪುರದ (ವಿಜಯಪುರ) ಗೋಲ್ ಗುಂಬಜ್ ನಿರ್ಮಾಣಗೊಂಡ ಅವಧಿ ಯಾವುದು?
ಎ) 1626 - 1656 ಬಿ) 1628 - 1658 ಸಿ) 1656 - 1672 ಡಿ) 1632 - 1656
ಉತ್ತರ ನೋಡಿ (Tap to reveal)
ಉತ್ತರ: ಎ) 1626 - 1656
ವಿವರಣೆ: ಆದಿಲ್ ಷಾಹಿ ಸುಲ್ತಾನ ಮೊಹಮ್ಮದ್ ಆದಿಲ್ ಷಾ (1627-1656) ತಮ್ಮ ಸಮಾಧಿಗಾಗಿ ಗೋಲ್ ಗುಂಬಜ್ ನಿರ್ಮಾಣವನ್ನು 1626ರಲ್ಲಿ ಪ್ರಾರಂಭಿಸಿದರು; 1656ರಲ್ಲಿ ಪೂರ್ಣಗೊಂಡಿತು. ಪ್ರಪಂಚದ ಅತಿದೊಡ್ಡ ಗುಂಮಟಗಳಲ್ಲಿ ಒಂದು.
85. ಮೈಸೂರಿನ ಚಿಕ್ಕದೇವರಾಜ ಒಡೆಯರ್‌ಗೆ "ರಾಜ ಜಗದೇವ" ಎಂಬ ಬಿರುದನ್ನು ನೀಡಿದ ಮೊಘಲ್ ಬಾದ್ಷಹ ಯಾರು?
ಎ) ಅಕ್ಬರ್ ಬಿ) ಬಾಬರ್ ಸಿ) ಔರಂಗಜೇಬ್ ಡಿ) ಜಹಾಂಗೀರ್
ಉತ್ತರ ನೋಡಿ (Tap to reveal)
ಉತ್ತರ: ಸಿ) ಔರಂಗಜೇಬ್
ವಿವರಣೆ: ಚಿಕ್ಕದೇವರಾಜ ಒಡೆಯರ್ (1673-1704) ತನ್ನ ದಕ್ಷಿಣದ ವಿಜಯಗಳಿಗೆ ಮೊಘಲ್ ಮಾನ್ಯತೆ ಬಯಸಿ ಅಹಮದ್‌ನಗರದಲ್ಲಿದ್ದ ಔರಂಗಜೇಬ್‌ಗೆ ರಾಯಭಾರ ಕಳುಹಿಸಿದರು. ಪ್ರತಿಯಾಗಿ 1700ರಲ್ಲಿ ಔರಂಗಜೇಬ್ "ಜಗ್ ದೇವ್ ರಾಜ್" (ಅರ್ಥಾತ್ "ರಾಜ ಜಗದೇವ" - ಜಗತ್ತಿನ ಅರಸ ಎಂಬರ್ಥ) ಎಂಬ ಬಿರುದು ಅಳಂಕರಿಸಿದ ಮುದ್ರೆಯುಂಗುರ, ದಂತದ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಅನುಮತಿ ಮತ್ತು ತಮ್ಮ ಸ್ವಂತ ಖಡ್ಗವನ್ನು (ಫಿರಂಗಿ) ಮೈಸೂರು ಅರಸನಿಗೆ ಕಳುಹಿಸಿದರು. ಇಂಪೀರಿಯಲ್ ಗೆಜೆಟಿಯರ್ ಆಫ್ ಇಂಡಿಯಾ (1908, ಮೈಸೂರು ಮತ್ತು ಕೂರ್ಗ್) ಮುಂತಾದ ಇತಿಹಾಸ ದಾಖಲೆಗಳಲ್ಲಿ ಈ ಘಟನೆ ದಾಖಲಾಗಿದೆ.
86. ಕೆ.ಸಿ. ರೆಡ್ಡಿಯವರು ಅರಮನೆ ಸತ್ಯಾಗ್ರಹವನ್ನು (ಮೈಸೂರು ಚಲೋ - 1947) ಆರಂಭಿಸಿದಾಗ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು ಯಾರು?
ಎ) ಕೆ. ಶೇಷಾದ್ರಿ ಅಯ್ಯರ್ ಬಿ) ಸರ್ ಎಂ. ವಿಶ್ವೇಶ್ವರಯ್ಯ ಸಿ) ಅರ್ಕಾಟ್ ರಾಮಸ್ವಾಮಿ ಮುದಲಿಯಾರ್ ಡಿ) ಪಿ.ಎನ್. ಕೃಷ್ಣಮೂರ್ತಿ
ಉತ್ತರ ನೋಡಿ (Tap to reveal)
ಉತ್ತರ: ಸಿ) ಅರ್ಕಾಟ್ ರಾಮಸ್ವಾಮಿ ಮುದಲಿಯಾರ್
ವಿವರಣೆ: 1946-1949ರ ನಡುವೆ ಮೈಸೂರಿನ ದಿವಾನರಾಗಿದ್ದ ಅರ್ಕಾಟ್ ರಾಮಸ್ವಾಮಿ ಮುದಲಿಯಾರ್ ಅವಧಿಯಲ್ಲೇ 1947ರ "ಮೈಸೂರು ಚಲೋ"/ಅರಮನೆ ಸತ್ಯಾಗ್ರಹ ನಡೆಯಿತು. ಜವಾಬ್ದಾರಿ ಸರ್ಕಾರದ ಬೇಡಿಕೆ ಈಡೇರಿ 1947 ಅಕ್ಟೋಬರ್ 24ರಂದು ಮಹಾರಾಜರ ಘೋಷಣೆಯಾಯಿತು; ಕೆ.ಸಿ. ರೆಡ್ಡಿ ಮೈಸೂರಿನ ಮೊದಲ ಮುಖ್ಯಮಂತ್ರಿಯಾದರು.
87. ಸರಿಯಾದ ಹೊಂದಾಣಿಕೆ ಮಾಡಿ:
| ರಾಷ್ಟ್ರೀಯ ಉದ್ಯಾನ | ಪ್ರಸಿದ್ಧ ಪ್ರಾಣಿ |
|---|---|
| ಎ. ಜಿಮ್ ಕಾರ್ಬೆಟ್ | 1. ಸಿಂಹ |
| ಬಿ. ಕಾಝಿರಂಗ | 2. ಬಾರಸಿಂಗ |
| ಸಿ. ಗಿರ್ | 3. ಏಕಶೃಂಗೀ ಖಡ್ಗಮೃಗ |
| ಡಿ. ಕನ್ಹಾ | 4. ಹುಲಿ |
ಎ) ಎ-4, ಬಿ-2, ಸಿ-3, ಡಿ-1 ಬಿ) ಎ-4, ಬಿ-3, ಸಿ-1, ಡಿ-2 ಸಿ) ಎ-4, ಬಿ-1, ಸಿ-2, ಡಿ-3 ಡಿ) ಎ-1, ಬಿ-2, ಸಿ-3, ಡಿ-4
ಉತ್ತರ ನೋಡಿ (Tap to reveal)
ಉತ್ತರ: ಬಿ) ಎ-4, ಬಿ-3, ಸಿ-1, ಡಿ-2
ವಿವರಣೆ: ಜಿಮ್ ಕಾರ್ಬೆಟ್ (ಉತ್ತರಾಖಂಡ) - ಹುಲಿಗೆ ಪ್ರಸಿದ್ಧ; ಕಾಝಿರಂಗ (ಅಸ್ಸಾಂ) - ಏಕಶೃಂಗೀ ಖಡ್ಗಮೃಗ; ಗಿರ್ (ಗುಜರಾತ್) - ಏಷ್ಯಾಟಿಕ್ ಸಿಂಹ; ಕನ್ಹಾ (ಮಧ್ಯಪ್ರದೇಶ) - ಬಾರಸಿಂಗ (ಹಾರ್ಡ್-ಗ್ರೌಂಡ್ ಬಾರಸಿಂಗ ಪುನರುಜ್ಜೀವನದ ಯಶಸ್ಸು).
88. ಕರ್ಕಾಟಕ ಸಂಕ್ರಾಂತಿ ವೃತ್ತವು (ಕರ್ಕ ರೇಖೆ / Tropic of Cancer) ಈ ಕೆಳಗಿನ ಯಾವ ರಾಜ್ಯದ ಮೂಲಕ ಹಾದು ಹೋಗುವುದಿಲ್ಲ?
ಎ) ರಾಜಸ್ಥಾನ್ ಬಿ) ಮಧ್ಯಪ್ರದೇಶ ಸಿ) ಪಶ್ಚಿಮ ಬಂಗಾಳ ಡಿ) ಬಿಹಾರ
ಉತ್ತರ ನೋಡಿ (Tap to reveal)
ಉತ್ತರ: ಡಿ) ಬಿಹಾರ
ವಿವರಣೆ: ಕರ್ಕ ರೇಖೆಯು ಭಾರತದ 8 ರಾಜ್ಯಗಳ ಮೂಲಕ ಹಾದುಹೋಗುತ್ತದೆ: ಗುಜರಾತ್, ರಾಜಸ್ಥಾನ್, ಮಧ್ಯಪ್ರದೇಶ, ಛತ್ತೀಸ್‌ಗಢ, ಝಾರ್ಖಂಡ್, ಪಶ್ಚಿಮ ಬಂಗಾಳ, ತ್ರಿಪುರ ಮತ್ತು ಮಿಜೋರಾಂ. ಬಿಹಾರ ಈ ಪಟ್ಟಿಯಲ್ಲಿ ಇಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ