ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ಯು 2026 ಅಕ್ಟೋಬರ್ 04 ರಂದು ನಡೆಸಿದ 505 (Non HK / RPC) ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಿದೆ. ಪರೀಕ್ಷಾರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ಬಳಸಿ ತಮ್ಮ ಅಂಕಗಳನ್ನು ಈ ಕೆಳಗಿನ ಲಿಂಕ್‌ನಲ್ಲಿ ಚೆಕ್ ಮಾಡಬಹುದು.
👉 VAO ತಾತ್ಕಾಲಿಕ ಫಲಿತಾಂಶ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👈
ಪ್ರಮುಖ ಮಾಹಿತಿ (VAO Result 2026 Highlights)
| ನೇಮಕಾತಿ ಸಂಸ್ಥೆ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) - ಕಂದಾಯ ಇಲಾಖೆ |
| ಹುದ್ದೆ | ಗ್ರಾಮ ಆಡಳಿತ ಅಧಿಕಾರಿ (Village Administrative Officer - VAO) |
| ಒಟ್ಟು ಹುದ್ದೆಗಳು | 572 (505 RPC/Non-HK + 67 ಕಲ್ಯಾಣ ಕರ್ನಾಟಕ/HK) |
| ಪರೀಕ್ಷಾ ದಿನಾಂಕ | 04 ಅಕ್ಟೋಬರ್ 2026 |
| ತಾತ್ಕಾಲಿಕ ಫಲಿತಾಂಶ | 19 ಅಕ್ಟೋಬರ್ 2026 (RPC/Non-HK ಹುದ್ದೆಗಳಿಗೆ ಮಾತ್ರ) |
| ಫಲಿತಾಂಶದ ಆಧಾರ | 16 ಅಕ್ಟೋಬರ್ 2026 ರ ಪರಿಷ್ಕೃತ ಉತ್ತರಸೂಚಿ |
| ಆಕ್ಷೇಪಣೆಗೆ ಕೊನೆಯ ದಿನ | 22 ಅಕ್ಟೋಬರ್ 2026, ಬೆಳಿಗ್ಗೆ 10:00 (ದಾಖಲೆಗಳೊಂದಿಗೆ ಮಾತ್ರ) |
| ಅಧಿಕೃತ ಲಿಂಕ್ | kearecruitment.karnataka.gov.in |
ಫಲಿತಾಂಶ ಚೆಕ್ ಮಾಡುವ ವಿಧಾನ (How to Check VAO Result 2026)
- ಮೇಲಿನ ಲಿಂಕ್ ತೆರೆಯಿರಿ (KEA ಅಧಿಕೃತ ಪುಟ)
- ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ನಮೂದಿಸಿ
- ನಿಮ್ಮ ತಾತ್ಕಾಲಿಕ ಅಂಕ / ಸ್ಕೋರ್ ಕಾಣಿಸುತ್ತದೆ - ಪ್ರಿಂಟ್ ತೆಗೆದುಕೊಂಡು ಇಟ್ಟುಕೊಳ್ಳಿ
ಅಂಕಗಳ ಮೇಲೆ ಆಕ್ಷೇಪಣೆ (Objection)
ತಾತ್ಕಾಲಿಕ ಫಲಿತಾಂಶದ ಅಂಕಗಳ ಕುರಿತು ಆಕ್ಷೇಪಣೆ ಇದ್ದರೆ 22 ಅಕ್ಟೋಬರ್ 2026 ಬೆಳಿಗ್ಗೆ 10:00 ಗಂಟೆಯೊಳಗೆ KEAಯ ಆಕ್ಷೇಪಣೆ ಲಿಂಕ್ ಮೂಲಕ ಸಲ್ಲಿಸಬಹುದು. ಬೆಂಬಲ ದಾಖಲೆಗಳಿಲ್ಲದ ಆಕ್ಷೇಪಣೆಗಳು ಹಾಗೂ ಉತ್ತರಸೂಚಿ (key answers) ಕುರಿತ ಆಕ್ಷೇಪಣೆಗಳನ್ನು ಈ ಹಂತದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು KEA ತಿಳಿಸಿದೆ. ಆಕ್ಷೇಪಣೆ ಲಿಂಕ್ KEA ಮುಖಪುಟದಲ್ಲಿ ಲಭ್ಯ: cetonline.karnataka.gov.in/kea. ಆಕ್ಷೇಪಣೆಗಳ ಪರಿಶೀಲನೆ ನಂತರ ಅಂತಿಮ ಫಲಿತಾಂಶ ಪ್ರಕಟವಾಗಲಿದೆ.
ಕಲ್ಯಾಣ ಕರ್ನಾಟಕ (HK) ಅಭ್ಯರ್ಥಿಗಳ ಗಮನಕ್ಕೆ
ಈ ಫಲಿತಾಂಶವು 505 RPC (Non HK) ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತದೆ. 67 ಕಲ್ಯಾಣ ಕರ್ನಾಟಕ (HK) ಹುದ್ದೆಗಳ ಪರೀಕ್ಷೆಯು 25 ಅಕ್ಟೋಬರ್ 2026 ರಂದು ನಡೆಯಲಿದೆ. HK ಪರೀಕ್ಷೆಯ ಹಾಲ್ ಟಿಕೆಟ್ ಲಿಂಕ್ KEA ಮುಖಪುಟದಲ್ಲಿ ಲಭ್ಯವಿದೆ.
ಪರೀಕ್ಷಾ ಮಾದರಿ (Exam Pattern)
ಎರಡು OMR ಪತ್ರಿಕೆಗಳು, ತಲಾ 100 ಅಂಕಗಳು: ಪತ್ರಿಕೆ 1 - ಸಾಮಾನ್ಯ ಜ್ಞಾನ; ಪತ್ರಿಕೆ 2 - ಕನ್ನಡ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ. ಪ್ರತಿ ತಪ್ಪು ಉತ್ತರಕ್ಕೆ 0.25 ಋಣ ಅಂಕ (negative marking).
ಸಂಬಂಧಿತ ಪೋಸ್ಟ್‌ಗಳು
ದೈನಂದಿನ ಪ್ರಚಲಿತ ಘಟನೆಗಳು, ಪ್ರಶ್ನೆಪತ್ರಿಕೆಗಳು ಮತ್ತು ನೇಮಕಾತಿ ಸುದ್ದಿಗಾಗಿ ಸೇರಿ:
✈️ Telegram: t.me/spardhawin | ✈️ Telegram: t.me/kpsc2019
📲 WhatsApp Channel: ಇಲ್ಲಿ ಕ್ಲಿಕ್ ಮಾಡಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ