ನಿಮ್ಮ ಮುಂಬರುವ KPSC, KAS, FDA, SDA, ಹಾಗೂ ಪೊಲೀಸ್ ಪರೀಕ್ಷೆಗಳ ತಯಾರಿಗಾಗಿ ಸಾಮಾನ್ಯ ವಿಜ್ಞಾನ (General Science) ವಿಷಯದ ಪ್ರಮುಖ ಸಂಭವನೀಯ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ
ಸಾಮಾನ್ಯ ವಿಜ್ಞಾನ: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಸಂಭವನೀಯ ಪ್ರಶ್ನೋತ್ತರಗಳು
ನಮಸ್ಕಾರ ಸ್ನೇಹಿತರೆ! ನಿಮ್ಮ ಮುಂಬರುವ KPSC, KAS, FDA, SDA, ಹಾಗೂ ಪೊಲೀಸ್ ಪರೀಕ್ಷೆಗಳ ತಯಾರಿಗಾಗಿ ಸಾಮಾನ್ಯ ವಿಜ್ಞಾನ (General Science) ವಿಷಯದ ಪ್ರಮುಖ ಸಂಭವನೀಯ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ
🔬 ಸಾಮಾನ್ಯ ವಿಜ್ಞಾನ ಪ್ರಶ್ನೆಗಳು
1. ಚಿಮಣಿ ದೀಪದಲ್ಲಿನ ಸೀಮೆಎಣ್ಣೆ ಬತ್ತಿಯ ಮೂಲಕ ಮೇಲೇರುವುದಕ್ಕೆ ಪ್ರಮುಖ ಕಾರಣ-
ಎ. ಗಾಳಿಯ ಪವನಶೀಲತೆ
ಬಿ. ಬತ್ತಿಯ ಮೂಲಕ ಸೀಮೆಎಣ್ಣೆಯ ವಿಸರಣೆ
ಸಿ. ಬತ್ತಿಯ ಕ್ಯಾಪಿಲರಿ ಕ್ರಿಯೆ
ಡಿ. ಬತ್ತಿಯ ಗುರುತ್ವಬಲ
2. ಆ ಮತ್ತು ಆ ಎಂಬ ಕಾರುಗಳ ರಾಶಿಯು $m_{A}$ ಮತ್ತು $m_{B}$ ಗಳಾಗಿದ್ದು $m_{A}$ ರಾಶಿ $m_{B}$ ಗಿಂತ ಅಧಿಕವಿದೆ. $(m_{A}>m_{B})$ ಎರಡು ಕಾರುಗಳು ಒಂದೇ ದಿಕ್ಕಿನಲ್ಲಿ ಒಂದೇ ಚಲನಾ ಶಕ್ತಿಯಿಂದ ಚಲಿಸುತ್ತಿವೆ. ಹಾಗಾದರೆ ಎರಡು ಕಾರಿನ ಮೇಲೆ ಸಮಪ್ರಮಾಣ ಬ್ರೇಕ್ ಬಲವನ್ನು ಹಾಕಿದಾಗ ಅವುಗಳ ನಿಶ್ಚಲ ಸ್ಥಿತಿಗೆ ಬರುವ ಮುನ್ನ
ಎ. ಎ ಯು ಅಧಿಕ ದೂರವನ್ನು ಕ್ರಮಿಸಿರುವುದು
ಬಿ. ಬಿ ಯು ಅಧಿಕ ದೂರವನ್ನು ಕ್ರಮಿಸಿರುವುದು
ಸಿ. ಎ ಮತ್ತು ಬಿ ಎರಡೂ ಒಂದೇ ದೂರವನ್ನು ಕ್ರಮಿಸಿರುವುವು
ಡಿ. ಅವುಗಳು ಕ್ರಮಿಸುವ ದೂರ ಅವುಗಳ ವೇಗದ ಮೇಲೆ ಅವಲಂಬವಾಗಿರುವುದು.
3. ಕಾರ್ಬನ್ ಡೈ ಒಂದು ಮಾದರಿಯು ಘನಸ್ಥಿತಿಯಿಂದ ದ್ರವಕ್ಕೆ ಮತ್ತು ದ್ರವದಿಂದ ರೂಪಾಂತರಗೊಂಡಾಗ ಏನಾಗುವುದು?
ಎ. ದ್ರವರಾಶಿಯಲ್ಲಿ ಬದಲಾವಣೆಯಾಗುವುದು
ಬಿ. ಸಾಂದ್ರತೆಯಲ್ಲಿ ಬದಲಾವಣೆಯಾಗುವುದು
ಸಿ. ಸಂಯೋಜನೆಯಲ್ಲಿ ಬದಲಾವಣೆ
ಡಿ. ಭೌತಿಕ ಗುಣಲಕ್ಷಣದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ
4. ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
ಎ. ಬೇರೆ ಬೇರೆ ಗ್ರಹಗಳ ಮೇಲೆ ದೇಹದ ದ್ರವ್ಯದ ಬೇರೆ ಬೇರೆಯಾಗಿರುವುದು.
ಬಿ. ದ್ರವ್ಯದ ತೂಕವೂ ಭೂಮಿ, ಚಂದ್ರ ಮತ್ತು ನಿರ್ವಾತ ಬಾಹ್ಯಾಕಾಶದಲ್ಲಿ ಒಂದೇಯಾಗಿರುವುದು
ಸಿ. ಒಂದು ವಸ್ತುವಿನ ಮೇಲಿನ ಗುರುತ್ವಾಕರ್ಷಣೆ ಬಲವು ಪ್ರತಿ ಸಮತೋಲನಗೊಂಡಾಗ, ವಸ್ತುವಿಗೆ ತೂಕರಹಿವಾಗಿರುವುದು.
ಡಿ. ವಸ್ತುವಿನ ತೂಕ ಮತ್ತು ರಾಶಿಗಳು ಭೂಮೇ ಸಮುದ್ರ ಮಟ್ಟದಲ್ಲಿ ಒಂದೇ ಸಮನಾಗಿರುವುದು.
5. ಈ ಕೆಳಗಿನ ಯಾವ ಕೋಶ ಭಾಗವು ಪ್ರಾಣಿ ಜೀವಕೋಶದಲ್ಲಿ ಕಂಡು ಬರುವುದಿಲ್ಲ?
ಎ. ಕೋಶದ್ರವ್ಯ
ಬಿ. ಎಂಡೊಪ್ಲಾಸ್ಮಿಕ್ ರೆಟಿಕ್ಯೂಲಮ್
ಸಿ. ಕೋಶಭಿತ್ತಿ
ಡಿ. ಮೈಟೊಕಾಂಡ್ರಿಯಾ
6. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
ಕಾರ್ಬೊಹೈಟ್ರೆಡ್‌ಗಳು ಮಾನವನ ಏಕೈಕ ಶಕ್ತಿಯ ಮೂಲವಾಗಿದೆ
ಇತರೆ ಆಹಾರ ಪದಾರ್ಥಗಳಿಗೆ ಹೊಲಿಸಿದಾಗ, ಕೊಬ್ಬು ಉತ್ಕರ್ಷಣೆಯಿಂದ ಗರಿಷ್ಟ ಶಕ್ತಿಯನ್ನು ಒದಗಿಸುವುದು
ಈ ಮೇಲಿನ ಯಾವ ಹೇಳಿಕೆಯು ಸರಿಯಾಗಿವೆ?
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದು ಅಲ್ಲ
7. ಈ ಕೆಳಗಿನ ಯಾವುದು ಸಸ್ಯಗಳಲ್ಲಿ ಕಂಡು ಬರುವ ಹಾರ್ಮೊನ್‌ಆಗಿದೆ?
ಎ. ಇನೆಸೂಲಿನ್
ಬಿ. ಸೈಟೊಕೈನಿನ್
ಸಿ. ಗಿಬ್ಬರೆಲಿನ್
ಡಿ. ಬಿ ಮತ್ತು ಸಿ
8. ಈ ಕೆಳಗಿನ ಯಾವ ಕ್ರಿಯೆಯ ಮೂಲಕ ಬೆಳಕು ತನ್ನಲ್ಲಿರುವ ಬಣ್ಣಗಳನ್ನು ಬಿತ್ತರಿಸುತ್ತದೆ?
ಎ. ಬೆಳಕಿನ ಚದರುವಿಕೆ
ಬಿ. ಬೆಳಕಿನ ಪ್ರತಿಫಲನ
ಸಿ. ಬೆಳಕಿನ ವಿವರ್ತನೆ
ಡಿ. ಬೆಳಕಿನ ಧ್ರುವೀಕರಣ
9. ಅನಿಲದ ಒಂದು ಮಾದರಿಯ ವರ್ತನೆಯನ್ನು ಹೊಳಪಿನಿಂದ ಕೂಡಿದ ಸಿರ್ಬೆಯ ಉಪಸ್ಥಿತಿಯಲ್ಲಿ ಗುರುತಿಸಲಾಗುವುದು. ಹಾಗಾದರೆ ಕೆಳಗಿನ ಯಾವ ಅನಿಲವು ತನ್ನಷ್ಟಕ್ಕೆ ತಾನೇ ದಹನಕ್ರಿಯೆಗೆ ಒಳಪಡುವುದಿಲ್ಲ ಮತ್ತು ಸಿರ್ಬೆಯನ್ನು ದಹನಕ್ರಿಯೆಗೆ ಒಳಪಡಲು ಬಿಡುವುದಿಲ್ಲ
ಎ. ಆಮ್ಲಜನಕ
ಬಿ. ಸಾರಜನಕ
ಸಿ. ಜಲಜನಕ
ಡಿ. ವಿಲಿಥೇನ್
10. ಪೆಟ್ರೋಲ್ ಈಥಲೀನ್ ಡೈಬೊಮೈಡ್‌ನ್ನು ಸೇರಿಸುವ ಉದ್ದೇಶ-
ಎ. ಇಂಧನದ ಆಕ್ಟೋನ್ ಸಂಖ್ಯೆಯನ್ನು ಹೆಚ್ಚಿಸಲು
ಬಿ. ಸಿಸದ ಆಕ್ಸೆಡ್‌ನ್ನು ಹೊರಹಾಕಲು
ಸಿ. ಪೆಟ್ರೋಲ್‌ನಲ್ಲಿರುವ ಗಂಧಕದ ಸಂಯುಕ್ತವನ್ನು ತೆಗೆದುಹಾಕಲು
ಡಿ. ಟೆಟ್ರಾ ಈಥೈಲ್ ಸಿಸದ ಬದಲಿ ವಸ್ತುವಾಗಿ ಸೇವೆ ಸಲ್ಲಿಸುವುದು.
11. ತೈಲದಿಂದ ಕೂಡಿದ ಪ್ರದೇಶದ ಮೇಲೆ ಬೆಳಕಿನ ಕಿರಣಗಳನ್ನು ಭಿತ್ತರಿಸಿದಾಗ, ಈ ಕೆಳಗಿನ ವಿದ್ಯಮಾನದಿಂದ ಏಳು ಬಣ್ಣಗಳನ್ನು ತೋರಿಸುತ್ತದೆ.
ಎ. ಧ್ರುವೀಕರಣ
ಬಿ. ವಕ್ರೀಭವನ
ಸಿ. ಪ್ರತಿಫಲನ
ಡಿ. ವ್ಯತೀಕರಣ
12. ಈ ಕೆಳಗಿನ ಯಾವುದು ಯಕೃತ್ತಿನ ಒಂದು ಕಾರ್ಯವಾಗಿಲ್ಲ?
ಎ. ಗ್ಲುಕೋಸನ್ನು ಗ್ಲೋಕೋಜನ್ ಆಗಿ ಪರಿವರ್ತಿಸುವುದು
ಬಿ. ಯೂರಿಯಾದ ಉತ್ಪಾದನೆ
ಸಿ. ಸತ್ತ ಮತ್ತು ಹರಿದುಹೋದ ಕೆಂಪು ರಕ್ತ ಕಣಗಳನ್ನು ನಾಶಗೊಳಿಸುವುದು
ಡಿ. ಜೀರ್ಣಗೊಳ್ಳದ ಆಹಾರ ಪದಾರ್ಥದಿಂದ ಹೆಚ್ಚುವರಿ ನೀರನ್ನು ಮತ್ತು ಆಹಾರವನ್ನು ಹೀರಿಕೊಳ್ಳುವುದು.
13. ಈ ಕೆಳಗಿನ ಯಾವುದು ತಪ್ಪಾದ ಹೇಳಿಕೆಯಾಗಿದೆ?
ಎ. ನೀರಿನ ಆವಿಯ ಒತ್ತಡವು ವಾತಾವಣದ ಒತ್ತಡಕ್ಕೆ ಸಮವಾದಾಗ ನೀರು ಕುದಿಯಲು ಪ್ರಾರಂಭಗೊಳ್ಳುವುದು
ಬಿ. ನೀರು ಸಾರ್ವತ್ರಿಕ ದ್ರಾವಣವಾಗಿದೆ.
ಸಿ. MgCl, CaCl, MgSO, CaSO, ಗಡಸುತನಕ್ಕೆ ಕಾರಣವಾಗಿದೆ.
ಡಿ. ಮಂಜುಗಡ್ಡೆಯ ಸಾಂದ್ರತೆಯ ನೀರಿನ ಸಾಂದ್ರತೆಗಿಂತ ಹೆಚ್ಚಾಗಿರುವುದು
14. ಹಾನಿಗೊಳಪಟ್ಟ ಅಂಗಾಂಶದ ಬೆಳವಣಿಗೆ ಮತ್ತು ದುರಸ್ತಿಯು ಯಾವ ಜೀವಕೋಶ ವಿರ್ಭಣೆ ಒಳಪಡುವುದು?
ಎ. ಮೈಟಾಟಿಕ್ ಮಾತ್ರ
ಬಿ. ಮೈಟಾಟಿಕ್ ಮತ್ತು ಮಿಯೊಟಿಕ್
ಸಿ. ಮಿಯೊಟಕ್ ಮಾತ್ರ ಡಿ. ಅಮೈಟೊಟಿಕ್
15. ಒಂದು ಪರಮಾಣುವಿನ ರಾಶಿ ಸಂಖ್ಯೆಯನ್ನು ಯಾವುದರಿಂದ ಕಂಡು ಹಿಡಿಯಲಾಗುವುದು?
ಎ. ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್‌ಗಳ ಸಂಖ್ಯೆಯನ್ನು ಕೂಡಿಸುವ ಮೂಲಕ
ಬಿ. ಪ್ರೋಟಾನ್ ಮತ್ತು ಎಲೆಕ್ಟ್ರಾನ್‌ಗಳ ಸಂಖ್ಯೆಯನ್ನು ಕೂಡಿಸುವ ಮೂಲಕ
ಸಿ. ಪ್ರೋಟಾನ್‌ಗಳ ಸಂಖ್ಯೆ ಮಾತ್ರ
ಡಿ. ನ್ಯೂಟ್ರಾನ್ ಮತ್ತು ಪ್ರೋಟಾನ್‌ಗಳ ಸಂಖ್ಯೆಯನ್ನು ಕೂಡಿಸುವ ಮೂಲಕ
16. ಚಲಿಸುತ್ತಿರುವ ರೈಲಿನಲ್ಲಿ ಒಬ್ಬ ಪ್ರಯಾಣಿಕ ಮೇಲ್ಮುಖವಾಗಿ ನಾಣ್ಯವನ್ನು ಚಿಮ್ಮಿದಾಗ ಅದು ಅವನ ಹಿಂದೆ ಹೋಗಿ ಬೀಳುವುದು. ಈ ಮೂಲಕ ನಮಗೆ ತಿಳಿದು ಬರುವುದೇನೆಂದರೆ ರೈಲಿನ ಚಲನೆಯು
ಎ. ಅಧಿಕವೇಗದಿಂದ ಕೂಡಿರುವುದು
ಬಿ. ಏಕರೂಪವಾಗಿರುವುದು
ಸಿ. ಕಡಿಮೆಯಾಗುತ್ತ ಹೋಗುವುದು
ಡಿ. ವೃತ್ತೀಯ ಪಥದಲ್ಲಿ ರೈಲು ಚಲಿಸುವುದು
17. ದ್ಯುತಿ ಸಲಕರಣೆಗಳಲ್ಲಿ ಬಳಸುವ ಮಸೂರಗಳು ಯಾವ ವಿದ್ಯಮಾನದ ಮೂಲಕ ಚಿತ್ರವನ್ನು (ಇಮೇಜ್)ನ್ನು ಸೆರೆ ಹಿಡಿಯುತ್ತವೆ?
ಎ. ಪ್ರತಿಫಲನ
ಬಿ. ವಕ್ರೀಭವನ
ಸಿ. ಚದುರುವಿಕೆ
ಡಿ. ವಿಸರಣೆ
18. ವಿಟಾಮಿನ್‌ಗಳ ಬಗ್ಗೆ ಕೆಳಗಿನ ಯಾವ ಹೇಳಿಕೆ ಸರಿಯಾಗಿವೆ
ದೇಹದಲ್ಲಿ ಸಂಯೋಜಕ ಅಂಗಾಂಶಗಳ ರಚನೆಗೆ ವಿಟಮಿನ್ ಸಿ ಅತ್ಯವಶ್ಯಕವಾಗಿ ಬೇಕಾಗುವುದು
ವಿಟಾಮಿನ್ ಡಿ ಕಣ್ಣಿನ ವರ್ಣದ್ರವ್ಯದ ಉತ್ಪಾದನೆಗೆ ಅವಶ್ಯಕವಾಗಿದೆ.
ವಿಟಾಮಿನ್ ಬಿ ಕೆಂಪು ರಕ್ತಕಣಗಳು ಪ್ರೌಢತೆಗೊಳ್ಳಲು ಸಹಕಾರಿಯಾಗಿವೆ.
ಕರಳಿನಿಂದ ಹೀರಲ್ಪಡುವ ಕ್ಯಾಲ್ಸಿಯಂನ್ನು ಉಪಯೋಗಿಸಲು ವಿಟಾಮಿನ್ ಸಿ ಅವಶ್ಯಕವಾಗಿದೆ.
ಉತ್ತರ ಸಂಕೇತಗಳು:
ಎ. 1 ಮತ್ತು 2
ಬಿ. 1 ಮತ್ತು 3
ಸಿ. 2 ಮತ್ತು 4
ಡಿ. 1 ಮತ್ತು 4
19. ಬಾವಲಿಗಳು ಕೆಳಗಿನ ಯಾವ ಅಲೆಯನ್ನು ಬಳಸಿ ತನ್ನ ಹಾರಾಟ ಪಥದಲ್ಲಿನ ಅಡೆತಡೆಗಳನ್ನು ಪತ್ತೆ ಹಚ್ಚುವುದು?
ಎ. ಅವಗೆಂಪು ಅಲೆಗಳು
ಬಿ. ವಿದ್ಯುತ್ಕಾಂತೀಯ ಅಲೆಗಳು
ಸಿ. ಶ್ರವಣಾತೀತ ಡಿ. ರೇಡಿಯೋ ತರಂಗ
20. ಒಂದು ವಿದ್ಯುನ್ಮಂಡಲದಲ್ಲಿ ಬಳಸುವ ಅಪ್ಯೂಸ್‌ನ ಕಾರ್ಯ
ಎ. ವಿದ್ಯುನ್ಮಂಡಲದಲ್ಲಿ ಹೆಚ್ಚುವರಿ ವಿದ್ಯುಚ್ಛಕ್ತಿ ಹರಿದಾಗ ವಿದ್ಯುನ್ಮಂಡಲದಲ್ಲಿ ವಿದ್ಯುಚ್ಛಕ್ತಿ ಹರಿವನ್ನು ನಿಲ್ಲಿಸುವುದು.
ಬಿ. ವಿದ್ಯುತ್ ಪೂರೈಕೆಯಾಗದ ಸಂದರ್ಭದಲ್ಲಿ ವಿದ್ಯುನ್ಮಂಡಲವನ್ನು ಬ್ರೇಕ್ ಮಾಡುವುದು.
ಸಿ. ಯಾವುದೇ ಅಡೆತಡೆಯಿಲ್ಲದೆ ವಿದ್ಯುತ್ ವಿದ್ಯುನ್ಮಂಡಲದಲ್ಲಿ ಹರಿಯುವುದನ್ನು ಸೂಚಿಸಲು.
ಡಿ. ವಿದ್ಯುನ್ಮಂಡಲದಲ್ಲಿ ವಿದ್ಯುತ್‌ನ ಹರಿವನ್ನು ಸಂಪೂರ್ಣ ಗೊಳಿಸಲು
21. ಡಿಎನ್‌ಎದಲ್ಲಿರುವ ಎರಡು ಸುರಳಿಗಳು ಯಾವುದರಿಂದ ಬಂಧಿಸಲ್ಪಟಟಿವೆ?
ಎ. ಹೈಡೋಜನ್ ಬಂಧೆ
ಬಿ. ಕೊವಾಲೆಂಟ ಬಂಧ
ಸಿ. ವ್ಯಾನ ಡೆರವಾಲ್‌ಬಲ
ಡಿ. ಸ್ಥಾಯೀವಿದ್ಯುತ್ ಬಲ
22. ಪ್ರಾಣಿ ಜೀವಕೋಶದಲ್ಲಿ ಕೋಶೀಯ ಉಸಿರಾಟ ಕ್ರಿಯೆ ನಡೆಯುವ ಸ್ಥಳ ಯಾವುದು?
ಎ. ರೈಬೊಜೊಜ್
ಬಿ. ಮೈಟೊಕಾಂಡ್ರಿಯಾ
ಸಿ. ಎಂಡೊಪ್ಲಾಸ್ಟಿಕ್ ರೆಟಕ್ಯೂಲಮ್
ಡಿ. ಲೈಸೊಸೊಮ
23. ಶಬ್ದ ತರಂಗಗಳು ಈ ಕೆಳಗಿನ ಯಾವ ತರಂಗಗಳ ಸಮಾನರೂಪವಾಗಿದೆ?
ಎ. ಗಾಳಿಯ ಮೂಲಕ ಪ್ರಸರಣಗೊಳ್ಳುತ್ತಿರುವ ಲೇಸರ್ ಬೆಳಕು
ಬಿ. ಹಿಗ್ಗಿಸಿದ ವೈರ್‌ನಿಂದ ರೂಪಗೊಂಡ ಅಲೆ
ಸಿ. ಗಾಳಿಯನ್ನು ಹೊಂದಿದ ಕೊಳವೆಯನ್ನು ಮೇಲಕ್ಕೆ ಕೆಳಕ್ಕೆ ಚಲಿಸಿದಾಗ ಉಂಟಾಗುವ ಅಲೆಗಳು
ಡಿ. ಮೊಬೈಲ್ ಫೋನ್‌ಗಳ ಟವರ್‌ಗಳಿಂದ ಉಂಟಾಗುವ ಅಲೆಗಳು
24. ಅರ್ಧಭಾಗ ಕಪ್ಪು ಹಾಳೆಯಿಂದ ಮುಚ್ಚಲ್ಪಟ್ಟ ಪೀನಮಸೂರದಿಂದ ರೂಪಗೊಂಡ ಚಿತ್ರವನ್ನು ನೋಡಿದಾಗ ಯಾವ ರೀತಿಯ ಪರಿಣಾಮವನ್ನು ಅನುಭವಿಸುವಿರಿ?
ಎ. ಚಿತ್ರದ ಅರ್ಧಭಾಗ ಮಾತ್ರ ಕಾಣುವುದು
ಬಿ. ಭಾವಚಿತ್ರದ ನಿಖರತೆ ಕಡಿಮೆಯಾಗುವುದು
ಸಿ. ತಲೆಕೆಳಗಾದ ಚಿತ್ರ ಕಾಣುವುದು
ಡಿ. ಚಿಕ್ಕ ಗಾತ್ರದ ಭಾವ ಚಿತ್ರ ಕಾಣುವುದು
25. ಗಾಜಿನ ಬಾಟಲಿಯ ಮುಚ್ಚಳಿಕೆಯ ಮೇಲಿನ ಲೋಹದ ಹಿಡಿಕೆ ಸಿಕ್ಕಿಕೊಂಡಾಗ, ಕೆಳಗಿನ ತತ್ವದ ಮೇಲೆ ತೆರೆದುಕೊಳ್ಳುವುದು?
ಎ. ಶಾಖವನ್ನು ನೀಡಿದಾಗ, ಲೋಹವು ಗಾಜಿಗಿಂತ ಹೆಚ್ಚಾಗಿ ವಿಸ್ತರಣೆಗೊಳ್ಳುವುದು (ಕುಟ್ಯತನ).
ಬಿ. ಲೋಹ ಮತ್ತು ಗಾಜು ಸಮರೂಪದಲ್ಲಿ ವಿಸ್ತರಣೆ ಗೊಳ್ಳುವುದು
ಸಿ. ಲೋಹ ಮತ್ತು ಗಾಜು ಸಮ ರೂಪದಲ್ಲಿ ವಿಸ್ತರಣೆ ಗೊಳ್ಳುವುದು
ಡಿ. ಬಾಟಲಿಗೆ ತಂಪನ್ನು ನೀಡಿದಾಗ ಬರಡೂ ಕುಗ್ಗುವುದು.
26. ಈ ಕೆಳಗಿನ ಯಾವುದನ್ನು ಬಲೂನಿನಲ್ಲಿ ತುಂಬಿದಾಗ ಅದು ಗಾಳಿಯಲ್ಲಿ ಯಾವಾಗಲೂ ಮೇಲಕ್ಕೆ ಹೋಗುವುದು?
ಎ. ಗಾಳಿಗಿಂತ ಕಡಿಮೆ ಸಾಂಧ್ರತೆಯ ಅನಿಲ
ಬಿ. ಗಾಳಿಗಿಂತ ಹೆಚ್ಚಿನ ಸಾಂಧ್ರತೆಯ ಅನಿಲ
ಸಿ. ತಂಪಾದ ಗಾಳಿ
27. ಹೈಡೋಜನ್ ನ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ
ಇದು ಮೂರು ಐಸೊಟೋಪ್‌ಗಳನ್ನು ಹೊಂದಿದ್ದು, ಪ್ರೊಟಿಯಂ ಅತ್ಯಂತ ಸಾಮಾನ್ಯ ಐಸೊಟೊಪ್ ಆಗಿದೆ
H.ಆಯಾನು ದ್ರಾವಣದಲ್ಲಿ ಸ್ವತಂತ್ರವಾಗಿ ಇರುವುದು
ಡೈಹೈಡೋಜನ್ Hವು ಅಪಕರ್ಷಣಾ ಕರ್ತೃವಾಗಿದೆ.
ಮೇಲಿನ ಯಾವ ಹೇಳಿಕೆ ಸರಿಯಾಗಿದೆ?
ಎ. 1, 2, 3
ಬಿ. 1 ಮಾತ್ರ
ಸಿ. 1 ಮತ್ತು 3
ಡಿ. 3 ಮಾತ್ರ
28. ಮೊಬೈಲ್ ಫೋನ್ ಚಾರ್ಜರ್ ಒಂದು
ಎ. ಪಯಾರಯಕ ಸಾಧನವಾಗಿದೆ
ಬಿ. ಒಂದು ಯುಪಿಎಸ್ ಆಗಿದೆ
ಸಿ. ಸ್ಟೆಪ್‌ಡೌನ್ ವಿದ್ಯುತ್ ಪರಿವರ್ತಕ ಆಗಿದೆ
ಡಿ. ಸ್ಟೆಪ್‌ಅಪ್ ವಿದ್ಯುತ್ ಪರಿವರ್ತಕ ಆಗಿದೆ
29. ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
ಎ. ಫುಲ್ಲರಿನ್ ಕೇವಲ 6 ಸದಸ್ಯರ ಕಾಬರನ್ ಉಂಗುರ ರಚನೆಯನ್ನು ಹೊಂದಿದೆ.
ಬಿ. ಇವುಗಳು ಪಂಜರು ರೀತಿಯ ಅಣುಗಳಾಗಿವೆ.
ಸಿ. ವಜ್ರವು ಉಷ್ಣಬಲದಲ್ಲಿ ಕಾರ್ಬನ್ ಅತ್ಯಂತ ಸ್ಥಿರವಾದ ಭಿನ್ನರೂಪಾವಾಗಿದೆ
ಡಿ. ಗ್ರಾಫೈಟ್‌ಗಳು ನುಣುಚಾದ ಮತ್ತು ಗಟ್ಟಿಯಾದ ರಚನೆಯನ್ನು ಹೊಂದಿದ್ದು, ಇವುಗಳನ್ನು ಶುಷ್ಕ ಕೀಲಣ್ಣೆಯಾಗಿ ಬಳಸುವರು.
30. ಡೊಪ್‌ಸಿ ಎಂಬ ಕಾಯಿಲೆ ಯಾವುದರ ಆಹಾರ ಕಲಬೆರಕೆಯಿಂದ ಕಂಡು ಬರುವುದು?
ಎ. ಬೆಣ್ಣೆ
ಬಿ. ತೊಗರಿ ಬೆಳೆ
ಸಿ. ಸಾಸಿವೆ ಎಣ್ಣೆ
ಡಿ. ಹಳದಿ ಪುಡಿ
31. ಕಾರ್ಬನನ ಅತ್ಯಂತ ಸ್ಥಿರರೂಪ ಎಂದರೆ
ಎ. ವಜ್ರ
ಬಿ. ಗ್ರಾಫೆಟ್
ಸಿ. ಫುಲ್ಲರಿನ್
ಡಿ. ಕಲ್ಲಿದ್ದಲು
32. ಈ ಕೆಳಗಿನ ಯಾವುದು ಸಂತಾನಕ್ರಿಯೆಯ ಮೂಲಕ ಹರಡುವ ರೋಗವಾಗಿಲ್ಲ?
ಎ. ಸಿಫಿಲಿಸ್
ಬಿ. ಗೊನೊರಿಯಾ
ಸಿ. ಸ್ಕರ್ವಿ
ಡಿ. ಹೆಪಟೈಟಸ್ ಬಿ
33. ರೋಗಿಯ ತಪಾಸಣೆಯ ನಂತರ ವೈದ್ಯರು ಕಬ್ಬಿಣ ಮತ್ತು ಪೊಲಿರ ಆಮ್ಲದ ಮಾತ್ರೆಗಳನ್ನು ತೆಗೆದುಕೊಳ್ಳಲು ಸಲಹೆ ನೀಡಿದರೆ, ರೋಗಿಯು ಯಾವ ಕಾಯಿಲೆಯಿಂದ ಬಳಲುತ್ತಿರುವನು?
ಎ. ಒಸ್ಟಿಯೊ ಪೊರೊಸಿಸ್
ಬಿ. ಅನೆಮಿಯಾ
ಸಿ. ಗಾಯಿಟರ್
ಡಿ. ಪ್ರೋಟಿನ್ ಶಕ್ತಿ ಅಪೌಷ್ಠಿಕತೆ
34. ಬರ್ನೊಲಿ ತತ್ವವು ಈ ಕೆಳಗಿನ ನಿಯಮದ ಮೇಲೆ
ಎ. ರಾಶಿ ಸಂರಕ್ಷಣೆ
ಬಿ. ಸಂವೇಗ ಸಂರಕ್ಷಣೆ
ಸಿ. ಕೊನೀಯ ಸಂವೇಗ ಸಂರಕ್ಷಣೆ ಡಿ. ಶಕ್ತಿ ಸಂರಕ್ಷಣೆ
35. ಪ್ರಾಣಿ ಜೀವಕೋಶದಲ್ಲಿ ಕಂಡು ಬರುವ ಪ್ರೊಟೊಪ್ಲಾಸ್ಮನ್ ಪ್ರಧಾನ ಅಕಾರ್ಬನಿಕ ಘಟಕಾಂಶ ಯಾವುದು?
ಎ. ಸೋಡಿಯಂ ಮತ್ತು ಪೊಟ್ಯಾಷಿಯಂನ ಲವಣಗಳು
ಬಿ. ನೀರು
ಸಿ. ಕಬ್ಬಿಣ
ಡಿ. ರಂಜಕ
36. ಎ ಮತ್ತು ಬಿ ಎಂಬ ವಾಹಕತೆಯಿಂದ ಕೂಡಿದ ವೈರ್‌ಗಳು ಒಂದೇ ವಿಧದ ವಸ್ತುವಿನಿಂದ ಮಾಡಲ್ಪಟ್ಟಿವೆ. ಬಿ ಯ ಉದ್ದವು ಎ ಗಿಂತ ಎರಡು ಪಟ್ಟು ಅಧಿಕವಾಗಿದ್ದು ಮತ್ತು ಎನ ವೃತ್ತೀಯ ತ್ರಿಜ್ಯವು ಬಿ ಗಿಂತ ಎರಡು ಪಟ್ಟು ಅಧಿಕವಾದರೆ, $R_{A}$ ಮತ್ತು $R_{B}$ ಗಳ ರೋಧವು ಯಾವ ಅನುಪಾತದಲ್ಲಿರುವುದು?
ಎ. 2:1
ಬಿ. 1:8
ಸಿ. 1:4
ಡಿ. 1:2
37. ಈ ಕೆಳಗಿನವುಗಳನ್ನು ಗಮನಿಸಿ: ನೈಜ ಚಿತ್ರ (ಇಮೇಜ್ )ವು
ಪರದೆಯ ಮೇಲೆ ಸ್ಥಾಪಿಸಬಹುದು
ಇದು ಯಾವಾಗಲೂ ವರ್ಧಿತ ಮತ್ತು ತಲೆಕೆಳಗಾದ ರೂಪವನ್ನು ಹೊಂದಿರುವುದು
ಈ ಮೇಲಿನ ಯಾವ ಹೇಳಿಕೆಯು ಸರಿಯಾಗಿವೆ?
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದು ಅಲ್ಲ
38. ಜೇನುತುಪ್ಪದಲ್ಲಿ ಈ ಕೆಳಗಿನ ಯಾವುದು ಪ್ರಧಾನವಾಗಿರುತ್ತದೆ?
ಎ. ಸುಕ್ರೋಸ್
ಬಿ. ಫ್ರುಕ್ಟೋಸ್
ಸಿ. ಗ್ಯಾಲಕ್ಟೋಸ್
ಡಿ. ಮಾಲ್ಲೋಸ್
39. ವಿದ್ಯುನ್ಮಂಡಲದಲ್ಲಿ ಶಾರ್ಟ್ ಸರ್ಕ್ಯೂಟ್ ಆದಾಗ ವಿದ್ಯುತ್ ಪ್ರವಾಹವು
ಎ. ಕಡಿಮೆಯಾಗುವುದು
ಬಿ. ಬದಲಾಗುವುದಿಲ್ಲ
ಸಿ. ಕ್ರಮೇಣವಾಗಿ ಹೆಚ್ಚಾಗುವುದು
ಡಿ. ನಿರಂತರವಾಗಿ ಬದಲಾಗುವುದು
40. ಈ ಕೆಳಗಿನ ಯಾವ ಕಾಯಿಲೆಯನ್ನು ಬ್ರೆಕ್ ಬೋನ್ ಜ್ವರ ಎನ್ನುವರು?
ಎ. ಟೈಫೈಡ್
ಬಿ. ರಿನಿಟ
ಸಿ. ಹಳದಿ ಜ್ವರ
ಡಿ. ಡೆಂಗ್ಯೂ
41. ಶಬ್ದದ ಅಧಿಕತೆಗೆ (ಲೌಡ್ ನೆಸ್) ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
ಎ. ಅದರ ಆವೃತ್ತಿ
ಬಿ. ಆ್ಯಂಪ್ಲಿಟ್ಯೂಡ್
ಸಿ. ಅದರ ವೇಗ
ಡಿ. ಅದರ ಪಿಚ್
42. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ. ರುದರ್‌ಫೋರ್ಡ್ ಅಲ್ಪಾ ಕಣಗಳ ಚದುರುವಿಕೆ ಪ್ರಯೋಗವು ಎಲೆಕ್ಟ್ರಾನ್ ಆವಿಷ್ಕಾರಕ್ಕೆ ಎಡೆ ಮಾಡಿಕೊಟ್ಟಿತು.
ಬಿ. ಒಂದು ಪರಮಾಣುವಿನ ನ್ಯೂಕ್ಲಿಯಸ್ ಪ್ರೋಟಾನುಗಳನ್ನು ಹೊಂದಿದೆ ಎಂದು ಜೆಜೆ ಥಾಮ್ರನ್ ತೋರಿಸಿಕೊಟ್ಟರು.
ಸಿ. ಒಂದು ಪರಮಾಣುವಿನ ನ್ಯೂಕ್ಲಿಯಸ್‌ನಲ್ಲಿ ಪ್ರೋಟಾನ್‌ಗಳ ಸಂಖ್ಯೆಯು ನ್ಯೂಟ್ರಾನ್‌ಗಳ ಸಂಖ್ಯೆಗೆ ಸಮನಾಗಿರುವುದು
ಡಿ. ಒಂದು ಪರಮಾಣುವಿನ ರಾಶಿ ಸಂಖ್ಯೆಯು ವಿವಿಧ ಕಕ್ಷೆಗಳಲ್ಲಿನ ಎಲೆಕ್ಟ್ರಾನ್‌ಗಳ ಸಂಖ್ಯೆಗೆ ಸಮನಾಗಿರುವ
43. ಈ ಕೆಳಗಿನ ಯಾವುದು ತಪ್ಪಾದ ಹೇಳಿಕೆಯಾಗಿದೆ?
ಎ. ಸುಣ್ಣದ ಕಲ್ಲಿನ ಅನ್ವಯವು ಮಣ್ಣನ್ನು ಆಮ್ಲಯ ಗುಣವನ್ನು ಕುಂದುವಂತೆ ಮಾಡುತ್ತದೆ.
ಬಿ. ತೇವಾಂಶ ಹವಾಗುಣ ಪ್ರದೇಶದ ಮಣ್ಣು ಅಧಿಕ ಅಲ್ಲೀಯತೆಯ ಗುಣವನ್ನು ಹೊಂದಿರುತ್ತದೆ.
ಸಿ. ಮಣ್ಣಿನಲ್ಲಿ ಆಮ್ಮಿಯತೆ ಗುಣ ಹೆಚ್ಚಾದಾಗ ಅದರ ಫಲವತ್ತತೆ ಕಡಿಮೆಯಾಗುವುದು
ಡಿ. ಶುಷ್ಕ ಹವಾಗುಣ ಪ್ರದೇಶದ ಮಣ್ಣು ಅಲ್‌ಕಲಿನ್ ಗುಣವನ್ನು ಹೊಂದಿರುವುದು.
44. ಈ ಕೆಳಗಿನ ಯಾವುದು ಶೀತ ರಕ್ತ ಪ್ರಾಣಿಯಾಗಿದೆ?
ಎ. ಡಾಲಿನ್
ಬಿ. ಶಾರ್ಕ್
ಸಿ. ವೇಲ್
ಡಿ. ಪೊರ್‌ಪೊಯಿಸ್
45. ರಕ್ತದಲ್ಲಿ ಕಿರುತಟ್ಟೆಗಳ ಪ್ರಾಮುಖ್ಯತೆ ಎಂದರೆ
ಎ. ಆಮ್ಲಜನಕದ ಸಾಗಾಣೆ
ಬಿ. ಕಾರ್ಬನ್ ಡೈಆಕ್ಸೆಡ್ ಸಾಗಾಣೆ
ಸಿ. ರಕ್ತ ಹೆಪ್ಪುಗಟ್ಟಲು ಸಹಾಯಮಾಡುವುದು
ಡಿ. ಯೂರಿಯಾ ವಿಘಟನೆ ಮಾಡುವುದು
46. ಹೊಂದಿಸಿ ಉತ್ತರಿಸಿರಿ
| ಪಟ್ಟಿ -1 (ಮೂಲವಸ್ತು) PDF | ಪಟ್ಟಿ -2 (ಬಳಕೆ) PDF |
1. Li- | 1. ಅಣು ಗಡಿಯಾರದಲ್ಲಿ ವೇಳೆಯನ್ನು ಸೂಚಿಸಲು |
2. Na | 2. ಬ್ಯಾಟರಿ |
3. K | 3. ನರ ಮಿಡಿತದ ಸಾಗಾಣೆ |
4. Cs | 4. ರಕ್ತದಲ್ಲಿ ನೀರಿನ ಅಂಶವನ್ನು ನಿಯಂತ್ರಿಸುವುದು |
ಸಂಕೇತಗಳು:
47. ಭಾರಜಲ ದ ಬಗ್ಗೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
ನ್ಯೂಕ್ಲಿಯರ್ ಕ್ರಿಯಾಕಾರಿಯಲ್ಲಿ ಇದನ್ನು ಮಂದಕಾರಿಯಾಗಿ ಬಳಸುವುದು
ಪ್ರತಿಕ್ರಿಯಾ ಸಂವ್ಯವಸ್ಥೆಯಲ್ಲಿ ಇದನ್ನು ವಿನಿಮಯ ಪ್ರತಿಕ್ರಿಯೆಯ ಕರ್ತೃವಾಗಿ ಬಳಸುವುದಿಲ್ಲ
ಭಾರಜಲದ ಸ್ನಿಗ್ಧತೆಯು ಸಾಮಾನ್ಯ ನೀರಿಗಿಂತ ಕಡಿಮೆಯಾಗಿರುವುದು.
ಭಾರಜಲದ ಡೈ ಎಲೆಕ್ನಿಕ್ ಸ್ಥಿರಾಂಕವು ಸಾಮಾನ್ಯ ನೀರಿಗಿಂತ ಕಡಿಮೆಯಿರುವುದು.
ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ
ಎ. 1 ಮತ್ತು 2
ಬಿ. 2 ಮತ್ತು 3
ಸಿ. 3 ಮತ್ತು 4
ಡಿ. 1 ಮತ್ತು 4
48. ಲೋಹಗಳ ಬೆಸುಗೆಗೆ ಅಧಿಕ ತಾಪಮಾನದ ಅವಶ್ಯಕತೆ ಇರುತ್ತದೆ. ಹಾಗಾದರೆ ಇದನ್ನು ಯಾವುದರ ದಹನದಿಂದ ಪಡೆಯಲಾಗುವುದು?
ಎ. ಆಮ್ಲಜನಕದಲ್ಲಿನ ಅಸಿಟಲಿನ್
ಬಿ. ಆಮ್ಲಜನಕದಲ್ಲಿನ ಎಲ್‌ಪಿಜಿ
ಸಿ. ಆಮ್ಲಜನಕದಲ್ಲಿನ ಮಿಥೇನ್
ಡಿ. ನೈಟ್ರೋಜನ್‌ನಲ್ಲಿನ ಅಸಿಟಲಿನ್
49. ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ
ಎ. ವಾಹಕತೆಯು ಘನವಸ್ತುಗಳಲ್ಲಿ ಸಲೀಸಾಗಿ ಕಂಡುಬರುವುದು, ದ್ರವಗಳಲ್ಲಿ ಕಡಿಮೆ ಮತ್ತು ಅನಿಲಗಳಲ್ಲಿ ತುಂಬಾ ಕಡಿಮೆಯಾಗಿರುವುದು.
ಬಿ. ಅಭಿವಹನ ವಿದ್ಯುತ್‌ನಲ್ಲಿ ಉಷ್ಣ ಶಕ್ತಿಯು ಕಣಗಳ ಚಲನೆಯ ಮೂಲಕ ಸಾಗುವುದು.
ಸಿ. ವಿಕಿರಣಗಳಲ್ಲಿ ವಿದ್ಯುತ್ ಕಾಂತಿಯ ಅಲೆಗಳ ರೂಪದಲ್ಲಿ ಉಷ್ಣ ಶಕ್ತಿಯು ಪ್ರಸರಣ ಗೊಳ್ಳುವುದು.
ಡಿ. ಘನವಸ್ತುಗಳು ದ್ರವರೂಪಕ್ಕೆ ಬರುವ ತಾಪಮಾನವನ್ನು ಕುದಿಯುವ ಬಿಂದು ಎನ್ನುವರು.
50. ಚರ್ಮದಲ್ಲಿ ರೂಪಗೊಳ್ಳುವ ವಿಟಮಿನ್ ಯಾವುದು?
ಎ. ವಿಟಮಿನ್ ಎ
ಬಿ. ವಿಟಮಿನ್ ಬಿ
ಸಿ. ವಿಟಮಿನಾ ಸಿ
ಡಿ. ವಿಟಮಿನ್ ಡಿ
✅ ಸಾಮಾನ್ಯ ವಿಜ್ಞಾನ ಉತ್ತರಗಳು
ನಿಮ್ಮ ಉತ್ತರಗಳನ್ನು ಇಲ್ಲಿ ಪರಿಶೀಲಿಸಿಕೊಳ್ಳಿ:
| ಪ್ರಶ್ನೆ ಸಂಖ್ಯೆ | ಉತ್ತರ | ಪ್ರಶ್ನೆ ಸಂಖ್ಯೆ | ಉತ್ತರ |
| 1. | C | 26. | A |
| 2. | C | 27. | C |
| 3. | B | 28. | C |
| 4. | D | 29. | B |
| 5. | C | 30. | C |
| 6. | B | 31. | B |
| 7. | D | 32. | C |
| 8. | A | 33. | B |
| 9. | B | 34. | D |
| 10. | B | 35. | B |
| 11. | D | 36. | D |
| 12. | D | 37. | A |
| 13. | D | 38. | B |
| 14. | A | 39. | C |
| 15. | D | 40. | D |
| 16. | A | 41. | B |
| 17. | B | 42. | C |
| 18. | B | 43. | A |
| 19. | C | 44. | B |
| 20. | A | 45. | C |
| 21. | A | 46. | A |
| 22. | B | 47. | D |
| 23. | C | 48. | A |
| 24. | B | 49. | D |
| 25. | A | 50. | D |
💡 ಟಿಪ್: ಪ್ರತಿದಿನ ಇಂತಹ ಪ್ರಶ್ನೆಗಳನ್ನು ಬಿಡಿಸುವುದರಿಂದ ನಿಮ್ಮ ಸಾಮಾನ್ಯ ವಿಜ್ಞಾನದ ಜ್ಞಾನ ವೃದ್ಧಿಯಾಗುತ್ತದೆ ಹಾಗೂ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯವಾಗುತ್ತದೆ. ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಮರೆಯದಿರಿ!
File Type: Refer to Link
File Details
Language: Kannada / English
State: Karnataka
Published Year: 2026
Format: PDF
Additional Information
File Size: Available in Download Link
Number of Pages: Available in Download Link
Scanned Copy: Yes
Editable Text: No
Password Protected: No
Image Available: Yes
Download Link: Yes
File Size Reduced: No
Password: Not Required
Cost: Free of Cost
Click Here to Download
No comments:
Post a Comment