Title : ಭಾರತದ ಸಾರಿಗೆ ಸಂಪರ್ಕ ಅಧ್ಯಯ -9 ಭೂಗೋಳಶಾಸ್ತ್ರ ಎಸೆಸೆಲ್ಸಿ ನೋಟ್ಸ್
1) ಈ ಸಾರಿಗೆಯಿಂದಾಗುವ ಪ್ರಯೋಜನಗಳಾವವು?
1. ಸಾರಿಗೆಯು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
2 ಸರಕು, ಸೇವೆ ಮತ್ತು ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವರು.
3. ವ್ಯವಸಾಯ, ಕೈಗಾರಿಕೆ, ಗಣಿಗಾರಿಕೆ, ಅರಣ್ಯಗಾರಿಕೆ, ಮೀನುಗಾರಿಕೆ ಹಾಗೂ ಹೈನುಗಾರಿಕೆಯಿಂದ ಉತ್ಪಾದಿತ ವಸ್ತುಗಳನ್ನು ಮಾರುಕಟ್ಟೆಗೆ ಸಾಗಿಸಲು ಸಹಾಯ ಮಾಡುತ್ತದೆ
File Language : Kannada/English
State : Karnataka
Daily quiz Group minimum 1000 questions @kpsc2019
(2) ಭಾರತದಲ್ಲಿ ರಸ್ತೆಗಳ ಪ್ರಾಮುಖ್ಯತೆ ಏನು?
ಅಥವಾ ರಸ್ತೆ ಸಾರಿಗೆಯಿಂದಾಗುವ ಪ್ರಯೋಜನಗಳಾವವು
1. ರಸ್ತೆಗಳು ಬಹು ಪ್ರಾಚೀನ ಮತ್ತು ಸಾರ್ವತ್ರಿಕವಾದ ಸಾರಿಗೆಯ ಮಾಧ್ಯಮಗಳಾಗಿವೆ,
2. ರಸ್ತೆಗಳು ಒಂದು ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ.
3. ಭಾರತ ಹಳ್ಳಿ ಪ್ರಧಾನ ಮತ್ತು ಕೃಷಿ ಪ್ರಧಾನ ದೇಶವಾಗಿರುವದರಿಂದ ಹಳ್ಳಿಗಳ ಹಾಗೂ ಕೃಷಿಯ ಅಭಿವೃದ್ಧಿಗೆ ರಸ್ತೆಗಳುಅವಶ್ಯಕ
4. ರೈತರು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಮತ್ತು ಗ್ರಾಮೀಣ ಕೈಗಾರಿಕೆಗಳ ಪ್ರಗತಿಗಾಗಿ ರಸ್ತೆಗಳು ಅವಶ್ಯಕ
5. ರಸ್ತೆ ಸಾರಿಗೆಯು ರೈಲು ಸಂಚಾರ, ಬಂದರುಗಳಿಗೆ ಹಾಗೂ ವಿಮಾನ ನಿಲ್ದಾಣಗಳಿಗೆ ಪೂರಕವಾಗಿ ಸಂಪರ್ಕ ಕಲ್ಪಿಸುತ್ತವೆ.
File Format : PDF
3) ಸುವರ್ಣ ಚತುದ್ಯೋನ ಮತ್ತು ಸೂಪರ್ ಹೆದ್ದಾರಿಗಳ ಕಾರ್ಯವನ್ನು ವಿವರಿಸಿ
ಸುವರ್ಣ ಚತುಜ್ಯೋನ :
1.ಇದೊಂದು ನಾಲ್ಕರಿಂದ ಆರು ಪಥಗಳ ಉತ್ತಮ ರಸ್ತೆಗಳ ಯೋಜನೆಯಾಗಿದ್ದು ಇದನ್ನು 1999ರಲ್ಲಿ ಆರಂಭಿಸಲಾಗಿದೆ.
2 . ಈ ಹೆದ್ದಾರಿ ಜಾಲವು ದೇಶದ ಪ್ರಮುಖ ನಗರಗಳನ್ನು, ಸಾಂಸ್ಕೃತಿಕ ಮತ್ತು ಕೈಗಾರಿಕಾ ಕೇಂದ್ರಗಳನ್ನು ಸಂಪರ್ಕಿಸುತ್ತದೆ.
3, ಇವು ದೇಶದ ಮಹಾನಗರಗಳಾದ ದೆಹಲಿ-ಜೈಪುರ ಅಹಮದಾಬಾದ- ಸುರತ್- ಮುಂಬೈ - ಚೆನ್ನೈ, ವಿಶಾಖಪಟ್ಟಣಂ ಭುವನೇಶ್ವರ್ - ಕೋಲ್ಕತ್ತಾ- ಅಲಹಾಬಾದ್-ಕನ್ನು ದೆಹಲಿಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ.
ಸೂಪರ ಹೆದ್ದಾರಿಗಳು :
1 ಈ ದಾರಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.
ಎ) ಉತ್ತರ-ದಕ್ಷಿಣ ಕಾರಿಡಾರ್ : ಇದು ಶ್ರೀನಗರದಿಂದ ಕನ್ಯಾಕುಮಾರಿಯವರಿಗೆ ವಿಸ್ತರಿಸಿದೆ
ಬಿ) ಪೂರ್ವ-ಪಶ್ಚಿಮ ಕಾರಿಡಾ: ಇದು ಅಸ್ಸಾಂನ ಸಿದ್ಧಾರ್ನಿಂದ ಗುಜರಾತ್ನ ಹೋರಬಂದರಿನವರೆಗೆ ಹಚ್ಚಿದೆ
2 ಇವು ಅನೇಕ ಪ್ರಮುಖ ನಗರಗಳನ್ನು, ಕೈಗಾರಿಕಾ ಕೇಂದ್ರಗಳನ್ನು ಮತ್ತು ಬಂದರುಗಳನ್ನು ಸಂಪರ್ಕಿಸುತ್ತವೆ.
3. ಈ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ಕ್ಕೆ
ಸೇರಿರುತ್ತದೆ.
Number of Pages : link
4. ರಾಷ್ಟ್ರೀಯ ಹೆದ್ದಾರಿಗಳ ಕಾರ್ಯವನ್ನು ವಿವರಿಸಿ
1 ರಾಷ್ಟ್ರೀಯ ಹೆದ್ದಾರಿಗಳು ದೇಶದ ಉದ್ದಗಲಕ್ಕೂ ನಿರ್ಮಿತವಾಗಿರುವ ಅತೀ ಮುಖ್ಯ ರಸ್ತೆಗಳಾಗಿವೆ.
2. ಈ ರಸ್ತೆಗಳು ರಾಜ್ಯಗಳ ರಾಜಧಾನಿಗಳು, ಪ್ರಮುಖ ಬಂದರುಗಳನ್ನು, ರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ಮುಖ್ಯ ನಗರ ಮತ್ತು ಕೈಗಾರಿಕಾ ನಗರಗಳನ್ನು ಹಾಗೂ ಪ್ರಮುಖ ಪಟ್ಟಣಗಳೊಂದಿಗೆ ಸಂಪರ್ಕ ಕಲ್ಪಿಸುತ್ತವೆ.
3. ಇವುಗಳ ನಿರ್ಮಾಣ ಮತ್ತು ನಿರ್ವಹಣೆಯ ಕೇಂದ್ರ ಲೋಕೋಪಯೋಗಿ ಇಲಾಖೆ(CPWD)ಗೆ ಸಂಬಂಧಿಸಿದೆ.
Editable Text : No
5) ಭಾರತದಲ್ಲಿ ರೈಲು ಸಾರಿಗೆಯ ಪ್ರಾಮುಖ್ಯತೆ ತಿಳಿಸಿ
1. ರೈಲು ಸಾರಿಗೆಯು ಭಾರವಾದ ಸರಕು ಮತ್ತು ಅಧಿಕ ಸಂಖ್ಯೆಯ ಪ್ರಯಾಣಿಕರನ್ನು ದೂರದ ಸ್ಥಳಗಳಿಗೆ ಸಾಗಿಸಲು ಹೆಚ್ಚು ಉಪಯುಕ್ತವಾಗಿದೆ.
2. ಕೃಷಿ, ಕೈಗಾರಿಕೆ ಮತ್ತು ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
3. ದೇಶದ ವ್ಯಾಪಾರ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೂ ನೆರವಾಗುತ್ತವೆ.
Image Available : Yes
6) ಕೊಳವೆ ಮಾರ್ಗಗಳ ಉಪಯೋಗಗಳೇನು?
1. ಇದೊಂದು ಹೊಸ ಭೂಸಾರಿಗೆಯ ವಿಧಾನವಾಗಿದೆ ಕೊಳವೆ ಮಾರ್ಗಗಳನ್ನು ನೆಲದೊಳಗೆ ಹಾಸಲಾಗಿರುತ್ತದೆ.
2 ಕಾ ತೈಲವನ್ನು ತೈಲ ಶುದ್ದೀಕರಣ ಕೇಂದ್ರಗಳಿಗೆ ಸಾಗಿಸುವದು ಮತ್ತು ನೈಸರ್ಗಿಕಾನೀಲ ಹಾಗೂ ಹೆಸರು ರೂಪದ ಖನಿಜಗಳನ್ನು ಸಾಗಿಸಲು ಕೊಳವೆ ಮಾರ್ಗಗಳನ್ನು ಬಳಸಲಾಗುತ್ತದೆ.
3. ಭಾರತವು 35,676 ಕಿ.ಮೀ ಉದ್ದವಾದ ಕೊಳವೆ ಮಾರ್ಗಗಳನ್ನು ಹೊಂದಿದೆ.
File size Reduced : No
Password : No
Cost : Free of cost
For Personal Use Only
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment